ನಾವೆಲ್ಲರೂ ನಮ್ಮ ಸ್ಕಿನ್ ನಲ್ಲಿ ಸದಾ ಯೂಥ್ ಫುಲ್ ಗ್ಲೋ ಇರಬೇಕೆಂದು ಬಯಸುತ್ತೇವೆ. ಇದಕ್ಕಾಗಿ ಮಾಯಿಶ್ಚರೈಸರ್ UV ಕಿರಣಗಳಿಂದ ರಕ್ಷಿಸಿಕೊಳ್ಳಲು SPF ಯುಕ್ತ ಸನ್ ಸ್ಕ್ರೀನ್ ಲೋಶನ್, ಇತ್ಯಾದಿ ಬಳಸಿ ಚರ್ಮದಲ್ಲಿ ಪಿಗ್ಮೆಂಟೇಶನ್‌ಉಂಟಾಗದಂತೆ ಎಚ್ಚರ ವಹಿಸುತ್ತೇವೆ. ಹೀಗಾಗಿ ಹೆಂಗಸರ ಹ್ಯಾಂಡ್ ಬ್ಯಾಗಿನಲ್ಲಿ ಇಂಥ ಕ್ರೀಮುಗಳು ಸದಾ ಇರುತ್ತವೆ. ಆದರೆ ಮಾಹಿತಿಯ ಕೊರತೆ ಕಾರಣ, ಹೆಂಗಸರು ತಮ್ಮ ಮುಖಕ್ಕೆ ಏಜಿಂಗ್, ಪಿಗ್ಮೆಂಟೇಶನ್, ಓಪನ್ ಪೋರ್ಸ್ ಗಳಿಂದ ರಕ್ಷಿಸುವಂಥ ಕ್ರೀಮನ್ನು ಬಳಸಲು ಮರೆತೇಬಿಡುತ್ತಾರೆ. ಹೌದು, ಅದುವೇ ಫೇಸ್ ಸೀರಮ್! ಇದರಿಂದಾಗಿ ಮುಖದಲ್ಲಿ ನೈಸರ್ಗಿಕ ಮಾಯಿಶ್ಚರೈಸರ್ ಲಾಕ್‌ಆಗಿ ಉಳಿಯುವುದರ ಜೊತೆ, ಸ್ಕಿನ್‌ಚೆನ್ನಾಗಿ ಗ್ಲೋ ಸಹ ಆಗುತ್ತದೆ. ಹಾಗಾದರೆ ಈ ಅದ್ಭುತ ಫೇಸ್ ಸೀರಮ್ ಬಗ್ಗೆ, ಅದರಿಂದಾಗುವ ಲಾಭದ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣವೇ?
ಫೇಸ್ ಸೀರಮ್
ಇದು ನಿಜಕ್ಕೂ ಒಂದು ಅದ್ಭುತ ಸ್ಕಿನ್ ಕೇರ್ ಪ್ರಾಡಕ್ಟ್ ಇದರಲ್ಲಿ ಸಣ್ಣ ಸಣ್ಣ ಅಣುಗಳು ಅಡಗಿದ್ದು, ಅವು ಚರ್ಮದ ಆಳದವರೆಗೆ ಇಳಿದು ಚರ್ಮವನ್ನು ಆದಷ್ಟು ಬೇಗ ರಿಪೇರಿ ಮಾಡುವ ಕೆಲಸ ಮಾಡುತ್ತದೆ, ಇದರಿಂದಾಗಿ ಸ್ಕಿನ್ ಪ್ರಾಬ್ಲಂ ಫ್ರೀಂ ಆಗಿ, ಚರ್ಮ ಮತ್ತೆ ನೀಟಾಗಿ ವಿಕಾಸಗೊಳ್ಳುತ್ತದೆ. ಇದು ಬಹಳ ಲೈಟ್ ವೆಯ್ಟ್ ಪ್ರಾಡಕ್ಟ್. ಆದ್ದರಿಂದ ಮುಖಕ್ಕೆ ಹಚ್ಚಿದ ತಕ್ಷಣ ಸುಲಭವಾಗಿ ಚರ್ಮದೊಂದಿಗೆ ವಿಲೀನಗೊಳ್ಳುತ್ತದೆ.
