ಇತರ ಉತ್ತಮ ಆಯ್ಕೆಗಳು

ಹೇರ್‌ ಎಕ್ಸ್ ಟೆನ್ಶನ್ಸ್ ಮೂಲಕ ಯಾವುದೇ ವಿಧದ ಹೇರ್‌ ಸ್ಟೈಲ್ ಮಾಡಿಕೊಳ್ಳಬಹುದು. ಕೂದಲು ಬಾಬ್‌ಕಟ್‌ ಆಗಿದ್ದರೂ ಸಹ, ಜಡೆ ಅಥವಾ ಸೊಂಟದವರೆಗೆ ಉದ್ದನೆ ಕರ್ಲಿ ಕೂದಲಿಗಾಗಿ ತೋರಿಸಿಕೊಳ್ಳಬಹುದು. ಸೈಡ್‌ ಬನ್‌ ಯಾ ಮೆಸ್ಸಿ ಬ್ರೆಡ್ಸ್ ಸಹ ಮಾಡಿಕೊಳ್ಳಬಹುದು. ಮದುವೆ ಆರತಕ್ಷತೆಗಾಗಿ ಇತ್ತೀಚೆಗೆ ನವ ವಧು ಸಹ ಇಂಥ ಹೇರ್‌ ಎಕ್ಸ್ ಟೆನ್ಶನ್ಸ್ ಹೆಚ್ಚಾಗಿ ಬಳಸುತ್ತಾಳೆ. ಅದೇ ರೀತಿ ಕೂದಲಿಗೆ ಬಣ್ಣ ಹಚ್ಚಿಸುವ ಗೀಳು ಹೆಚ್ಚುತ್ತಿದೆ. ಆದರೆ ಎಷ್ಟೋ ಹೆಂಗಸರು ತಮ್ಮ ತಲೆಗೂದಲಿಗೆ ಇಷ್ಟದ ಬಣ್ಣದಿಂದ ಹೈಲೈಟಿಂಗ್‌ ಏನೋ ಬಯಸುತ್ತಾರೆ, ಆದರೆ ಪೂರ್ತಿ ಕೂದಲಿಗೆ ಬಣ್ಣ ಹಾಕಿಸಲು ಹಿಂಜರಿಯುತ್ತಾರೆ. ಹೀಗಾಗಿ ಎಕ್ಸ್ಟೆನ್ಶನ್‌ ಹೇರ್‌ಗೆ ಕಲರ್‌ ಹಚ್ಚಿಸಿ ಅದನ್ನು ಹೈಲೈಟರ್‌ ತರಹ ಬಳಸಬಹುದು. ಇದು ಎಲ್ಲಾ ವಿಧದಲ್ಲೂ ಸೇಫ್‌ಈಝಿ. ಈ ಎಕ್ಸ್ ಟೆನ್ಶನ್‌ಗಳನ್ನು ಕಾಣಿಸದಿರುವಂಥ ವಿಶಿಷ್ಟ ಕ್ಲಿಪ್ಸ್ ವತಿಯಿಂದ ಜೋಡಿಸಬಹುದಾಗಿದೆ. ಹೀಗಾಗಿ ಅದು ನೈಸರ್ಗಿಕ ಕೂದಲಿಂದಲೇ ಅನಿಸುತ್ತದೆ. ಇದು ಅತಿ ಸುಲಭ ವಿಧಾನವಾಗಿದ್ದು, ಕ್ಲಿಪ್ಸ್ ನ್ನು ಯಾವಾಗ ಬೇಕಾದರೂ ತೆಗೆದುಬಿಡಬಹುದು.

