ಒಂದು ವಾರದ ಹಿಂದಷ್ಟೇ ನಿಖಿತಾ ತನ್ನ ಇಡೀ ಕುಟುಂಬದೊಂದಿಗೆ ಹೊಸ ಫ್ಲಾಟಿಗೆ ಶಿಫ್ಟ್ ಆಗಿದ್ದಳು. ಅವಳು ಸಂಜೆ ಸದಾ ಸೊಸೈಟಿಯ ಪಾರ್ಕ್‌ನಲ್ಲಿ ವಾಕಿಂಗ್‌ಗೆಂದು ಹೊರಡುತ್ತಾಳೆ. ಆಕೆ ಅಲ್ಲಿಗೆ ಹೋದಾಗೆಲ್ಲ, ಅಲ್ಲಿದ್ದವರೆಲ್ಲ ಮತ್ತೆ ಮತ್ತೆ ಅವಳತ್ತಲೇ ತಿರುಗಿ ನೋಡುತ್ತಾರೆ. ನಿನ್ನೆ ನಡೆದ ಘಟನೆಯನ್ನು ಇಂದು ಅವಳು ಗೆಳತಿಗೆ ಹೇಳಿಕೊಂಡು ಬಹಳ ಹೆಮ್ಮೆಪಟ್ಟುಕೊಂಡಳು.

ಸಕಾಲದಲ್ಲಿ ಸರಿಯಾದ ಚಿಕಿತ್ಸೆ

ಅವಳ ಕೆಳಗಿನ ಫ್ಲಾಟ್‌ನ ಡಿಗ್ರಿ ಕೊನೆ ವರ್ಷದ ಹುಡುಗನೊಬ್ಬ 5 ವರ್ಷದ ಪಿಂಕಿ ಎಂಬ ಹುಡುಗಿ ಕೈಲಿ ನಿಖಿತಾಳಿಗೆ ಅಂದದ ಗುಲಾಬಿ ಹೂ ಕೊಟ್ಟು ಕಳುಹಿಸಿದ. ಹೂ ನೋಡುತ್ತಲೇ ನಿಖಿತಾಳಿಗೆ ಆ ಹುಡುಗ ತನಗೆ ಪ್ರಪೋಸ್‌ ಮಾಡುತ್ತಿದ್ದಾನೆಂದು ತಿಳಿಯಿತು. ಅದರ ಮಾರನೇ ದಿನ ಹಾಗೇ ಆಯಿತು. ಆ ಹುಡುಗ ಪಾರ್ಕಿನಲ್ಲಿ ಅವಳಿಗೆ ಪ್ರಪೋಸ್‌ ಮಾಡೇಬಿಟ್ಟ! ನಿಖಿತಾ ಜೋರು ಜೋರಾಗಿ ನಗುತ್ತಾ, ತಾನು 5 ವರ್ಷದ ಮಗುವಿನ ತಾಯಿ ಹಾಗೂ ಯಾರ ಕೈಲಿ ಅವನು ಹೂ ಕಳಿಸಿದ್ದನೋ ಅವಳೇ ತನ್ನ ಮಗಳು ಪಿಂಕಿ ಎಂದಾಗ ಆ ಹುಡುಗ ನಾಚಿನೀರಾದ, ಸಾರಿ ಎನ್ನುತ್ತಾ ಹೊರಟುಹೋದ. ಈ ವಿಷಯವನ್ನು ಅವಳು ಪತಿ ಜೊತೆ ಹಂಚಿಕೊಂಡು ನಕ್ಕಿದ್ದೇ ನಕ್ಕಿದ್ದು!

ನಿಖಿತಾಳಿಗೆ ಈಗ 35 ವರ್ಷ, ಆದರೆ ಅವಳ ಚರ್ಮದ ಸೌಂದರ್ಯ ಗಮನಿಸಿದರೆ ಅವಳಿಗೆ ಅಷ್ಟು ವಯಸ್ಸು ಎಂದು ಯಾರಿಗೂ ಹೇಳಲಾಗದು. ಇಂಥದೇ ಘಟನೆ ನಿಮ್ಮೊಂದಿಗೂ ನಡೆಯಬಹುದು, ನೀವು ಸೂಕ್ತ ವಯಸ್ಸಿನಿಂದಲೇ ಆ್ಯಂಟಿ ಏಜಿಂಗ್‌ ಕ್ರೀಂ ಬಳಸಲು ಆರಂಭಿಸಿದ್ದರೆ! ನೆನಪಿಡಿ, 30ರ ವಯಸ್ಸು ಹತ್ತಿರ ಬರುತ್ತಿದ್ದಂತೆಯೇ ಈ ಉತ್ಪನ್ನಗಳನ್ನು ಬಳಸಲಾರಂಭಿಸಿ. ಆದರೆ ನೀವು ಆರಿಸಿದ ಉತ್ಪನ್ನ ಅತ್ಯುತ್ತಮ ಬ್ರಾಂಡ್‌ನದೇ ಆಗಿರಬೇಕು.

