ಹೆಂಗಸರು ತಮ್ಮ ಸೌಂದರ್ಯದ ಕುರಿತಾಗಿ ಸದಾ ಜಾಗೃತರಾಗಿರುತ್ತಾರೆ. ಯಾವುದೇ ಫಂಕ್ಷನ್‌ ಅಥವಾ ಹಬ್ಬವಿರಲಿ, ಪರ್ಫೆಕ್ಟ್ ಆಗಿ ಸಿಂಗರಿಸಿಕೊಂಡು ಓಡಾಡ ಬಯಸುತ್ತಾರೆ. ಆದರೆ ಮಹಾಮಾರಿ ಕೊರೋನಾ ಕಾಟದಿಂದಾಗಿ ನೆಮ್ಮದಿಯಾಗಿ ಪಾರ್ಲರ್‌ಗೆ ಹೋಗುವ ಹಾಗೆ ಇಲ್ಲವಾಗಿದೆ. ಹೀಗಿರುವಾಗ ಮನೆಯಲ್ಲಿ ಇದ್ದುಕೊಂಡೇ ನೀವು ಬ್ಯೂಟಿಪಾರ್ಲರ್‌ನ ಆ ಪರ್ಫೆಕ್ಟ್ ಆರೈಕೆ ಪಡೆಯುವುದು ಹೇಗೆ?

ಬನ್ನಿ, ಮನೆಯಲ್ಲಿರುವ ಕೆಲವೇ ಸೌಂದರ್ಯ ಸಾಧನಗಳನ್ನು ಬಳಸಿಕೊಂಡು ಅತ್ಯುತ್ತಮ ಮೇಕಪ್‌ ಮಾಡಿಕೊಳ್ಳುವುದು ಹೇಗೆ ಎಂದು ತಜ್ಞೆಯರ ಸಲಹೆಯಂತೆ ಮುಂದುವರಿಯೋಣ.

ಲಿಪ್‌ಸ್ಟಿಕ್‌ ಕಲರ್‌ ಫುಲ್ ವಿಂಗ್ ಲೈನರ್‌ : ನೀವು ಲಿಪ್‌ಸ್ಟಿಕ್‌ ನ್ನು ಮಲ್ಟಿ ಕಲರ್‌ ವಿಂಗ್‌ ಲೈನರ್‌ ಆಗಿಯೂ ಮಾಡಬಹುದು. ಇದಕ್ಕಾಗಿ ನೀವು ಲಿಕ್ವಿಡ್‌ ಮ್ಯಾಟ್‌ ಲಿಪ್‌ಸ್ಟಿಕ್‌ ಬಳಸಿಕೊಳ್ಳಿ. ಇದರಿಂದ ವಿಂಗ್‌ ಲೈನರ್‌ನ ಶೇಪ್‌ ನೀಡಿ ಕಂಗಳ ಮೇಲೆ ತೀಡಬಹುದು. ಲಿಪ್‌ಸ್ಟಿಕ್‌ನಿಂದ ಬಳಿಯಾದ ವಿಂಗ್‌ ಲೈನರ್‌ ಬೋಲ್ಡ್ ಲುಕ್ಸ್ ನೀಡುತ್ತದೆ.

ಬ್ಲಶರ್‌ : ಲಿಪ್‌ಸ್ಟಿಕ್‌ನ್ನು ಬ್ಲಶರ್‌ನಂತೆಯೂ ಯೂಸ್‌ ಮಾಡಬಹುದು. ನೀವು ನಿಮ್ಮ ಕೆನ್ನೆಗೆ ನ್ಯಾಚುರಲ್ ಲುಕ್ಸ್ ನೀಡಬೇಕಿದ್ದರೆ, ಯಾವುದಾದರೂ ವೈಟ್‌ ಶೇಡ್‌ ಲಿಪ್‌ಸ್ಟಿಕ್‌ ಬಳಸಿಕೊಳ್ಳಿ. ನೀವು ಪಾರ್ಟಿ ಲುಕ್ಸ್ ಬಯಸಿದರೆ ಡಾರ್ಕ್‌ ಶಿಮರಿ ಲಿಪ್‌ಸ್ಟಿಕ್ ಬಳಸಿಕೊಳ್ಳಿ.

