ಸ್ಕಿನ್ ಕೇರ್ ರೊಟೀನ್
ತುಪ್ಪ : ಹಸುವಿನ ಹಾಲು ಕಾಯಿಸಿದ ತುಪ್ಪ ಎಲ್ಲಾ ಬಗೆಯ ಚರ್ಮಕ್ಕೂ ಚಮತ್ಕಾರಿ ಪರಿಣಾಮ ತೋರಿಸಬಲ್ಲದು. ನೀವು ಬೆಳಗ್ಗೆ ಟಿಫನ್ ತಯಾರಿಸುವಾಗ, ಈ ತಪ್ಪದ 2-3 ಹನಿ ಬೆರಳಲ್ಲಿ ಮಸೆದು, ನಿಮ್ಮ ಕಂಗಳ ಡಾರ್ಕ್ ಸರ್ಕ್ಸಲ್ಸ್ ಸುತ್ತಲೂ ಹಚ್ಚಿಕೊಳ್ಳಿ. ಇದರಿಂದ ಕಂಗಳ ಸುತ್ತಾ ಕಪ್ಪು ವೃತ್ತ ತಗ್ಗುತ್ತದೆ.
ನಿಂಬೆ ಸಿಪ್ಪೆ : ಬೆಳಗ್ಗೆ ಎದ್ದ ತಕ್ಷಣ ಬರಿ ಹೊಟ್ಟೆಯಲ್ಲಿ 1 ದೊಡ್ಡ ಗ್ಲಾಸ್ ನೀರಿಗೆ 1 ಹೋಳು ನಿಂಬೆಹಣ್ಣು ಹಿಂಡಿಕೊಂಡು ಸೇವಿಸಿ. ಆ ಸಿಪ್ಪೆಯನ್ನು ಎಸೆಯುವ ಬದಲು, ಅದರ ಒಳಭಾಗದಿಂದ ಮೊಣಕೈ ಭಾಗ, ಉಗುರಿನ ಸುತ್ತಲೂ ಮಸಾಜ್ ಮಾಡಿ. ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದ್ದು, ಮೊಣಕೈ ಹಾಗೂ ಚರ್ಮದ ಇತರ ಭಾಗ ಕಪ್ಪಾಗುವುದನ್ನು ತಪ್ಪಿಸುತ್ತದೆ.
ವರ್ಜಿನ್ ಕೋಕೋನಟ್ ಆಯಿಲ್ : ನಿಮ್ಮ ಅಡುಗೆಮನೆಯಲ್ಲಿ ಬಳಸುವ ಅಡುಗೆಯ ವರ್ಜಿನ್ ಕೋಕೋನಟ್ ಆಯಿಲ್‌ನ್ನು ಪ್ರತಿ ದಿನ 2 ಚಮಚ ಸೇವಿಸಿ. ಇದು ಆ್ಯಂಟಿ ಆಕ್ಸಿಡೆಂಟ್ಸ್ ಹೊಂದಿದ್ದು ಇದರಿಂದ ಸುಕ್ಕು, ನೆರಿಗೆ, ಬ್ರೇಕ್ ಔಟ್ಸ್ ಪಿಗ್ಮೆಂಟೇಶನ್‌ಇತ್ಯಾದಿಗಳನ್ನು ನಿಯಂತ್ರಿಸಿ ಚರ್ಮಕ್ಕೆ ಗ್ಲೋ ನೀಡಿ ಅತಿ ಮೃದುಗೊಳಿಸುತ್ತದೆ.
ಕಡಲೆಹಿಟ್ಟಿನ ಪ್ಯಾಕ್ : ಜರಡಿಯಾಡಿದ ಕಡಲೆಹಿಟ್ಟಿಗೆ ತುಸು ಅರಿಶಿನ, ಚಂದನದ ಪುಡಿ, ಹಸಿ ಹಾಲು ಬೆರೆಸಿಕೊಂಡು, ಆ ಪೇಸ್ಟ್ ನ್ನು ಮುಖ ಮತ್ತು ದೇಹದ ಇತರ ಭಾಗಗಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ. ಬೇಸಿಗೆಯಲ್ಲಿ ಇದಕ್ಕೆ ಅಗತ್ಯ 1 ನಿಂಬೆಹಣ್ಣು ಹಿಂಡಿಕೊಳ್ಳಿ ಹಾಗೂ ಚಳಿ/ಮಳೆಗಾಲದಲ್ಲಿ 1 ದೊಡ್ಡ ಚಮಚ ಹಾಲಿನ ಗಟ್ಟಿ ಕೆನೆ ಬೆರೆಸಿರಿ. ಇದರಿಂದ ಡೆಡ್ ಸ್ಕಿನ್ ತೊಲಗಿ ನೀವು ತಾಜಾ ಆಗುವಿರಿ.
