ಶ್ರಾವಣ ಮಾಸ ಬಂತೆಂದರೆ ಅಲ್ಲಿಂದ ಸಾಲು ಸಾಲು ಹಬ್ಬಗಳ ಸರಮಾಲೆ ಶುರು. ಈ ಹಬ್ಬಗಳು ಹಲವಾರು ಬಗೆಯ ಸಂತಸ, ಉತ್ಸಾಹಗಳ ಗೂಡಾಗಿರುತ್ತವೆ, ನಮ್ಮ ಜೀವನವಿಡೀ ಹೀಗೆ ಸಡಗರ ಸಂಭ್ರಮ ಹೆಚ್ಚುತ್ತಲೇ ಹೋಗುತ್ತದೆ. ನಾವು ಅವನ್ನು ಸರಿಯಾಗಿ ಗುರುತಿಸಿ ಆಚರಣೆಗೆ ತರಬೇಕಷ್ಟೆ.

ಪ್ರತಿ ಹಬ್ಬ ಬಂದಾಗಲೂ ಪ್ರತಿಯೊಬ್ಬರಿಗೂ ಏನಾದರೊಂದು ಆಸೆ ಆಕಾಂಕ್ಷೆಗಳಿರುತ್ತವೆ, ಹೆಣ್ಣುಮಕ್ಕಳಿಗಂತೂ ತಾವು ಎಲ್ಲರಿಗಿಂತ ಬ್ಯೂಟಿ ಎನಿಸಿಕೊಳ್ಳಬೇಕೆಂಬ ಅದಮ್ಯ ಹಂಬಲವಿರುತ್ತದೆ. ಫ್ಯಾಷನ್ನಿನ ರಂಗಿನಿಂದ ಯಾವ ಹಬ್ಬ ಬೇರಾಗಲು ಸಾಧ್ಯವಿಲ್ಲ. ಹೀಗಿರುವಾಗ ನೀವು ಏಕೆ ಹೊಸ ಲುಕ್ಸ್ ನಿಮ್ಮದಾಗಿಸಿಕೊಳ್ಳಬಾರದು? ನಿಮ್ಮನ್ನು ನೀವು ಟ್ರೆಡಿಷನಲ್ ಹಾಗೂ ಮಾಡರ್ನ್‌ ಲುಕ್ಸ್ ನಿಂದ ಹೀಗೆ ಸಿಂಗರಿಸಿಕೊಳ್ಳಿ.

festive-fashion1

ಸಾಂಪ್ರದಾಯಿಕ ಗರ್ಬಾ ಡ್ರೆಸ್‌ : ಗುಜರಾತ್‌ನ ಗರ್ಬಾ ನೃತ್ಯ ದಕ್ಷಿಣಕ್ಕೂ ದಾಂಗುಡಿಯಿಟ್ಟು, ಎಲ್ಲೆಲ್ಲೂ ಗರ್ಬಾ ನೃತ್ಯಗಳ ಕಾರ್ಯಕ್ರಮ ನಡೆಯುತ್ತಿರುತ್ತದೆ. ನವರಾತ್ರಿಯ ಸಂದರ್ಭಕ್ಕಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಈ ಕೋಲಾಟದ ನೃತ್ಯ, ವಿಜಯದಶಮಿವರೆಗೂ ವಿಜೃಂಭಣೆಯಿಂದ ಎಲ್ಲೆಡೆ ಕಂಡುಬರುತ್ತದೆ. ಇದರಲ್ಲಿ ಗುಜರಾತ್‌ ರಾಜ್ಯದ ಸಾಂಪ್ರದಾಯಿಕ ಉಡುಗೆಗಳಾದ ಘಾಘ್ರಾ ಚೋಲಿ, ಚನಿಯಾ ಚೋಲಿ ಧರಿಸಿ ದಾಂಡಿಯಾ ಮತ್ತು ಗರ್ಬಾ ಡ್ಯಾನ್ಸ್ ಮಾಡುತ್ತಾರೆ. ಈ ಸಂದರ್ಭಕ್ಕಾಗಿ ಲೆಹಂಗಾ ಚೋಲಿ, ಚನಿಯಾ ಚೋಲಿಗಳಿಗಿಂತ ಬೇರೆ ಉತ್ತಮ ಆಪ್ಶನ್‌ಗಳಿಲ್ಲ. ಇವು ಸಾಂಪ್ರದಾಯಿಕವಾಗಿರುವುದರ ಜೊತೆಯಲ್ಲೇ ಆರಾಮದಾಯಕ ಕೂಡ. ಇವುಗಳಲ್ಲಿ ಹೆವಿ ವರ್ಕ್‌ ಇದ್ದರೂ, ಇನ್ನು ಬೇಕಾದೆಡೆಗೆ ಕೊಂಡೊಯ್ಯಲು ಭಾರಿ ಎನಿಸದು. ಇದರಲ್ಲಿ ಕನ್ನಡಿ ಕೆಲಸದ ಚಮತ್ಕಾರ ನೋಡಿಯೇ ತಣಿಯಬೇಕು. ಮಿರರ್‌ ವರ್ಕ್‌ನ ವೈಶಿಷ್ಟ್ಯವೆಂದರೆ, ಇದರಲ್ಲಿ ಗಾಜನ್ನು ಬಟ್ಟೆ ಮೇಲೆ ಅಂಟಿಸಿರುವುದಿಲ್ಲ, ಬದಲಿಗೆ ಬಣ್ಣಬಣ್ಣದ ದಾರಗಳಿಂದ ಹೊಲಿಗೆ ಹಾಕಿರುತ್ತಾರೆ.