ಇದನ್ನು ಸದಾ, ಮುಖ ಚೆನ್ನಾಗಿ ತೊಳೆದು ಒರೆಸಿದ ನಂತರ, ಮಾಯಿಶ್ಚರೈಸರ್ ಹಚ್ಚಿಕೊಳ್ಳುವ ಮುನ್ನ ಅಪ್ಲೈ ಮಾಡಬೇಕು. ಆಗ ಇದು ಮಾಯಿಶ್ಚರನ್ನು ಚರ್ಮದೊಳಗೆ ಲಾಕ್ ಮಾಡಿಡಲು ಸುಲಭವಾಗುತ್ತದೆ. ಇದರಿಂದಾಗಿ ಸ್ಕಿನ್ ಯಂಗ್‌ಗ್ಲೋಯಿಂಗ್ ಎನಿಸುತ್ತದೆ. ಕಾರಣ, ಅದು ಚರ್ಮಕ್ಕೆ ಬಿಗಿತ ನೀಡುತ್ತದೆ, ಅದು ಮುಖದ ವಯಸ್ಸು ತಗ್ಗಿರುವಂತೆ ಮಾಡುವಲ್ಲಿ ಯಶಸ್ವಿ ಆಗಿರುತ್ತದೆ.
ಇದು ಏಕೆ ಲಾಭಕರ?
ಎಲ್ಲಿಯವರೆಗೂ ನಾವು ಯಾವುದೇ ಬ್ಯೂಟಿ ಪ್ರಾಡಕ್ಟಿನ ಲಾಭಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಿಲ್ಲವೇ ಅಲ್ಲಿಯವರೆಗೂ ಅದನ್ನು ಕೊಳ್ಳುವುದರಿಂದ ಲಾಭವಿಲ್ಲ. ಏಕೆಂದರೆ ಇದು ನಮ್ಮ ದೇಹದ ಸೂಕ್ಷ್ಮ ಅಂಗ ಚರ್ಮದ ಸಮಸ್ಯೆ. ಬನ್ನಿ, ಸೀರಮ್ ನ ಉತ್ತಮ ಗುಣಾಂಶಗಳ ಬಗ್ಗೆ ತಿಳಿಯೋಣ. ಇದನ್ನು ಅಗತ್ಯವಾಗಿ ನಿಮ್ಮ ಬ್ಯೂಟಿ ಕಿಟ್ ನಲ್ಲಿ ಇರಿಸಿಕೊಳ್ಳಿ. ಇದರ ಲಾಭಗಳೇನು ಎಂದು ನೋಡೋಣ :
ಸೀರಮ್ ನಲ್ಲಿ ಬಹುತೇಕ ರೆಟಿನಾಲ್ ಅಂಶವಿರುತ್ತದೆ, ಇದು ಫೈನ್ ಲೈನ್ಸ್ ರಿಂಕಲ್ಸ್ ತಗ್ಗಿಸುತ್ತದೆ. ಏಕೆಂದರೆ ರೆಟಿನಾಲ್ ಗೆ ಚರ್ಮದಲ್ಲಿ ಕೊಲೋಜನ್ ನ್ನು ಅಭಿವೃದ್ಧಿಪಡಿಸುವ ತಾಕತ್ತಿದೆ. ಜೊತೆಗೆ ಇದು ಚರ್ಮದಲ್ಲಿನ ರಕ್ತನಾಳಗಳನ್ನು ಹೆಚ್ಚು ಚುರುಕಾಗಿಸುತ್ತದೆ, ಸಹಜವಾಗಿ ಸ್ಕಿನ್ ಕಲರ್ ಸುಧಾರಿಸುತ್ತದೆ.
