ಪ್ರತಿಯೊಬ್ಬ ಅಲಂಕಾರಪ್ರಿಯ ಹೆಣ್ಣಿನ ಅಚ್ಚುಮೆಚ್ಚಿನ ಫರ್ನೀಚರ್‌ ಎಂದರೆ ಅದು ಡ್ರೆಸ್ಸಿಂಗ್‌ ಟೇಬಲ್. ಅದು ಅವಳ ಮನದ ಭಾವನೆ ಅರಿಯುತ್ತದೆ, ಅವಳನ್ನು ಇನ್ನಷ್ಟು ಮತ್ತಷ್ಟು ಸುಂದರವಾಗಿಸಲು ನೆರವಾಗುತ್ತದೆ. ಆದರೆ ಎಷ್ಟೋ ಸಲ ನಾವು ಇತರ ಫರ್ನೀಚರ್‌ಗಳ ಮೇಲೆ ಸಾಮಗ್ರಿ ಎಸೆಯುವ ಹಾಗೆ ಡ್ರೆಸ್ಸಿಂಗ್‌ ಟೇಬಲ್ ಕೂಡ ಎಂದು ಭಾವಿಸುತ್ತೇವೆ, ಅದರ ಮೇಲೆ ಕಂಡದ್ದನ್ನು ಎಸೆಯುತ್ತೇವೆ. ಹೀಗಾಗಿ ನಮ್ಮ ಡ್ರೆಸ್ಸಿಂಗ್‌ ಟೇಬಲ್‌ನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಅಗತ್ಯವಿದೆ. ಮೇಕಪ್‌ ಮಾಡಲು ಕುಳಿತಾಗ ಅದರಲ್ಲಿನ ಸಾಮಗ್ರಿ ಸುಲಭವಾಗಿ ಸಿಗುವಂತಿರಬೇಕು. ಮೇಕಪ್‌ ಮಾಡಿಕೊಳ್ಳುವಾಗ ಹ್ಯಾಂಡಿಯಾಗಿ ಇರಲೇಬೇಕಾದ ಸಾಮಗ್ರಿಗಳು ಯಾವ ಎಂಬುದನ್ನೂ ತಿಳಿದುಕೊಳ್ಳಿ.

ಎಲ್ಲಕ್ಕೂ ಮೊದಲು ನಾವು ಯೋಚಿಸಬೇಕಾದುದು ಎಂದರೆ, ಡೇಲಿ ಮೇಕಪ್‌ಗಾಗಿ ನಮಗೆ ಯಾವ ಯಾವ ಸಾಮಗ್ರಿ ಬೇಕಾಗುತ್ತದೆ ಎಂಬುದು. ಅವನ್ನು ಆದಷ್ಟೂ ಮುಂಭಾಗದಲ್ಲಿ ಇರಿಸಿ. ನಂತರ ನಿಮ್ಮ ಡೆಸ್ಸಿಂಗ್‌ ಟೇಬಲ್‌ನ ರಚನೆ ಹೇಗಿದೆ ಎಂದು ಗಮನಿಸಿ. ಪ್ರತಿ ಡ್ರಾಯರ್‌ನಲ್ಲೂ ಒಂದು ಡ್ರಾಯರ್‌ ಲೈನ್‌ ಎಳೆಯಿರಿ. ಆಗ ಸಾಮಗ್ರಿ ಅಲ್ಲಿ ಇಲ್ಲಿ ಹರಡುವುದಿಲ್ಲ. ಎಲ್ಲಕ್ಕೂ ಮೇಲಿನ ಡ್ರಾಯರ್‌ನಲ್ಲಿ ಮೇಕಪ್‌ ಸಾಮಗ್ರಿ ಇರಿಸಿ, ಕೆಳಗಿನ ಡ್ರಾಯರ್‌ನಲ್ಲಿ ಹೇರ್‌ ಸ್ಟೈಲಿಂಗ್‌ ಟೂಲ್ಸ್ ಇರಿಸಿಕೊಳ್ಳಿ. ಒಳಗಿನ ಡ್ರಾಯರ್‌ನಲ್ಲಿ ಕಡಿಮೆ ಬಳಸಲ್ಪಡುವ ಮೇಕಪ್‌ ಸಾಮಗ್ರಿ, ಆ್ಯಕ್ಸೆಸರೀಸ್‌ ಇರಿಸಿ. ಬನ್ನಿ, ಈ ಕುರಿತು ವಿವರವಾಗಿ ತಿಳಿಯೋಣ :

ಯಾವ ಸಾಮಗ್ರಿ ಎಲ್ಲೆಲ್ಲಿ?

ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನ ಅಗತ್ಯ ಪ್ರತಿದಿನ ಇದ್ದದ್ದೇ. ಆಫೀಸಿಗೆ ರೆಡಿ ಆಗುವಾಗ ಅಥವಾ ಸಂಜೆ ಎಲ್ಲಾದರೂ ಹೊರಗಡೆ ಹೊರಟಾಗ, ಹೀಗಾಗಿ ನಿಮ್ಮ ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ ಮಾಯಿಶ್ಚರೈಸರ್‌, ಟೋನರ್‌, ಡಿಯೋಡರೆಂಟ್‌, ಪರ್ಫ್ಯೂಮ್, ಫೇಸ್ ಕ್ರೀಂ, ಹ್ಯಾಂಡ್‌ಬಾಡಿ ಲೋಶನ್‌, ಸನ್‌ ಸ್ಕ್ರೀನ್‌, ರೋಸ್‌ ವಾಟರ್‌ ಒಂದೇ ಕಡೆ ಸಿಗುವಂತೆ ಇಡಿ. ಇದಕ್ಕಾಗಿ ನೀವು ಒಂದು ಓಪನ್‌ ಬಾಸ್ಕೆಟ್‌ ಇಟ್ಟುಕೊಂಡರೆ ಇನ್ನೂ ಒಳ್ಳೆಯದು. ಇದನ್ನು ಡ್ರೆಸ್ಸಿಂಗ್‌ ಟೇಬಲ್ ಮೇಲ್ಭಾಗದಲ್ಲಿ ಸುಲಭವಾಗಿ ಕೈಗೆಟಕುವಂತೆ ಇರಿಸಿಕೊಳ್ಳಿ.

ರಾತ್ರಿ ಹೊತ್ತು ಬಳಸಲಾಗುವ ಅಂಡರ್‌ ಐ ಜೆಲ್‌, ನೈಟ್‌ ಕ್ರೀಂ, ಸ್ಕಿನ್‌ ಲೋಶನ್‌ ಇತ್ಯಾದಿ ಎಲ್ಲವನ್ನೂ ಡೆಸ್ಸಿಂಗ್‌ ಟೇಬಲ್‌ನ ಎಲ್ಲಕ್ಕಿಂತ ಮೇಲಿನ ಕೌಂಟರಿನಲ್ಲಿರಿಸಿ.

ಈಗ ನಿಮ್ಮ ಮೇಕಪ್‌ ಪ್ರಾಡಕ್ಟ್ಸ್ ನ್ನು 2 ಭಾಗಗಳಲ್ಲಿ ವಿಂಗಡಿಸಿ ಪ್ರತಿನಿತ್ಯ ಬೇಕಾಗುವ ಸಾಮಗ್ರಿ, ಅಪರೂಪಕ್ಕೆ ಪಾರ್ಟಿಗೆ ಬಳಸುವ ಸಾಮಗ್ರಿ.

ಡೇಲಿ ಬಳಸುವ ಕ್ರೀಂ, ಕಾಂಪ್ಯಾಕ್ಟ್, ಕನ್ಸೀಲರ್‌, ಐಲೈನರ್‌, ಕಾಜಲ್, ಐಬ್ರೋ ಪೆನ್ಸಿಲ್‌, ಲಿಪ್‌ ಲೈನರ್‌, ಲಿಪ್‌ಸ್ಟಿಕ್‌, ಫೇಸ್‌ಕ್ಲೀನಿಂಗ್‌ ವೈಪ್ಸ್ ಇತ್ಯಾದಿಗಳನ್ನು ನೀವು ಒಂದು ಜಾಗದಲ್ಲಿ ಎಲ್ಲಕ್ಕಿಂತಲೂ ಮೇಲಿನ ಕೌಂಟರ್‌ನಲ್ಲಿ ಇರಿಸಿ. ಆಗ ಡೇಲಿ ರೆಡಿ ಆಗುವಾಗ ಸಮಯದ ಕೊರತೆ ಕಾಡದಿರಲಿ.

