ನಾವೆಲ್ಲರೂ ನಮ್ಮ ಸ್ಕಿನ್‌ ನಲ್ಲಿ ಸದಾ ಯೂಥ್‌ ಫುಲ್ ಗ್ಲೋ ಇರಬೇಕೆಂದು ಬಯಸುತ್ತೇವೆ. ಇದಕ್ಕಾಗಿ ಮಾಯಿಶ್ಚರೈಸರ್‌ UV ಕಿರಣಗಳಿಂದ ರಕ್ಷಿಸಿಕೊಳ್ಳಲು SPF ಯುಕ್ತ ಸನ್‌ ಸ್ಕ್ರೀನ್‌ ಲೋಶನ್‌, ಇತ್ಯಾದಿ ಬಳಸಿ ಚರ್ಮದಲ್ಲಿ ಪಿಗ್ಮೆಂಟೇಶನ್‌ಉಂಟಾಗದಂತೆ ಎಚ್ಚರ ವಹಿಸುತ್ತೇವೆ. ಹೀಗಾಗಿ ಹೆಂಗಸರ ಹ್ಯಾಂಡ್‌ ಬ್ಯಾಗಿನಲ್ಲಿ ಇಂಥ ಕ್ರೀಮುಗಳು ಸದಾ ಇರುತ್ತವೆ. ಆದರೆ ಮಾಹಿತಿಯ ಕೊರತೆ ಕಾರಣ, ಹೆಂಗಸರು ತಮ್ಮ ಮುಖಕ್ಕೆ ಏಜಿಂಗ್‌, ಪಿಗ್ಮೆಂಟೇಶನ್‌, ಓಪನ್‌ ಪೋರ್ಸ್‌ ಗಳಿಂದ ರಕ್ಷಿಸುವಂಥ ಕ್ರೀಮನ್ನು ಬಳಸಲು ಮರೆತೇಬಿಡುತ್ತಾರೆ. ಹೌದು, ಅದುವೇ ಫೇಸ್‌ ಸೀರಮ್! ಇದರಿಂದಾಗಿ ಮುಖದಲ್ಲಿ ನೈಸರ್ಗಿಕ ಮಾಯಿಶ್ಚರೈಸರ್‌ ಲಾಕ್‌ಆಗಿ ಉಳಿಯುವುದರ ಜೊತೆ, ಸ್ಕಿನ್‌ಚೆನ್ನಾಗಿ ಗ್ಲೋ ಸಹ ಆಗುತ್ತದೆ. ಹಾಗಾದರೆ ಈ ಅದ್ಭುತ ಫೇಸ್ ಸೀರಮ್ ಬಗ್ಗೆ, ಅದರಿಂದಾಗುವ ಲಾಭದ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣವೇ?

ಫೇಸ್‌ ಸೀರಮ್

ಇದು ನಿಜಕ್ಕೂ ಒಂದು ಅದ್ಭುತ ಸ್ಕಿನ್‌ ಕೇರ್‌ ಪ್ರಾಡಕ್ಟ್ ಇದರಲ್ಲಿ ಸಣ್ಣ ಸಣ್ಣ ಅಣುಗಳು ಅಡಗಿದ್ದು, ಅವು ಚರ್ಮದ ಆಳದವರೆಗೆ ಇಳಿದು ಚರ್ಮವನ್ನು ಆದಷ್ಟು ಬೇಗ ರಿಪೇರಿ ಮಾಡುವ ಕೆಲಸ ಮಾಡುತ್ತದೆ, ಇದರಿಂದಾಗಿ ಸ್ಕಿನ್‌ ಪ್ರಾಬ್ಲಂ ಫ್ರೀಂ ಆಗಿ, ಚರ್ಮ ಮತ್ತೆ ನೀಟಾಗಿ ವಿಕಾಸಗೊಳ್ಳುತ್ತದೆ. ಇದು ಬಹಳ ಲೈಟ್‌ ವೆಯ್ಟ್ ಪ್ರಾಡಕ್ಟ್. ಆದ್ದರಿಂದ ಮುಖಕ್ಕೆ ಹಚ್ಚಿದ ತಕ್ಷಣ ಸುಲಭವಾಗಿ ಚರ್ಮದೊಂದಿಗೆ ವಿಲೀನಗೊಳ್ಳುತ್ತದೆ.

ಇದನ್ನು ಸದಾ, ಮುಖ ಚೆನ್ನಾಗಿ ತೊಳೆದು ಒರೆಸಿದ ನಂತರ, ಮಾಯಿಶ್ಚರೈಸರ್‌ ಹಚ್ಚಿಕೊಳ್ಳುವ ಮುನ್ನ ಅಪ್ಲೈ ಮಾಡಬೇಕು. ಆಗ ಇದು ಮಾಯಿಶ್ಚರನ್ನು ಚರ್ಮದೊಳಗೆ ಲಾಕ್‌ ಮಾಡಿಡಲು ಸುಲಭವಾಗುತ್ತದೆ. ಇದರಿಂದಾಗಿ ಸ್ಕಿನ್‌ ಯಂಗ್‌ಗ್ಲೋಯಿಂಗ್ ಎನಿಸುತ್ತದೆ. ಕಾರಣ, ಅದು ಚರ್ಮಕ್ಕೆ ಬಿಗಿತ ನೀಡುತ್ತದೆ, ಅದು ಮುಖದ ವಯಸ್ಸು ತಗ್ಗಿರುವಂತೆ ಮಾಡುವಲ್ಲಿ ಯಶಸ್ವಿ ಆಗಿರುತ್ತದೆ.

