ಭಾರತ ಸರ್ಕಾರದ ಅಂಕಿಸಂಖ್ಯೆ ಸಚಿವಾಲಯ ವಿಚಿತ್ರ ಸಮೀಕ್ಷೆ ನಡೆಸಿತ್ತು. ಮನೆಯಲ್ಲಿ ಯಾರು, ಎಷ್ಟು ಸಮಯ, ಯಾವ ಕೆಲಸದಲ್ಲಿ ಮಗ್ನರಾಗಿರುತ್ತಾರೆ? ಎನ್ನುವುದೇ ಈ ಸಮೀಕ್ಷೆ. 2019ರಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ 1,38,799 ಮನೆಗಳ ಡೇಟಾದಿಂದ ಗೊತ್ತಾದ ಸಂಗತಿಯೇನೆಂದರೆ, ಅಲ್ಲಿ ಪ್ರತಿಯೊಬ್ಬ ಮಹಿಳೆ 299 ನಿಮಿಷಗಳಷ್ಟು ಸಮಯ ಮನೆಗೆಲಸದಲ್ಲಿ ತೊಡಗಿರುತ್ತಾಳೆ. ಅದಕ್ಕೆ ಆಕೆಗೆ ಯಾವುದೇ ಹಣ ಸಂದಾಯವಾಗುವುದಿಲ್ಲ. ಅದೇ ಪುರುಷ ಕೇವಲ 97 ನಿಮಿಷಗಳಷ್ಟು ಸಮಯ ಮನೆಗೆಲಸಕ್ಕೆ ಕೊಡುತ್ತಾನೆ.
ಮಹಿಳೆಯೊಬ್ಬಳು 134 ನಿಮಿಷ ಇತರೆ ಸದಸ್ಯರ ಯೋಗಕ್ಷೇಮಕ್ಕಾಗಿ ಹಾಗೂ ಪುರುಷ 76 ನಿಮಿಷ ಮೀಸಲಿಡುತ್ತಾನೆ. `ಟೈಮ್ ಯೂಸ್ ಇನ್ ಇಂಡಿಯಾ 2019′ ಹೆಸರಿನಿಂದ ಜಾರಿಗೊಳಿಸಲಾದ ಈ ವರದಿಯನ್ನು ಈಗ ನ್ಯಾಯಾಲಯಗಳು ಇನ್ಶೂರೆನ್ಸ್ ಕ್ಲೇಮ್ ಗಳಲ್ಲಿ ಬಳಸಲಾರಂಭಿಸಿವೆ. ಅಪಘಾತದಲ್ಲಿ ತಾಯಿ ಅಥವಾ ಹೆಂಡತಿ ಸತ್ತಾಗ ಇನ್ಶೂರೆನ್ಸ್ ಕಂಪನಿಗಳು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕ್ಲೇಮ್ ಕೊಡದಿರುವ ಅಭ್ಯಾಸದ ಮೇಲೆ ನಿಯಂತ್ರಣ ಹೇರುತ್ತವೆ.
ವಾಸ್ತವದಲ್ಲಿ ಮಹಿಳೆಯರನ್ನು ಗುಲಾಮರೆಂದು ಭಾವಿಸುವುದು ಧರ್ಮದ ಉಡುಗೊರೆಯೇ ಆಗಿದೆ. ಎಲ್ಲಿಯವರೆಗೆ ಜನರು ಕಾಡಿನಲ್ಲಿ ವಾಸಿಸುತ್ತಿದ್ದರೊ, ಅಲ್ಲಿಯವರೆಗೆ ಪುರುಷ ಹಾಗೂ ಮಹಿಳೆ ಇಬ್ಬರೂ ಸಮನವಾಗಿ ದುಡಿಯುತ್ತಿದ್ದರು. ಆಹಾರ ಶೋಧ ಮಾಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಉಸ್ತುವಾರಿಯನ್ನು ತಾವೇ ಮಾಡಿಕೊಳ್ಳುತ್ತಿದ್ದರು. ನಾಗರಿಕತೆ ಅವರಿಗೆ ಹೇಗಿರಬೇಕು ಎಂದು ಕಲಿಸಿತು, ಕೆಲಸಗಳನ್ನು ವರ್ಗೀಕರಿಸಿತು. ಇಬ್ಬರಿಗೂ ಸಮಾನ ಜವಾಬ್ದಾರಿಗಳು ದಕ್ಕಿದವು. ಪುರುಷ ಮಹಿಳೆ ಜೊತೆ ಜೊತೆಗೆ ಇರಬೇಕಾದರೆ ಯಜಮಾನ ಗುಲಾಮ ಎಂಬ ವರ್ಗೀಕರಣ ತರಲಾಯಿತೇ?
