ಮಳೆಗಾಲದಲ್ಲೂ ಕೂಡ ಸೆಕೆಯ ಕಾಟ ಹೆಚ್ಚುವುದುಂಟು. ಹಾಗೆಯೇ ಹ್ಯುಮಿಡಿಟಿಯ ಕಾಟ ಅಧಿಕವಾಗುತ್ತದೆ. ಹಾಗಾಗಿ ಬಹಳ ಜನರಿಗೆ ಬ್ಯಾಕ್ಟೀರಿಯಲ್ ಫಂಗಲ್ ಇನ್‌ಫೆಕ್ಷನ್‌ ಆಗುವ ಅಪಾಯವಿರುತ್ತದೇ. ಅವರಿಗೆ ನವೆ, ತುರಿಕೆ, ರಾಶೆಸ್‌, ಸೋಂಕು ಯಾವ ಚರ್ಮದ ಇತರ ರೋಗಗಳು ಕಟ್ಟಿಟ್ಟ ಬುತ್ತಿ. ಇವು 10 ಪಟ್ಟು ಹೆಚ್ಚುವುದೂ ಉಂಟು.

ಮಳೆಗಾಲದಲ್ಲಿ ಚರ್ಮದ ಆರೈಕೆ ಅತಿ ನಾಜೂಕಾಗಿ ಮಾಡಬೇಕು. ಮುಖ್ಯವಾಗಿ ಕಾಲುಬೆರಳುಗಳ ಸಂದು, ಕಂಕುಳು, ಬ್ರೆಸ್ಟ್ ಕೆಳಭಾಗ, ಕುತ್ತಿಗೆ, ಬೆನ್ನು, ಸೊಂಟದ ಭಾಗಗಳು ಇತ್ಯಾದಿ ಬೆವರಿನ ಕಾರಣ ಆರ್ದ್ರತೆ ಇವೆಲ್ಲ ಕೂಡಿಕೊಳ್ಳುತ್ತದೆ. ಕ್ರಮೇಣ ಇದು ಫಂಗಲ್ ಇನ್‌ಫೆಕ್ಷನ್‌ ಗೆ ದಾರಿ ಆಗುತ್ತದೆ.

ತಜ್ಞರ ಅಭಿಪ್ರಾಯದಲ್ಲಿ ಇದಕ್ಕಿರುವ ಒಂದೇ ರಾಮಬಾಣ ಎಂದರೆ ಆ್ಯಂಟಿ ಫಂಗಲ್ ಪೌಡರ್‌ ನ ಬಳಕೆ, ಏಕೆಂದರೆ ಮಳೆಗಾಲದಲ್ಲಿ ದೇಹ ಮತ್ತು ಪಾದ ಬೇಗ ಒದ್ದೆ ಆಗುತ್ತದೆ. ಹೀಗಾಗಿ ಆರ್ದ್ರತೆ ತುಂಬಿದ ವಾತಾವರಣದಲ್ಲಿ ಫಂಗಸ್‌ ಬಲು ಬೇಗ ಬೆಳೆಯುತ್ತದೆ. ಹೀಗಾಗಿ ಈ ಸೀಸನ್ನಿನಲ್ಲಿ ನಿಮ್ಮನ್ನು ನೀವು ಡ್ರೈ ಆಗಿರಿಸಿಕೊಳ್ಳುವುದು ಅತಿ ಅಗತ್ಯ. ಹೀಗಾಗಿ ಆ್ಯಂಟಿ ಫಂಗಲ್ ಪೌಡರ್‌ ಬಹಳ ಪ್ರಯೋಜನಕಾರಿ ಆಗುತ್ತದೆ.

ಇದು ಚರ್ಮವನ್ನು ಡ್ರೈ ಆಗಿರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದರ ಬಳಕೆಯಿಂದ ನಿಮಗೆ ಯಾವುದೇ ರೀತಿಯ ಫಂಗಲ್ ಇನ್‌ಫೆಕ್ಷನ್‌ ಕಾಡುವುದಿಲ್ಲ.