ಉತ್ತಮ ಸೀರಮ್ ನಲ್ಲಿ ಬಹಳಷ್ಟು ಆ್ಯಕ್ಟಿವ್ ಇನ್‌ಗ್ರೀಡಿಯಂಟ್ಸ್ ಅಂದ್ರೆ ವಿಟಮಿನ್, ರೆಟಿನೋ ಫೆರುಲಿಕ್ ಆ್ಯಸಿಡ್, ಗ್ರೀನ್ ಟೀ, ವಿಟಮಿನ್, ಅಮೈನೋ ಆ್ಯಸಿಡ್ ಇರುತ್ತವೆ. ಇವು ಚರ್ಮಕ್ಕೆ ಅಗತ್ಯವಾದ ಎಲ್ಲಾ ಉತ್ತಮ ಪೋಶಕಾಂಶಗಳನ್ನು ಒದಗಿಸುತ್ತವೆ, ಅದನ್ನು ಸದಾ ಹೆಲ್ದಿ ಆಗಿರಿಸುತ್ತದೆ. ವಿಟಮಿನ್‌ಕೊಲೋಜನ್‌ನ್ನು ಬ್ಯಾಲೆನ್ಸ್ಡ್ ಆಗಿಡುತ್ತದೆ, ವಿಟಮಿನ್‌ಸೆಲ್ ಫಂಕ್ಷನ್ಸ್ ನ್ನು ಚುರುಕಾಗಿಸುತ್ತದೆ, ಪೆರುಲಿಕ್ ಆ್ಯಸಿಡ್ ಒಂದು ಆ್ಯಂಟಿ ಆಕ್ಸಿಡೆಂಟ್‌ಕೆಲಸವನ್ನು ಮಾಡುತ್ತದೆ, ಇದು ಚರ್ಮಕ್ಕೆ ಯಾವುದೇ ಡ್ಯಾಮೇಜ್ ಆಗದಂತೆ ಸದಾ ರಕ್ಷಿಸುತ್ತದೆ.
ಗ್ರೀನ್ ಟೀಯಲ್ಲಿ ಪಾಲೋಫಿನಾಲ್ಸ್ ಇದ್ದು, ಸ್ಕಿನ್ ಗೆ ಆ್ಯಕ್ನೆ, ಮೊಡವೆಗಳ ಕಾಟ ತಪ್ಪಿಸುತ್ತದೆ. ಹಾಗೇ ಅಮಿನೋ ಆ್ಯಸಿಡ್ಸ್ ಸ್ಕಿನ್ ರಿಪೇರಿಯ ಕೆಲಸ ಗಮನಿಸುತ್ತದೆ. ಇದರಿಂದ ಸ್ಕಿನ್ ಫ್ರೀ ಕ್ಯಾಡಿಕ್ಸ್ ನಿಂದ ಬಚಾವಾಗುತ್ತದೆ.
ಸೀರಮ್ ಸಾಕಷ್ಟು ಲೈಟ್ ವೆಯ್ಟ್ ಆದುದರಿಂದ, ಅದು ಸ್ಕಿನ್‌ಗೆ ಹಿತಕರ ಅನುಭವ ನೀಡುತ್ತದೆ.
ಇತರ ಬ್ಯೂಟಿ ಪ್ರಾಡಕ್ಟ್ಸ್ ಗೆ ಹೋಲಿಸಿದಾಗ, ಇದರ ಪರಿಣಾಮ ಕೆಲವೇ ವಾರಗಳಲ್ಲಿ ಚರ್ಮದ ಮೇಲೆ ಕಾಣಿಸುತ್ತದೆ.