ಕೇವಲ ಪಾರ್ಟಿ ಲುಕ್ಸ್ ಗೆ ಬಳಕೆಯಾಗುವ ಕಾಸ್ಮೆಟಿಕ್ಸ್ ಅಂದ್ರೆ ಫೌಂಡೇಶನ್‌, ಐ ಶ್ಯಾಡೋ, ಲಿಕ್ವಿಡ್‌ ಐ ಲೈನರ್‌, ಮಸ್ಕರಾ, ಬ್ಲಶರ್‌, ಕಂಟೂರಿಂಗ್‌ ಬ್ರಶ್‌, ಹೈಲೈಟರ್‌ ಇತ್ಯಾದಿಗಳನ್ನು ಯಾವುದೇ ವ್ಯಾನಿಟಿ ಪೌಚ್‌ನಲ್ಲಿ ಒಟ್ಟಿಗೆ ಇರಿಸಿ. ಇದನ್ನು ಕೆಳಗಿನ ಡ್ರಾಯರ್‌ನಲ್ಲಿ ಇರಿಸಬಹುದು, ಏಕೆಂದರೆ ಇವು ಅಪರೂಪಕ್ಕೆ ಬಳಕೆ ಆಗುವಂಥ.

ಎಲ್ಲಾ ಮೇಕಪ್‌ ಬ್ರಶ್‌ಗಳನ್ನೂ ವಿಶೇಷವಾಗಿ ಸಂಭಾಳಿಸಬೇಕು, ಆಗ ಅ ಕೊಳೆ ಆಗುವುದಿಲ್ಲ ಹಾಗೂ ಹೈಜೀನಿಕ್‌ ಆಗಿರುತ್ತವೆ. ಇದಕ್ಕಾಗಿ ಬೇರೊಂದು ಪೌಚ್‌ ಇರಿಸಿಕೊಳ್ಳಿ. ಇದರ ಜೊತೆ ನೀವು ಕಣ್ಣು ರೆಪ್ಪೆಗಾಗಿ ಐ ಲ್ಯಾಶ್‌ ಕರ್ಲರ್‌ ಮತ್ತು ಫೌಂಡೇಶನ್‌ಹಚ್ಚಲು ಬ್ಯೂಟಿ ಬ್ಲೆಂಡರ್‌ ಸಹ ಇರಿಸಿಕೊಳ್ಳಬಹುದು. ನೀವು ವಿಶೇಷ ಪಾರ್ಟಿಗೇನಾದರೂ ಹೊರಟಿದ್ದರೆ ಆಗ ಇವನ್ನು ಬಳಸಬಹುದು.

ಕೈಗಳಿಗೆ ಸುಲಭವಾಗಿ ಎಟುಕುವಂತೆ ಆ್ಯಕ್ಸೆಸರೀಸ್‌ ಇರಿಸಿಕೊಳ್ಳಿ, ಬೇಕಾದಾಗ ತೆಗೆದು ಬಳಸಬಹುದು.

ಕೆಳಗಿನ ಭಾಗದಲ್ಲಿ ಉಳಿದ ಜಾಗದಲ್ಲಿ ನೀವು ಪೌಚ್‌ನಲ್ಲಿ ಹೆಚ್ಚುವರಿ ಬಿಂದಿ, ಮೇಕಪ್‌ ವ್ಯಾಲೆಟ್‌, ಫೌಂಡೇಶನ್‌ ಇತ್ಯಾದಿಗಳನ್ನು ಇರಿಸಿಕೊಳ್ಳಿ.