ಶತ ಶತಮಾನಗಳಿಂದ ಮಹಿಳೆಯರು ಈ ಒಂದು ಅಸಮಾನತೆಯ ಭೂತವನ್ನು ಎದುರಿಸಬೇಕಾಗಿ ಬರುತ್ತಿದೆ. ತಾಯಂದಿರು ತಮ್ಮ ಪುತ್ರಿಯರಿಗೆ ಗಲಾಮಗಿರಿಯ ಹೊರೆ ಹೊರೆಸಿ ಕಳಿಸುತ್ತಿದ್ದಾರೆ. ಗಂಡನ ಸೇವೆ ಮಾಡಬೇಕು, ಅವರ ಮನೆಯವರ ಕೆಲಸ ಮಾಡಬೇಕು, ನಿನ್ನ ಹಕ್ಕಿನ ಬಗ್ಗೆ ಪ್ರಶ್ನಿಸಬೇಡ ಎಂದೆಲ್ಲ ಧರ್ಮಗ್ರಂಥಗಳು ಬೋಧಿಸುತ್ತವೆ.
ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪಾಪವೋನಿಯ ಬಗ್ಗೆ ಹೇಳಲಾಗಿದೆ ಹಾಗೂ ಮುಟ್ಟಿನಂತಹ ನೈಸರ್ಗಿಕ ಪ್ರಕ್ರಿಯೆಗೂ ಕೂಡ ಬ್ರಾಹ್ಮಣ ಹತ್ಯೆಯ ದೋಷಿ ಎಂದು ಹೇಳಲಾಗಿದೆ. ಗಂಡನ ಸಾವಿಗೆ ಹೆಂಡತಿಯನ್ನು ತಪ್ಪಿತಸ್ಥೆ ಎಂದು ತಿಳಿಸಲಾಗಿದೆ ಮತ್ತು ಆಕೆಯನ್ನು ಜೀವಂತ ದಹಿಸುವುದರಿಂದ ಹಿಡಿದು ಗುಲಾಮ ಅಥವಾ ಭಿಕ್ಷುಕಿತನಕ ಮಾಡಲಾಗಿದೆ ವಾಸ್ತವದಲ್ಲಿ ಆಕೆ ತನ್ನ ಜೀವಿತಾವಧಿಯಲ್ಲಿ ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತಿರುವಂತೆ ಮಾಡಿದೆ.
ಪುರುಷ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾನೆ ಎಂಬ ತರ್ಕ ಸುಳ್ಳು. ಒಂದು ವೇಳೆ ಆ ಸರ್ವೆ ನಿಖರವಾಗಿದ್ದರೆ, ಮಹಿಳೆ ಒಂದು ದಿನದ 1440 ನಿಮಿಷಗಳಲ್ಲಿ 433 ನಿಮಿಷಗಳಷ್ಟೆ ಮನೆಗೆಲಸದಲ್ಲಿ ತೊಡಗಿರುತ್ತಾಳೆ. ಉಳಿದ ಸಮಯನ್ನು ಆಕೆ ಪುರುಷರ ಹಾಗೆ ಗಳಿಸಲು ತೊಡಗಿಸಬಹುದು. ಆದರೆ ಆಕೆ ಹಾಗೆ ಮಾಡದಂತೆ ತಡೆಯಲಾಗುತ್ತದೆ.
