ವಯಸ್ಸು ಹೆಚ್ಚಾಗುತ್ತಿದ್ದಂತೆ ತ್ವಚೆಯ ಬಿಗಿ ಕಡಿಮೆಯಾಗುತ್ತಾ ಹೋಗುತ್ತದೆ. ಜೊತೆಗೆ ಅದರ ಕೊರತೆಗಳೆಲ್ಲಾ ಕಣ್ಣಿಗೆ ಬೀಳುವಂತಾಗುತ್ತವೆ. ಆದರೆ ಸರಿಯಾದ ಮೇಕಪ್‌ನಿಂದ ನಿಮ್ಮ ತ್ವಚೆಯ ಕುಂದು ಕೊರತೆಗಳನ್ನು ದೂರ ಮಾಡಲು, ಆಯಾಸ ಪರಿಹರಿಸಲು ಮತ್ತು ತ್ವಚೆಯ ಬಣ್ಣವನ್ನು ಹಿಂತಿರುಗಿಸುವ ಜೊತೆ ಜೊತೆಗೆ ನಿಮ್ಮ ಬಣ್ಣ ಮತ್ತು ರೂಪದಲ್ಲಿ ಕಾಂತಿ ತರಬಹುದು.
ಅದಕ್ಕೆ, ಎಲ್ಲಕ್ಕೂ ಮೊದಲು ತೆಳುವಾದ ಕವರೇಜ್ ಫೌಂಡೇಶನ್ ಆರಿಸಿ. ಅದು ನಿಮ್ಮ ತ್ವಚೆಯ ಟೋನ್‌ಗೆ ಮ್ಯಾಚ್ ಆಗಬೇಕು ಮತ್ತು ನಿಮ್ಮ ಮುಖದ ಮೇಲಿನ ಡಾರ್ಕ್ ಸ್ಪಾಟ್‌ಗಳನ್ನು ಅಡಗಿಸುವಂತಿರಬೇಕು. ನಿಮ್ಮ ಇಡೀ ಮುಖದ ಮೇಲೆ ಮೇಕಪ್ ಹಚ್ಚಿ. ಆದರೆ ಜಾ ಲೈನ್ ಮತ್ತು ಗದ್ದದ ಬಳಿ ತೆಳುವಾದ ಮೇಕಪ್ ಮಾಡಿ. ಏಕೆಂದರೆ ಇದರ ಬಣ್ಣ ನಿಮ್ಮ ಕುತ್ತಿಗೆಯ ಬಣ್ಣಕ್ಕಿಂತ ಭಿನ್ನವಾಗಿ ಕಾಣಿಸಬಾರದು.
ಮುಖದ ಮೇಲೆ ಎಲ್ಲಿಯಾದರೂ ಭಿನ್ನವಾಗಿ ಕಾಣುವಂತಹ ಮೇಕಪ್‌ನ್ನು ತೆಳುವಾಗಿ ಮಾಡಲು ಒಳ್ಳೆಯ ವಿಧಾನ ಸ್ಪಂಜ್.
ಮೇಕಪ್ ಹೆಚ್ಚು ಹೊತ್ತು ಅಂಟಿಕೊಂಡಿರಲು ಟ್ರ್ಯಾನ್ಸ್ ಲೂಸೆಂಟ್ ಪೌಡರ್ ಹಚ್ಚಿ. ಅದನ್ನು ಹಚ್ಚಿದ ಕೂಡಲೇ ನಿಮ್ಮ ವಯಸ್ಸು 10 ವರ್ಷ ಕಡಿಮೆ ಆದಂತೆ ಅನ್ನಿಸುತ್ತದೆ. ಆದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಹಚ್ಚಿ. ಇಲ್ಲದಿದ್ದರೆ ವಯಸ್ಸು ಹೆಚ್ಚಾಗುತ್ತಿದ್ದಂತೆ ತ್ವಚೆಯಲ್ಲಿ ಶುಷ್ಕತನ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಶುಷ್ಕ ತ್ವಚೆಯ ಮೇಲೆ ಹೆಚ್ಚು ಪೌಡರ್ ಹಾಕುವುದರಿಂದ ಮುಖದಲ್ಲಿ ನೆರಿಗೆಗಳು ಕಾಣುತ್ತವೆ.