ಫೌಂಡೇಶನ್

base

ಫೌಂಡೇಶನ್‌ ನಿಂದ ಕನ್ಸೀಲರ್‌ ಮಾಡಿಕೊಳ್ಳಿ : ಮೇಕಪ್‌ಗೆ ಉತ್ತಮ ಬೇಸ್‌ ನೀಡಲು ನಾವು ಫೌಂಡೇಶನ್‌ ಬಳಸುತ್ತೇವೆ. ಆಗ ಮುಖ ಗೌರವರ್ಣ ಹೊಂದಿ ಏಕಸಮಾನ ಎನಿಸುತ್ತದೆ. ಆದರೆ ನಾವು ಈ ಫೌಂಡೇಶನ್‌ನ್ನು ಹಲವು ರೀತಿಗಳಲ್ಲಿ ಬಳಸಿಕೊಳ್ಳಬಹುದು. ಮುಖದಲ್ಲಿ ಕಲೆ, ಗುರುತು, ಮೊಡವೆ ಇತ್ಯಾದಿ ಅಡಗಿಸಲು ನಾವು ಕನ್ಸೀಲರ್‌ ಬಳಸುತ್ತೇವೆ. ಆದರೆ ಫೌಂಡೇಶನ್‌ನ್ನೇ ಕನ್ಸೀಲರ್‌ ಆಗಿ ಬಳಸಬಹುದೆಂದು ನಿಮಗೆ ಗೊತ್ತೇ? ಫೌಂಡೇಶನ್‌ ನಿಂದ ಕನ್ಸೀಲರ್‌ ಕೆಲಸ ತೆಗೆಯುವುದು ಸುಲಭ.

ಇದಕ್ಕಾಗಿ ಫೌಂಡೇಶನ್‌ ಗ್ರೀನ್‌ ಐ ಶ್ಯಾಡೋ ಬೆರೆಸಿಕೊಳ್ಳಿ. ಇದನ್ನು ನೀವು ಡಾರ್ಕ್‌ ಸರ್ಕಲ್ಸ್, ಮೊಡವೆ ಅಡಗಿಸಲು ಬಳಸಬಹುದು. ಗ್ರೀನ್‌ ಕಲರ್‌ ಕನ್ಸೀಲರ್‌ ಕಲೆಗುರುತನ್ನು ಮರೆಮಾಡಲು ಸಹಕಾರಿ.

ಮ್ಯಾಟ್‌ ಲಿಪ್‌ಸ್ಟಿಕ್‌ಗಾಗಿ : ಎಲ್ಲಾ ಹೆಂಗಸರಿಗೂ ಮ್ಯಾಟ್‌ ಲಿಪ್‌ಸ್ಟಿಕ್‌ ಎಂದರೆ ಇಷ್ಟ, ಏಕೆಂದರೆ ಇದು ಬೇಗ ಹರಡಿಕೊಳ್ಳುವುದಿಲ್ಲ ಹಾಗೂ ದೀರ್ಘಕಾಲ ತುಟಿಯ ಮೇಲೆ ಉಳಿದಿರುತ್ತದೆ. ಅಂದಹಾಗೆ ಮ್ಯಾಟ್‌ ಲಿಪ್‌ಸ್ಟಿಕ್‌ ಎಲ್ಲರ ಬಳಿ ಇದ್ದೇ ಇರುತ್ತದೆ. ಅಕಸ್ಮಾತ್‌ನಿಮ್ಮ ಬಳಿ ನಿಮ್ಮ ಅಚ್ಚುಮೆಚ್ಚಿನ ಮ್ಯಾಟ್‌ ಲಿಪ್‌ಸ್ಟಿಕ್‌ ಇಲ್ಲದಿದ್ದರೆ ನೀವು ಫೌಂಡೇಶನ್ನಿನ ನೆರವಿನಿಂದಲೇ ಮ್ಯಾಟ್‌ ಲಿಪ್‌ಸ್ಟಿಕ್‌ಮಾಡಿಕೊಳ್ಳಬಹುದು. ಇದಕ್ಕಾಗಿ ಮೊದಲು ತುಟಿಗಳ ಮೇಲೆ ಲೈಟಾಗಿ ಫೌಂಡೇಶನ್‌ ತೀಡಿರಿ. ನಂತರ ಇದರ ಮೇಲೆ ನಿಮ್ಮ ಬಳಿ ಇರುವ ಮೆಚ್ಚಿನ ಸಾದಾ ಲಿಪ್‌ಸ್ಟಿಕ್‌ ತೀಡಿರಿ.

