ವಾಟರ್‌ ಪ್ರೂಫ್‌ ಮೇಕಪ್‌ ನ ಎಲ್ಲಕ್ಕಿಂತಲೂ ದೊಡ್ಡ ವೈಶಿಷ್ಟ್ಯವೆಂದರೆ, ಇದನ್ನು ಮಳೆಯ ಹನಿಗಳು ಏನೂ ಹಾಳು ಮಾಡಲಾರ. ಮದುವೆ ಮತ್ತು ಇತರ ಪಾರ್ಟಿಗಳಲ್ಲಿ ಕ್ಯಾಮೆರಾ ಲೈಟ್‌ ಎದುರು ಅಧಿಕ ಸೆಕೆ ಆಗುವುದರಿಂದ ಮೇಕಪ್‌ ಕರಗಿ ಹರಿಯುತ್ತದೆ. ಇಂಥ ಸಂದರ್ಭಕ್ಕೂ ವಾಟರ್‌ ಪ್ರೂಫ್‌ ಮೇಕಪ್‌ ಬೇಕೇ ಬೇಕು. ರೇನ್‌ ಡ್ಯಾನ್ಸ್, ಸ್ವಿಮ್ಮಿಂಗ್‌ ಪೂಲ್‌, ಸಾಗರ ತೀರಗಳಲ್ಲಿ ರಜೆಯ ಮಜಾ ಪಡೆಯಲು ಹೋದಾಗಲೂ ಸಹ ವಾಟರ್‌ ಪ್ರೂಫ್‌ ಮೇಕಪ್‌ ನ ಚಮತ್ಕಾರವನ್ನು ಗಮನಿಸಬಹುದು.

ವಾಟರ್ಪ್ರೂಫ್ಮೇಕಪ್

ಬೆವರು ಹೆಚ್ಚಾದಾಗ ಮೇಕಪ್‌ ಕರಗಿ ಚರ್ಮದ ರೋಮ ರಂಧ್ರಗಳಲ್ಲಿ ಜಮೆಯಾಗುತ್ತದೆ. ಇದರಿಂದಾಗಿ ಮೇಕಪ್‌ ವಿಕಾರವಾಗಿ ಕಾಣುತ್ತದೆ. ಮೇಕಪ್‌ ಈ ರೀತಿ ರೋಮ ರಂಧ್ರಗಳೊಳಗೆ ಇಳಿಯಬಾರದು ಎಂಬ ಉದ್ದೇಶದಿಂದಲೇ ವಾಟರ್‌ ಪ್ರೂಫ್‌ ಮೇಕಪ್ ರೂಪಿಸಲಾಗಿದೆ.

ಚರ್ಮದ ರೋಮ ರಂಧ್ರಗಳನ್ನು ಕ್ಲೋಸ್‌ ಮಾಡಿಸುವಂಥ ಸಾಮರ್ಥ್ಯವಿರುವ ಮೇಕಪ್ಪೇ ವಾಟರ್‌ ಪ್ರೂಫ್‌ ಮೇಕಪ್‌. ರೋಮ ರಂಧ್ರಗಳನ್ನು 2 ವಿಧದಲ್ಲಿ ಕ್ಲೋಸ್‌ ಮಾಡಬಹುದು. ಮೊದಲನೆಯದು…. ನ್ಯಾಚುರಲ್ ವಾಟರ್‌ ಪ್ರೂಫ್‌. ಇದರಲ್ಲಿ ಚರ್ಮದ ರೋಮ ರಂಧ್ರಗಳನ್ನು ಕ್ಲೋಸ್‌ ಮಾಡಲು ಕೋಲ್ಡ್ ಟರ್ಕಿ ಟವೆಲ್ ‌ಬಳಸಲಾಗುತ್ತದೆ. ಯಾವ ತರಹ ಸ್ಟೀಂ ತೆಗೆದುಕೊಳ್ಳುವುದರಿಂದ ರೋಮ ರಂಧ್ರ ಓಪನ್‌ ಆಗುತ್ತದೋ ಹಾಗೆ, ವಿರುದ್ಧ ಕ್ರಮದಿಂದ ಕ್ಲೋಸ್‌ ಆಗುತ್ತದೆ. ಇದಕ್ಕಾಗಿ ಐಸ್ ಬಳಸಲಾಗುತ್ತದೆ. ಇದಾದ ಮೇಲೆ ಮೇಕಪ್‌ ಮಾಡುವುದರಿಂದ ಬೆವರು ಅದನ್ನು ಕರಗಿಸಲಾಗದು.