ಫೇಸ್ ಸೀರಮ್ ನಲ್ಲಿ ಹ್ಯಾಲುರೋನಿಕ್ ಆ್ಯಸಿಡ್ ನಂಥ ಪವರ್ ಫುಲ್ ಆ್ಯಕ್ಟಿವ್ ಇನ್‌ಗ್ರೀಡಿಯಂಟ್ ಆದಕಾರಣ, ಇದು ಚರ್ಮದಲ್ಲಿ ಮಾಯಿಶ್ಚರ್‌ನ್ನು ಲಾಕ್ ಮಾಡುವಂಥ ಕೆಲಸ ಮಾಡುತ್ತದೆ. ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ, ಈ ದಿನವೇ ಈ ಪ್ರಾಡಕ್ಟ್ ಖರೀದಿಸಿ ನಿಮ್ಮ ಮೇಕಪ್ ಕಿಟ್ ನಲ್ಲಿ ಇರಿಸಿಕೊಳ್ಳಿ.
ಇದು ಸೆನ್ಸಿಟಿವ್ ಸ್ಕಿನ್ ಮೇಲೂ ಸಾಕಷ್ಟು ಉತ್ತಮ ಕೆಲಸ ಮಾಡುತ್ತದೆ, ಏಕೆಂದರೆ ಇದರಲ್ಲಿ ಶಿಯಾ ಬಟರ್, ಆ್ಯಲೋವೇರಾ, ಝಿಂಕ್ ನಂಥ ಪೋಷಕಾಂಶಗಳು ಅಡಗಿದ್ದು, ಚರ್ಮಕ್ಕೆ ಯಾವುದೇ ಇರಿಟೇಶನ್, ಉರಿ ಉಂಟು ಮಾಡದೆ, ಅದಕ್ಕೆ ತಂಪು ಒದಗಿಸಿ, ಸ್ಕಿನ್ ಪ್ರಾಬ್ಲಂಸ್ ನಿಂದ ಮುಕ್ತಿ ಕೊಡಿಸುವ ಕೆಲಸ ಮಾಡುತ್ತದೆ.
ಫೇಸ್ ಸೀರಮ್ ನಲ್ಲಿ ವಿಟಮಿನ್ಸ್ ಯಂಥ ಘಟಕಗಳಿದ್ದು, ಅದರಲ್ಲಿ ಆ್ಯಸ್ಟ್ರಿಂಜೆಂಟ್ ಗುಣಗಳಿದ್ದು, ಅದು ಓಪನ್ ಪೋರ್ಸ್ ನ್ನು ಟೈಟ್ ಗೊಳಿಸುವ, ಕಿರಿದುಗೊಳಿಸುವ ಕೆಲಸ ಮಾಡುತ್ತದೆ. ಹೀಗಾಗಿ ನಿಮ್ಮ ಚರ್ಮ ಆಯ್ಲಿ ಆದಕಾರಣ ಅದರಲ್ಲಿ ದೊಡ್ಡ ಪೋರ್ಸ್ ಸಮಸ್ಯೆ ಇದ್ದರೆ, ಫೇಸ್ ಸೀರಮ್ ಗಿಂತ ನಿಮಗೆ ಉತ್ತಮ ಇನ್ನೊಂದಿಲ್ಲ.
ನಿಮ್ಮ ಚರ್ಮದಲ್ಲಿ ಸುಕ್ಕು ಕಲೆಗಳಿದ್ದರೆ, ಫೇಸ್ ಸೀರಮ್ ನ ವೈಟ್ ಘಟಕಗಳು ಅವನ್ನು ಕಡಿಮೆಗೊಳಿಸಿ ನಿಮ್ಮ ಚರ್ಮ ಬ್ಯೂಟಿಫುಲ್ ಆಗುವಂತೆ ಮಾಡಬಲ್ಲದು.
ಸೀರಮ್ ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ಏಜಿಂಗ್ ಎಫೆಕ್ಟ್ ನ್ನು ತಗ್ಗಿಸಬಲ್ಲದು, ಅಂದ್ರೆ ಚಿರಯೌವನ ನಿಮ್ಮದಾಗುವುದು. ಇದರಿಂದ ಚರ್ಮ ಸದಾ ಯಂಗ್ ಆಗಿರುತ್ತದೆ.
