ಲೈಂಗಿಕ ಸಂಬಂಧಗಳನ್ನೇಕೆ ಸಾಮಾನ್ಯ ಎಂದು ಭಾವಿಸಬಾರದು?
ದೆಹಲಿಯ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ 30 ವರ್ಷದ ಮಹಿಳಾ ಕಾನ್‌ಸ್ಟೆಬಲ್ ತನ್ನ ಒಬ್ಬ ಸಹೋದ್ಯೋಗಿಯ ವಿರುದ್ಧ ಬಲಾತ್ಕಾರದ ದೂರು ನೀಡಿದಳು.
ತನ್ನ ಡ್ಯೂಟಿ ಜೊತೆಗೆ ಕುಸ್ತಿ ಅಭ್ಯಾಸ ಮಾಡುವ ಈ ಯುವತಿ ಸಿಆರ್‌ಪಿಎಫ್‌ನಲ್ಲಿ ಒಂದು ಸೆಕ್ಸ್ ರಾಕೆಟ್ ನಡೆಯುತ್ತಿದೆ. ಮಹಿಳಾ ಕಾನ್‌ಸ್ಟೆಬಲ್‌ಳು ಸ್ನಾನ ಮಾಡುವಾಗ, ಬಟ್ಟೆ ಬದಲಿಸುವಾಗ ವಿಡಿಯೋ ಮಾಡಲಾಗುತ್ತದೆ ಹಾಗೂ ಆ ಬಳಿಕ ಅವರನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತದೆ ಎಂದು ತನ್ನ ದೂರಿನಲ್ಲಿ ತಿಳಿಸಿದ್ದಳು.
ಇದರಿಂದ ಸ್ಪಷ್ಟವಾಗುವ ಒಂದು ವಿಷಯವೆಂದರೆ, ಸೇನೆಯಿಂದಾಗಿ ದೇಶದ ಮಹಿಳೆಯರು ಸುರಕ್ಷಿತವಾಗಿದ್ದಾರಾ….?
ಸೈನ್ಯದ ಯುದ್ಧದ ಮುಂಚೂಣಿಯಲ್ಲಿ ಮಹಿಳೆಯರ ಉಪಸ್ಥಿತಿಯ ಬಗ್ಗೆ ಕೆಲವು ಅಧಿಕಾರಿಗಳೇ ಅಪಸ್ಪರ ಎತ್ತಿದ್ದರು. ಅವರಿಗಿದ್ದ ಹೆದರಿಕೆಯೆಂದರೆ, ಸೈನಿಕರು ಹುಡುಗಿಯರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದಾಗಿತ್ತು. ಮಹಿಳೆಯರ ಬಗ್ಗೆ ಕಾನೂನು ಹಾಗೂ ಸುವ್ಯವಸ್ಥೆಯನ್ನು ಜಾರಿಗೊಳಿಸವವರ ನಿಸ್ಸಹಾಯಕತೆ ಹಾಗೂ ಕುಕೃತ್ಯದ ಬಗ್ಗೆ ಖೇದವಾಗುತ್ತದೆ.