ವಾಟರ್‌ ಪ್ರೂಫ್‌ ಮೇಕಪ್‌ ನ ಹೆಚ್ಚುತ್ತಿರುವ ಬೇಡಿಕೆ ಗಮನಿಸಿ, ಮೇಕಪ್‌ ಪ್ರಾಡಕ್ಟ್ಸ್ ತಯಾರಿಸುವ ಕಂಪನಿಗಳು ಅದನ್ನು ಹೆಚ್ಚು ಹೆಚ್ಚಾಗಿ ತಯಾರಿಸಲು ಆರಂಭಿಸಿದ.

ಈ ಪ್ರಾಡಕ್ಟ್ಸ್ ಗಳಲ್ಲೇ ಚರ್ಮದ ರೋಮ ರಂಧ್ರಗಳನ್ನು ಕ್ಲೋಸ್‌ ಮಾಡುವಂಥ ಅಂಶಗಳನ್ನು ಬೆರೆಸಲಾಗುತ್ತದೆ. ಹೀಗಾಗಿ ಮೇಕಪ್‌ ಚರ್ಮದ ಆಂತರಿಕ ಭಾಗಕ್ಕೆ ಇಳಿಯಲಾಗದು, ಬೆವರು ಅದನ್ನು ಕರಗಿಸಲಿಕ್ಕೂ ಆಗದು. ಈ ತರಹ ಮೇಕಪ್‌ ಪ್ರಾಡಕ್ಟ್ಸ್ ನಿಂದ ಮೇಕಪ್‌ ಮಾಡಿಕೊಳ್ಳುವಾಗ, ಚರ್ಮವನ್ನು ವಾಟರ್‌ ಪ್ರೂಫ್‌ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ವಾಟರ್‌ ಪ್ರೂಫ್ ಪ್ರಾಡಕ್ಟ್ ಗಳಲ್ಲಿ ಕ್ರೀಂ, ಲಿಪ್‌ ಸ್ಟಿಕ್‌, ಫೇಸ್‌ ಬೇಸ್‌, ರೂಸ್‌, ಮಸ್ಕರಾ, ಕಾಜಲ್ ನಂಥ ಅನೇಕ ವಸ್ತುಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ.

ವಾಟರ್‌ ಪ್ರೂಫ್‌ ಮೇಕಪ್‌ ಪ್ರಾಡಕ್ಟ್ ನ್ನು ಸಿಲಿಕಾನ್‌ ನೆರವಿನಿಂದ ತಯಾರಿಸಿರುತ್ತಾರೆ. ಇದರಲ್ಲಿ ಬಳಸಲಾಗುವ ಡೈನೋಥಿ ಕಾನ್‌ ಆಯಿಲ್ ಚರ್ಮವನ್ನು ಹೊಳೆ ಹೊಳೆಯುವಂತೆ ಮಾಡುತ್ತದೆ. ಇದು ವಾಟರ್‌ ಪ್ರೂಫ್‌ ಮೇಕಪ್‌ ನ್ನು ಸುಲಭವಾಗಿ ಹರಡಿಕೊಳ್ಳುವಂತೆ ಮಾಡುತ್ತದೆ. ವಾಟರ್‌ ಪ್ರೂಫ್‌ ಮೇಕಪ್‌ ನಲ್ಲಿ ಇಷ್ಟೆಲ್ಲ ಲಾಭ ಇರುವ ಹಾಗೆ ತುಸು ನಷ್ಟ ಇದೆ, ಅದನ್ನು ತಿಳಿಯುವುದೂ ಮುಖ್ಯ. ಇದನ್ನು ರಿಮೂವ್ ಮಾಡಲು ನೀರನ್ನಷ್ಟೇ ಬಳಸಿದರೆ ಸಾಲದು, ಬದಲಿಗೆ ಸಿಲಿಕಾನ್‌/ ಬೇಬಿ ಆಯಿಲ್ ಬಳಸಬೇಕು. ಇವುಗಳ ಬಳಕೆ ಚರ್ಮದ ಮೇಲೆ ತುಸು ಕೆಟ್ಟದಾಗಿ ಕಾಣಬಹುದು. ಚರ್ಮಕ್ಕೆ ತುಸು ನಷ್ಟ ಆದೀತು. ಚರ್ಮಕ್ಕೆ ಸೋಂಕು ತಗುಲುತ್ತದೆ. ವಾಟರ್‌ ಪ್ರೂಫ್‌ ಮೇಕಪ್‌ ಜಾಸ್ತಿ ಬಳಸಿದಂತೆ ಸಮಯಕ್ಕೆ ಮೊದಲೇ ಚರ್ಮ ಸುಕ್ಕನ್ನು ಕಂಡೀತು. ಆದ್ದರಿಂದ ಇದನ್ನು ತೀರಾ ಅಪರೂಪದ ಸಂದರ್ಭಕ್ಕೆ ಬಳಸಬೇಕೇ ಹೊರತು ಡೇಲಿ ಬಳಸುವಂತಿಲ್ಲ.