ಪರಪುರುಷರನ್ನು ಭೇಟಿ ಆಗದಿರಲೆಂದು ಆಕೆಯನ್ನು ಮನೆಯಿಂದ ಹೊರಹೋಗಲು ಬಿಡುವುದಿಲ್ಲ. ಬುರ್ಖಾ ಹಾಗೂ ಸೆರಗಿನ ಹಿಂದೆ ಬಂಧಿಸಿಡಲಾಗುತ್ತದೆ. ಆಕೆಗೆ ಓದಲು ಅವಕಾಶ ಕೊಡಲಿಲ್ಲ, ಸ್ಕಿಲ್ ಕಲಿಸಲಿಲ್ಲ.
ಮಹಿಳೆಯರ ಬಳಿ ಸಾಕಷ್ಟು ಸಮಯವಿರುತ್ತದೆ, ಅದರ ಮುಖಾಂತರ ಅವರು ಸಾಕಷ್ಟು ಕಲಿಯಬಹುದು. ಇತ್ತೀಚೆಗೆ ಪರೀಕ್ಷೆಯಲ್ಲಿ ಮಹಿಳೆಯರು ಉನ್ನತ ಅಂಕ ಪಡೆಯುತ್ತಿದ್ದಾರೆ. ಏಕೆಂದರೆ ಅವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ಆದರೆ ಅವರನ್ನು ಧಾರ್ಮಿಕ ಕೆಲಸಗಳಲ್ಲಿ ತೊಡಗಿಸುವುದು ಷಡ್ಯಂತ್ರವೇ ಆಗಿದೆ.
ಭಾರತದಲ್ಲಿ ಹಿಂದೂ ಮಹಿಳೆಯರಿಗೆ ಪೂಜೆ ಪ್ರವಚನ ಹಾಗೂ ದೇಗುಲಗಳಲ್ಲಿ ಮೂರ್ತಿ ಪೂಜೆಯಲ್ಲಿ ತೊಡಗಿಸಲಾಗುತ್ತಿದೆ.
ಭಾರತದ 36 ಕೋಟಿ ಮಹಿಳೆಯರನ್ನು ಜನಗಣತಿಯಲ್ಲಿ ವ್ಯರ್ಥ ಎಂದು ಪರಿಗಣಿಸಲಾಗಿದೆ. ಅವರನ್ನು ಭಿಕ್ಷುಕರು, ವೇಶ್ಯೆಯರು ಹಾಗೂ ಕೈದಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಜನಗಣತಿ ಪಾರ್ಲಿಮೆಂಟಿನ ಪ್ರಕಾರ ನಡೆಯುತ್ತದೆ ಹಾಗೂ ಈ 36 ಕೋಟಿ ಮಹಿಳೆಯರು (2001ರ ಜನಗಣತಿ ಪ್ರಕಾರ) ನಿಷ್ಕ್ರಿಯರೆಂದಾದರೆ, ಅದಕ್ಕೆ ಪುರುಷರಿಂದ ತುಂಬಿದ ಸಂಸತ್ತಿನ ಮೊಹರು ಬಿದ್ದಿದೆ.
ಮಹಿಳೆಯರು ಮನೆಯಿಂದ ಹೊರಗೆ ಆಫೀಸು ಅಥವಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ ಹಾಗೂ ಗಳಿಸುತ್ತಾರೆ ಮತ್ತು ಮನೆಯಲ್ಲಿ ಮಕ್ಕಳು, ವೃದ್ಧರನ್ನು ನೋಡಿಕೊಳ್ಳುತ್ತಾರೆ. ಅದಕ್ಕೆ ಅವರು ಪತಿಯಿಂದ ಸಂಬಳ ಪಡೆಯುವ ಹಕ್ಕು ಇದೆ.
ಅವರಿಗೆ ಕೇವಲ ಆಸರೆ ಅಥವಾ ಊಟ ಕೊಟ್ಟರೆ ಸಾಲದು, ವಿಷಯ ಹಣದ ಲೆಕ್ಕದ್ದಲ್ಲ, ಮಾನಸಿಕತೆಯದ್ದು.