ಗ್ಲೋಯಿಂಗ್ ಸ್ಕಿನ್ ಪಡೆಯಿರಿ
40ನೇ ವಯಸ್ಸಿಗೆ ಬಂದಾಗ ತ್ವಚೆ ತನ್ನ ಬಣ್ಣ ಕಳೆದುಕೊಳ್ಳುತ್ತದೆ ಮತ್ತು ಗ್ಲೋಯಿಂಗ್ ಸ್ಕಿನ್ ಇಲ್ಲದಿದ್ದಾಗ ನಿಮಗೆ ಒತ್ತಡ ಉಂಟಾಗುತ್ತದೆ. ಅದು ಸ್ಕಿನ್‌ಗೆ ಇನ್ನಷ್ಟು ಹಾನಿದಾಯಕವಾಗುತ್ತದೆ. ಕೆನ್ನೆಯ ಮೇಲೆ ಕೊಂಚ ಕಲರ್ ಹಾಕಿದ ಕೂಡಲೇ ಮುಖಕ್ಕೆ ಗ್ಲೋ ಬರುತ್ತದೆ. ವಿಂಟರ್‌ನಲ್ಲಿ ಚರ್ಮದ ಮೇಲೆ ಶುಷ್ಕತನ ಬರುತ್ತದೆ. ಅದರಿಂದ ಪಾರಾಗಲು ಪೌಡರ್ ಬದಲು ಚೀಕ್ ಕಲರ್ ಪಡೆಯಲು ಕ್ರೀಂ ಅಥವಾ ಜೆಲ್ ಉಪಯೋಗಿಸಿ.
ಐ ಬ್ಯೂಟಿ
ಈ ವಯಸ್ಸಿನಲ್ಲಿ ಶರೀರದಲ್ಲಿ ಕೊಲೋಜನ್ ಉತ್ಪಾದನೆ ಕಡಿಮೆಯಾಗತೊಡಗುತ್ತದೆ. ಅದರಿಂದಾಗಿ ರೆಪ್ಪೆಗಳ ಬಳುಕುವಿಕೆ ನಿಂತು ಅವು ಬಾಗತೊಡಗುತ್ತವೆ. ಆಗ ಪಲರ್ ಲ್ಯಾಶಸ್ ನಿಮ್ಮ ರೆಪ್ಪೆಗಳಿಗೆ ಅಪ್ ಲಿಫ್ಟಿಂಗ್ ಪ್ರಭಾವ ಹಾಗೂ ಬಾಗಿದ ರೆಪ್ಪೆಗಳಿಗೆ ಒಳ್ಳೆಯ ಸಪೋರ್ಟ್ ಕೊಡುತ್ತದೆ. ಲೆಂಥ್‌ನಿಂಗ್ ಮಸ್ಕರಾದ 2 ಕೋಟ್ ಹಚ್ಚಿ ಮತ್ತು ನಿಮ್ಮ ರೆಪ್ಪೆಗಳ ಅಂಚಿನಲ್ಲಿ ಕಾಜಲ್ ಪೆನ್ಸಿಲ್‌ನಿಂದ ಚೆನ್ನಾಗಿ ಕಾಜಲ್ ಹಚ್ಚಿ. ಕಣ್ಣುಗಳ ಹತ್ತಿರದ ಭಾಗಕ್ಕೆ ತೆರೆದ ಅನುಭವ ಕೊಡಲು ನಿಮ್ಮ ಹುಬ್ಬುಗಳ ಮೇಲೆ ತೆಳು ಸ್ಕಿನ್ ಟೋನ್‌ನ ಶಾಂಪೇನ್ ಶೇಡ್‌ನಿಂದ ಹೈಲೈಟ್ ಮಾಡಿ. ಒಂದು ವೇಳೆ ತ್ವಚೆ ಶ್ಯಾಮಲವರ್ಣದ್ದಾಗಿದ್ದರೆ ಬ್ರಾಂಝ್ ಶೇಡ್‌ನಿಂದ ಹೈಲೈಟ್ ಮಾಡಿ. ಐ ಲಿಡ್‌ಬಳಿ ಬ್ರೈಟ್ ಕಲರ್ ಉಪಯೋಗಿಸಬೇಡಿ. ಬ್ರೈಟ್ ಕಲರ್‌ನ ಐ ಶ್ಯಾಡೋ ಉಪಯೋಗಿಸಬೇಡಿ.