ಮೇಕಪ್ಟಿಪ್ಸ್

ಈ ಮಳೆಗಾಲದಲ್ಲಿ ಮೇಕಪ್‌ ಮಾಡಿಕೊಳ್ಳುವಾಗ ಎಂದೂ ಡಾರ್ಕ್‌ ಶೇಡ್‌, ಬಳಸಲೇಬೇಡಿ. ಫೌಂಡೇಶನ್‌ ಸಹ ಲೈಟಾಗಿರಲಿ. ಕಲೆ ಗುರುತು ಅಡಗಿಸಲು ವಾಟರ್‌ ಬೇಸ್ಡ್ ಫೌಂಡೇಶನ್‌ ಬಳಸಿಕೊಳ್ಳಿ. ಇದರಿಂದ ಹೊಳಪು ಹೆಚ್ಚಾಗಿದೆ ಎನಿಸಿದರೆ, ಪೌಡರ್ ಬದಲಿಗೆ ಬ್ಲಾಟಿಂಗ್‌ ಪೇಪರ್‌ ಬಳಸಿರಿ.

ನಿಮ್ಮ ಕೆನ್ನೆಗಳನ್ನು ಗುಲಾಬಿಯಾಗಿ ತೋರಿಸಲು ಲೈಟ್‌ ಬ್ಲಶರ್‌ ಬಳಸಿರಿ. ತುಸು ಶಿಮರ್‌ ಪೌಡರ್‌ ಕಂಗಳ ಅಕ್ಕಪಕ್ಕ ತೀಡಿ, ಅದನ್ನು ಆಕರ್ಷಕಗೊಳಿಸಿ. ತುಟಿಗಳಿಗೆ ಲಿಪ್‌ ಕಲರ್‌ ಬಳಸಿದ ನಂತರ, ಅದನ್ನು ಶೈನ್‌ ಗೊಳಿಸಲು ತುಸು ಲಿಪ್‌ ಗ್ಲಾಸ್‌ ತೀಡಿರಿ. ಲ್ಯಾಕ್ಮೆ ಮೇಕಪ್‌ ಪ್ರಾಡಕ್ಟ್ ನಲ್ಲಿ ಇಂಥ ಎಲ್ಲಾ ಸಾಮಗ್ರಿ ಸುಲಭ ಲಭ್ಯ.

ದಿನವಿಡೀ ಮಸ್ಕರಾ ಉಳಿದಿರಬೇಕೆಂದರೆ ಐ ಲ್ಯಾಶೆಸ್‌ ಟಿಪ್ಸಿ ಅದನ್ನು ತೀಡಿರಿ. ಹಾಗೆ ಮಾಡಿದರೆ ಅದು ಹರಡುವುದಿಲ್ಲ.

