ಸ್ಪ್ರೇ : ಇದು ಒಂದು ವಿಧದ ಸ್ಟೈಲಿಂಗ್‌ ಪ್ರಾಡಕ್ಟ್, ಇದು ಕೂದಲನ್ನು ಒಂದೆಡೆ ಸ್ಟಿಕ್‌ ಆಗಿರಿಸುತ್ತದೆ. ಅಂದ್ರೆ ನೀವು ಒಂದು ವಿಶೇಷ ಬಗೆಯ ಹೇರ್‌ ಸ್ಟೈಲ್ ‌ಫಾಲೋ ಮಾಡುತ್ತಿದ್ದರೆ, ಹೇರ್‌ ಸ್ಪ್ರೇ ನೆರವಿನಿಂದ ಇದನ್ನು ಬಹಳ ಹೊತ್ತು ಹಾಗೇ ಉಳಿಯುವಂತೆ ಮಾಡಿಕೊಳ್ಳಬಹುದು. ಸಣ್ಣ ಸಣ್ಣ ಕೂದಲು ಒಂದೆಡೆ ಕುಪ್ಪೆಯಾಗಿ ಕಂಡುಬರುವುದರಿಂದ ನಿಮ್ಮ ಲುಕ್ಸ್ ನ್ನು ಕೆಡಿಸಿಬಿಟ್ಟೀತು, ಅಂಥ ಕಡೆ ಈ ಹೇರ್‌ ಸ್ಪ್ರೇ ಅದನ್ನು ಸರಿಪಡಿಸಿ ಪರ್ಫೆಕ್ಟ್ ಲುಕ್ಸ್ ಒದಗಿಸುತ್ತದೆ. ಲೋ ಹೋಲ್ಡ್ ಸ್ಪ್ರೇ ಸ್ಟ್ರೇಟ್‌ ಹೇರ್‌ ಸ್ಟೈಲ್‌ನ್ನು ನೀಟಾಗಿ ಕಂಟ್ರೋಲ್‌ ಮಾಡಿ ವರ್ಕ್‌ ಮಾಡುತ್ತದೆ ಹಾಗೂ ಮೀಡಿಯಂ ಹೋಲ್ಡ್ ಸ್ಪ್ರೇ, ಹಾಫ್‌ ಮೇಲೆ ಹಾಫ್‌ ಕೆಳಗೆ ಇರುವಂಥ ಹಾಗೂ ಬ್ರೈಡಲ್ ಹೇರ್‌ ಸ್ಟೈಲ್‌ಗಳಿಗೆ ತನ್ನ ಸ್ಟ್ರಾಂಗ್‌ ನೇಚರ್‌ನಿಂದ ಬಹು ಹೊತ್ತು ಬಾಳಿಕೆ ಬರುವಂತೆ ಮಾಡಬಲ್ಲದು.

ವೇವಿ, ಡ್ರೈ ಹಾಗೂ ಶಾರ್ಟ್‌ ಲೆಂಥ್‌ ಹೇರ್‌ ಮುಂತಾದುವಲ್ಲಿ ನೀವು ಯಾವುದೇ ಹೇರ್‌ ಸ್ಟೈಲ್ ಕ್ಯಾರಿ ಮಾಡಿದರೂ, ತಕ್ಷಣ ಹೇರ್ ಸ್ಪ್ರೇ ಬಳಸುವುದರಿಂದ ಹೆಚ್ಚಿನ ಲಾಭವಿದೆ. ಇದರಿಂದಾಗಿ ನಿಮ್ಮ ಹೇರ್‌ ಸ್ಟೈಲ್ ‌ಚೆನ್ನಾಗಿ ಸೆಟ್‌ ಆಗುತ್ತದೆ. ಕೂದಲಿಗೆ ನೈಸರ್ಗಿಕ ಲುಕ್ಸ್ ಮತ್ತು ಕಾಂತಿ ಒದಗಿಸಲು ಬ್ಲೋ ಡ್ರೈ ನಂತರ ಹೇರ್‌ ಬ್ರಶ್‌ ಮೇಲೆ ಹೇರ್‌ ಸ್ಪ್ರೇ ಸಿಂಪಡಿಸಿಕೊಂಡು, ಕೂದಲಿನ ಬುಡದಿಂದ ಬಾಚುವುದರಿಂದ ಹೆಚ್ಚಿನ ಲಾಭವಿದೆ.