ನ್ಯಾಚುರಲ್ ತರಹದ ಸಿಂಥೆಟಿಕ್

cute-hairstyles-for-girls-2019-3

ಹೇರ್‌ ಎಕ್ಸ್ ಟೆನ್ಶನ್‌ಗಳಲ್ಲಿ ಬಳಸಲ್ಪಡುವ ನ್ಯಾಚುರಲ್ ಸಿಂಥೆಟಿಕ್‌ ಕೂದಲಿನಲ್ಲಿ ಸಾಕಷ್ಟು ಅಂತರವಿದೆ, ಏಕೆಂದರೆ ಸಿಂಥೆಟಿಕ್‌ಕೂದಲನ್ನು ಕೃತಕ ವಿಧಾನದಿಂದ ತಯಾರಿಸುತ್ತಾರೆ. ಅದೇ ನ್ಯಾಚುರಲ್ ಕೂದಲನ್ನು ಜನ ಎಷ್ಟೋ ಸಲ ದಾನವಾಗಿ ನೀಡಿರುತ್ತಾರೆ ಅಥವಾ ಮಾರಿಕೊಂಡಿರುತ್ತಾರೆ. (ನಿಮ್ಮ ಉದುರಿದ ತಲೆಗೂದಲನ್ನು ಒಪ್ಪವಾಗಿ ಸಂಗ್ರಹಿಸಿ ಇಂದಿನ ದರದಲ್ಲಿ ತಾವು 100 ಗ್ರಾಂಗೆ 1000-1250 ರೂ.ಗೆ ಮಾರಬಹುದು). ಹೀಗಾಗಿ ನ್ಯಾಚುರಲ್ ಕೂದಲಿನ ಎಕ್ಸ್ ಟೆನ್ಶನ್ಸ್ ಖರೀದಿಸುವ ಮುನ್ನ ಅಗತ್ಯ ಅದರ ಗುಣಮಟ್ಟದ ಪರೀಕ್ಷೆ ಮಾಡಿ. ಅದೇ ಸಿಂಥೆಟಿಕ್‌ ಹೇರ್‌ ಎಕ್ಸ್ ಟೆನ್ಶನ್ಸ್ ಎಷ್ಟೋ ಕಡಿಮೆ ಬೆಲೆಗೆ ಸುಲಭವಾಗಿ ಸಿಗುತ್ತವೆ. ಹೀಗಾಗಿ ಸಿಂಥೆಟಿಕ್‌ ನ್ಯಾಚುರಲ್ ಹೇರ್‌ ಎಕ್ಸ್ ಟೆನ್ಶನ್‌ನಲ್ಲಿ ಬೆಲೆಯ ಅಂತರ ಹೆಚ್ಚಿರುತ್ತದೆ.

ಆದರೆ ಸಿಂಥೆಟಿಕ್‌ ಹೇರ್‌ ನ್ಯಾಚುರಲ್ ಹೇರ್‌ ಮುಂದೆ ಬಲು ಸಪ್ಪೆ ಎನಿಸುತ್ತದೆ. ಏಕೆಂದರೆ ನ್ಯಾಚುರಲ್ ಹೇರ್‌ನ್ನು ಕಲರ್‌ ಕೂಡ ಮಾಡಿಸಬಹುದು. ಹೀಗಾಗಿ ಇದರ ಬೆಲೆ ತುಸು ಹೆಚ್ಚಿರುತ್ತದೆ. ನ್ಯಾಚುರಲ್ ಹೇರ್‌ ಎಕ್ಸ್ ಟೆನ್ಶನ್ಸ್ 1 ವರ್ಷದವರೆಗೂ ಬಾಳಿಕೆ ಬರುತ್ತದೆ. ಕೆಲವರಿಗೆ ಸಿಂಥೆಟಿಕ್‌ ಹೇರ್‌ ಎಕ್ಸ್ ಟೆನ್ಶನ್ಸ್ ನಿಂದ ಅಲರ್ಜಿ ಆಗುವುದುಂಟು. ಆದ್ದರಿಂದ ಇದನ್ನು ಬಳಸುವ ಮೊದಲು ನಿಮ್ಮ ಹೇರ್‌ ಸ್ಟೈಲಿಸ್ಟ್ಟರಿಂದ ಸಲಹೆ ಪಡೆಯಿರಿ.

ಶಾರ್ಟ್‌ ಟರ್ಮ್ ಎಕ್ಸ್ ಟೆನ್ಶನ್‌ ಕೇವಲ ಒಂದು ಪಾರ್ಟಿಯ ಲುಕ್ಸ್ಗಾಗಿ ಹೇರ್‌ ಎಕ್ಸ್ ಟೆನ್ಶನ್‌ ಬಳಸಲು ಬಯಸುತ್ತೀರೆಂದರೆ ನೀವು ಕ್ಲಿಪ್‌ ಆನ್‌ ಎಕ್ಸ್ ಟೆನ್ಶನ್ಸ್ ಬಳಿಸಿಕೊಳ್ಳಿ. ಇದರಲ್ಲಿ ನಿಮ್ಮ ಕೂದಲಿನ ಪದರದ ಮೇಲೆ ಹೇರ್‌ ಕ್ಲಿಪ್ಸ್ ನ್ನು ಅಟ್ಯಾಚ್‌ಮಾಡಲಾಗುತ್ತದೆ, ಅದನ್ನು ನೀವು ದಿನವಿಡೀ ಬಳಸಿ ಸುಲಭವಾಗಿ ರಾತ್ರಿ ಕಳಚಿಡಬಹುದು. ಆದರೆ 1 ವಾರದವರೆಗೂ (ಟೂರ್‌ಗೆ ಹೊರಟಿದ್ದರೆ) ಅದೇ ಲುಕ್ಸ್ ಬಳಸ ಬಯಸಿದರೆ, ಟೆಂಪರರಿ ಗ್ಲೂ ಆನ್‌ಬಾಂಡೆಡ್‌ ಎಕ್ಸ್ಟೆನ್ಶನ್ಸ್ ಬಳಸಿಕೊಳ್ಳಿ. ಇದರಲ್ಲಿ ತಲೆಯ ಸ್ಕಾಲ್ಪ್ಗೆ ಲಿಕ್ವಿಡ್‌ ಗ್ಲೂ ಬಳಸಿ, ಎಕ್ಸ್ ಟೆನ್ಶನ್ಸ್ ನ್ನು ಸೆಟ್‌ ಮಾಡಲಾಗುತ್ತದೆ ಹಾಗೂ ನಂತರ ಕಳಚಲು ಆಯಿಲ್ ‌ಬೇಸ್ಡ್ ಸಾಲ್ವಿಂಟ್‌ನ್ನು ಬಳಸಬೇಕು. ಇದಕ್ಕಾಗಿ ನೀವು ನಿಮ್ಮ ಕೇಶತಜ್ಞೆಯ ಸಹಾಯ ಪಡೆಯಿರಿ.