ಸಂಜೆಯ ಪಾರ್ಟಿಗಾಗಿ ಮೇಕಪ್‌ ಮಾಡಿಕೊಳ್ಳುವಾಗ ನ್ಯಾಚುರಲ್ ಮೇಕಪ್‌  ಆದ್ಯತೆ ಕೊಡಿ. ಸಂಜೆ ಹೊತ್ತು ಬಿಸಿಲು ಇರದ ಕಾರಣ, ಮುಖಕ್ಕೆ ಶಿಮರ್‌ ಬಳಸಬಹುದು. ನೀವು ಬಿಸಿಲಿನಲ್ಲಿ ಹೊರಡುವಾಗ,  SPF-15 ಯುಕ್ತ ಸನ್‌ ಕ್ರೀಂ ಯಾವ ಲೋಶನ್‌ ಅಗತ್ಯ ಹಚ್ಚಿಕೊಳ್ಳಿ. ಇದರಿಂದ ಚರ್ಮ ಸನ್‌ ಬರ್ನಿಗೆ ಒಳಗಾಗುವುದಿಲ್ಲ.

ಸ್ವಿಮ್ಮಿಂಗ್‌ ಪೂಲಿ‌ಗೆ ಹೋಗುವ ಮುನ್ನಾ ಮತ್ತು ನಂತರ ಆ್ಯಂಟಿ ಸೆಪ್ಟಿಕ್‌ ಸೋಪಿನಿಂದ ಅಗತ್ಯ ಸ್ನಾನ ಮಾಡಿ.

ಈ ಸೀಸನಿನಲ್ಲಿ ಇಡೀ ದೇಹದ ಡೀಪ್‌ ಕ್ಲೆನ್ಸಿಂಗ್‌ ಮಾಡಿಸಿ. ವಾರಕ್ಕೊಮ್ಮೆ ಅಗತ್ಯ ಬಾಡಿ ಮಸಾಜ್‌ ಮಾಡಿಸಿ, ಹಾಗೇ ಅದೇ ದಿನ ಸ್ಟೀಂ ಬಾಥ್‌ ತೆಗೆದುಕೊಳ್ಳಿ. ಸ್ಟೀಂ ತೆಗೆದುಕೊಳ್ಳುವಾಗ ಬಿಸಿ ನೀರಿಗೆ ತುಸು ಬಾಡಿ ಆಯಿಲ್ ಬೆರೆಸಿಕೊಳ್ಳಿ.

ಬಾಥ್‌ ಟಬ್ಬಿಗೆ ನೀರು ತುಂಬಿಸಿ, ಅದಕ್ಕೆ ಒಂದಷ್ಟು ಮಿನರಲ್ ಸಾಲ್ಟ್ ಹಾಕಿಡಿ. 10-15 ನಿಮಿಷ ಇದರಲ್ಲಿ ಸಮಯ ಕಳೆಯಿರಿ. ಆಗ ನೋಡಿ, ಚರ್ಮಕ್ಕೆ ಅನೂಹ್ಯ ಹೊಳಪು ಬರುತ್ತದೆ.

ಯಾವಾಗ ಉರಿ ಬಿಸಿಲಿನಿಂದ ಮನೆಗೆ ಮರಳಿದರೂ ತಣ್ಣೀರಿನಲ್ಲಿ ಕಾಟನ್‌ ಬಟ್ಟೆ ಅದ್ದಿ ಹಿಂಡಿಕೊಂಡು, ಬಿಸಿಲು ತಾಕಿದ ಭಾಗಗಳಿಗೆ ಒತ್ತಿಕೊಳ್ಳಿ.

ಒಂದು ಟಬ್‌ ನೀರಿಗೆ ತುಸು ಕಲ್ಲುಪ್ಪು ಹಾಕಿ ಕದಡಿಕೊಂಡು, ಅದರಲ್ಲಿ ಸ್ವಲ್ಪ ಹೊತ್ತು ಕೈಕಾಲು ಅದ್ದಿರಿಸಿ. ಇದರಿಂದ ಡೆಡ್‌ ಸ್ಕಿನ್ ಮೃದುವಾಗುತ್ತದೆ. ನಂತರ ಇದನ್ನು ಸುಲಭವಾಗಿ ಬಿಡಿಸಬಹುದು. ಇದಾದ ಮೇಲೆ ಮಾಯಿಶ್ಚರೈಸರ್‌ ಹಚ್ಚಿರಿ. ಆಮೇಲೆ ಕಾಲನ್ನು 2-2 ನಿಮಿಷ ತಣ್ಣೀರು ಬಿಸಿ ನೀರಲ್ಲಿ ಅದ್ದಿಡಿ. ಇದನ್ನೇ ಹಾಟ್‌ಕೋಲ್ಡ್ ಟ್ರೀಟ್‌ ಮೆಂಟ್‌ ಎನ್ನುತ್ತಾರೆ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ.