ಬಳೆಗಳನ್ನು ಇರಿಸಿಕೊಳ್ಳಲು ಬ್ಯಾಂಗಲ್ ಸ್ಟಾಂಡ್‌ ಕೊಳ್ಳಿರಿ. ಇದು ಡ್ರೆಸ್ಸಿಂಗ್‌ ಟೇಬಲ್ ಒಳಗೆ ಸುಲಭವಾಗಿ ಫಿಟ್‌ ಆಗುವಂತಿರಲಿ. ಆಗ ಬೇಕಾದ ಮ್ಯಾಚಿಂಗ್‌ ಬಳೆಗಳು ಸುಲಭವಾಗಿ ಸಿಗುತ್ತವೆ, ಅಲ್ಲಿ ಇಲ್ಲಿ ಹುಡುಕಬೇಕಿಲ್ಲ.

ಹೇರ್‌ ಬ್ರಶ್‌ಇರಿಸಿಕೊಳ್ಳಲು ಹಳೆಯ ಮಗ್‌ ಅಥವಾ ಕ್ಯಾಂಡಲ್ ಹೋಲ್ಡರ್‌ ಬಳಸಿರಿ. ಇದು ಸುಂದರ, ಬಳಸಲಿಕ್ಕೂ ಸುಲಭ.

ಡ್ರೆಸ್ಸಿಂಗ್‌ ಟೇಬಲ್ ಮೇಲೆ ರನ್ನರ್‌ ಸಹ ಹರಡಬಹುದು. ಇದರ ಎರಡೂ ಬದಿ ಪಾಕೆಟ್ಸ್ ಇರಲಿ. ಈ ಜೇಬುಗಳಿಗೆ ನೀವು ಪರ್ಫ್ಯೂಮ್, ಟಿಶ್ಯು ಪೇಪರ್‌, ನ್ಯಾಪ್‌ಕಿನ್‌ ಇತ್ಯಾದಿ ಇರಿಸಬಹುದು. ಅಕಸ್ಮಾತ್‌ ನಿಮ್ಮ ಬಳಿ ಡ್ರೆಸ್ಸಿಂಗ್‌ ಟೇಬಲ್ ಇಲ್ಲದಿದ್ದರೆ, ಯಾವುದೇ ಟೇಬಲ್ ಮೇಲೆ ಇವನ್ನು ಜೋಡಿಸಿಕೊಂಡು, ಗೋಡೆಗೆ ಆನಿಸಿ, ಅಲ್ಲೊಂದು ಕನ್ನಡಿ ಹಾಕಿಸಿ, ಇದರಿಂದ ಎಷ್ಟೋ ಹೆಚ್ಚಿನ ಉಪಯೋಗವಿದೆ. ಹತ್ತಿವೇ  ಶಾರ್ಟ್‌, ಆರ್ಗನೈಸರ್‌ ಇರಿಸಿಕೊಳ್ಳಿ, ಅದರಲ್ಲಿ ಸಾಕಷ್ಟು ಜಾಗ ಇರುತ್ತದೆ. ಸಮರ್ಪಕ ಬೆಳಕಿನ ವ್ಯವಸ್ಥೆ ಮೇಕಪ್‌ ಮಾಡಿಕೊಳ್ಳುವಾಗ ಮುಖದ ಮೇಲೆ ಸಮರ್ಪಕವಾಗಿ ಬೆಳಕು ಬೀಳುವಂತೆ ವ್ಯವಸ್ಥೆ ಇರಬೇಕು. ಹೀಗಾಗಿ ನಿಮ್ಮ ಡ್ರೆಸ್ಸಿಂಗ್‌ ಟೇಬಲ್‌ನ್ನು ಸಮರ್ಪಕ ಲೈಟ್‌ ಸಿಗುವಂತೆ ಅಡ್ಜಸ್ಟ್ ಮಾಡಿಡಿ. ಇಲ್ಲದಿದ್ದರೆ ನೀವು ಮೇಕಪ್‌ ಮುಗಿಸಿ ಹೊರಬಂದಾಗ, ಮುಖ ಇನ್ನೇನೋ ಆಗಿರಬಾರದು.