ಲಾಂಗ್‌ ಟರ್ಮ್ ಎಕ್ಸ್ ಟೆನ್ಶನ್‌

Hair-extention

ನೀವು 4-5 ತಿಂಗಳ ಕಾಲ ಒಂದೇ ತರಹದ ಲುಕ್ಸ್ ಇರಲಿ ಎಂದು ಬಯಸಿದರೆ, ಆಗ ಕೆರಾಟಿನ್‌ ಬಾಂಡ್‌ ಬಳಸಬೇಕು. ಇದರಲ್ಲಿ ನಕಲಿ ಕೂದಲ ತುದಿಗೆ ಕೆರಾಟಿನ್‌ ಅಳವಡಿಸುತ್ತಾರೆ. ಇದನ್ನು ಅಸಲಿ ಕೂದಲ ಜೊತೆ ಬೆರೆಸಿ ಕೆರಾಟಿನ್‌ನ್ನು ಬಿಸಿ ರಾಡ್‌ನಿಂದ ತುಸು ಕರಗಿಸಲಾಗುತ್ತದೆ, ಇದರಿಂದ ಎಕ್ಸ್ ಟೆನ್ಶನ್ಸ್ ಅಸಲಿ ಕೂದಲಿನ ಜೊತೆ ಅಂಟಿಕೊಳ್ಳುತ್ತದೆ. ತಲೆ ಸ್ನಾನ ಮಾಡಿದರೂ ಇದು ಬಿಟ್ಟುಕೊಳ್ಳುವುದಿಲ್ಲ. ಲಾಂಗ್‌ ಟರ್ಮ್ ಎಕ್ಸ್ ಟೆನ್ಶನ್ಸ್ ಮಾಡಿಸಲು ಸಾಕಷ್ಟು ಟೈಂ ಬೇಕು. ಇದನ್ನು ಚೆನ್ನಾಗಿ ಸೆಟ್‌ಮಾಡಿಸಿರದಿದ್ದರೆ, ಇದು ನಿಮ್ಮ ಅಸಲಿ ಕೂದಲನ್ನು ಹಾನಿ ಮಾಡೀತು!

ಇದರ ಜೊತೆಯಲ್ಲಿ ಇಂಟರ್‌ ಲಾಕ್‌ ಪ್ರಕ್ರಿಯೆ ಮೂಲಕ ನಿಮ್ಮ ಕೂದಲಿನ ಮೇಲ್ಭಾಗದಲ್ಲಿ ಹೇರ್‌ ಎಕ್ಸ್ ಟೆನ್ಶನ್ಸ್ ನ್ನು ಅಳವಡಿಸಬಹುದು. ಇದರಲ್ಲಿ ಕೂದಲನ್ನು ಬಿಲ್‌ಕುಲ್ ‌ಸ್ಚ್ರೇಟ್‌ ಮಾಡಲಾಗುತ್ತದೆ. ಇದರಿಂದ ಜಡೆ ಹೆಣೆಯಲಾಗದು. ಯಾರ ಕೂದಲು ಹೆಚ್ಚು ಒತ್ತಾಗಿದೆಯೋ ಅವರಿಗೆ ಬ್ರೆಡೆಡ್‌ ವರ್ಷನ್‌ ಹೆಚ್ಚು ಒಪ್ಪುತ್ತದೆ. ಇಂಥ ಕೂದಲಿಗೆ ಅಳವಡಿಸಲಾದ ಹೇರ್‌ ಎಕ್ಸ್ ಟೆನ್ಶನ್ಸ್ ನಿಂದ ಬಲವಂತವಾಗಿ ಜಡೆ ಹೆಣೆಯಲು ಹೋದರೆ ಅದು ಸರಿಬಾರದು. ನಿಮಗೆ ಕೆರಾಟಿನ್‌ ಬಾಂಡ್‌ ಬಳಸಲು  ಇಷ್ಟವಿಲ್ಲದ್ದರೆ, ಹೊಲಿಗೆಯಂಥ ವಿಧಾನ ಬಳಸಿ ಹೇರ್‌ ಎಕ್ಸ್ಟೆನ್ಶನ್ಸ್ ಬಳಸಿಕೊಳ್ಳಿ. ಇದರಲ್ಲಿ ಅಸಲಿ ಕೂದಲಿನ ಜೊತೆ ನಕಲಿ ಕೂದಲನ್ನು 2 ಬಟ್ಟೆಗಳ ಹೊಲಿಗೆ ಹಾಕಿದಂತೆ ಜೋಡಿಸಲಾಗುತ್ತದೆ. ನೀವು ಸರಿಯಾದ ಟೆಕ್ನಿಕ್ಸ್ ಬಳಸಿದ್ದೇ ಆದಲ್ಲಿ ಹೇರ್‌ ಎಕ್ಸ್ ಟೆನ್ಶನ್ಸ್  ನಿಮಗೆ ಎಂದೂ ಹಾನಿಕಾರಕವಲ್ಲ.