ಹೇರ್ಕೇರ್ಟಿಪ್ಸ್

ನಿಮ್ಮದು ಶಾರ್ಟ್‌ ಹೇರಾಗಿದ್ದರೆ, ಲೈಟ್‌ ಆಗಿ ಕರ್ಲ್ ಮಾಡಿಸಿ. ಕೂದಲು ಮೀಡಿಯಂ ಬಿಗ್‌ ಸೈಜ್‌ ಆಗಿದ್ದರೆ, ಅದನ್ನು ರಬ್ಬರ್ ಬ್ಯಾಂಡಿನಿಂದ ಬಂಧಿಸಿಡುವ ಹೇರ್‌ ಸ್ಟೈಲ್ ಅನುಸರಿಸಿ. ಕೂದಲನ್ನು ಓಪನ್‌ಆಗಿ ಇಡಬಯಸಿದರೆ, ಆ ರೀತಿ ಶಾರ್ಟ್‌ ಕಟ್ ಮಾಡಿಸಿ. ಇತ್ತೀಚೆಗೆ ಕೂದಲನ್ನು ಕಲರ್‌ ಮಾಡುವ ಟ್ರೆಂಡ್‌ ಹೆಚ್ಚುತ್ತಿದೆ. ಕಲರ್‌ ಮಾಡಿಸಬೇಕಿದ್ದರೆ ಬ್ಲಾಂಡ್‌ ಹೇರ್‌ ಯಾ ನ್ಯಾಚುರಲ್ ಬ್ರೌನ್‌ ಕಲರ್‌ ಮಾಡಿಸಿ.

ನಿಯಮಿತವಾಗಿ ಕೂದಲಿಗೆ ಉತ್ತಮ ಗುಣಮಟ್ಟದ ಕಂಡೀಶನರ್‌ ಬಳಸುತ್ತಿರಿ. ಇದರಿಂದ ಕೂದಲು ಮೃದು ಹೊಳಪು ಪಡೆಯುತ್ತದೆ. ಕಂಡೀಶನರ್‌ ಬಳಸುವ ಉತ್ತಮ ವಿಧಾನವೆಂದರೆ, ಕೂದಲಿನ ಮೇಲ್ಭಾಗದಿಂದ ಶುರು ಮಾಡಿ ಒಂದು ದಿಕ್ಕಲ್ಲಿ (ಉಲ್ಟಾ ಬೇಡ) ಕೆಳಭಾಗದತ್ತ ಹಚ್ಚಿ ಮಸಾಜ್‌ ಮಾಡಬೇಕು.

ಕೂದಲನ್ನು ಹೊಳೆ ಹೊಳೆಯುವಂತೆ ಮಾಡಲು ನ್ಯಾಚುರಲ್ ಮೆಹಂದಿ ಬಳಸಿರಿ. ಇದರಿಂದ ಕೂದಲನ್ನು ದುರ್ಬಲವಾಗದಂತೆ ತಡೆಯಬಹುದು.

ಶೈಲಜಾ ಸುರೇಂದ್ರ

ಮೇಕಪ್ಸ್ಟೆಪ್ಬೈ ಸ್ಟೆಪ್

ಫೌಂಡೇಶನ್‌ : ಇದು ಚರ್ಮಕ್ಕೆ ಮ್ಯಾಚಿಂಗ್‌ ಆಗಿರಬೇಕು. ಮೇಕಪ್‌ ಮಾಡಿಕೊಳ್ಳುವಾಗ ಅದು ಚರ್ಮಕ್ಕೆ 100% ಮ್ಯಾಚ್ ಆಗಲೇಬೇಕು. ಫೌಂಡೇಶನ್‌ ವಾಟರ್‌ ಬೇಸ್‌ ಆಗಿರಲೇಬೇಕು.

ಟಾಪ್ಟಿಪ್‌ : ಯಾವುದೇ ಮೇಕಪ್‌ ಆರಂಭಿಸುವ ಮೊದಲು ಅಲ್ಟ್ರಾ ಅಂಡರ್‌ ಬೇಸ್‌ಯಾ ಶಿಮರಿಂಗ್‌ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಆಗ ಮೇಕಪ್‌ ಎದ್ದು ಕಾಣುತ್ತದೆ. ಇದರಿಂದ ಚರ್ಮ ಹೆಚ್ಚು ಹೊಳೆಯುತ್ತದೆ.