ಬೆಸ್ಟ್ ಫೇಸ್ ಸೀರಮ್
ವಿಟಮಿನ್ಸ್ ಯುಕ್ತ ಸೀರಮ್ : ಇದರಲ್ಲಿ ಅಧಿಕಾಂಶ ವಿಟಮಿನ್ಸ್ ಇದ್ದು, ಅದು ಸಹಜ ಆ್ಯಂಟಿ ಆಕ್ಸಿಡೆಂಟ್ಸ್ ನ ಕೆಲಸ ನಿರ್ವಹಿಸುತ್ತಾ, ಫ್ರೀ ರಾಡಿಕಲ್ಸ್ ನಿಂದ ಸೆಲ್ಸ್ ನ್ನು ರಕ್ಷಿಸುತ್ತಾ ಏಜಿಂಗ್ ಆಗದಂತೆ ತಡೆಯುತ್ತದೆ. ಜೊತೆಗೆ ಇದು ಹೊಸ ಹೊಸ ಕೊಲೋಜನ್ ಅಂಶ ಹೆಚ್ಚಲು ನೆರವಾಗುತ್ತಾ ಫೈನ್ ಲೈನ್ಸ್ ಏಜಿಂಗ್ ಆಗುವುದನ್ನು ತಡೆಯುತ್ತದೆ.
ಇದರಲ್ಲಿ ಹ್ಯಾಲುರೋನಿಕ್ ಆ್ಯಸಿಡ್ ಸಹ ಇರುವುದರಿಂದ ಇದು ಚರ್ಮದ ವಾಲ್ಯೂಂನ್ನು ಹೆಚ್ಚಿಸಿ, ಚರ್ಮಕ್ಕೆ ಸದಾ ಯಂಗ್ ಲುಕ್ಸ್ ನೀಡುತ್ತದೆ. ಇದರಲ್ಲಿ ಆ್ಯಲೋವೇರಾ ಗ್ರೇಪ್ ಸೀಡ್ ಎಕ್ಸ್ ಟ್ರಾಕ್ಟ್ ನ ಜೊತೆ ಫೆರುಲಿಕ್ ಆ್ಯಸಿಡ್ ಇರುವ ಕಾರಣ, ಇದು ಚರ್ಮಕ್ಕೆ ಕೂಲ್ ಮಾಯಿಶ್ಚರೈಸ್‌ಹೀಲಿಂಗ್ ನಲ್ಲಿ ಸಹಾಯ ಮಾಡುತ್ತದೆ.
ನ್ಯೂಟ್ರೊಜೆನಾ ಸೀರಮ್ : ಇದು ಚರ್ಮವನ್ನು ಹೆಚ್ಚು ಹೈಡ್ರೇಟ್ ಗೊಳಿಸುವುದರ ಜೊತೆಯಲ್ಲೇ ಅದನ್ನು ಇಡೀ ದಿನ ಸಾಫ್ಟ್ ಸಾಫ್ಟ್ ಆಗಿರಿಸುವ ಕೆಲಸ ಮಾಡುತ್ತದೆ. ಇದು ಮೆಲನಿನ್ ಉತ್ಪಾದನೆ ನಿಯಂತ್ರಿಸುತ್ತಾ, ಸ್ಕಿನ್ ಗೆ ಡಾರ್ಕ್ ನೆಸ್ ಬರದಂತೆ ತಡೆಯುತ್ತದೆ. ಇದರಿಂದ ಈವೆನ್ ಸ್ಕಿನ್ ಟೋನ್ ಸಿಗುವಲ್ಲಿ ಸಹಕರಿಸುತ್ತದೆ.