ಈ ತಪ್ಪುಗಳು ಬೇಡ

ನಿಮ್ಮ ಡ್ರೆಸ್ಸಿಂಗ್‌ ಟೇಬಲ್‌ನ್ನು ವ್ಯವಸ್ಥಿತಗೊಳಿಸುವಾಗ ನಿಮ್ಮ ಕಾಸ್ಮೆಟಿಕ್ಸ್ ನ ಎಕ್ಸ್ ಪೈರಿ ಡೇಟ್ಸ್ ಕಡೆ ಗಮನವಿರಲಿ. ಎಕ್ಸ್ ಪೈರ್‌ ಆದ ಕಾಸ್ಮೆಟಿಕ್ಸ್ನ್ನು ಜೋಪಾನ ಮಾಡುವುದರಲ್ಲಿ ಅರ್ಥವಿಲ್ಲ.

ಕಡಿಮೆ ಬಳಕೆಯಾಗುವಂಥ ಹಾಗೂ ಡೇಲಿ ಬಳಸುವಂಥ ಕಾಸ್ಮೆಟಿಕ್ಸ್ ಎಂದೂ ಮಿಕ್ಸ್ ಆಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಮೇಕಪ್‌ಗಿಂದು ಕುಳಿತಾಗ ನಿಮ್ಮ ಬಹಳಷ್ಟು ಟೈಂ ವೇಸ್ಟ್ ಆದೀತು. ಇವನ್ನು ಎಚ್ಚರಿಕೆಯಿಂದ ಬೇರೆ ಬೇರೆ ಆಗಿರಿಸಿ.

ಆರ್ಗನೈಸ್‌ ಮಾಡುವಾಗ ಫ್ಯಾನ್ಸಿ ಅಲಂಕರಣಕ್ಕೆ ಮಹತ್ವ ಬೇಡ, ಹೆಚ್ಚು ಉಪಯೋಗ ಆಗುವಂಥದ್ದನ್ನೇ ಮಾಡಿ.

ಕೇವಲ ಡ್ರೆಸ್ಸಿಂಗ್‌ ಟೇಬಲ್‌ನ್ನು ಅಲಂಕರಿಸಲು ಅನಗತ್ಯ ಸಾಮಗ್ರಿ ಕೊಳ್ಳಬೇಡಿ. ಏಕೆಂದರೆ ಡ್ರೆಸ್ಸಿಂಗ್‌ ಟೇಬಲ್ ಹೆಚ್ಚು ಉಪಯೋಗಕ್ಕೆ ಬರುವ ವಸ್ತು, ಡ್ರಾಯಿಂಗ್‌ ರೂಂ ಅಲಂಕಾರಕ್ಕಲ್ಲ.

ಒಂದೇ ಸಲ ಅಚ್ಚುಕಟ್ಟಾಗಿ ಆರ್ಗನೈಸ್‌ ಮಾಡಿಟ್ಟು ಬಿಡಿ. ಆದರೆ ಅದನ್ನು ಮೇಂಟೇನ್‌ ಮಾಡುವುದೂ ಅಷ್ಟೇ ಕಷ್ಟಕರ. ನೀವು ನಿಮ್ಮ ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ ಯಾವ ವಸ್ತುಗಳಿಗಾಗಿ ಜಾಗ ಮಾಡಿರಿಸಿಕೊಂಡಿದ್ದೀರೋ, ಅವನ್ನು ಅದೇ ಜಾಗದಲ್ಲಿ ವಾಪಸ್ಸು ಇರಿಸಿ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಇಷ್ಟೆಲ್ಲ ಕಷ್ಟಪಟ್ಟಿದ್ದು ವ್ಯರ್ಥವಾದೀತು. ನಿಮ್ಮ ಡ್ರೆಸ್ಸಿಂಗ್‌ ಟೇಬಲ್‌ನ್ನು ಒಮ್ಮೆ ಆರ್ಗನೈಸ್‌ಮಾಡಿಬಿಟ್ಟರೆ ಆಗಲಿಲ್ಲ, ಬದಲಿಗೆ ಸದಾ ಈಝಿ ಟು ಯೂಸ್‌ ಆಗಿರಬೇಕಾದುದು ಮುಖ್ಯ. ಯಾವುದೇ ವಸ್ತುವನ್ನು ನಾವು ಬಹಳ ಜೋಪಾನ ಮಾಡಲು ಹೋಗಿ ಟೇಬಲ್‌ನ ಯಾವುದೋ ಭಾಗದಲ್ಲಿ ಇರಿಸಿಬಿಟ್ಟರೆ ಅದೂ ಲಾಭಕರವಲ್ಲ. ಹೀಗಾಗಿ ನಿಮ್ಮ ಆ್ಯಕ್ಸೆಸರೀಸ್‌ನ್ನು ಆರ್ಗನೈಸರ್‌ ನೆರವಿನಿಂದ ಹ್ಯಾಂಡಿಯಾಗಿರಿಸಿ. ಆಗ ನೀವು ಸುಲಭವಾಗಿ ನೆಕ್‌ ಲೇಸ್‌, ಓಲೆ, ಜುಮಕಿ, ಬಳೆ ಬದಲಾಯಿಸಿ ಹಾಕಿಕೊಳ್ಳಬಹುದು.