ಡಾರ್ಕ್  ಸರ್ಕಲ್ಸ್ : ಇದನ್ನು ಅಡಗಿಸಲು ಬಹು ವಿಧದ ಕನ್ಸೀಲರ್‌ ಬೇರೆ ಬೇರೆ ಶೇಡ್ಸ್ ಕಲರ್‌ ನಲ್ಲಿ ಲಭ್ಯ. ಇದನ್ನು ಅಡಗಿಸಲು ದಪ್ಪ ಮೇಕಪ್‌ ಪದರ ಎಳೆಯಬೇಡಿ. ಇದರಿಂದ ಮೇಕಪ್‌ ಕೆಟ್ಟದಾಗಿ ಕಾಣುವುದಲ್ಲದೆ, ಕಂಗಳ ಕೆಳಗಿನ ಚರ್ಮ ಕೆಡುತ್ತದೆ.

ಟಾಪ್ಟಿಪ್‌ :  ಡಾರ್ಕ್‌ ಸರ್ಕಲ್ಸ್ ಭಾಗದ ಚರ್ಮದ ಬಣ್ಣ ತುಸು ಲೈಟ್‌ ಗ್ರೇ ಆಗಿದ್ದರೆ, ಅದಕ್ಕೆ ಲೈಟ್‌ ಗುಲಾಬಿ ಬಣ್ಣದ ಐ ಶ್ಯಾಡೋ ಹಚ್ಚಿರಿ. ಇದರ ಮೇಲೆ ಫೌಂಡೇಶನ್ನಿನ ತೆಳು ಪದರ ಬರಲಿ. ಡಾರ್ಕ್‌ ಸರ್ಕಲ್ ಲೈಟ್‌ ನೀಲಿ ಬಣ್ಣದ್ದಾದರೆ, ಪೀಚ್‌ ಬಣ್ಣದ ಐ ಶ್ಯಾಡೋ ಬಳಸಿಕೊಳ್ಳಿರಿ.

ಪೌಡರ್‌ : ಇದು ಸದಾ ಲೈಟ್‌ ಆಗಿಯೇ ಇರಬೇಕು. ಇದಕ್ಕಾಗಿ ಸದಾ ಲೂಸ್‌ ಪೌಡರ್‌ ಬಳಸಿಕೊಳ್ಳಿ. ಇದನ್ನು ಬ್ರಶ್‌ ನೆರವಿನಿಂದ ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಪೌಡರ್‌ ಚರ್ಮದಲ್ಲಿ ವಿಲೀನ ಆಗುವಂತೆ ಮಾಡಿ.

ಟಾಪ್ಟಿಪ್‌ : ಪೌಡರ್‌ ಹಚ್ಚಿಕೊಳ್ಳುವ ಮುನ್ನಾ ಟಿಶ್ಯು ಪೇಪರಿನಿಂದ ಇಡೀ ಮುಖವನ್ನು ಟ್ಯಾಪ್‌ ಮಾಡಿ, ಆಗ ಹೆಚ್ಚುವರಿ ಫೌಂಡೇಶನ್‌ಜಿಡ್ಡನ್ನು ಟಿಶ್ಯು ಪೇಪರ್‌ ಹೀರುತ್ತದೆ. ಇದರಿಂದ ಪೌಡರ್‌ ಹಚ್ಚಿದ ನಂತರ ಪ್ಯಾಚಿ ಲುಕ್ಸ್ ಬರುವುದಿಲ್ಲ.

ಬ್ಲಶ್ಆನ್‌ : ಇದನ್ನು ಸದಾ ಕೆನ್ನೆಯ ದುಂಡಗಿನ ಭಾಗಕ್ಕೆ ಸವರಬೇಕು. ಇದನ್ನು ಹಲವು ಸಲ ಬಳಸಬೇಕು, ಆಗ ಅದು ನ್ಯಾಚುರಲ್ ಎನಿಸುತ್ತದೆ. ಆದರೆ ಅದು ಕೃತಕ ಅನಿಸುವಂತೆ ಮಾಡಬೇಡಿ.