ಲೆಯೊರಿಯಲ್ ಪ್ಯಾರಿಸ್ ಹ್ಯಾಲುರೋನಿಕ್ ಆ್ಯಸಿಡ್ ಸೀರಮ್ : ಈ ಸೀರಮ್ ಬಹಳ ಲೈಟ್ ವೆಯ್ಟ್ ಆದಕಾರಣ, ಎಲ್ಲಾ (ಆಯ್ಲಿ, ಡ್ರೈ, ನಾರ್ಮಲ್) ಬಗೆಯ ಸ್ಕಿನ್ ಗೂ ಸೂಟ್ ಆಗುತ್ತದೆ. ಇದು ಚರ್ಮ ತಜ್ಞರಿಂದ ಪರೀಕ್ಷಿಸಲ್ಪಟ್ಟಿರುತ್ತದೆ. ಇದರಲ್ಲಿನ ಹ್ಯಾಲುರೋನಿಕ್ ಆ್ಯಸಿಡ್ ಕಾರಣ, ಇದು ಚರ್ಮದ ಮಾಯಿಶ್ಚರ್ ಲೆವೆಲನ್ನು ಹೆಚ್ಚಿಸಿ, ಫೈನಲ್ ಲೈನ್ಸ್, ರಿಂಕಲ್ಸನ್ನು ಕಡಿಮೆಗೊಳಿಸಲು ಮುಂದಾಗುತ್ತದೆ ಹೀಗಾಗಿ ಚರ್ಮ ಬಹಳ ಹೊಳೆ ಹೊಳೆಯ ತೊಡಗುತ್ತದೆ.
ಲ್ಯಾಕ್ಮೆ ಆಬ್ಸಲ್ಯೂಟ್ ಆರ್ಗನ್ ಆಯಿಲ್ ಸೀರಮ್ : ಇದು ಸೀರಮ್ ಆಯಿಲ್ ನ ಮಿಶ್ರಣವಾಗಿದ್ದು, ರಾತ್ರಿ ನೀವು ಮಲಗುವ ಮುನ್ನ ಶುಚಿಗೊಳಿಸಿದ ಮುಖಕ್ಕೆ ಹಚ್ಚಿದರೆ, ಇದರ ಪರಿಣಾಮ ಬಹಳ ಉತ್ತಮ ಆಗಿರುತ್ತದೆ. ಇದರಲ್ಲಿನ ಆರ್ಗನ್ ಆಯಿಲ್ ಕಾರಣ, ಚರ್ಮವನ್ನು ಬೇಗ ಹೀಲ್ ಮಾಡಲು ಹಾಗೂ ಏಜಿಂಗ್ ಎಫೆಕ್ಟ್ ನ್ನು ಸಾಕಷ್ಟು ಕಡಿಮೆಗೊಳಿಸಲು ನೆರವಾಗುತ್ತದೆ.
ಚರ್ಮಕ್ಕೆ ತಕ್ಕಂತೆ ಸೀರಮ್ ಆಯ್ಕೆ
ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ, ಆಗ ನೀವು ಹ್ಯಾಲುರೋನಿಕ್ ಆ್ಯಸಿಡ್ ಯುಕ್ತ ಸೀರಮ್ ಬಳಸಬೇಕು. ಏಕೆಂದರೆ ಇದು ಏಜಿಂಗನ್ನು ತಡೆಯುವುದರ ಜೊತೆಗೆ ಚರ್ಮವನ್ನು ಹೈಡ್ರೇಟ್ ಗೊಳಿಸುವಲ್ಲಿಯೂ ಮುಂದು. ಇದರಿಂದಾಗಿ ಡ್ರೈ ಸ್ಕಿನ್ ಕ್ರಮೇಣ ನ್ಯಾಚುರಲ್ ಮಾಯಿಶ್ಚರೈಸರ್ ಒಗ್ಗೂಡಿಸಿಕೊಂಡು ಮೃದುವಾಗಿ ಹೊಳೆಯತೊಡಗುತ್ತದೆ.