ಸಾಮಾನ್ಯವಾಗಿ ತಲೆಗೂದಲಿಗೆ ಕೊಂಡೆ ಹಾಕಿಕೊಳ್ಳುವಾಗ ಬಾಬಿ ಪಿನ್ಸ್ ಬದಲಾಗಿ, ಬಿಗಿಯಾದ ಸ್ಪಿನ್‌ ಪಿನ್ಸ್ ಬಳಸುವುದು ರೂಢಿ ಅಥವಾ ಒಂದೇ ಕಡೆ ಕೂದಲನ್ನು ಜಗ್ಗಿ ಇರಿಸಿಕೊಳ್ಳಲು, ಕೂದಲಿನ ವೇವಿ ಅಂಚನ್ನು ಕೆಳಭಾಗಕ್ಕಿರಿಸಿ ಬಾಬಿ ಪಿನ್ಸ್ ನ್ನು ಬಳಸುತ್ತಾರೆ. ಪಿನ್ಸ್ ಮೇಲೆ ಸ್ಪ್ರೇ ಸಿಂಪಡಿಸಿ, ಅವನ್ನು ಹೆಚ್ಚು ಹೊತ್ತು ಉಳಿಯುವಂತೆ ಮಾಡಬಹುದು.

ನೀವು ಸ್ಟ್ರೇಟ್‌ ಹೇರ್‌ ಮೇಲೆ ವರ್ಕ್‌ ಸ್ಟೈಲ್ ‌ಮಾಡಿದ್ದಾದಲ್ಲಿ, ಅದು ಬಹಳ ಹೊತ್ತು ಹಾಗೇ ಉಳಿಯುವುದಿಲ್ಲ. ಹಾಗಿರುವಾಗ ಬಹಳ ಹೊತ್ತು ಕೂದಲನ್ನು ಕರ್ಲ್, ರೋಲ್ ‌ಮಾಡಿದ ನಂತರ ಹೇರ್‌ ಸ್ಪ್ರೇ ಮಾಡುವುದು ಲೇಸು. ಇದರಿಂದಾಗಿ ಸರ್ಕಲ್ ಸೆಕ್ಯೂರ್‌ಆಗುತ್ತದೆ. ನಿಮ್ಮ ಕರ್ಲಿ ಹೇರ್‌ ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ಅದನ್ನು ಶೈನಿ ಮಾಡಲು ಅದರ ಮೇಲೆ ಗ್ಲಿಸರಿನ್‌ಯುಕ್ತ ಹೇರ್‌ ಸ್ಪ್ರೇ ಸಿಂಪಡಿಸಿ. ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಅರ್ಧರ್ಧ ಕಪ್‌ ನೀರು ಗ್ಲಿಸರಿನ್‌ ಬೆರೆಸಿಕೊಳ್ಳಿ. ಇದಕ್ಕೆ ಕೆಲವು ಹನಿ ಹೇರ್‌ ಆಯಿಲ್ ‌ಬೆರೆಸಿ ಚೆನ್ನಾಗಿ ಕುಲುಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಅಗತ್ಯ ಎನಿಸಿದಾಗ ಇದನ್ನು ಒದ್ದೆ ಕೂದಲ ಮೇಲೂ ಸ್ಪ್ರೇ ಮಾಡಿಕೊಳ್ಳಬಹುದು. ಹೇರ್‌ ಸ್ಟೈಲ್ ‌ಸೆಟ್‌ ಮಾಡುವ ಮೊದಲು ಅಥವಾ ನಂತರ ಈ ಸ್ಪ್ರೇ  ಸಿಂಪಡಿಸಬೇಕು.

ನೀವು ನಿಮ್ಮ ತೆಳು, ಲೈಟ್‌ ಆದ ಕೂದಲನ್ನು ಬೌನ್ಸಿ ಲುಕ್‌ ನೀಡಲು ಸಹ ಹೇರ್‌ ಸ್ಪ್ರೇ ಬಳಸಬಹುದು. ಇದರಿಂದ ಕೂದಲಿನ ವಾಲ್ಯೂಂ ಹೆಚ್ಟುತ್ತದೆ. ಅದರ ಬುಡ ಹಾಗೂ ಒಳಭಾಗಕ್ಕೆ ತಲುಪುವಂತೆ ಸ್ಪ್ರೇ ಮಾಡುವುದರಿಂದ ಅದು ಮತ್ತಷ್ಟು ಬ್ಯೂಟಿಫುಲ್ ಸ್ಟೈಲಿಶ್‌ ಎನಿಸುತ್ತದೆ.