ವಾಸ್ತವದಲ್ಲಿ ಮಹಿಳೆಯರನ್ನು ಹೇಗಾದರೂ ಮಾಡಿ ಮನೆಯಲ್ಲಿ ಬಂಧಿಯಾಗಿಡಬೇಕು ಎನ್ನುವುದು ಎಲ್ಲರ ಯೋಚನೆಯಾಗಿರುತ್ತದೆ. ಧರ್ಮ ಆರಂಭದಿಂದಲೇ ಮನೆಯಲ್ಲಿ ಕೂಡಿ ಹಾಕುವ ಆಮಿಷ ತೋರಿಸಿ, ಧರ್ಮದ ಹೆಸರಿನಲ್ಲಿ ಧನ ಸಂಪತ್ತು, ಪ್ರಾಣ ಕೊಡುವುದು ಹಾಗೂ ತೆಗೆಯಲು ಕೂಡ ಅವರನ್ನು ಸನ್ನದ್ದುಗೊಳಿಸಿತು. ಪುರುಷರಿಗೆ ಲೈಂಗಿಕ ಸುಖಕ್ಕಾಗಿ ಮಹಿಳೆಯರು ಹಾಗೂ ಕಡಿಮೆ ಹಣದಲ್ಲಿ ಗುಲಾಮರು ದೊರೆಯುತ್ತಿದ್ದಾಗ ಅವರೇಕೆ ಧರ್ಮವನ್ನು ಹೊಗಳುವುದಿಲ್ಲ. ರಾಜರಿಗೆ ಹಾಗೂ ಆಡಳಿತಗಾರರಿಗೆ ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಡುವ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ. ಏಕೆಂದರೆ ಉತ್ಪಾದನೆ ಹೇಗಾದರೂ ಹೆಚ್ಚಬೇಕು, ತೆರಿಗೆ ಜಾಸ್ತಿ ಬರಬೇಕು ಎನ್ನುವುದು ಅವರ ಧೋರಣೆಯಾಗಿತ್ತು. ಕಂದಾಚಾರಿಗಳು, ಅತ್ಯಾಚಾರಕ್ಕೆ ಹೊಣೆ ಮಹಿಳೆಯರೇ ಎಂದು ಹೇಳಬೇಕು ಎನ್ನುವುದರ ಮೂಲಕ ತಮ್ಮ ಅಭಿಲಾಷೆಯನ್ನು ಈಡೇರಿಸಿಕೊಳ್ಳತೊಡಗಿದರು.
ಮಹಿಳೆಯರ ಮೇಲೆ ಆರೋಪ ಹೊರಿಸುವವರನ್ನು ಗುಣಗಾನ ಮಾಡುವ ಪದ್ಧತಿ ಎಲ್ಲ ಧರ್ಮಗಳಲ್ಲೂ ಕಂಡುಬಂದಿದೆ. ರಾಮ ಸೀತೆಯನ್ನು ರಾಣನ ಲಂಕೆಯಿಂದ ವಾಪಸ್ ಕರೆದುಕೊಂಡು ಬಂದಾಗ, ಆಡಿದ ಮಾತುಗಳು ನಿಂದನಾರ್ಹ. ಆದರೆ ರಾಮನನ್ನು ಈಗಲೂ ಪೂಜಿಸುವುದಷ್ಟೇ ಅಲ್ಲ, ಕೇಂದ್ರದ ಶಕ್ತಿಯ ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳಲಾಗಿದೆ.
ಪೊಲೀಸ್ ವ್ಯವಸ್ಥೆ ಸರಿಯಾಗಿದ್ದರೆ ಅತ್ಯಾಚಾರಗಳನ್ನು ತಡೆಹಿಡಿಯಬಹುದು ಎಂದು ಯಾವ ಮಹಿಳೆಯರು ಹೇಳುತ್ತಾರೊ, ಅವರು ತಪ್ಪುಕಲ್ಪನೆಯಲ್ಲಿ ಈ ಮಾತು ಆಡಿರಬಹುದು ಎನಿಸುತ್ತದೆ. ಪೊಲೀಸ್ ಪಡೆಯಲ್ಲಿ ಒಳಗೊಳಗೇ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳ ವಿರುದ್ಧ ದುರ್ವರ್ತನೆ ತೋರಿಸಲಾಗುತ್ತದೆ. ದೊಡ್ಡ ವೇತನ ಹಾಗೂ ಗಳಿಕೆಯ ಆಸೆಯಿಂದ ಅವರು ಬಾಯಿ ಬಿಡದೇ ಸುಮ್ಮನಿರುತ್ತಾರೆ. ಆದರೆ ಬಾಹ್ಯ ಸಮಾಜದಲ್ಲಿ ಅವರ ಬಗ್ಗೆ ಹೆದರಿಕೆಯಿರುತ್ತದೆ.
ಅತ್ಯಾಚಾರದಿಂದ ರಕ್ಷಿಸಿಕೊಳ್ಳುವ ಉಪಾಯವೆಂದರೆ, ಸೆಕ್ಸ್ ಸಂಬಂಧಗಳನ್ನು ಅತ್ಯಂತ ಸಾಮಾನ್ಯವೆಂದು ಭಾವಿಸಬೇಕು ಹಾಗೂ ಅವನ್ನು ಚಾರಿತ್ರ್ಯದೊಂದಿಗೆ ಜೋಡಿಸಿ ನೋಡಬಾರದು.