ಏಕೆಂದರೆ ಅದನ್ನು ಹಚ್ಚಿದರೆ ಮುಖದ ನೆರಿಗೆಗಳು ಹೆಚ್ಚು ಕಂಡುಬರುತ್ತವೆ. ಲಿಪ್ ಕೇರ್ ಹೆಚ್ಚುತ್ತಿರುವ ವಯಸ್ಸಿನ ಜೊತೆ ತುಟಿಗಳ ಬಣ್ಣ ಹೋಗುತ್ತಿರುತ್ತದೆ. ಅವುಗಳ ತುದಿಗಳಲ್ಲಿ ಶುಷ್ಕತನ ಉಂಟಾಗುತ್ತದೆ. ಆಗ ತುಟಿಗಳಿಗೆ ಲಿಪ್ ಪೆನ್ಸಿಲ್‌ನ ಸಹಾಯದಿಂದ ಲೈನ್ ಎಳೆದು ತುಂಬುವುದು ಉತ್ತಮ. ಪೆನ್ಸಿಲ್ ಕಲರ್ ನಿಮ್ಮ ತುಟಿಗಳ ಗುಲಾಬಿ ಬಣ್ಣಕ್ಕೆ ಹೊಂದುವಂತಿರಲಿ. ಲಿಪ್ ಲೈನರ್ ಮೇಲೆ ಗ್ಲಾಸ್ ಅಥವಾ ಬಾಮ್ ನ ಕೋಟ್ ಹಚ್ಚಿದರೆ ಅದು ಹೆಚ್ಚು ತಾಜಾ ಆಗಿ ಕಂಡುಬರುತ್ತದೆ. ಅದರಿಂದ ಲಿಪ್ ಕಲರ್ ಹರಡುವುದೂ ಇಲ್ಲ.
ಹೇರ್ ಸ್ಟೈಲ್ ಮಹಿಳೆಯರಿಗೆ 40 ವರ್ಷ ತುಂಬಿದಾಗ ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಕೂದಲನ್ನು ಚಿಕ್ಕದಾಗಿ ಇಟ್ಟುಕೊಳ್ಳಬೇಕು ಎಂಬ ತಪ್ಪುಕಲ್ಪನೆ ಇರುತ್ತದೆ. ಅದು ಸರಿಯಲ್ಲ. ನೀವು ಎಷ್ಟು ಉದ್ದ ಕೂದಲಿನೊಂದಿಗಾದರೂ, ಯಾವುದೇ ಹೇರ್ ಸ್ಟೈಲ್ ಮಾಡಿಕೊಳ್ಳಬಹುದು. ಆದರೆ ಅದು ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಹಾಗೂ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತಿರಬೇಕು. ಕೂದಲನ್ನು ಚಿಕ್ಕದಾಗಿ ಮಾಡಿಕೊಂಡರೆ ನಿಮ್ಮ ಉದ್ದನೆಯ ಕೂದಲಿನ ಹಿಂದೆ ಅಡಗಿದ್ದ ನಿಮ್ಮ ಕುತ್ತಿಗೆ ಹಾಗೂ ಮುಖದ ಭಾಗ ಕಂಡುಬರುತ್ತದೆ.
ನಿಮ್ಮ ಮುಖದ ಆಕಾರವಲ್ಲದೆ, ನಿಮ್ಮ ಹೇರ್ ಸ್ಟೈಲ್‌ನಲ್ಲಿ ಕೂದಲಿನ ಟೆಕ್ಸ್ ಚರ್ ಕೂಡ ಸಾಕಷ್ಟು ಮಹತ್ವದ ಪಾತ್ರ ನಿಭಾಯಿಸುತ್ತದೆ. ನಿಮ್ಮ ಮುಖದ ಆಕಾರ ಮತ್ತು ಕೂದಲಿನ ಟೆಕ್ಸ್ ಚರ್‌ಗೆ ತಕ್ಕಂತಹ ಹೇರ್ ಸ್ಟೈಲ್ ಆರಿಸಿಕೊಳ್ಳಿ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸುಂದರವಾಗಿ ಕಾಣುವುದಲ್ಲದೆ, ನೀವು ಪದೇಪದೇ ಸ್ಟೈಲಿಂಗ್‌ನ ಜಂಜಾಟದಿಂದಲೂ ಮುಕ್ತಿ ಪಡೆಯಬಹುದು.