ಜೆಲ್ ‌: ಇತ್ತೀಚೆಗೆ ಯಾವ ಮಹಿಳೆಯರೂ ಒಂದೇ ತೆರನಾದ ಲುಕ್ಸ್ ಹೊಂದಿರಲು ಬಯಸುವುದಿಲ್ಲ. ಈ ಕಾರಣ ಹೇರ್‌ ಜೆಲ್‌ನ ಕ್ರೇಝ್ ದಿನೇ ದಿನೇ ಹೆಚ್ಚುತ್ತಿದೆ. ಇದರ ಬಳಕೆಯಿಂದ ನೀವು ಬಯಸಿದಂಥ ಸ್ಟೈಲ್‌ನ್ನು ಬಹಳ ಹೊತ್ತು ಬಾಳಿಕೆ ಬರುವಂತೆ ಇರಿಸಿಕೊಳ್ಳ ಬಯಸಿದರೆ, ಅದಕ್ಕಾಗಿ ಜೆಲ್ ‌ಬಳಸಿರಿ. ಜೊತೆಗೆ ಇದು ಜೆಲ್ ‌ಗುಣಮಟ್ಟದ ಮೇಲೂ ಡಿಪೆಂಡ್‌ಆಗುತ್ತದೆ. ಅದು ಮೀಡಿಯಂ ಅಥವಾ ಸ್ಟ್ರಾಂಗ್‌ ಹೋಲ್ಡ್ ಯಾವುದನ್ನು ಹಿಡಿದಿಡಬಲ್ಲದು ಎಂಬುದು ಇದರಿಂದ ತಿಳಿಯುತ್ತದೆ.

ನೀವು ಹೇರ್‌ ಜೆಲ್‌ನ ಉತ್ತಮ ರಿಸ್ಟ್‌ ಬಯಸಿದರೆ, ಮೊದಲು ಕೂದಲನ್ನು ಟವೆಲ್‌ನಿಂದ ಚೆನ್ನಾಗಿ ಒರೆಸಿ ಒಣಗಿಸಿದ ಮೇಲೆ, ಎರಡೂ ಕೈಗಳಿಗೆ ಜೆಲ್ ‌ಹಚ್ಚಿಕೊಂಡು, ಕೂದಲಿಗೆ ಸವರಿಕೊಳ್ಳಿ. ಜೆಲ್‌ನ್ನು ಎಂದೂ ಸ್ಕಾಲ್ಪ್ ಗೆ ಮೆತ್ತಬಾರದು, ಕೂದಲಿಗಷ್ಟೇ ಸೀಮಿತ. ಏಕೆಂದರೆ ಇದರಿಂದ ಕೂದಲಿನ ಬುಡಭಾಗ ವೀಕ್‌ ಆದೀತು. ಜೊತೆಗೆ ಡ್ರೈನೆಸ್‌ ಸಮಸ್ಯೆಯೂ ಹೆಚ್ಚಬಹುದು. ಶಾರ್ಟ್ ಕೂದಲಿಗೆ ಜೆಲ್ ‌ಹೆಚ್ಚು ಪೂರಕ ಎಂದು ನೆನಪಿಡಿ.

ಮೂಸ್‌: ಇದು ಹೇರ್‌ ಸ್ಟೈಲ್‌ನ್ನು ಲೈಟ್‌ ಆಗಿ ಹೋಲ್ಡ್ ಮಾಡುತ್ತದೆ, ಇದರಿಂದ ಕೂದಲಿಗೆ ಪರ್ಫೆಕ್ಟ್ ನ್ಯಾಚುರಲ್ ಲುಕ್ಸ್ ಬರುತ್ತದೆ. ಮೂಸ್‌ ಒಂದು ಬಗೆಯ ಶೇವಿಂಗ್‌ ಕ್ರೀಂ ತರಹದ ನೊರೆಯನ್ನು ನೀಡುವ, ಹೇರ್‌ ಸೀಲಿಂಗ್‌ನಲ್ಲಿ ಬಳಕೆಯಾಗುವ ಪದಾರ್ಥ. ಇದನ್ನು ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಲು, ಇದರ ಅಲ್ಪ ಪ್ರಮಾಣವನ್ನು ಬಾಚಣಿಗೆಗೆ ಹಾಕಿ ಅದನ್ನು ಇಡೀ ಕೂದಲಿಗೆ ಅಪ್ಲೈ ಮಾಡಿ ಬಾಚಿರಿ. ಕೂದಲಿಗೆ ಹಚ್ಚಿದ ನಂತರ ಇದು ನೀರಿನಂತೆ ಕಾಣುತ್ತದೆ.

– ಭಾರತಿ ಹೆಗಡೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