ಮಹಿಳೆಯರು ಯಾರೊಬ್ಬರ ಆಸ್ತಿ ಅಲ್ಲ ಮತ್ತು ಮಹಿಳೆಯರಿಗೆ ಸೆಕ್ಸ್ ನಿಂದಾಗಿ ಅವರ ಮದುವೆ ಹಾಗೂ ಹಕ್ಕುಗಳ ಮೇವೆ ಯಾವುದೇ ಪರಿಣಾಮ ಉಂಟಾಗದು. ಇದನ್ನೇ ಅವರ ಮನಸ್ಸಿನಲ್ಲಿ ಬೇರೂರಿಸಬೇಕು. ಏಕೆಂದರೆ ಅತ್ಯಾಚಾರ ತನಗೆ ತಾನೇ ಬ್ಲ್ಯಾಕ್‌ಮೇಲ್‌ನ ಒಂದು ಅಸ್ತ್ರವಾಗಬಾರದು. ಇತ್ತೀಚೆಗೆ ಅತ್ಯಾಚಾರಿಗಳು ಆ ಸಮಯದ ವಿಡಿಯೋ ಮಾಡುತ್ತಿದ್ದಾರೆ. ಏಕೆಂದರೆ ಸಂತ್ರಸ್ತೆಯನ್ನು ಮತ್ತೆ ಮತ್ತೆ ಸೆಕ್ಸ್ಗೆ ಪೀಡಿಸಲು ಸಾಧ್ಯವಾಗಬೇಕು ಎನ್ನುವುದು ಅವರ ತಂತ್ರವಾಗಿರುತ್ತದೆ.
ಸೆಕ್ಸ್ ನ ಬಗ್ಗೆ ಉನ್ಮುಕ್ತತೆಯಿಂದ ಸಮಾಜದ ಪತನವಾಗುವುದಿಲ್ಲ. ಹಾಗೊಂದು ವೇಳೆ ಆಗದ್ದಿದ್ದರೆ, ಎಲ್ಲಿಯೂ ವೇಶ್ಯಾವೃತ್ತಿ ನಡೆಯುತ್ತಲೇ ಇರಲಿಲ್ಲ. ಅಲ್ಲಿಗೆ ಹೋಗುವ ಪುರುಷರಿಂದ ನೈತಿಕ ಪತನ ಆಗದೇ ಇದ್ದರೆ, ಸ್ವಯಂ ಲೈಂಗಿಕ ಸಂಬಂಧಗಳಿಗೆ ಹೇಗಾಗುತ್ತದೆ? ಈ ಉನ್ಮುಕ್ತ ಯೋಚನೆ ಅತ್ಯಾಚಾರ ಮಾಡುವವರಿಗೆ ತಮ್ಮ ಕೃತ್ಯ ಬಹಿರಂಗ ಆಗುತ್ತದೆಂಬ ಭಯ ಕಾಡುತ್ತಿರುತ್ತದೆ.
ಮಂದಿರ ಬೇಕಿಲ್ಲ, ಆಸ್ಪತ್ರೆ ಬೇಕು
ಕೋವಿಡ್‌ಗೆ ಲಸಿಕೆ ಬಂದಿದ್ದರೂ ಕೂಡ, ದೇಶಕ್ಕೆ ತನ್ನ ಆರೋಗ್ಯ ಸೇವೆಗಳ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಒಂದು ಸಂಗತಿ ಸ್ಪಷ್ಟ, ಅದೇನೆಂದರೆ, ಕೋವಿಡ್‌ನ ಕಪ್ಪು ಛಾಯೆ ವ್ಯಾಕ್ಸಿನ್‌ನ ಬಳಿಕ ಹಾಗೆಯೇ ಆರಿಸಿಕೊಂಡಿರಲಿದೆ. ಒಂದಿಷ್ಟು ಜ್ವರ ಬಂದರೂ ಸಾಕು, ಭಯ ಪಸರಿಸುತ್ತದೆ. ಆಗ ವೈದ್ಯರ ಬಳಿ ಧಾವಿಸಬೇಕು.