– ಭಾರತಿ ಹೆಗಡೆ

ಹೇರ್‌ ಎಕ್ಸ್ ಟೆನ್ಶನ್ಸ್ ಸುದೀರ್ಘ ಬಾಳಿಕೆಗಾಗಿ

woman-holding-her-hair-79306339-5a4cef94494ec90036acff2f-(1)

ನ್ಯಾಚುರಲ್ ಹೇರ್‌ ಎಕ್ಸ್ ಟೆನ್ಶನ್ಸ್ ನ್ನು ನೀವು ನಿಮ್ಮ ಅಸಲಿ ಕೂದಲಿಗೆ ಮಾಡುವ ಆರೈಕೆಯಂತೆಯೇ ಮಾಡಿ ಗಮನಿಸತಕ್ಕದ್ದು.

ಹೇರ್‌ ಎಕ್ಸ್ ಟೆನ್ಸನ್ಸ್ ಸುದೀರ್ಘ ಬಾಳಿಕೆಗಾಗಿ ಅದನ್ನು ಸದಾ ಸ್ವಚ್ಛ ಶುಭ್ರವಾಗಿ ಇಟ್ಟುಕೊಳ್ಳಬೇಕು, ಆದರೆ ನಮ್ಮ ಸಹಜ ಕೂದಲಿನ ತರಹ ಇದನ್ನು ತೊಳೆಯುವಂತಿಲ್ಲ!

ತಲೆಗೆ ಹೆಡ್‌ ಮಸಾಜ್‌ ಮಾಡಿಸಬೇಕಿದ್ದರೆ, ಬಲು ನಿಧಾನವಾಗಿ ಮಾಡಿಸಬೇಕು.

ಒಂದು ಪಕ್ಷ ಹೇರ್‌ ಎಕ್ಸ್ ಟೆನ್ಶನ್ಸ್ ತೊಳೆಯಲೇಬೇಕಾದ ಅನಿವಾರ್ಯತೆ ಬಂದಲ್ಲಿ, ಅದನ್ನು ಧರಿಸಿ ತಲೆಯನ್ನು ನೆಟ್ಟಗೆ ಇಟ್ಟುಕೊಳ್ಳಿ.ನಂತರ ಸಲ್ಫೇಟ್‌ ರಹಿತ ಸೌಮ್ಯ ಮಾಯಿಶ್ಚರೈಸಿಂಗ್‌ಶ್ಯಾಂಪೂ ಬಳಸಿಕೊಳ್ಳಿ.

ದೀರ್ಘ ಬಾಳಿಕೆಗಾಗಿ ಇದನ್ನು ಚೆನ್ನಾಗಿ ಒಣಗಿಸಲು ಮರೆಯದಿರಿ. ಇದನ್ನು ಎಂದೂ ಒದ್ದೆ ಇರುವಾಗ ಬಾಚದಿರಿ.

ಈ ಕೂದಲನ್ನು ಹಲವು ಭಾಗಗಳಲ್ಲಿ ವಿಭಾಗಿಸಿ ಚೆನ್ನಾಗಿ ಒಣಗಿಸಿ.

ಗ್ಲೂ ಬಾಂಡೆಡ್‌ ಎಕ್ಸ್ ಟೆನ್ಶನ್‌ ಬಳಸಿರುವಾಗ, ತಲೆಗೆ ಎಣ್ಣೆ ಹಚ್ಚಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