ಹೇರ್ ಕೇರ್ ರೊಟೀನ್ ಮೊಟ್ಟೆ : ಆಮ್ಲೆಟ್‌ಗೆ ನೀವು ಬಳಸುವ 1 ಮೊಟ್ಟೆ ತೆಗೆದುಕೊಂಡು (ವಾರಕ್ಕೊಮ್ಮೆ) ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ಗೊಟಾಯಿಸಿ. ಇದನ್ನು ಕೂದಲಿಗೆ ಚೆನ್ನಾಗಿ ತೀಡಿ, ಅರ್ಧ ಗಂಟೆ ಕಾಲ ಹಾಗೇ ಬಿಡಿ. ಇದನ್ನು ಹಚ್ಚಿಕೊಂಡು ನಿಮ್ಮ ಅಡುಗೆ ಅಥವಾ ಇತರ ಮನೆಗೆಲಸ ಮುಂದುವರಿಸಿ. ನಂತರ ಬಿಸಿ ನೀರಲ್ಲಿ ಚೆನ್ನಾಗಿ ಮುಖಕ್ಕೆ ತೊಳೆಯಿರಿ, ನಿಮಗೆ ದಟ್ಟ, ನೀಳ, ಸಾಫ್ಟ್ ಕೂದಲು ಸಿಗುತ್ತದೆ.
ವರ್ಜಿನ್ ಕೋಕೋನಟ್ ಆಯಿಲ್ : ಇದು ಅತಿ ನೈಸರ್ಗಿಕ ಹಾಗೂ ಪ್ರಭಾವಶಾಲಿ ಹೇರ್ ಸೀರಮ್ ಎನಿಸಿದೆ. ಇದರಿಂದ ಪ್ರತಿದಿನ ನಿಮ್ಮ ಕೂದಲನ್ನು ಮಸಾಜ್ ಮಾಡಿ, ರಾತ್ರಿ ಮಲಗುವ ಮುನ್ನ ನೆತ್ತಿಗೆ ಚೆನ್ನಾಗಿ ಒತ್ತಿಕೊಳ್ಳಿ. ಬೆಳಗೆದ್ದು ಕೂದಲು ತೊಳೆಯಿರಿ. ಇದರಿಂದ ನಿಮ್ಮ ಕೂದಲು ಬಹಳ ಮೃದುವಾಗುತ್ತದೆ.
ಮೇಕಪ್ ಕೇರ್ ರೊಟೀನ್
ಮಲ್ಟಿ ಟಾಸ್ಕಿಂಗ್ ಪ್ರಾಡಕ್ಟ್ಸ್ ಕೊಂಡುಕೊಳ್ಳಿ : ನೀವು ಸದಾ ಮಲ್ಟಿ ಟಾಸ್ಕಿಂಗ್ ಪ್ರಾಡಕ್ಟ್ಸ್ ಬಳಸುವುದರಿಂದ ನಿಮ್ಮ ಹೆಚ್ಚಿನ ಸಮಯದ ಉಳಿತಾಯವಾಗುತ್ತದೆ. ಆದ್ದರಿಂದ ನೀವು ಇಂಥ ಉತ್ತಮ ಗುಣಮಟ್ಟದ ಉತ್ಪನ್ನ ಮಾತ್ರ ಖರೀದಿಸಬೇಕು. ಇದು ನಿಮ್ಮ ನಿತ್ಯ ಬಳಕೆ ಹಾಗೂ ಮಲ್ಟಿ ಪರ್ಪಸ್ ಯೂಸ್‌ಗೆ ಅನುಕೂಲಕರ ಆಗಿರಬೇಕು. ಮಲ್ಟಿ ಟಾಸ್ಕಿಂಗ್ ಬ್ಯೂಟಿ ಪ್ರಾಡಕ್ಟ್ಸ್ ಕ್ರೀಂ ಬಳಸಿರಿ. ಇದು ಸನ್ ಸ್ಕ್ರೀನ್, ಮಾಯಿಶ್ಚರೈಸರ್, ಫೌಂಡೇಶನ್ ರೂಪದಲ್ಲಿ ಯೂಸ್ ಆಗುತ್ತದೆ. ನೀವು ಮುಖ ತೊಳೆದು ಒರೆಸಿದ ನಂತರ ಕ್ರೀಂ ಹಚ್ಚಿಕೊಂಡು ಬ್ಲಶ್, ಐ ಲೈನರ್, ಲಿಪ್ ಗ್ಲಾಸ್, ಪೌಡರ್‌ಗಳನ್ನು ಬಳಸಿಕೊಳ್ಳಿ.