ನಗರವೇ ಆಗಿರಬಹುದು ಅಥವಾ ಹಳ್ಳಿ, ಇನ್ಮುಂದೆ ಆಸ್ಪತ್ರೆ ಮೊದಲ ಅವಶ್ಯಕತೆಯಾಗುತ್ತದೆ. ಅದೇ ಸಮಾಜದ ದೊಡ್ಡ ಗ್ಯಾರಂಟಿಯಾಗಿರುತ್ತದೆ, ಪೊಲೀಸ್ ಠಾಣೆಗಿಂತಲೂ ಹೆಚ್ಚಾಗಿ, ಸರ್ಕಾರ ಎಲ್ಲೆಲ್ಲೂ ಪೊಲೀಸ್ ಠಾಣೆಗಳು, ಚೌಕಿಗಳನ್ನು ಸ್ಥಾಪಿಸಿದೆ. ಅದೇ ರೀತಿ ಆಸ್ಪತ್ರೆಗಳು ಕೂಡ ಸ್ಥಾಪನೆಯಾಗಬೇಕು.
ಬೀದಿ ಬೀದಿ, ಕಾಲೋನಿಗಳಲ್ಲಿ ಕ್ಲಿನಿಕ್‌ಗಳು ಬರಬೇಕು. ಅಲ್ಲಿ ಯಾರೂ ಕೂಡ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗಬೇಕು. ಮಹಿಳೆಯರು, ಮಕ್ಕಳು, ಜ್ವರ, ತಲೆನೋವಿನ ತಪಾಸಣೆಗೆ ಹೋದರೆ ಚಿಕಿತ್ಸೆ ಲಭಿಸಬೇಕು.
ಆರೋಗ್ಯ ಸೇವೆ, ವಿದ್ಯುತ್ ಹಾಗೂ ನೀರಿನ ದರದ ಹಾಗೆ ಅಗ್ಗವಾಗಿರಬೇಕು. ಸರ್ಕಾರ ಅದರಲ್ಲಿ ಹಸ್ತಕ್ಷೇಪ ಮಾಡಬೇಕು. ಆಸ್ಪತ್ರೆಗಳಿಗಾಗಿ ಸಾಕಷ್ಟು ಖರ್ಚು ಮಾಡಬೇಕು. ಜೊತೆಗೆ ಅಲ್ಲಿಗೆ ಬೇಕಾಗುವ ಲಕ್ಷಾಂತರ ವೈದ್ಯರು, ನರ್ಸ್ ಸಿಬ್ಬಂದಿಯನ್ನು ಸನ್ನದ್ದುಗೊಳಿಸಬೇಕು.
ಹೋಟೆಲ್‌ಗಳು, ಧರ್ಮಶಾಲೆಗಳ ಒಂದಿಷ್ಟು ಭಾಗ ಆಸ್ಪತ್ರೆಗಳಂತಾಗಬೇಕು. ಮಾರುಕಟ್ಟೆಗಳಲ್ಲಿ, ಶಾಲೆಗಳ ಬಳಿ, ಸಿನಿಮಾ ಮಂದಿರಗಳ ಬಳಿ ಯಾವುದೇ ರೀತಿಯಲ್ಲಾದರೂ ಆರೋಗ್ಯ ಸೇವೆ ಲಭಿಸಬೇಕು.
ಕೋವಿಡ್‌ನ ಕಾರಣದಿಂದ ಜಗತ್ತಿನಾದ್ಯಂತ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ. ವೈದ್ಯರು ಕೂಡ ತಮ್ಮ ಜೀವ ಪಣಕ್ಕಿಟ್ಟು ಜನರ ಪ್ರಾಣ ರಕ್ಷಿಸಿದ್ದಾರೆ. ಅದು ಮತ್ತೆ ಮತ್ತೆ ಆಗಲು ಸಾಧ್ಯವಿಲ್ಲ. ಸಮಾಜವೇ ಅದಕ್ಕೆ ಖಾಯಂ ವ್ಯವಸ್ಥೆ ಮಾಡಿಕೊಳ್ಳಬೇಕು.