ಫಂಗಲ್ ಪೌಡರನ್ನು ಯಾವಾಗ ಬಳಸಬೇಕು? : ಫಂಗಲ್ ಇನ್‌ಫೆಕ್ಷನ್‌ ಆದಾಗ, ಯೋನಿಗೆ ಸೋಂಕು ತಗುಲಿದಾಗ, ಯೂರಿನರಿ ಇನ್‌ಫೆಕ್ಷನ್‌, ಕಾಲು ಬೆರಳುಗಳ ಸಂದಿನಲ್ಲಿ ನವೆ/ತುರಿಕೆ ಹೆಚ್ಚಿದಾಗ, ಸೊಂಟದ ಜಾಗದಲ್ಲಿ ಫಂಗಲ್ ಇನ್‌ಫೆಕ್ಷನ್‌ ಆದಾಗ, ಅಥ್ಲೀಟ್ಸ್ ಫುಟ್‌ನ ಚಿಕಿತ್ಸೆಗಾಗಿ, ನಮಗೆ ಮೈಯಲ್ಲಿ ಕಡಿತ/ಇರಿಟೇಶನ್‌ ಕಾಡಿದಾಗ…. ಫಂಗಲ್ ಪೌಡರ್‌ನ್ನು ಪ್ರತಿ ದಿನ 2-3 ಸಲ ಆಯಾ ಭಾಗಕ್ಕೆ ಧಾರಾಳ ಉದುರಿಸಬೇಕು.

ಬೆಳಗ್ಗೆ ಸ್ನಾನ ಆದ ಮೇಲೆ ಕಂಕುಳು, ನಿತಂಬದ ಬಳಿ, ಸೊಂಟದ ಭಾಗ, ಬ್ರೆಸ್ಟ್ ಕೆಳಭಾಗ, ಕುತ್ತಿಗೆ, ಬೆಂಭಾಗ, ಕಾಲು ಬೆರಳುಗಳ ಸಂದು…. ಇತ್ಯಾದಿ ಬೆವರು ಅಧಿಕ ಸಂಗ್ರಹಗೊಳ್ಳುವ ಎಲ್ಲಾ ಕಡೆ ಫಂಗಲ್ ಪೌಡರ್‌ ನ್ನು ಧಾರಾಳ ಉದುರಿಸಬೇಕು. ಇಷ್ಟು ಮಾತ್ರವಲ್ಲದೆ, ಸೆಕೆಯ ಕಾರಣ ಯಾವಾಗ ನವೆ, ತುರಿಕೆ, ಕಡಿತ ಉಂಟಾದಾಗಲೂ ಇದನ್ನು ನೀವು ಬಳಸಬೇಕು. ಮೆಡಿಕೇಟೆಡ್ ಸೋಪಿನಿಂದ ಕೈಕಾಲು, ಬೆರಳುಗಳ ಸಂದನ್ನು ಚೆನ್ನಾಗಿ ತೊಳೆದು, ಒರೆಸಿ, ಒಣಗಿಸಿ, ಫಂಗಲ್ ಪೌಡರ್‌ ಉದುರಿಸಬೇಕು.

ಫಂಗಲ್ ಸೋಂಕಿನ ವೈವಿಧ್ಯಗಳು

ಕಾಲು ಬೆರಳುಗಳ ಸಂದಿನ ನಡುವೆ ಉಂಟಾಗುವ ಫಂಗಲ್ ಇನ್‌ಫೆಕ್ಷನ್‌ ಮಾಮೂಲಿ ಎನಿಸಿದೆ. ಇದರಲ್ಲಿ ಬೆರಳು ಸಂದಿನ ನಡುವೆ ಚರ್ಮ ಅಂಟಂಟಾಗುತ್ತದೆ, ಕೀವು ಕಾಣಿಸುವ ಸಾಧ್ಯತೆ ಇದೆ, ದುರ್ವಾಸನೆ ಬೀರಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಇದು ಭಾರೀ ಹಾನಿಗೆ ದಾರಿಯಾಗುತ್ತದೆ. ಮಧುಮೇಹಿಗಳಿಗೆ ಆ ಭಾಗ ಗ್ಯಾಂಗ್ರೀನ್‌ಗೆ ತಿರುಗಬಹುದು.