ಕಡಿಮೆ ಸಮಯಕ್ಕಾಗಿ ಶೀಮರ್, ಲೈಟ್ ಕಲರ್ಸ್ : ನಿಮ್ಮ ಬಳಿ ಹೆಚ್ಚು ಸಮಯ ಇದ್ದಾಗ ಮೇಕಪ್‌ಗಾಗಿ ಗಾಢ, ಹೊಳೆ ಹೊಳೆಯುವ ಬಣ್ಣ ಬಳಸಿರಿ. ಆದರೆ ಸಮಯ ಕಡಿಮೆ ಇದ್ದಾಗ, ತೆಳು ಬಣ್ಣ ಬಳಸಿರಿ. ತೆಳು ಬಣ್ಣಗಳನ್ನು ನೀವು ಲೈಟ್ ಆಗಿ ಕೈನಿಂದಲೇ ಹಚ್ಚಬಹುದು. ನಿಯಮಿತವಾಗಿ ಪಿನ್ ಮತ್ತು ನ್ಯೂಟ್ರಲ್ ಕಲರ್ಸ್ ಬಳಸಿರಿ.
ರೈಟ್ ಟೂಲ್ ಬಳಸಿರಿ : ಬ್ಯೂಟಿ ಟೂಲ್ಸ್ ಅಗ್ಗ ಆಗಿರುವುದಿಲ್ಲ. ಆದರೆ ನೀವು ಅವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಅವು ದೀರ್ಘ ಬಾಳಿಕೆ ಬರುತ್ತವೆ. ಹೈ ಕ್ವಾಲಿಟಿ ಮೇಕಪ್ ಬ್ರಶ್ ಬಳಸಿರಿ, ಇದು ಅಫ್ಲಿಕೇಶನ್‌ನ್ನು ಸುಲಭ ಮಾಡುತ್ತದೆ. ನೀವು ಖಂಡಿತಾ ಸಮಯ ಉಳಿಸಬಹುದು.
ಪೌಡರ್ ಫೌಂಡೇಶನ್ ಬೆಟರ್ : ನೀವು ಮೇಕಪ್ ಮಾಡಿಕೊಳ್ಳುವಾಗ, ಎಲ್ಲಕ್ಕೂ ಮೊದಲೇ ಬೇಸ್‌ಗಾಗಿ ಫೌಂಡೇಶನ್ ಬಳಸುವಿರಿ. ಆದರೆ ಕ್ರೀಂ ಬೇಸ್ಡ್ ಫೌಂಡೇಶನ್ ಬ್ಲೆಂಡ್ ಆಗಲು ಬಹಳ ಸಮಯ ಬೇಕು. ಜೊತೆಗೆ ಸಂಜೆ ಹೊತ್ತಿಗೆ ಮುಖ ಆಯ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಸಮಯದಲ್ಲಿ ಉತ್ತಮ ಲುಕ್ಸ್ ಬಯಸಿದರೆ, ಪೌಡರ್ ಫೌಂಡೇಶನ್ ಬಳಸುವುದೇ ಸರಿ.