ಯಾವುದೇ ಮಂದಿರ, ಚರ್ಚ್, ಮಸೀದಿಗಿಂತ ಆಸ್ಪತ್ರೆ ಅವಶ್ಯಕ. ಊರೂರಿನಲ್ಲಿ ಜಾತ್ರೆಗಳಿಗಿಂತ ಹೆಚ್ಚಾಗಿ ವೈದ್ಯರ ಕ್ಯಾಂಪ್ ಏರ್ಪಡಿಸುವ ಅಗತ್ಯವಿದೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂದು ಕೂಡ ಹೆಲ್ತ್ ಚೆಕಪ್ ಕ್ಯಾಂಪ್ ಏರ್ಪಡಿಸಬಹುದು.
ಏಕೆಂದರೆ ಪ್ರತಿಯೊಬ್ಬರ ರೋಗ ನಿರೋಧಕ ಶಕ್ತಿ ಪ್ರಬಲವಾಗಬೇಕು.
ಜಾಗತಿಕ ತಾಪಮಾನ ಹಾಗೂ ಪ್ರವಾಸದ ಕಾರಣದಿಂದ ಈಗ ಬಗೆಬಗೆಯ ರೋಗಗಳ ಉಪಟಳ ಕಾಣಿಸಬಹುದು. ಯಾವುದೇ ರಾಮಮಂದಿರ, ಪಟೇಲ್ ಪ್ರತಿಮೆ ಅಥವಾ ಹೊಸ ಸಂಸತ್ ಭವನಕ್ಕಾಗಿ ಸಾಮಾನ್ಯ ಜನರನ್ನು ಸಿದ್ಧಗೊಳಿಸಲು ಆಗುವುದಿಲ್ಲ. ಅದಕ್ಕಾಗಿ ಪ್ರತಿ ಬೀದಿ ಬದಿಗೂ ವೈದ್ಯರಿರಬೇಕು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅಂಥದ್ದೊಂದು ಪ್ರಯತ್ನ ಮಾಡಿದ್ದರು. ಪ್ರತಿ ಬೀದಿಗೊಂದು ಕ್ಲಿನಿಕ್ ಮಾಡಿ, ಅಲ್ಲಿ 5-6 ಬೆಡ್ ವ್ಯವಸ್ಥೆ ಮಾಡಿದರು. ಸ್ವಲ್ಪ ಸ್ವಲ್ಪ ದೂರದಲ್ಲಿ ಪೊಲೀಸ್ ವಾಹನಗಳ ಹಾಗೆ ಆ್ಯಂಬುಲೆನ್ಸ್ ಗಳು ದೊರೆಯುವಂತಾಗಬೇಕು.
ಇದರ ಖರ್ಚನ್ನು ಸರ್ಕಾರ ತೆರಿಗೆಗಳಿಂದ ಭರಿಸಬೇಕು. ಏಕೆಂದರೆ ಒಂದು ರೋಗ ಲಕ್ಷಾಂತರ ಜನರನ್ನು ತೊಂದರೆಗೀಡು ಮಾಡಬಹುದು. ಇದು ಸದ್ಯದ ಸುರಕ್ಷತೆಯ ಅವಶ್ಯಕತೆ. ಇದು ಜೀವನದ ಆಧಾರ ಹಾಗೂ ಹಕ್ಕಾಗಿದೆ. ಚಿಕಿತ್ಸೆ ಈಗ ಹಣ ಇದ್ದವರಿಗಷ್ಟೆ ಅಲ್ಲ, ಎಲ್ಲರಿಗೂ ದೊರಕಬೇಕು.
ಹೀಗಾದರೆ ದೇಶದ ಪ್ರಗತಿ ಆಗುವುದಿಲ್ಲ
ಮನೆಯ ಪರಿಸ್ಥಿತಿ ದಿವಾಳಿ ಎದ್ದಿದ್ದರೆ, ಕುಟುಂಬ ಸದಸ್ಯರು ಪರಸ್ಪರ ಜಗಳದಲ್ಲಿ ಮಗ್ನರಾಗಿದ್ದರೆ, ಮನೆಯಲ್ಲಿ ಒಂದಿಬ್ಬರಿಗೆ ಕೋವಿಡ್ ಆಗಿದ್ದರೆ ಏನು ಮಾಡಬೇಕು? ಅಂತಹ ಸ್ಥಿತಿಯಲ್ಲಿ ಹೊಸ ಮನೆಯೊಂದನ್ನು ನಿರ್ಮಾಣ ಮಾಡಲು ಸಾಧ್ಯವಿದೆಯೇ? ಟ್ರಕ್ ಗಟ್ಟಲೆ ಇಟ್ಟಿಗೆ, ಮರಳು, ಸಿಮೆಂಟ್, ಉಕ್ಕು ತರಿಸಲು ಆದೀತೇ? 10-20 ಕಾರ್ಮಿಕರು ಅಷ್ಟು ಕೆಲಸ ಮಾಡಲು ಬರಬಹುದು. ಆಗ ಅಕ್ಕಪಕ್ಕದ ಜನರು ಇವರಿಗೆ ಈ ಸ್ಥಿತಿಯಲ್ಲಿ ಮನೆ ಕಟ್ಟಿಸಲು ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳದೇ ಇರುವುದಿಲ್ಲ.