ವಿಷಾದದ ಸಂಗತಿಯೆಂದರೆ, ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನ ಇರುವುದಿಲ್ಲ. ಅವರು ತಮ್ಮ ತಲೆಯ ಮೇಲೆ ಕಲಶ ಹೊತ್ತು ಬರಿಗಾಲಲ್ಲಿ ನಡೆಯುವಂತೆ ಕಾಣಲಾಗುತ್ತದೆ. ವ್ರತ ಪಾಲಿಸುವವರಂತೆ ಪಂಡಿತರಿಗೆ ಊಟ ಬಡಿಸುವಂತೆ, ವಿಧವೆ ಅಥವಾ ವಿಚ್ಛೇದಿತರಾದಾಗ ಸಮಾಜದಿಂದ ಬಹಿಷ್ಕೃತರಾದಂತೆ ಕಂಡುಬರುತ್ತಾರೆ.
ಇದು ಮೂಲಭೂತ ಹಕ್ಕಿಗೆ ವಿರುದ್ಧ
ಲಿವ್ ಇನ್‌ನಲ್ಲಿ ಇರುವ ಹುಡುಗಿ ಆ ಬಳಿಕ ರೇಪ್‌ನ ಆರೋಪ ಹೊರಿಸಿದರೆ, ಆ ಕುರಿತಂತೆ ತಕ್ಷಣವೇ ಜೈಲಿಗೆ ಕಳಿಸಬಾರದು ಹಾಗೂ ತಕ್ಷಣವೇ ಜಾಮೀನು ನೀಡುವಂತೆ ದೇಶದ ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ಮ್ಯಾಜಿಸ್ಟ್ರೇಟ್‌ಗಳಿಗೆ ಸಂದೇಶ ರವಾನಿಸುವಂತಾಗಬೇಕು ಅತ್ಯಾಚಾರದ ಅಪರಾಧ ಜಾಮೀನುರಹಿತ ಆಗಿದೆ. ಆದರೆ ಕೆಳ ನ್ಯಾಯಾಲಯ ಬಯಸಿದರೆ ಜಾಮೀನು ಕೊಡಬಹುದು.
ಸಾಮಾನ್ಯವಾಗಿ ಕಂಡುಬರುವ ಸಂಗತಿಯೇನೆಂದರೆ, ಕೆಳ ನ್ಯಾಯಾಲಯಗಳು ಹಸಿವು ನೈತಿಕತೆಯ ಆಧಾರದ ಮೇಲೆ ಆರೋಪಿಯನ್ನು ತಕ್ಷಣವೇ ಬಂಧಿಸಲು ವಾರಂಟ್ ಹೊರಡಿಸುತ್ತವೆ. ಎಷ್ಟೋ ಸಲ ಜನರು ನ್ಯಾಯಾಲಯಗಳಿಗೆ ಎಡತಾಕುತ್ತಾ ಸುಪ್ರೀಂ ಕೋರ್ಟ್ ತನಕ ಹೋಗಿಬಿಡುತ್ತಾರೆ.
ಈ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಸ್ಪಷ್ಟಪಡಿಸಿರುವುದೇನೆಂದರೆ, ಲಿವ್ ಇನ್‌ನಲ್ಲಿರುವರಿಗೆ ಅತ್ಯಾಚಾರದ ಆರೋಪ ಹೊರಿಸುವ ಹಕ್ಕು ಇಲ್ಲ. ಆದರೆ ಅವರ ಪ್ರಕರಣವನ್ನು ತಳ್ಳಿಹಾಕಲಾಗದು. ಈ ಅವಧಿಯಲ್ಲಿ ಹುಡುಗಿಯ ಸ್ಥಿತಿ ಭಯಾನಕವಾಗಿರುತ್ತದೆ. ಹುಡುಗ ತಾನು ಯಾವಾಗ ಜೈಲಿಗೆ ಹೋಗಬೇಕಾಗುತ್ತೋ ಎಂದು ಭಯದಲ್ಲಿರುತ್ತಾನೆ.