ಬ್ಲಶ್ ಒಂದು ಕೆಲಸ ಅನೇಕ : ಇದು ಮೇಕಪ್‌ನ ಒಂದು ಮುಖ್ಯ ಭಾಗ. ಬ್ಲಶ್ ಮಾಡಿದ ನಂತರ ಇಡೀ ಮುಖ ತಾಜಾ ಮತ್ತು ಶೈನಿಂಗ್‌ಆಗುತ್ತದೆ. ಇದನ್ನು ಬಳಸಲು ಹೆಚ್ಚು ಸಮಯ ಬೇಡ. ಬ್ಲಶ್‌ನಲ್ಲಿ ನೀವು ಪಿಂಕ್ ಯಾ ಪೀಚ್ ಕಲರ್ ಆರಿಸಬಹುದು. ಐ ಲೈನರ್, ಐ ಲ್ಯಾಶೆಸ್, ಐ ಬ್ರೋಸ್: ಇದನ್ನು ಪೂರ್ತಿ ಮಾಡಿದರೆ ನಿಮ್ಮ ಮೇಕಪ್ ಮುಗಿದಂತೆಯೇ. ಐಲೈನರ್‌ಗಾಗಿ ಪೆನ್ಸಿಲ್‌ಐಲೈನರ್ ಯಾ ಜೆಲ್ ಲೈನರ್ ಹೆಚ್ಚು ಬೆಟರ್, ಏಕೆಂದರೆ ಇದು ಒಣಗಬೇಕು ಎಂಬ ಜಂಜಾಟವಿಲ್ಲ. ಐ ಲ್ಯಾಶೆಸ್‌ಗೆ ಮಸ್ಕರಾ ಹಚ್ಚಿದ ನಂತರ, ನಿಮ್ಮ ಕಣ್ಣು ರೆಪ್ಪೆ ದೊಡ್ಡದಾಗಿ, ಸುಂದರವಾಗಿ ಕಾಣುತ್ತದೆ. ನಿಮ್ಮ ಐ ಬ್ರೋಸ್ ದಟ್ಟ ಅಲ್ಲದಿದ್ದರೆ, ಅದಕ್ಕಾಗಿ ಐಬ್ರೋಸ್ ಪೆನ್ಸಿಲ್ ಬಳಸಿರಿ. ಇದಕ್ಕಾಗಿ ನೀವು ಬ್ರೌನ್ ಯಾ ಬ್ಲಾಕ್ ಐಬ್ರೋಸ್ ಪೆನ್ಸಿಲ್ ಬಳಸಿಕೊಳ್ಳಿ.
ಲಿಪ್ ಗ್ಲಾಸ್, ಲಿಪ್ ಬಾವ್, ಲಿಪ್‌ಸ್ಟಿಕ್: ಇವೆಲ್ಲ ಇಲ್ಲದಿದ್ದರೆ ಮೇಕಪ್ ಅಪೂರ್ಣ ಲಿಪ್‌ಸ್ಟಿಕ್ ಹಚ್ಚಿದ ತಕ್ಷಣ ಮುಖ ಹೊಳೆಯುತ್ತದೆ. ನೀವು ನೈಸರ್ಗಿಕ ಸೌಂದರ್ಯ ಬಯಸಿದರೆ, ಲಿಪ್ ಗ್ಲಾಸ್‌ಬಳಸಿರಿ. ಇದು ಬಹು ವಿಧದಲ್ಲಿ ಲಭ್ಯ, ನಿಮಗೆ ಬೇಕಾದಂತೆ ಆರಿಸಿ. ಇದನ್ನು ಬಳಸುವುದೂ ಸುಲಭ. ಕ್ವಿಕ್ ಮೇಕಪ್‌ಗಾಗಿ ಇದು ಉತ್ತಮ ಆಯ್ಕೆ. ಇದರ ಬಳಕೆಯಿಂದ ತುಟಿ ಕೆಂಪಾಗುವುದಲ್ಲದೆ, ಅತಿ ಮೃದು ಸಹ ಆಗುತ್ತದೆ.