ಇದು ಎಂತಹ ಒಂದು ಅವಕಾಶವೆಂದರೆ, ಪ್ರತಿ ದಿನ ಸ್ವಂತ ಮಹಂತರಿಗೆ ಸೇವೆ ಮಾಡುವ ಅವಕಾಶ ದೊರಕುತ್ತದೆ ಮತ್ತು ಅವರಿಗೆ ಯಥೇಚ್ಛ ದಾನ ದಕ್ಷಿಣೆ ಕೂಡ ಲಭಿಸುತ್ತದೆ.
ನಮ್ಮಲ್ಲಿ ಸಂಕಷ್ಟ ಚತುರ್ಥಿಯಂತಹ ನೂರಾರು ಪೂಜೆ ಪಾಠಗಳ ವಿಧಿವಿಧಾನಗಳಿವೆ. ಅದರ ಒಂದು ಕಥೆಯಲ್ಲಿಯೇ ಭಗವಾನ್ ವಿಷ್ಣು ಲಕ್ಷ್ಮಿಯ ಜೊತೆಗಿನ ವಿವಾಹದಲ್ಲಿ ಸಂಕಟ ದೂರಗೊಳಿಸಲು ಗಣೇಶನ ಪೂಜೆ ಮಾಡಬೇಕಾಗಿ ಬಂದಿತ್ತು. ಏಕೆಂದರೆ ಆಗ ಅವರ ಮದುವೆ ಮೆರವಣಿಗೆ ಮಹಾದೇವನ ಮನೆ ತಲುಪಿತ್ತು. ಮೊದಲು ವಿಷ್ಣು ಗಣೇಶನನ್ನು ಬುಲಾವ್ ಮಾಡಲಿಲ್ಲ. ಹೀಗಾಗಿ ಮದುವೆ ಮೆರವಣಿಗೆಯ ರಥ ಕೆಟ್ಟ ರಸ್ತೆಯ ಕಾರಣ ರಸ್ತೆಯಲ್ಲಿ ಹೂತು ಹೋಯಿತು. ನಮ್ಮ ಸರ್ಕಾರ ಕೂಡ ಆರ್ಥಿಕ ರಥ ಸ್ಥಗಿತಗೊಂಡ ಕಾರಣ ಗಣೇಶ ವಂದನೆಯ ಜೊತೆಗೆ ಬೇರೆ ದೇವತೆಗಳನ್ನು ಖುಷಿ ಪಡಿಸಿ ಸರ್ಕಾರದ ಕೆಲಸಗಳನ್ನು ಮಾಡುತ್ತಿದೆ. ಪೌರಾಣಿಕ ಕಥೆಗಳಲ್ಲಿರುವಂತೆ ಸರ್ಕಾರ ಜನತೆಯ ಉದ್ಧಾರ ಮಾಡಲು ಹೊರಟಂತಿದೆ.
ರಾಮ ಮಂದಿರ ಹಾಗೂ ಹೊಸ ಸಂಸತ್ ಭವನ ಹಾಗೆಯೇ ಇವೆ. ಆರ್ಥಿಕ ಸುವ್ಯವಸ್ಥೆಗೆ ಕಾರ್ಖಾನೆಗಳು ಸ್ಥಾಪನೆಗೊಳ್ಳುತ್ತವೆ. ಆದರೆ ಅ ಖಾಸಗಿ ಕೈಯಲ್ಲಿವೆ. ಅದರ ಬಗ್ಗೆ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ಅವು ಅಂಬಾನಿ ಅಥವಾ ಟಾಟಾ ಕೈಯಲ್ಲಿ ಇದ್ದಿರಬಹುದು.