ಲಿವ್ ಇನ್ ಪರಂಪರೆ ಹೊಸದೇನಲ್ಲ. ಅನೈಸರ್ಗಿಕ ಅಲ್ಲ, ವಿವಾಹಪೂರ್ವ ಅಥವಾ ವಿವಾಹೇತರ ಸೆಕ್ಸ್ ಸಂಬಂಧ ಅಥವಾ ಜೋಡಿಯಾಗಿ ಇರುವುದು ಯಾವುದೇ ತಪ್ಪಲ್ಲ. ಅನೈತಿಕ ಅಲ್ಲ. ಅದು ಅವ್ಯವಹಾರಿಕವಂತೂ ಆಗಿದೆ. ಲಿವ್ ಇನ್ ಲೈಫ್ ಎಷ್ಟು ಸುಖಕರವೋ, ಅಷ್ಟೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸಮಾಜವಂತೂ ಅವರನ್ನು ಕೀಳಾಗಿ ಕಾಣುತ್ತದೆ. ಅವರೂ ಕೂಡ ಸಹಜವಾಗಿ ಇರಲು ಸಾಧ್ಯವಾಗುವುದಿಲ್ಲ, ತಮ್ಮವರೊಂದಿಗೆ ಹೋರಾಡಿ ಜೀವನ ನಡೆಸಬೇಕಾಗುತ್ತದೆ.
ಇಂದಿನ ವೈವಾಹಿಕ ಕಾನೂನುಗಳ ಕಾರಣಗಳಿಂದ ಲಿವ್ ಇನ್‌ನಲ್ಲಿ ಇರುವುದು ಸುಗಮವಾಗಿದೆ. ಆದರೆ ಲಿವ್ ಇನ್‌ನಲ್ಲಿ ಇದ್ದು ಬ್ರೇಕ್ ಅಪ್ ಆದಾಗ ವಿವಾಹಿತರಿಗೆ ಆದ ಹಾಗೆಯೇ ನೋವಾಗುತ್ತದೆ.
ಲಿವ್ ಇನ್‌ನಲ್ಲಿ ಖರ್ಚು ಹಾಗೂ ಆಸ್ತಿ ವಿವಾದ ಕೂಡ ಉಂಟಾಗುತ್ತವೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಸಂಬಂಧದಲ್ಲಿ ಕಪ್ಪು ಛಾಯೆ ಆರಿಸಿಕೊಳ್ಳುತ್ತದೆ. ಲಿವ್ ಇನ್ ಜೋಡಿಗಳಲ್ಲಿ ವಿವಾದ, ಹೊಡೆದಾಟ ಆಗುವುದಿಲ್ಲ ಎಂಬ ಗ್ಯಾರಂಟಿಯೇನೂ ಇಲ್ಲ.
ನ್ಯಾಯಾಲಯಗಳು ಈಗಲೂ ಲಿವಿ ಇನ್‌ನ್ನು ತಿರಸ್ಕಾರದಿಂದಲೇ ನೋಡುತ್ತವೆ. ಅಂದಹಾಗೆ ಈಗ ಇದನ್ನು ಜನರ ಇಚ್ಛೆ ಎಂದು ಹೇಳತೊಡಗಿವೆ. ಭಾರತದಲ್ಲಿ ಲಿವ್ ಇನ್ ಬಳಿಕ ಅತ್ಯಾಚಾರದ ಪ್ರಕರಣಗಳು ಬಹಳಷ್ಟು ಹೆಚ್ಚಾಗಿವೆ. ಏಕೆಂದರೆ ಇದರಲ್ಲಿ ಹುಡುಗಿಯರು ಬಹಳ ಮೋಸ ಹೋಗುತ್ತಾರೆ.