ಇದು ಏಕೆ ಲಾಭಕರ?

ಎಲ್ಲಿಯವರೆಗೂ ನಾವು ಯಾವುದೇ ಬ್ಯೂಟಿ ಪ್ರಾಡಕ್ಟಿನ ಲಾಭಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಿಲ್ಲವೇ ಅಲ್ಲಿಯವರೆಗೂ ಅದನ್ನು ಕೊಳ್ಳುವುದರಿಂದ ಲಾಭವಿಲ್ಲ. ಏಕೆಂದರೆ ಇದು ನಮ್ಮ ದೇಹದ ಸೂಕ್ಷ್ಮ ಅಂಗ ಚರ್ಮದ ಸಮಸ್ಯೆ. ಬನ್ನಿ, ಸೀರಮ್ ನ ಉತ್ತಮ ಗುಣಾಂಶಗಳ ಬಗ್ಗೆ ತಿಳಿಯೋಣ. ಇದನ್ನು ಅಗತ್ಯವಾಗಿ ನಿಮ್ಮ ಬ್ಯೂಟಿ ಕಿಟ್‌ ನಲ್ಲಿ ಇರಿಸಿಕೊಳ್ಳಿ. ಇದರ ಲಾಭಗಳೇನು ಎಂದು ನೋಡೋಣ :

ಸೀರಮ್ ನಲ್ಲಿ ಬಹುತೇಕ ರೆಟಿನಾಲ್ ‌ಅಂಶವಿರುತ್ತದೆ, ಇದು ಫೈನ್‌ ಲೈನ್ಸ್ ರಿಂಕಲ್ಸ್ ತಗ್ಗಿಸುತ್ತದೆ. ಏಕೆಂದರೆ ರೆಟಿನಾಲ್ ‌ಗೆ ಚರ್ಮದಲ್ಲಿ ಕೊಲೋಜನ್‌ ನ್ನು ಅಭಿವೃದ್ಧಿಪಡಿಸುವ ತಾಕತ್ತಿದೆ. ಜೊತೆಗೆ ಇದು ಚರ್ಮದಲ್ಲಿನ ರಕ್ತನಾಳಗಳನ್ನು ಹೆಚ್ಚು ಚುರುಕಾಗಿಸುತ್ತದೆ, ಸಹಜವಾಗಿ ಸ್ಕಿನ್‌ ಕಲರ್‌ ಸುಧಾರಿಸುತ್ತದೆ.

ಉತ್ತಮ ಸೀರಮ್ ನಲ್ಲಿ ಬಹಳಷ್ಟು ಆ್ಯಕ್ಟಿವ್ ‌ಇನ್‌ಗ್ರೀಡಿಯಂಟ್ಸ್ ಅಂದ್ರೆ ವಿಟಮಿನ್‌, ರೆಟಿನೋ ಫೆರುಲಿಕ್‌ ಆ್ಯಸಿಡ್‌, ಗ್ರೀನ್‌ ಟೀ, ವಿಟಮಿನ್‌‌, ಅಮೈನೋ ಆ್ಯಸಿಡ್‌ ಇರುತ್ತವೆ. ಇವು ಚರ್ಮಕ್ಕೆ ಅಗತ್ಯವಾದ ಎಲ್ಲಾ ಉತ್ತಮ ಪೋಶಕಾಂಶಗಳನ್ನು ಒದಗಿಸುತ್ತವೆ, ಅದನ್ನು ಸದಾ ಹೆಲ್ದಿ ಆಗಿರಿಸುತ್ತದೆ. ವಿಟಮಿನ್‌ಕೊಲೋಜನ್‌ನ್ನು ಬ್ಯಾಲೆನ್ಸ್ಡ್ ಆಗಿಡುತ್ತದೆ, ವಿಟಮಿನ್‌ಸೆಲ್ ‌ಫಂಕ್ಷನ್ಸ್ ನ್ನು ಚುರುಕಾಗಿಸುತ್ತದೆ, ಪೆರುಲಿಕ್‌ ಆ್ಯಸಿಡ್‌ ಒಂದು ಆ್ಯಂಟಿ ಆಕ್ಸಿಡೆಂಟ್‌ಕೆಲಸವನ್ನು ಮಾಡುತ್ತದೆ, ಇದು ಚರ್ಮಕ್ಕೆ ಯಾವುದೇ ಡ್ಯಾಮೇಜ್‌ ಆಗದಂತೆ ಸದಾ ರಕ್ಷಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