– ಪಿ. ಪೂಜಾ
ಕೆಲವು ಅಗತ್ಯ ಸಲಹೆಗಳು
ನಿಮ್ಮ ಬಳಿ ಮೇಕಪ್‌ಗಾಗಿ ಟೈಂ ಇಲ್ಲದಿದ್ದರೆ, ನೀವು ಕಡಿಮೆ ಸಮಯದಲ್ಲೇ ಉತ್ತಮ ಮೇಕಪ್ ಮಾಡಬಹುದು. ನಿಮ್ಮದು ನಾರ್ಮಲ್ ಸ್ಕಿನ್‌ಆಗಿದ್ದರೆ ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಕ್ರೀಂ ಬಳಸಿ. ಕಂಗಳ ಕೆಳಗೆ ಡಾರ್ಕ್ ಸರ್ಕಲ್ಸ್ ಇದ್ದರೆ, ಕೇವಲ ಲೈನರ್ ಯೂಸ್ ಮಾಡಿ.
ಮೇಕಪ್ ಮಾಡುವುದಕ್ಕೆ ಮೊದಲು, ಅದಕ್ಕೆ ಸಂಬಂಧಿಸಿದ ಎಲ್ಲಾ ಸಾಮಗ್ರಿ ಒಂದೇ ಕಡೆ ಇರಿಸಿಕೊಳ್ಳಿ. ಮೇಕಪ್ ಮಾಡಿಕೊಳ್ಳುವಾಗ ಹುಡುಕು ಗೋಜಲು ಇರುವುದಿಲ್ಲ, ನಿಮ್ಮ ಟೈಂ ವೇಸ್ಟ್ ಆಗುವುದಿಲ್ಲ.
ಮೇಕಪ್ ನಿಮ್ಮ ಸೌಂದರ್ಯ ಸಂವರ್ಧನೆಗೆ ಪೂರಕ, ಆದರೆ ಮೇಕಪ್ ನಂತರ ಚರ್ಮದ ಆರೈಕೆಯೂ ಅಷ್ಟೇ ಮುಖ್ಯ. ಹೀಗಾಗಿ ಮಲಗುವ ಮೊದಲು ನೀಟಾಗಿ ಮೇಕಪ್ ಶುಚಿಗೊಳಿಸಿ. ಹೀಗೆ ಮಾಡಿ ಮಾರನೇ ದಿನದ ಮೇಕಪ್ ಟೈಂ ಸೇವ್ ಮಾಡಿ.
ದಿನವಿಡೀ ಆದ ಸುಸ್ತು ತಪ್ಪಿಸಲು, ಸೀರಮ್ ಜೊತೆ ಕೆಫೀನ್ ಬಳಸಿರಿ.
ಕಂಗಳ ಸುತ್ತಲ ಏರಿಯಾ ಆಕರ್ಷಕವಾಗಿರಲು ಐಬ್ರೋಸ್ ಶೇಪ್ ಕಡೆ ಗಮನಕೊಡಿ.
ರಿಫ್ರೆಶ್ ಲುಕ್ಸ್ ಗಾಗಿ ಕಂಗಳ ಅಂಚಿನಲ್ಲಿ ಐಶ್ಯಾಡೋ ಬಳಸಿರಿ.
ನೀವು ಬಹಳ ಅರ್ಜೆಂಟ್‌ನಲ್ಲಿದ್ದರೆ…. ಐಬ್ರೋ ಪೆನ್ಸಿಲ್, ಮಸ್ಕರಾ, ಲಿಪ್‌ಗ್ಲಾಸ್ ಬಳಸಿಕೊಂಡು 10 ನಿಮಿಷದಲ್ಲಿ ಗ್ಲಾಮರಸ್ ಲುಕ್ಸ್ ಪಡೆಯಬಹುದು.
ನೀವು ಬೇಗ ಮೇಕಪ್ ಮುಗಿಸಿ ಸಮಯ ಉಳಿತಾಯ ಮಾಡಬೇಕೆಂದರೆ…. ಬ್ಲಶ್, ಬ್ರಾಂಝರ್, ಐಶ್ಯಾಡೋ ಬಳಸಿರಿ.
ನೀವು ಬಯಸಿದರೆ ಕೇವಲ ಐ ಲೈನರ್ ಮತ್ತು ಬ್ರೈಟ್ ಕಲರ್ ಲಿಪ್‌ಸ್ಟಿಕ್ ಬಳಸಬಹುದು.