ಸನ್‌ ಪ್ರೊಟೆಕ್ಷನ್‌ ಅತ್ಯಗತ್ಯ

GettyImages_145071104

ಸ್ವೀಟಿಯ ಪೇರೆಂಟ್ಸ್ ಟೀಚರ್‌ ಮೀಟಿಂಗ್‌ಗೆ ನಿಖಿಲ್ ಅಂಜಲಿ ತಲುಪಿದಾಗ, ಟೀಚರ್‌ ಅಂಜಲಿಯತ್ತ ಬೊಟ್ಟು ಮಾಡಿ, ಅವಳು ಸ್ವೀಟಿಯ ಹಿರಿಯಕ್ಕನೇ ಎಂದು ನಿಖಲ್‌ನನ್ನು ಕೇಳಿದರು. ಅವರ ಮಾತು ಕೇಳಿ ಮಂದಹಾಸ ಬೀರುತ್ತಾ ಇವರಿಬ್ಬರೂ ತಮ್ಮ  ಪರಿಚಯ ನೀಡಿದರು. ಅಂಜಲಿಯ ಪರಿಚಯ ಪಡೆದ ಟೀಚರ್‌, ಸ್ವೀಟಿ ಕುರಿತು ದೂರುವುದನ್ನು ಬಿಟ್ಟು ಅಂಜಲಿಯಿಂದ ಬ್ಯೂಟಿ ಟಿಪ್ಸ್ ಕೇಳತೊಡಗಿದರು.

7 ವರ್ಷದ ಸ್ವೀಟಿ 33 ವರ್ಷದ ಅಂಜಲಿಯ ಮಗಳು ಎಂದಾಗ ಸ್ಟಾಫ್‌ ರೂಮಿನಲ್ಲಿ ಯಾರೂ ನಂಬಲಿಲ್ಲ. ಅಂಜಲಿಯ ತ್ವಚೆ ಸುರಸುಂದರವಾಗಿ ಹೇಗೆ ಹೊಳೆಯುತ್ತಿತ್ತೆಂದರೆ ಅವಳನ್ನು ನೋಡಿದವರು ಬೆರಗಾಗಿ ಹೋಗುತ್ತಾರೆ. ಅದೇ ತರಹ ಅಂಜಲಿ ತನ್ನ ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಎಚ್ಚರ ವಹಿಸುತ್ತಾಳೆ. ಟೀಚರ್ಸ್‌ಗೆ ಟಿಪ್ಸ್ ನೀಡುತ್ತಾ ಅಂಜಲಿ, ಚರ್ಮಕ್ಕೆ ಸನ್‌ಪ್ರೊಟೆಕ್ಷನ್‌ ಕ್ರೀಂ ಹಚ್ಚಲು ಮರೆಯಬಾರದು. ನಿಮ್ಮ ಆಹಾರದಲ್ಲಿ ಪ್ರೋಟೀನ್‌ ವಿಟಮಿನ್‌ ನಿಯಮಿತವಾಗಿರಬೇಕು, ರಾತ್ರಿ ಮಲಗುವ ಮುನ್ನ ಒಂದು ಉತ್ತಮ ನೈಟ್‌ ಕ್ರೀಂ ಹಚ್ಚಬೇಕು, ಆಗ ಮಾತ್ರ ಚರ್ಮ ಟೈಟ್‌, ಬ್ರೈಟ್‌ ಮತ್ತು ಯಂಗ್‌ ಆಗಿರಬಲ್ಲದು ಎಂದಳು.