ಟಿನಿಯಾ ಕಾರ್ಪೋರಿಸ್‌/ಕ್ರೂರಿಸ್‌ ಇನ್‌ಫೆಕ್ಷನ್‌ ಸಾಮಾನ್ಯವಾಗಿ ಕಂಕುಳು ಅಥವಾ ಬ್ರೆಸ್ಟ್ ಕೆಳಭಾಗವನ್ನು ಕಾಡುತ್ತದೆ. ಒದ್ದೆ ಬಟ್ಟೆ ಧರಿಸುವುದರಿಂದ ಈ ಹಿಂಸೆ ಉಂಟಾಗುತ್ತದೆ. ಇದರ ಮೇಲೆ ಫಂಗಲ್ ಪೌಡರ್‌ ಉದುರಿಸಿ ಈ ಸಮಸ್ಯೆಯಿಂದ ಮುಕ್ತರಾಗಿ. ಅದಕ್ಕೂ ಈ ಸೋಂಕು ತಗ್ಗದಿದ್ದಾಗ ನೀವು ಚರ್ಮ ತಜ್ಞರನ್ನು ಭೇಟಿ ಆಗಲೇಬೇಕು. ಸಾಮಾನ್ಯವಾಗಿ ಈ ಫಂಗಲ್ ಇನ್‌ಫೆಕ್ಷನ್‌ ಸ್ಥೂಲ ದೇಹಿಗಳು, ಚರ್ಮದ ಶುಭ್ರತೆ ಕಡೆ ಗಮನ ಕೊಡದಿರುವವರು, ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂಥವರು ಅಗತ್ಯವಾಗಿ ಈ ಆ್ಯಂಟಿ ಫಂಗಲ್ ಪೌಡರ್‌ನ್ನು ಬಳಿಯಲ್ಲೇ ಇಟ್ಟುಕೊಂಡು ಬಳಸುತ್ತಿರಬೇಕು.

ಇದರ ಕುರಿತಾಗಿ ಹೆಚ್ಚು ಅರಿವಿರದ ರೋಗಿಗಳು ತಮಗೇನೋ ಚರ್ಮದ ಸಮಸ್ಯೆ ಆಗಿದೆ ಎಂದು ವೈದ್ಯರನ್ನು ಸಂಪರ್ಕಿಸುತ್ತಾರೆ. ಏನೋ ತುಸು ಗಾಯ ಆಗಿದೆ ಅಷ್ಟೆ ಎಂದು ಯಾವುದೋ ಮುಲಾಮು ಸರಿ ನಿರ್ಲಕ್ಷಿಸುತ್ತಾರೆ. ಎಷ್ಟೋ ಸಲ ನಿತಂಬಗಳ ಘರ್ಷಣೆಯಿಂದಲೂ ನವೆ, ಕಡಿತ, ರಾಶೆಸ್‌ ಉಂಟಾಗುತ್ತದೆ. ಇದರ ಕಡೆ ಗಮನ ಕೊಡದ ಇಂಥ ಜನ ಇದು ಉಲ್ಬಣಗೊಂಡಾಗ ಹೌಹಾರುತ್ತಾರೆ.

ಹೀಗಾಗಿ ಇಂಥ ಜನ ಮಳೆಗಾಲದಲ್ಲಿ ಸದಾ ಫಂಗಲ್ ಪೌಡರನ್ನು ಬಳಸುತ್ತಿರಲೇಬೇಕು. ಆಗ ಈ ತೊಂದರೆಗಳು ಎಷ್ಟೋ ಪಟ್ಟು ತಗ್ಗುತ್ತವೆ. ಎಷ್ಟೋ ಹೆಂಗಸರು ದೇಹವಿಡೀ ಫಂಗಲ್ ಇನ್‌ಫೆಕ್ಷನ್‌ ಹರಡಿಸಿಕೊಂಡು ನಂತರವೇ ವೈದ್ಯರ ಬಳಿ ಧಾವಿಸುತ್ತಾರೆ. ಇತ್ತೀಚೆಗೆ ಇದು ಮಕ್ಕಳಲ್ಲೂ ಮಾಮೂಲಿ ಆಗಿಬಿಟ್ಟಿದೆ. ಅವರು ಮಣ್ಣು, ಧೂಳು, ಕೆಸರಿನ ಬಳಿ ಆಟವಾಡಿ ಇಂಥದ್ದನ್ನು ತಗುಲಿಸಿಕೊಳ್ಳುತ್ತಾರೆ. ಸಣ್ಣ ಪ್ರಮಾಣದಲ್ಲಿ ಈ ತೊಂದರೆ ಕಾಣಿಸಿದಾಗಿನಿಂದಲೇ ಜನರು ತಮ್ಮ ಬಟ್ಟೆಗಳನ್ನು (ಮನೆಯ ಇತರರ ಬಟ್ಟೆಗಳ ಜೊತೆ ಬೆರೆಸದೆ) ಬೇರೆಯಾಗಿ ಒಗೆದುಕೊಳ್ಳಬೇಕು. ಒಳವಸ್ತ್ರಗಳನ್ನು ಚೆನ್ನಾಗಿ ಡೆಟಾಲ್ ‌ಬೆರೆತ ನೀರಲ್ಲಿ ಜಾಲಿಸಿ, ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ, ಇಸ್ತ್ರೀ ಮಾಡಿ, ಪೌಡರ್‌ ಸಿಂಪಡಿಸಿ, ನಂತರ ಧರಿಸಬೇಕು.

– ರಾಧಿಕಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