BB ‌ಕ್ರೀಂ : ಮುಖ್ಯವಾಗಿ ಬೇಸಿಗೆಯಲ್ಲಿ ಲೈಟ್‌ಲೆಸ್‌ ಮೇಕಪ್‌ನ ಸಲಹೆ ನೀಡುತ್ತಾರೆ. ಹೀಗಿರುವಾಗ ನೀವು ಮನೆಯಲ್ಲೇ ನಿಮ್ಮ BB ‌ಕ್ರೀಂ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಫೌಂಡೇಶನ್‌ ಜೊತೆ ಮಾಯಿಶ್ಚರೈಸರ್‌ ಬೆರೆಸಿಕೊಳ್ಳಿ. ಇದೀಗ BB ‌ಕ್ರೀಂ ರೆಡಿ! ಇದನ್ನು ನೀವು ಡೇಲಿ ಬಳಸಬಹುದು.

ಐ ಶ್ಯಾಡೋ

makeup-eyes-5910ca4f2b797839d1e2e50b14d64f14

ಹೆಂಗಸರು ತಮ್ಮ ಕಂಗಳ ಸೌಂದರ್ಯ ಹೆಚ್ಚಿಸಿಕೊಳ್ಳಲು ಐ ಶ್ಯಾಡೋ ಬಳಸುತ್ತಾರೆ. ಅದನ್ನು ಈ ರೀತಿಯಾಗಿಯೂ ಬಳಸಬಹುದು.

ಹೈ ಲೈಟರ್‌ : ಐ ಶ್ಯಾಡೋ ಪ್ಯಾಲೆಟ್‌ನಲ್ಲಿ ಎಷ್ಟು ಬಗೆಯ ಶೇಡ್ಸ್ ಇರುತ್ತವೆಂದರೆ, ಅವನ್ನು ನೀವು ಹೈಲೈಟರ್‌ ತರಹ ಬಳಸಬಹುದು. ಇದು ನಿಮಗೆ ಗುಡ್‌ ಲುಕ್ಸ್ ಕೊಡುವುದರ ಜೊತೆ ಫ್ರೆಶ್‌ ಆಗಿಯೂ ತೋರ್ಪಡಿಸುತ್ತದೆ. ಹೈಲೈಟರ್‌ ಶೇಡ್ಸ್ ಆರಿಸುವಾಗ ನೀವು ಗೋಲ್ಡನ್‌, ಶಿಮರಿ, ಬ್ರೌನ್‌, ವೈಟ್‌, ಪಿಂಕ್‌ನಂಥ ಶೇಡ್, ಆರಿಸಬಹುದು. ಈಗ ನೀವು ಇದನ್ನು ನಿಮ್ಮ ಕೆನ್ನೆ ಮೇಲೆ ಹಚ್ಚಿಕೊಳ್ಳಿ, ಮೇಕಪ್‌ ಬ್ರಶ್‌ನಿಂದ ಹರಡಿರಿ. ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವಂಥ ಐ ಶ್ಯಾಡೋವನ್ನೇ ಆರಿಸಿ ಅಥವಾ 1-2 ಶೇಡ್‌ಗಳ ಕಾಂಬಿನೇಶನ್‌ ಆದರೂ ನಡೆಯುತ್ತದೆ.

ಬ್ರೋ ಪೌಡರ್‌ : ನಿಮ್ಮ ಬಳಿ ಐ ಶ್ಯಾಡೋ ಪ್ಯಾಲೆಟ್ ಇದ್ದಾಗ, ನೀವು ಮೇಕಪ್‌ಗಾಗಿ ಬ್ರೋ ಪೌಡರ್‌ ಖರೀದಿಸುವ ಅಗತ್ಯವಿಲ್ಲ. ಐ ಬ್ರೋಸ್‌ನ್ನು ಪರ್ಫೆಕ್ಟ್ ಗೊಳಿಸಲು ನೀವು ಐ ಶ್ಯಾಡೋ ಪ್ಯಾಲೆಟ್ನಿಂದ ಗ್ರೇ, ಬ್ಲಾಕ್‌, ಬ್ರೌನ್‌ ಬಣ್ಣಗಳನ್ನು ಬಳಸಿಕೊಳ್ಳಿ.