ಭಾರತೀಯ ದಂಡ ಸಂಹಿತೆಯ ಪ್ರಕಾರ, ವಿವಾಹದ ಭರವಸೆ ಕೊಟ್ಟು ನಡೆಸಿದ ಸೆಕ್ಸ್ ಅತ್ಯಾಚಾರವಾಗಿದೆ. ತನ್ನನ್ನು ಬಳಸಿಕೊಳ್ಳಲಾಗಿದೆ ಎಂದು ದೂರು ಸಲ್ಲಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಈ ವಿಧಿಯನ್ನೇ ಅಸಂವೈಧಾನಿಕ ಎಂದು ಘೋಷಿಸಬೇಕು. ಏಕೆಂದರೆ ಇದು ಜೀವನದ ನಿರ್ಧಾರ ಕೈಗೊಳ್ಳುವ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ. ಆದಾಗ್ಯೂ ಅಷ್ಟಿಷ್ಟು ನಿರಾಳತೆ ಕೊಡುತ್ತ ಸುಪ್ರಿಂ ಕೋರ್ಟ್ ಆರೋಪಿಗಳನ್ನು ಜೈಲಿಗೆ ಕಳಿಸುವುದರಿಂದ ರಕ್ಷಿಸುತ್ತದೆ. ಆದರೆ ನ್ಯಾಯಾಲಯದ ಓಡಾಟ ತಪ್ಪಿದ್ದಲ್ಲ.
ಲಿವ ಇನ್‌ನಲ್ಲಿ ಇರುವ ಜೋಡಿಗಳು ತಮ್ಮ ಸಂಬಂಧ ರಾತ್ರಿಯದ್ದು ಆಗಿದೆ, ಸಮಾನತೆಯದ್ದಾಗಿದೆ, ಒಪ್ಪಿಗೆಯದ್ದು ಆಗಿರುವುದರ ಹೊರತಾಗಿ ಅದು ಖಾಯಂ ಅಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಅದರಲ್ಲಿ ದೂರು ನೀಡುವ ಅವಕಾಶವೇ ಉಂಟಾಗಬಾರದು. ಅದು ಸ್ನೇಹ ಸಂಬಂಧದಂತೆ ಇದ್ದು, ಯಾವಾಗ ಬೇಕಾದರೂ ತುಂಡರಿಸಬಹುದು ಅಥವಾ ಜೀವನವಿಡೀ ಮುಂದುವರಿಯಬಹುದು. ವಿವಾಹದ ಮೊಹರು ಸಂಬಂಧಗಳಿಗೆ ಖಾಯಂ ಸೀಲು ಹಾಕಲಾರದು, ವಿಚ್ಛೇದನದ ಹೆಚ್ಚುತ್ತಿರುವ ಪ್ರಕರಣಗಳು ಇದನ್ನು ಸಾಬೀತುಪಡಿಸಿವೆ.
ಈ ಪಿತೂರಿ ಏಕೆ?
ಆಲೂಗೆಡ್ಡೆ, ಕ್ಯಾರೆಟ್, ಗೋಬಿ, ಟೊಮೇಟೊ ಮುಂತಾದವುಗಳನ್ನು ಮಾರುವುದಕ್ಕೆ ದೊಡ್ಡ ತಂತ್ರಜ್ಞಾನ ಬೇಕಿಲ್ಲ. ಅದಕ್ಕೆ ಭಾರಿ ಬಂಡವಾಳವೇನು ಬೇಕಿಲ್ಲ. ಅವುಗಳಿಗೆ ಏರ್ ಕಂಡೀಷನ್ಡ್ ಅಗತ್ಯವೇನೂ ಇಲ್ಲ ಹಾಗೂ ಇವುಗಳ ಬೆಲೆ ಕೂಡ ಆಗಾಗ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಇವುಗಳ ಮೇಲೆ ರಿಲಯನ್ಸ್, ಗೋದ್ರೇಜ್, ಅಮೆಜಾನ್, ಅದಾನಿ, ಲಾಲ್ ಮಾರ್ಟ್‌ನಂತಹ ಕಂಪನಿಗಳು ಮುಗಿಬೀಳುವುದನ್ನು ನೋಡಿದರೆ ಇಡೀ ಚಿಲ್ಲರೆ ಮಾರುಕಟ್ಟೆಯನ್ನೇ ತಮ್ಮ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿವೆ. ಹಾಗಾಗಿ ಬಿಟ್ಟರೆ ರಸ್ತೆ ಬದಿ ತರಕಾರಿ ಮಾರುವ ಲಕ್ಷಾಂತರ ಜನರು ನಿರುದ್ಯೋಗಿಗಳಾಗಬಹುದು. ಯಾವ ದೇಶದಲ್ಲಿ ಬಡತನವಿಲ್ಲ, 200 ರೂ. ಗಳಲ್ಲಿ ಹೊಟ್ಟೆ ಹೊರೆಯುವಂತಹ ಜನರು ಇಲ್ಲಿ ಅಲ್ಲಿನ ಪರಿಸ್ಥಿತಿ ಬೇರೆ. ಆದರೆ ಭಾರತದಲ್ಲಿ ಕಳೆದ 6 ವರ್ಷಗಳಲ್ಲಿ ಈ ವಿಶಾಲ ಮಾರುಕಟ್ಟೆಯಲ್ಲಿ ತರಕಾರಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್‌ನಲ್ಲಿ ಭಾರಿ ಪುಕಾರು ಎಬ್ಬಿಸಿ ರಸ್ತೆ ಬದಿ ವ್ಯಾಪಾರಿಗಳನ್ನು ಮೂಲೆಗುಂಪು ಮಾಡಲು ಯೋಜನೆ ರೂಪಿಸಿವೆ.
ಆ ಅಂಗಡಿಗಳಲ್ಲಿ ಅಗ್ಗದ ದರದಲ್ಲಿ ತರಕಾರಿ ಸಿಗುತ್ತದೆ ಅಂದ್ಕೊಬೇಡಿ. ವೃದ್ಧ ಅಜ್ಜಿ ಕೈಗೆಟುಕು ಬೆಲೆಯಲ್ಲಿ ಕೊಡುವ ತರಕಾರಿಯನ್ನು ಸೂಟು ಬೂಟು ಧರಿಸಿದ ವ್ಯಕ್ತಿಗಳು ಹೇಗೆ ಕೊಡಲು ಸಾಧ್ಯ? ಇವರು ರೈತರನ್ನು ತಮ್ಮ ಕೈವಶ ಮಾಡಿಕೊಂಡರೆ ಮಾಧ್ಯಮಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರೆ ವಾಹನಗಳನ್ನು ವಶಪಡಿಸಿಕೊಂಡರೆ ಬೀದಿ ಬದಿ ಮಾರುವ ಚಿಕ್ಕ ವ್ಯಾಪಾರಿಗಳಿಗೆ ತರಕಾರಿ ಸಿಗದೇ ಹೋಗಬಹುದು. ಆಗ ನೀವು ಅನಿವಾರ್ಯವಾಗಿ ಆ ಅಂಗಡಿಗೆ ಹೋಗಬೇಕಾಗಿ ಬರುತ್ತದೆ. ಆಗ ನೀವು ಎರಡು ವಸ್ತುಗಳ ಬದಲಿಗೆ 4 ವಸ್ತು ತೆಗೆದುಕೊಳ್ಳುತ್ತೀರಿ. ಎರಡು ವಸ್ತುಗಳ ಬೆಲೆ ನಿಮಗೆ ಅಗ್ಗವಾಗಿ ಕಂಡುಬಂದರೆ, ಇನ್ನೆರಡು ಪ್ಯಾಕಿಂಗ್, ಆರ್ಗ್ಯಾನಿಕ್ ಹಾಗೂ ಸ್ವಚ್ಛಗೊಳಿಸಿದ ಕಾರಣದಿಂದ ಹೆಚ್ಚು ಹಣ ವಸೂಲಿ ಮಾಡಬಹುದು. ರೈತ ತನ್ನ ಕಾಲ ಮೇಲೆ ತಾನು ನಿಂತುಕೊಂಡಿದ್ದರೆ, ಈಗ ಸರ್ಕಾರ ಅವನನ್ನು ನಗ್ನಗೊಳಿಸುವ ಯೋಚನೆ ಹಾಕಿಕೊಂಡು ಬಂದಿದೆ. ಮೊದಲು ನೋಟು ಅಮಾನ್ಯೀಕರಣದ ಮುಖಾಂತರ ನಗ್ನಗೊಳಿಸಿತು. ಬಳಿಕ ಜಿಎಸ್‌ಟಿ, ಅದಾದ ನಂತರ ಪೌರತ್ವ ಹಕ್ಕುಗಳಿಂದ ಗುಲ್ಲೆಬ್ಬಿಸಿತು. ಈಗ ತರಕಾರಿಯರನ್ನು ಮೂಲೆಗುಂಪು ಮಾಡಲು ಹೊರಟಿದೆ. ಅದರಿಂದ ಗ್ರಾಹಕರು ಲೂಟಿಗೊಳಗಾಗುತ್ತಾರೆ. ಮಾರುವವರು ಹಾಗೂ ಉತ್ಪಾದಿಸುವವರು ಕೂಡ. ಈ ವಹಿವಾಟಿನಲ್ಲಿ ಹಣ ಹೂಡಿಕೆ ಮಾಡುವರು ಹಾಗೂ ಸರ್ಕಾರ ಲಾಭ ಮಾಡಿಕೊಳ್ಳುತ್ತವೆ.