ಟಾಪ್ಟಿಪ್‌ : ಒಂದು ಪಕ್ಷ ಬ್ಲಶ್‌ ಆನ್‌ ಜಾಸ್ತಿ ಮೆತ್ತಿಕೊಂಡಿದ್ದರೆ, ಲೈಟ್‌ ಆದ ಒದ್ದೆ ಸ್ಪಾಂಜಿನಿಂದ ಕೆನ್ನೆ ಮೇಲೆ ಒತ್ತಿ ಒರೆಸಿಕೊಳ್ಳಿ. ಇದರಿಂದ ಕಲರ್‌ ಸಹ ತೆಳುವಾಗುತ್ತದೆ, ಲುಕ್ಸ್ ಸುಧಾರಿಸುತ್ತದೆ.

ಲಿಪ್ಸ್ಟಿಕ್‌ : ಇದರ ಬಣ್ಣ ಚರ್ಮ, ಕೂದಲು, ಕಂಗಳ ಬಣ್ಣಕ್ಕೆ ಹೊಂದುವಂತಿರಬೇಕು. ಸಂಜೆ ಪಾರ್ಟಿಗಳಿಗೆ ಡಾರ್ಕ್‌ ಕಲರ್‌ ಬಳಸಿರಿ. ಹಗಲಿನ ಫಂಕ್ಷನ್‌ ಗಳಿಗೆ ಲೈಟ್‌ ಲಿಪ್‌ ಸ್ಟಿಕ್‌ ಜೊತೆ ಲಿಪ್‌ ಗ್ಲಾಸ್‌ ಸಹ ಬಳಸಿರಿ.

ಟಾಪ್ಟಿಪ್‌ : ನೀವು ಶಿಮರಿ ಲುಕ್ಸ್ ಬಯಸಿದರೆ ಯಾವುದೇ ಲಿಪ್‌ ಸ್ಟಿಕ್‌ ಬಳಸಿದಾಗಲೂ ಅದರ ಮೇಲೆ ಹೊಳೆಯುವ ಐ ಶ್ಯಾಡೋ ತೀಡಿರಿ. ಆಗ ಬಿಲ್ ‌ಕುಲ್‌ಹೊಸ ಲುಕ್ಸ್ ಬರುತ್ತದೆ.

ಶ್ಯಾಡೋ : ನೀವು ಐ ಲೈನರ್‌ ಬಳಸುವಾಗ ಅದನ್ನು ನಿಮ್ಮಿಷ್ಟದಂತೆ ದಪ್ಪ ಅಥವಾ ತೆಳು ಲೈನ್‌ ಆಗಿ ಎಳೆಯಬಹುದು. ಹಗಲಿನಲ್ಲಿ ಐ ಶ್ಯಾಡೋ ಸದಾ ಲೈಟ್‌ ಬಣ್ಣದ್ದೇ ಆಗಿರಬೇಕು. ಈವ್ನಿಂಗ್‌ ಪಾರ್ಟಿಗಳಿಗೆ ಡಾರ್ಕ್‌ ಕಲರ್‌ ಬಳಸಿರಿ. ಐ ಬ್ರೋಸಿಗೆ ಸರಿಯಾಗಿ ಕೆಳಗೆ ಶಿಮರಿ ಹೈಲೈಟರ್‌ ಬಳಸಿರಿ. ಮಸ್ಕರಾ ಸದಾ ತೆಳು ಕೋಟ್‌ ಬರಬೇಕು. ಅಗತ್ಯ ಎನಿಸಿದರೆ 2-3 ಸಲ ಬಳಸಿರಿ. ಐ ಲೈನರ್‌ ಮಾತ್ರ ಸದಾ ತೆಳು ಆಗಿರಬೇಕು.

ಟಾಪ್ಟಿಪ್‌ : ಐ ಲೈನರ್‌ ಬಳಸಿದ ನಂತರ ಐ ಶ್ಯಾಡೋ ಜೊತೆ ಲೈಟ್‌ ಆಗಿ ಬ್ಲೆಂಡ್‌ ಮಾಡಿಕೊಳ್ಳಿ. ಇದರಿಂದ ಕಂಗಳ ಲುಕ್ಸ್ ಬಲು ಮ್ಯಾಗ್ನೆಟಿಕ್‌ ಆಗಿಹೋಗುತ್ತದೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