ಲಿಪ್‌ಸ್ಟಿಕ್‌ : ನೀವು ಐ ಶ್ಯಾಡೋ ಪ್ಯಾಲೆಟ್‌ನ್ನು ಒಂದು ಲಿಪ್‌ಸ್ಟಿಕ್‌ ಆಗಿಯೂ ಬಳಸಬಹುದು. ಇದಕ್ಕಾಗಿ ನೀವು ನಿಮ್ಮ ಮೆಚ್ಚಿನ ಶೇಡ್‌ಆರಿಸಿ. ನೀವು ಇದರಿಂದ ಒಂದು ಮ್ಯಾಟ್‌ ಲಿಪ್‌ಸ್ಟಿಕ್‌ ಶೇಡ್‌ ಪಡೆಯಬಹುದು. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ಸಣ್ಣ ಡಬ್ಬಿಯಲ್ಲಿ ಲಿಪ್‌ ಬಾಮ್ ತೆಗೆದುಕೊಳ್ಳಿ. ನಂತರ ಇದಕ್ಕೆ ನಿಮ್ಮ ಮೆಚ್ಚಿನ ಐ ಶ್ಯಾಡೋ ಶೇಡ್, ಬೆರೆಸಿಕೊಳ್ಳಿ. ಇದನ್ನು ನೀವು ಲಿಪ್‌ಸ್ಟಿಕ್‌ ತರಹ ತುಟಿಗಳ ಮೇಲೆ ತೀಡಿರಿ. ಇದು ದೀರ್ಘಕಾಲ ತುಟಿಗಳ ಮೇಲೆ ಹಾಗೇ ಉಳಿಯುತ್ತದೆ.

ಫೇಸ್‌ ಆಯಿಲ್

‌ಮುಖದಲ್ಲಿನ ಹೊಳಪು ಸದಾ ಉಳಿಸಿಕೊಳ್ಳಲು ಹೆಂಗಸರು ಹಲವು ಬ್ಯೂಟಿ ಪ್ರಾಡೆಕ್ಟ್ ಬಳಸುತ್ತಾರೆ. ಅದೇ ತರಹ ಫೇಸ್‌ ಆಯಿಲ್ ಬಳಸಿ ಸ್ಕಿನ್‌ ಹೆಲ್ದಿ ಆಗಿರಿಸಿಕೊಳ್ಳಲು ಯತ್ನಿಸುತ್ತಾರೆ. ಹೀಗಾಗಿ ಈ ಫೇಸ್‌ ಆಯಿಲ್‌ನ್ನು ನೀವು ಮೇಕಪ್‌ ಜೊತೆ ಬಳಸಬಹುದು.

ಗ್ಲೋ ಪಡೆಯಲು : ಫೌಂಡೇಶನ್‌ಗೆ 1 ಹನಿ ಫೇಸ್‌ ಆಯಿಲ್ ‌ಬೆರೆಸಿಕೊಂಡು, ಮುಖದ ಮೇಲೆ ನೀಟಾಗಿ ಹಚ್ಚಿಕೊಳ್ಳಿ. ಇದರಿಂದ  ಮುಖದ ಗ್ಲೋ ಹೆಚ್ಚುತ್ತದೆ. ನಿಮ್ಮದು ಡ್ರೈ ಸ್ಕಿನ್‌ ಆಗಿದ್ದರೆ ಈ ಆಯ್ಕೆಯೇ ನಿಮಗೆ ಬೆಸ್ಟ್.

ನೈಟ್‌ ಕ್ರಿಂ ತರಹ ಬಳಸಿಕೊಳ್ಳಿ : ಫೇಸ್‌ ಆಯಿಲ್‌ನ್ನು ನೀವು ನೈಟ್‌ ಕ್ರೀಂ ತರಹ ಸಹ ಬಳಸಬಹುದು. ರಾತ್ರಿ ಮಲಗುವ ಮುನ್ನ ಮುಖ ಶುಚಿಗೊಳಿಸಿದ ನಂತರ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದಾಗ ನಿಮ್ಮ ಮುಖ ಲಕಲಕ ಅಂತ ತಾಜಾತನದಿಂದ ಹೊಳೆಯುತ್ತದೆ.

ಸನ್‌ ಸ್ಕ್ರೀನ್‌ ಜೊತೆ : ಫೇಸ್‌ ಆಯಿಲ್‌ನ್ನು ನೀವು ಸನ್‌ ಸ್ಕ್ರೀನ್‌ ಜೊತೆ ಸಹ ಬೆರೆಸಿ ಬಳಸಬಹುದು. ಇದು ಚರ್ಮ ಡ್ಯಾಮೇಜ್ ಆಗದಂತೆ ರಕ್ಷಿಸುತ್ತದೆ.

– ಮೋನಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