ಸರ್ಕಾರ ಸ್ಪ್ರೆಕ್ಟಮ್ ನ್ನು ಮಾರಾಟ ಮಾಡಿ ಭಾರಿ ಹಣ ಗಳಿಸುತ್ತಿದೆ. ವಾಸ್ತವದಲ್ಲಿ ಅದು ಸರ್ಕಾರದ್ದೇ ಅಲ್ಲ, ಬಿಸಿಲಿನ ಹಾಗೆ ಸೃಷ್ಟಿಯ ಕೊಡುಗೆ. ಅದೇ ಸ್ಪ್ರೆಕ್ಟಮ್ ಬಲದ ಮೇಲೆ ನಿಮ್ಮ ಕಂಪ್ಯೂಟರ್ ನಡೆಯುತ್ತದೆ. ಆನ್ ಲೈನ್ ಖರೀದಿ ಕೂಡ ಮಾಡಬಹುದು. ಸರ್ಕಾರದ ಕಮೀಷನ್ ನಡುವೆ ಸೇರಿದೆ. ಗ್ರಾಹಕನೂ ಕೊಡುತ್ತಾನೆ, ಮಾರುವವನೂ ಕೊಡುತ್ತಾನೆ.
ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಕೋಟ್ಯಂತರ ರೂ.ಗಳ ಆಟ ಆಡುವ ಬ್ಯಾಂಕುಗಳಿಗೇ ಲಾಭ ಆಗುತ್ತಿದೆ. ಹಾನಿ ಆಗುತ್ತಿರುವುದೇ ಕೊಳಕು ಬಟ್ಟೆ ಧರಿಸಿರುವ ರಸ್ತೆ ಪಕ್ಕ ಮಾರಾಟ ಮಾಡುವ ತರಕಾರಿ ವ್ಯಾಪಾರಿಗಳಿಗೆ, ಅವರ ಗ್ರಾಹಕರು ಕೂಡ ಆನ್ ಲೈನ್ ವ್ಯಾಪಾರದಲ್ಲಿ ಲೂಟಿಗೊಳಗಾಗುತ್ತಾರೆ.
ಈಗ ಅದು ಆರಂಭವಾಗಿಬಿಟ್ಟಿದೆ. ಇವನ್ನು ಕೆಲವೇ ದಿನಗಳಲ್ಲಿ ಆನ್ ಲೈನ್ ವ್ಯಾಪಾರಕ್ಕೆ ಹಸಿರು ನಿಶಾನೆ ದೊರಕುತ್ತದೆ. ಅದು ಹೇಗೆಂದರೆ, ಕೋವಿಡ್ ಕಾರಣದಿಂದ ಆನ್ ಲೈನ್ ಪಾಠಕ್ಕೆ ಮಾತ್ರ ಅವಕಾಶ ಸಿಕ್ಕಂತೆ ಅದರ ಲಾಭ ಯಾರಿಗೆ ಅನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.