ಸ್ಕಿನ್‌ ಎಕ್ಸ್ ಫಾಲಿಯೇಶನ್‌ ಅತ್ಯಗತ್ಯ

SM141919

ಆಫೀಸಿನಲ್ಲಿ ಹೇಮಾಳ ಸೌಂದರ್ಯ ಕಂಡು ಹೆಂಗಸರು ಅಸೂಯೆಪಡುತ್ತಾರೆ. ಪುರುಷ ಸಹೋದ್ಯೋಗಿಗಳು ಮನೆಗೆ ಹೋಗಿ ತಮ್ಮ ಹೆಂಡತಿಯರೆದುರು ಹೇಮಾಳ ಸೌಂದರ್ಯದ ಗುಣಗಾನ ಮಾಡುತ್ತಾರೆ. ಸುಕ್ಕು, ಕಲೆಗುರುತು, ಕಂಗಳ ಕೆಳಗಿನ ಕ್ರೋ ಫೀಟ್‌, ಲಾಫ್‌ ಲೈನ್ಲ್, ಸಡಿಲ ತ್ವಚೆ…. ಇತ್ಯಾದಿಗಳ ಯಾವ ಕಾಟ ಹೇಮಾಗಿಲ್ಲ. ಮೊದಲ ಸಲ ಅವಳನ್ನು ನೋಡಿದವರು,  `ಯೂ ಆರ್‌ ಸೋ ಯಂಗ್‌!’ ಎನ್ನದೆ ಇರಲಾರರು. ಆದರೆ ಹೇಮಾಳ ನಿಜ ವಯಸ್ಸು ಕೇಳಿದಾಗ ಹಾಗೆ ಹೇಳಿದವರು ಬೇಸ್ತು ಬೀಳುತ್ತಾರೆ. ಏಕೆಂದರೆ 35 ವರ್ಷದ ಹೇಮಾಳನ್ನು ನೋಡಿದರು, ಅವಳಿಗೆ 25 ವರ್ಷ ಎಂದೇ ಹೇಳುತ್ತಾರೆ. ಅವಳು ನಿಜ ಹೇಳಿದಾಗ ಬೆರಗಾಗಿ ಮೂಗಿನ ಮೇಲೆ ಬೆರಳಿಡುತ್ತಾರೆ.

ತನ್ನ ಸೌಂದರ್ಯದ ರಹಸ್ಯದ ಕುರಿತು ಹೇಳುತ್ತಾ ಹೇಮಾ, ವಯಸ್ಸು ಹೆಚ್ಚುತ್ತಿದ್ದಂತೆ ಸ್ಕಿನ್‌ ಫಾಲಿಯೇಶನ್‌ ಅತ್ಯಗತ್ಯ ಮಾಡಿಸಲೇಬೇಕು. ಇದರಿಂದ ಡೆಡ್‌ ಸ್ಕಿನ್‌ ತೊಲಗಿ, ರಕ್ತ ಸಂಚಾರ ಸುಗಮವಾಗುತ್ತದೆ. ಮಾರುಕಟ್ಟೆಯಲ್ಲಿ ನಿಮ್ಮ ಚರ್ಮಕ್ಕೆ ಹೊಂದುವ ವಿಭಿನ್ನ ಬಗೆಯ ಆ್ಯಂಟಿ ಏಜಿಂಗ್‌ ಕ್ರೀಂ ಲಭ್ಯವಿವೆ. ಇದರ ಬಳಕೆಯಿಂದ ನಿಮ್ಮ ತ್ವಚೆ ಸದಾ ಯಂಗ್‌ ಫ್ರೆಶ್‌ ಆಗಿರುತ್ತದೆ. ಈ ವಯಸ್ಸಿನಲ್ಲಿ ಕಂಗಳ ಅಕ್ಕಪಕ್ಕ ಸುಕ್ಕುಗಳು, ಅನ್‌ ಈವೆನ್‌ ಸ್ಕಿನ್‌ ಟೋನ್‌ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತವೆ. ಇದಕ್ಕಾಗಿ ನೀವು ಉತ್ತಮ ಕ್ವಾಲಿಟಿಯ ಸೀರಂ ಹಚ್ಚಿಕೊಳ್ಳಿ. ಆಗ ನೀವು ಸಹ ಹೇಮಾ, ನಿಖಿತಾ, ಅಂಜಲಿಯರಂಥ ಚರ್ಮ ಸೌಂದರ್ಯ ಗಳಿಸಬಹುದು. ಇದಕ್ಕಾಗಿ ನೀವು ನಿಮ್ಮ ಚರ್ಮವನ್ನು ಸದಾ ಅಕ್ಕರೆಯಿಂದ ಗಮನಿಸಿಕೊಳ್ಳಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