ನಿಮ್ಮದು ಅತಿ ಸೂಕ್ಷ್ಮ ಸಂವೇದನಾಶೀಲ ಚರ್ಮವಾಗಿದ್ದರೆ, ನೀವು ನೈಸರ್ಗಿಕ ಘಟಕಗಳಿಂದ ತುಂಬಿದ ಸೀರಮ್ ಮಾತ್ರ ಬಳಸಿರಿ. ಏಕೆಂದರೆ ಇದು ಚರ್ಮಕ್ಕೆ ತಂಪು ನೀಡುತ್ತಾ ಹೆಚ್ಚಿನ ಲಾಭ ನೀಡುತ್ತದೆ.
ನಿಮ್ಮದು ಆಯ್ಲಿ ಚರ್ಮವಾಗಿದ್ದರೆ, ನೀವು ವಿಟಮಿನ್ ತುಂಬಿರುವಂಥ ಸೀರಮ್ ಮಾತ್ರ ಬಳಸಿರಿ.
ಸೀರಮ್ ಬಳಸುವ ವಿಧಾನ
ಯಾವಾಗ ನೀವು ಸೀರಮನ್ನು ಮುಖಕ್ಕೆ ಹಚ್ಚಿದರೂ, ಅದು ಡೇ/ನೈಟ್ ಸೀರಮ್ ತಾನೇ ಎಂದು ಖಚಿತಪಡಿಸಿಕೊಳ್ಳಿ. ಕೆಲವು ಸೀರಮ್ ಮೇಕಪ್ ಗೆ ಮೊದಲೇ ಹಚ್ಚಿಕೊಳ್ಳಬೇಕು. ಆಗ ಅದು ಬಹಳ ಹೊತ್ತು ಬಾಳಿಕೆ ಬರುತ್ತದೆ. ಸಾಮಾನ್ಯವಾಗಿ ನೈಟ್ ಸೀರಮ್ ಬೆಸ್ಟ್ ಎನಿಸಿದೆ. ಏಕೆಂದರೆ ರಾತ್ರಿ ಹೊತ್ತಲ್ಲಿ ಸ್ಕಿನ್ ಸಾಕಷ್ಟು ರಿಲ್ಯಾಕ್ಸ್ ಆಗಿರುತ್ತದೆ. ನೀವು ಮುಖ ತೊಳೆದ ನಂತರ ಇದನ್ನು ಹಚ್ಚಿದ ಮೇಲೆ, ಇದು ಚರ್ಮದ ಆಳಕ್ಕಿಳಿದು ಅದನ್ನು ಹೀಲ್ ಮಾಡುವ ಕೆಲಸ ಮಾಡುತ್ತದೆ.
ನೀವು ಯಾವಾಗ ಮುಖಕ್ಕೆ ಸೀರಮ್ ಬಳಸಿದರೂ, ಅದಕ್ಕೆ ಮೊದಲು ನೀಟಾಗಿ ಫೇಸ್ ವಾಶಿನಿಂದ ಮುಖ ತೊಳೆದು, ಒರೆಸಿಕೊಳ್ಳಿ. ನಂತರ ಹಸ್ತದ ಮೇಲೆ ಸೀರಮ್ ಹನಿ ಹಾಕಿಕೊಂಡು ಅದನ್ನು ನೀಟಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಸೀರಮ್ ನೀಟಾಗಿ ಮುಖ ಪೂರ್ತಿ ಹರಡಿ, ಆಳಕ್ಕಿಳಿಯತ್ತದೆ. ಹಾಗಾಗಿ ಉತ್ತಮ ಪರಿಣಾಮ ಸಿಗುತ್ತದೆ. ಇನ್ನು ತಡವೇಕೆ? ಇಂದಿನಿಂದಲೇ ನಿಮ್ಮ ಬ್ಯೂಟಿ ಕಿಟ್ ನಲ್ಲಿ ಸೀರಮ್ ಸೇರಿಸಿಕೊಳ್ಳಿ.
– ಪಾರ್ವತಿ ಭಟ್