ಗರ್ಬಾ ಉಡುಗೆ ಗುಂಪಿನಲ್ಲಿದ್ದರೂ ಉತ್ತಮ ಐಡೆಂಟಿಟಿ ತಂದುಕೊಡುತ್ತದೆ. ಹೆಂಗಸರೊಂದಿಗೆ ಗಂಡಸರೂ ಸಹ ದಸರಾ ಹಬ್ಬದ ಈ ಸಂದರ್ಭದಲ್ಲಿ ವಿವಿಧ ಪೆಂಡಾಲ್‌ಗಳಲ್ಲಿ ದಾಂಡಿಯಾ, ಗರ್ಬಾ ನೃತ್ಯವಾಡಲು ಉತ್ಸಾಹದಿಂದ ಸಿದ್ಧರಾಗಿರುತ್ತಾರೆ. ಅವರ ಪೋಷಾಕುಗಳೂ ಸ್ಪೆಷಲ್ ಆಗಿರುತ್ತವೆ.

ಗಂಡಸರ ಗರ್ಬಾ ಡ್ರೆಸ್‌ : ಗಂಡಸರ ಗರ್ಬಾ ಉಡುಗೆಯನ್ನು ಗುಜರಾತಿಯಲ್ಲಿ ಕೇಡೀಯಾ ಎನ್ನುತ್ತಾರೆ. ಇದರಲ್ಲಿ ಸಣ್ಣ ಗೆರೆಗಳ ರೌಂಡೆಡ್‌ ಕುರ್ತಾ, ಧೋತಿ ಮತ್ತು ಬಣ್ಣ ಬಣ್ಣದ ಮುಂಡಾಸುಗಳಿರುತ್ತವೆ, ಅದರ ಮೇಲೆ ಕಶೀದಾಕಾರಿ ಕಸೂತಿ ಇರುತ್ತದೆ. ಅದರಲ್ಲಿ ಬಣ್ಣ ಬಣ್ಣದ ಉಣ್ಣೆಯಿಂದ ವಸ್ತ್ರದ ಮೇಲೆ ಸುಂದರ ಡಿಸೈನ್ಸ್ ಮಾಡಿರಲಾಗುತ್ತದೆ. ಇದರಲ್ಲಿ ನವಿಲು, ಕಲಶ, ನೃತ್ಯವಾಡುವ ಸ್ತ್ರೀ ಪುರುಷರ ಚಿತ್ರಗಳಿರುತ್ತವೆ.

ಲೇಟೆಸ್ಟ್ ಗರ್ಬಾ ಫ್ಯಾಬ್ರಿಕ್ಸ್ : ಅಹಮದಾಬಾದಿನ ಖ್ಯಾತ ಫ್ಯಾಷನ್‌ ಡಿಸೈನರ್‌ರ ಅಭಿಪ್ರಾಯದಲ್ಲಿ, ಈ ಸೀಸನ್‌ನಲ್ಲಿ ಚನಿಯಾಚೋಲಿಯ ಸ್ಮಾರ್ಟ್‌ಎಲಿಗೆಂಟ್‌ ಲುಕ್ಸ್ನ್ನು ಸಿಲ್ಕ್, ಜಾರ್ಜೆಟ್‌, ಶಿಫಾನ್‌, ಚಂದೇರಿ, ಪ್ಯೂರ್‌ ಕಾಟನ್‌, ಕಾಟನ್‌ ಜಕಾರ್ಟ್‌ ಇತ್ಯಾದಿ ಫ್ಯಾಬ್ರಿಕ್ಸ್ ಗಳಲ್ಲಿ ಕಾಣಬಹುದು.

ಲೇಟೆಸ್ಟ್ ಕಲರ್‌ : ಕಳೆದ ವರ್ಷ ನಿಯಾನ್‌ ಬಹಳ ಬೇಡಿಕೆಯಲ್ಲಿತ್ತು. ಆದರೆ ಈ ವರ್ಷ ಬ್ರೈಟ್‌ ರೆಡ್‌, ಯೆಲ್ಲೋ, ಗ್ರೀನ್‌ ಕಲರ್ಸ್ ಡಿಮ್ಯಾಂಡ್‌ನಲ್ಲಿವೆ. ಇದರಲ್ಲಿ ಕಸೂತಿ, ಬ್ಲಾಕ್‌ ಪ್ರಿಂಟಿಂಗ್‌, ಫ್ಯಾಬ್ರಿಕ್‌ ಪೇಂಟಿಂಗ್‌, ಹ್ಯಾಂಡ್‌ ವರ್ಕ್‌ ಇತ್ಯಾದಿ ಗಮನಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