ಒಟ್ಟೊಟ್ಟಿಗೆ ಬಳಕೆ ಆಗುವಂಥ ವಸ್ತು ಒಂದೇ ಕಡೆ ಸಿಗುವಂತೆ ಸ್ಟೋರ್‌ ಮಾಡಿ ಉದಾ : ಪೆಡಿಕ್ಯೂರ್‌, ಮೆನಿಕ್ಯೂರ್‌ಗೆ ಬೇಕಾಗುವ ಟೂಲ್ಸ್ ‌ಒಂದೆಡೆ ಹಾಗೂ ಫೇಶಿಯಲ್ ವಸ್ತುಗಳು ಬೇರೆಡೆ.

dressing-table

ಹೀಗೆ ಮಾಡಿ ಆರ್ಗನೈಸ್‌ ಮಾರ್ಕೆಟ್‌ನಲ್ಲಿ ಲಭ್ಯವಿರುವ ಅನೇಕ ಪ್ರಾಡಕ್ಟ್ಸ್ ಬಳಸಿ, ಸುಲಭವಾಗಿ ನೀವು ನಿಮ್ಮ ಡ್ರೆಸ್ಸಿಂಗ್‌ ಟೇಬಲ್ ಆರ್ಗನೈಸ್‌ ಮಾಡಬಹುದು :

ನಿಮ್ಮ ಡ್ರೆಸರ್‌ ಡ್ರಾವರ್‌ ಆಳಾಗಿದ್ದರೆ, ಆ್ಯಕ್ರೆಲಿಕ್‌ ಆರ್ಗನೈಸರ್‌ ಇರಿಸಿ. ಅದರಲ್ಲಿನ ವಿವಿಧ ಅರೆಗಳಲ್ಲಿ ನೀವು ಬಗೆಬಗೆಯ ಸಾಮಗ್ರಿ ಸ್ಟೋರ್‌ ಮಾಡಬಹುದು. ಒಂದರಲ್ಲಿ ಬಾಚಣಿಗೆಗಳು, ಇನ್ನೊಂದರಲ್ಲಿ ಮೇಕಪ್‌ ಬ್ರಶ್ಶುಗಳು, ಮತ್ತೊಂದರಲ್ಲಿ ಕಾಜಲ್, ಐಲೈನರ್‌ನಂಥ ಪೆನ್ಸಿಲ್‌‌ಗಳು, ಇನ್ನೊಂದರಲ್ಲಿ ರಬ್ಬರ್‌ ಬ್ಯಾಂಡ್‌, ಕ್ಲಚ್‌ ಇರಿಸಬಹುದು.

ಒಂದು ಮ್ಯಾಗ್ನೆಟ್‌ಗೆ ಹೇರ್‌ ಪಿಸ್ ಸಿಗಿಸಿ, ಒಂದು ಕಡೆ ಜೋಪಾನವಾಗಿ ಎತ್ತಿಡಿ.