ಶಾರ್ಟ್ ಹೇರ್ ಲೆಂಥ್ ಓವಲ್ ಮತ್ತು ಹಾರ್ಟ್ ಶೇಪ್ ಫೇಸ್ ಕಟ್‌ಗೆ ಉಪಯುಕ್ತ
ಶಾರ್ಟ್ ಹೇರ್ ಲೆಂಥ್ ಇಟ್ಟುಕೊಳ್ಳುವ ಮಹಿಳೆಯರು ಕೂದಲಿನ ರಕ್ಷಣೆಯ ಬಗ್ಗೆ ಚಿಂತಿಸುವುದು ಕಡಿಮೆ. ಏಕೆಂದರೆ ಚಿಕ್ಕ ಕೂದಲಿಗೆ ಸ್ಟೈಲಿಂಗ್ ಅಷ್ಟು ಅಗತ್ಯವಿಲ್ಲ. ಶಾರ್ಟ್ ಹೇರ್ ಸ್ಟೈಲ್ ಮುಖದ ಫೀಚರ್‌ಗಳಿಗೆ ಸಾಕಷ್ಟು ಚೆನ್ನಾಗಿರುತ್ತದೆ. ಆದ್ದರಿಂದ ನಿಮ್ಮ ಫೇಸ್ ಕಟ್‌ಗೆ ತಕ್ಕಂತೆ ಹೇರ್ ಸ್ಟೈಲ್ ಇರುವಂತೆ ನೋಡಿಕೊಳ್ಳಿ.
ಮೀಡಿಯಂ ಹೇರ್ ಲೆಂಥ್ ಓವಲ್ ಮತ್ತು ಹಾರ್ಟ್ ಶೇಪ್ ಫೇಸ್ ಕಟ್‌ಗೆ ಉಪಯುಕ್ತ
ಈ ಫೇಸ್ ಕಟ್‌ನ ಮಹಿಳೆಯರಿಗೆ ಮೀಡಿಯಂ ಲೆಂಥ್‌ನಲ್ಲಿ ಹಲವಾರು ಹೇರ್ ಸ್ಟೈಲ್‌ಗಳು ಲಭ್ಯವಿವೆ. ಉದಾಹರಣೆಗೆ ಬಾಬ್ ಹೇರ್ ಸ್ಟೈಲ್, ಲೇಯರ್ಡ್ ಹೇರ್ ಸ್ಟೈಲ್, ಬ್ಯಾಂಗಲ್ಸ್ ಹೇರ್ ಸ್ಟೈಲ್ ಹೆಚ್ಚಿನ ಮಹಿಳೆಯರು ಮೀಡಿಯಂ ಲೆಂಥ್‌ನ ಹೇರ್ ಸ್ಟೈಲ್‌ಗೆ ಪ್ರಾಧಾನ್ಯತೆ ಕೊಡುತ್ತಾರೆ. ಏಕೆಂದರೆ ಅದರಿಂದ ವಿಭಿನ್ನ ಹೇರ್ ಸ್ಟೈಲ್‌ಗಳನ್ನು ಮಾಡಬಹುದು. ಇವು ಫೆಮಿನೈನ್ ಟಚ್ ಕೊಡುತ್ತವೆ ಮತ್ತು ಅವನ್ನು ಕೇರ್ ಮಾಡುವುದೂ ಸುಲಭ. ಮೀಡಿಯಂ ಹೇರ್ ಲೆಂಥ್ ಇದ್ದರೆ ಮಹಿಳೆಯರು ತಮ್ಮ ಮರ್ಜಿ ಹಾಗೂ ಸಂದರ್ಭಕ್ಕೆ ತಕ್ಕಂತೆ ಯಾವಾಗ ಬೇಕಾದರೂ ಯಾವುದೇ ರೀತಿಯ ಹೇರ್ ಸ್ಟೈಲ್ ಮಾಡಿಸಬಹುದು. ಅದರಲ್ಲಿ ಗುಂಗುರು ಕೂದಲಿನಿಂದ ಹಿಡಿದು ವೇವಿ, ಸ್ಟ್ರೇಟ್ ಅಥವಾ ಲಿಫ್ಡ್ ಔಟ್ ಕೂಡ ಇರುತ್ತದೆ.