ಹೊಸ ಸಂಸತ್ ಭವನದಿಂದ ಹೊಸ ದೇಶ ಆಗುತ್ತದೆ. ಇದು ಹೇಗಿದೆಯೆಂದರೆ, ಹೊಸ ಮನೆ ಅಥವಾ ಹಳೆಯ ಮನೆಯ ಪುನರ್ನಿರ್ಮಾಣದಿಂದ ವಿವಾದ ಹಾಗೂ ಸಂಕಷ್ಟ ದೂರಗೊಳಿಸಿದಂತೆ ಇದ್ದ ಹಣವನ್ನು ವ್ಯರ್ಥ ಮಾಡಲು ಹೊರಟಂತೆ. ಅದನ್ನು ಆರತಿ ತಟ್ಟೆಗೆ ಹಾಕಬಹುದು ಅಥವಾ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಖರ್ಚು ಮಾಡುವುದಾಗಿರಬಹುದು.
1925-30ರಲ್ಲಿ ಹಳೆಯ ಸಂಸತ್ ಭವನವನ್ನು ನಿರ್ಮಾಣ ಮಾಡಿದ 15-16 ವರ್ಷಗಳಲ್ಲಿಯೇ ಬ್ರಿಟಿಷ್ ಸರ್ಕಾರದ ಅಧಿಪತ್ಯ ಅಂತ್ಯಗೊಂಡಿತ್ತು. ರಾಮಸೇನಾ ಹಿಲ್‌ನಲ್ಲಿ ನಿರ್ಮಾಣಗೊಂಡ ರಾಷ್ಟ್ರಪತಿ ಭವನ, ಸಂಸತ್ ಭವನ ಹಾಗೂ ಸೆಕ್ರೆಟರಿಯೇಟ್‌ಗಳು ಬ್ರಿಟಿಷರ ಅಧಿಪತ್ಯವನ್ನು ಉಳಿಸಲು ಆಗಲಿಲ್ಲ. ವಿಶಾಲ ಕಟ್ಟಡ ದೇಶದ ಪ್ರಗತಿಯ ಖಚಿತತೆಯೂ ಅಲ್ಲ, ಯಾವುದೇ ಪಕ್ಷದ ಸರ್ಕಾರ ಉಳಿಯಲು ಅಲ್ಲ.
1940-45ರ ಬಂಗಾಲದ ಬರಗಾಲವನ್ನು ನೆನಪಿನಲ್ಲಿಡಬೇಕು. ಆಗ ಬ್ರಿಟಿಷ್ ಸರ್ಕಾರ ಬರಗಾಲದ ಕಡೆ ಗಮನ ಕೊಡದೆ, ವಿಮಾನಗಳು, ಟ್ಯಾಂಕುಗಳು, ಬಾಂಬ್‌ಗಳು, ರೈಫಲ್‌ಗಳ ಬಗ್ಗೆ ಗಮನಕೊಟ್ಟಿತು.
ಕಟ್ಟಡ ಹಳೆಯದಾಯಿತು ಎನ್ನುವ ಕಾರಣದಿಂದ ಅದರಲ್ಲಿ ಅಂಟಿಕೊಂಡು ಕುಳಿತುಕೊಳ್ಳುವುದು ತಪ್ಪು. ಆದರೆ ಹೊಸತನದ ಕಾರಣಕ್ಕೆ ಹಳೆಯ ಪರಂಪರೆಯನ್ನು ಹಾನಿಗೀಡು ಮಾಡುವುದು ಅದೂ ದೇಶ ಸಂಕಷ್ಟದಲ್ಲಿರುವಾಗ, ಇದು ದೇಶದ ಜನತೆಗೆ ಮಾಡುವ ಅನ್ಯಾಯವಾಗಿದೆ. ಹೊಸ ಕಟ್ಟಡ ನಿರ್ಮಾಣ ಗಮನವನ್ನಂತೂ ಬೇರೆಡೆ ಸೆಳೆಯುತ್ತದೆ. ಆದರೆ ಮನೆಯನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುತ್ತದೆ.