ಲಿಪ್‌ಸ್ಟಿಕ್‌ಗಾಗಿ ಲಿಪ್‌ಸ್ಟಿಕ್‌ ಆರ್ಗನೈಸರ್‌ ಬಳಸಿರಿ. ಇದರಲ್ಲಿ ಎಲ್ಲಾ ಲಿಪ್‌ಸ್ಟಿಕ್ಸ್ ನ್ನೂ ಈಝಿಯಾಗಿ ಸ್ಟೋರ್‌ ಮಾಡಬಹುದು. ಆರ್ಗನೈಸರ್‌ನಲ್ಲಿ ಎಲ್ಲಾ ಲಿಪ್‌ಸ್ಟಿಕ್ಸ್ ನ್ನೂ ಶೇಡ್ಸ್ ಗೆ ಜೋಡಿಸಿ. ಮೊದಲು ಮ್ಯಾಟ್‌ ಮತ್ತು ನಂತರ ಗ್ಲಾಸಿ ಶೇಡ್ಸ್ ಅಥವಾ ಬ್ರೈಟ್‌ನಿಂದ ಲೈಟ್‌ ಶೇಡ್ಸ್. ಈ ತರಹ ಜೋಡಿಸುವುದರಿಂದ ನಿಮಗೆ ಯಾವಾಗ ಯಾವ ತರಹದ ಮೇಕಪ್‌ ಬೇಕೆನಿಸುತ್ತದೋ ಆಗ ಒಂದಿಷ್ಟು ಟೈಂ ವೇಸ್ಟ್ ಮಾಡದೆ ತಕ್ಷಣ ನಿಮ್ಮಿಷ್ಟದ ಶೇಡ್‌ನ ಲಿಪ್‌ಸ್ಟಿಕ್‌ ಬಳಸಬಹುದು.

ನೇಲ್ ‌ಪೇಂಟ್ಸ್ ಸಹ ಇದೇ ತರಹ ಡಾರ್ಕ್‌ನಿಂದ ಲೈಟ್‌ ಶೇಡ್ಸ್ ನತ್ತ ವಾಲುವಂತೆ ಜೋಡಿಸಿ. ನೇಲ್ ‌ಪೇಂಟ್‌ ರಿಮೂವರ್‌ ಮತ್ತು ಕಾಟನ್‌ ಬಾಲ್ಸ್ ನ್ನು ಸಹ ಇದೇ ರೀತಿ ಆರ್ಗನೈಸರ್‌ನಲ್ಲಿರಿಸಿ. ನೇಲ್ ‌ಫೈಲರ್‌, ಬಫರ್‌ ಇತ್ಯಾದಿ ಸಹ ಇಲ್ಲೇ ಇರಲಿ. ಯಾವಾಗ ಕೈ, ಉಗುರುಗಳ ಮೇಕಪ್‌ ಮಾಡಬೇಕೋ ಸುಲಭವಾಗಿ ಎಲ್ಲಾ ಸಾಮಗ್ರಿ ಒಂದೇ  ಕಡೆ ಸಿಗುತ್ತದೆ.

ಹೇರ್‌ ಸ್ಟೈಲ್ ಟೂಲ್ಸ್ ‌ಆದ ಹೇರ್‌ ಡ್ರೈಯರ್‌, ಹೇರ್‌ ಕಲರ್‌ ಇತ್ಯಾದಿಗಳನ್ನು ಕೆಳಗಿನ ಡ್ರಾಯರ್‌ನಲ್ಲಿರಿಸಿ. ಅದರ ವೈರ್‌ನ್ನು ಕೇಬಲ್ ಕ್ಲಿಪ್‌ನಿಂದ ಕಟ್ಟಿಡಿ ಯಾವಾಗ ಯಾವ ಟೂಲ್ ‌ಬೇಕೋ ಹಾಯಾಗಿ ಬಳಸಿಕೊಳ್ಳಿ. ಹ್ಯಾಪಿ ಮೇಕಪ್‌ ಗೋ!

– ಪ್ರತಿಮಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