ಲಾಂಗ್ ಹೇರ್ ಲೆಂಥ್ ರೌಂಡ್ ಸ್ಕ್ವೇರ್‌ಫೇಸ್ ಕಟ್‌ಗೆ ಉಪಯುಕ್ತ
ಈ ಫೇಸ್‌ಕಟ್‌ನ ಮಹಿಳೆಯರಿಗೆ ಉದ್ದನೆಯ ಕೂದಲಿನ ಹೇರ್ ಸ್ಟೈಲ್ ಸರಿಯಾಗಿರುತ್ತದೆ. ಏಕೆಂದರೆ ಇಷ್ಟು ಉದ್ದ ಕೂದಲು ಫೆಮಿನೈನ್ ಟಚ್ ಕೊಡುತ್ತದೆ. ಉದ್ದ ಕೂದಲಿನ ಜೊತೆ ವಿಭಿನ್ನ ರೀತಿಯ ಹೇರ್ ಸ್ಟೈಲ್ ಮಾಡಿಸಬಹುದು. ನೀವು ಲೇಯರ್ಡ್ ಲಾಂಗ್ ಹೇರ್ ಸ್ಟೈಲ್, ಗುಂಗುರು ಹೇರ್ ಸ್ಟೈಲ್, ಸ್ಟ್ರೇಟ್ ಹೇರ್ ಸ್ಟೈಲ್, ವೇವಿ ಹೇರ್ ಸ್ಟೈಲ್‌ನಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದು.
– ಸುಮನಾ ಕಲ್ಯಾಣ್
ಕೂದಲಿನ ರಕ್ಷಣೆ
ಸರಿಯಾದ ಹೇರ್ ಸ್ಟೈಲ್ ಆಯ್ದುಕೊಳ್ಳುವುದಲ್ಲದೆ, ಕೂದಲಿನ ರಕ್ಷಣೆಯೂ ನಿಮ್ಮ ಜೀವನಶೈಲಿಯ ಮಹತ್ವದ ಭಾಗವಾಗಬೇಕು.
ನಿಮ್ಮ ಕೂದಲಿನ ಮೇಲ್ಮೈ ಮೇಲೆ ಸಿಲಿಕಾನ್ ಸೀರಮ್ ನ 1-2 ಹನಿಗಳನ್ನು ಹಾಕಿ ಅವುಗಳಲ್ಲಿ ಹೊಳಪು ತಂದು ಗುಂಗುರಾಗುವುದನ್ನೂ ಕಡಿಮೆಗೊಳಿಸಬಹುದು.
ನಿಮ್ಮ ಕೂದಲಿನ ಬಗ್ಗೆ ಗಮನ ಕೊಡಿ. ವಯಸ್ಸು ಹೆಚ್ಚಾದಂತೆ ಅವು ನಾಜೂಕಾಗುತ್ತವೆ. ನಿಮ್ಮ ಕೂದಲಿಗೆ ಕನಿಷ್ಠ ವಾರಕ್ಕೊಮ್ಮೆ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿ ಹಾಗೂ ಪ್ರತಿ 6 ವಾರಕ್ಕೊಮ್ಮೆ ಅವನ್ನು ಅಗತ್ಯಾವಾಗಿ ಟ್ರಿಮ್ಮಿಂಗ್ ಮಾಡಿ.
ಚಪ್ಪಟೆ ಕೂದಲಿನಿಂದ ಲೇಯರ್ಡ್ ಕೂದಲು ಹೆಚ್ಚು ಆಕರ್ಷಕವಾಗಿರುತ್ತದೆ. ನಿಮ್ಮ ಕೂದಲಿಗೆ ಲೇಯರ್ಸ್‌ನೊಂದಿಗೆ ಒಳ್ಳೆಯ ಆರೋಗ್ಯ ಕೊಡಿ. ನಿಮ್ಮ ಕೂದಲು ಎಷ್ಟೇ ಉದ್ದವಿದ್ದರೂ ಪರವಾಗಿಲ್ಲ. ಒಂದು ವೇಳೆ ನಿಮ್ಮ ಕೂದಲು ಶುಷ್ಕವಾಗಿದ್ದರೆ, ಅದರ ಉದ್ದ ಕಡಿಮೆ ಮಾಡಬೇಕು. ಅಲ್ಲದೆ ಲೇಯರ್ ಅಥವಾ ರೇಜರ್ ಕಟ್ ಕೂಡ ಮಾಡಿಸಬಹುದು. ನಿಮ್ಮ ಕೂದಲು ಕಪ್ಪಗಿದ್ದರೆ ಕ್ಯಾರೆಮನ್ ಬಣ್ಣದ ಹೈಲೈಟ್ಸ್ ಮಾಡಿಸಿ ಅಥವಾ ಕೂದಲಿನ ಬಣ್ಣದಿಂದ 1-2 ಶೇಡ್ ತೆಳುಬಣ್ಣದ ಹೈಲೈಟ್ಸ್ ಮಾಡಿಸಬಹುದು.