ಕೆಲಸ ಕಡಿಮೆ ಉಪದೇಶ ಜಾಸ್ತಿ :
ನಮ್ಮ ದೇಶದಲ್ಲಿ ಪರಿವರ್ತನೆಯಂತೂ ಸಾಧ್ಯವಿಲ್ಲದ ಮಾತು. ಆದರೆ ಬಾಯಿ ಮಾತಿನಲ್ಲಿ ಜಾಗತಿಕ ಯುಗದ ಪರಿವರ್ತನೆಯಂಥ ಬಡಾಯಿ ಕೇಳಿಬರುತ್ತಿದೆ. ಈ ಕುರಿತಾಗಿ ಉ.ಪ್ರ.ದ ರಾಜ್ಯಪಾಲೆ ವೆಬ್ ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣ ಮಾಡಿದರು. ಇದರಲ್ಲಿ ನಮ್ಮನ್ನು ಚಿಂತೆಗೆ ದೂಡುವ ವಿಚಾರ ಅಂದ್ರೆ, ನಮ್ಮ ದೇಶ ಪ್ರಾಚೀನ ಯುಗದತ್ತ ತೆವಳುತ್ತಿರುವಾಗ, ಇಂಥ ಸಮ್ಮೇಳನಗಳ ಅಗತ್ಯವಾದರೂ ಏನು? ನಿವೃತ್ತರಾದ ಜನ ರಾಜ್ಯಪಾಲರಾದ ಮೇಲೆ ಉಪದೇಶ ನೀಡಲು ಅವಕಾಶ ಸಿಗಲಿ ಅಂತೀವಿ?
ಡ್ಯಾನ್ಸ್ ಮಸ್ತಿ :
ಗ್ಲೋಬಲ್ ವಾಟರ್ ಡ್ಯಾನ್ಸ್ ಕಾಂಪಿಟೇಶನ್ ದಿನಗಳು ಮರಳುತ್ತಿವೆ, ಏಕೆಂದರೆ ವಿದೇಶಗಳಲ್ಲಿ ಈಗ ಕೋವಿಡ್ ನ ಅಪಾಯ ಬಹುತೇಕ ಮುಗಿದಿದೆ. ಸಾಗರದ ಅಲೆಗಳ ಮಧ್ಯೆ ಇಂಥ ಸಮೂಹ ನೃತ್ಯ ಸುಲಭವಲ್ಲ, ಏಕೆಂದರೆ ಯಾವಾಗ ಯಾರು ಅಲೆಗಳಲ್ಲಿ ಕೊಚ್ಚಿಹೋಗುತ್ತಾರೋ ಹೇಳಲಾಗದು…..
ಬ್ಯಾನರ್‌ಗೆ ಹೀಗೆ ವಿರೋಧವೇಕೆ? :
ಹೆಂಗಸರಿಗಿರುವ ಅವಕಾಶಗಳ ಮಾರ್ಗ ಮುಚ್ಚಿಹಾಕಲು ಅವರ ವಿರುದ್ಧ ಸತತ ಹಿಂಸೆ ನಡೆಯುತ್ತದೆ. ಕೆಲವು ದೇಶಗಳಲ್ಲಿ ಹೆಂಗಸರು ಜಾಗೃತರಾಗುತ್ತಿದ್ದಾರೆ, ಅಂಥವರ ವಿರುದ್ಧ ಹಿಂಸೆ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ಅನಂತ ಪ್ರಯತ್ನಗಳ ನಂತರ ಏನೂ ಲಾಭ ಆಗುತ್ತಿಲ್ಲ. ಕೇವಲ ಪ್ರೊಟೆಸ್ಟ್ ಬ್ಯಾನರ್ ಹಿಡಿದು ನಿಂತ ಮಾತ್ರಕ್ಕೆ ಏನೂ ಆಗಿಬಿಡುವುದಿಲ್ಲ.
ಮಾಸ್ಕ್ ಅಗತ್ಯ, ಆರು ಗಜಗಳ ಅಂತರ ಸಹ :
ಎಲ್ಲಾ ದೇಶಗಳೂ ಬೀಚ್ ಯಾ ಮಾರ್ಕೆಟಿಗೆ ಹೋಗುವವರಿಗೆ, ಸರ್ಕಾರಗಳು ನೀಡುವ ಸಲಹೆ ಎಂದರೆ, ನೀರಿಗೆ ಅಥವಾ ರೆಸ್ಟೋರೆಂಟಿಗೆ ಹೋಗಿ, ಯಾರ ಜೊತೆ ಒಂದೇ ಸೂರಿನಡಿ ವಾಸಿಸುತ್ತಿಲ್ಲವೋ ಅಂಥವರಿಂದ 6 ಗಜಗಳ ಅಂತರ ಉಳಿಸಿಕೊಂಡು, ಮಾಸ್ಕ್ ಧರಿಸಿ ಅಂತ. ಅತ್ತೆ ಸೊಸೆ ಒಂದೇ ಮನೆ ಏನು, ಒಂದೇ ಊರಿನಲ್ಲೂ ಇರೋಲ್ಲ ಅನ್ನೋದು ಗೊತ್ತಿರೋದೇ. ಹೀಗಾದಾಗ ಇವರು ಪರಸ್ಪರ ಭೇಟಿ ಆದರೆ ಮಾಸ್ಕ್ ಅಂತರ, ನೋಡ್ತಾರಾ ಜಗಳ ಕಾಯ್ತಾರಾ?
ರೋಚಕ ಕಾರ್ಯಕ್ರಮ :
ಮಾರ್ಕ್ ಕಂಪನಿಯ ಆಫ್ರಿಕಾದ ಬ್ರಾಂಚಿನ ನಾಮಿಬಿಯಾ ನಗರದಲ್ಲಿ ಮಕ್ಕಳಿಗೆ ಕಲಿಸಲೆಂದು ರೋಚಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಅಲ್ಲಿನ ರಾಷ್ಟ್ರಪತಿಯರ ಪತ್ನಿ ಮೋನಿಕಾ ಜಿಯೋನ್ಸ್ ಮಕ್ಕಳಿಗೆ ಕಥೆಗಳನ್ನು ಓದಿ ಹೇಳಿದರು! ಇದಂತೂ ಅಲ್ಲಿ ಬಹಳ ಜನಪ್ರಿಯವಾಯಿತು. ನಮ್ಮ ಮೋದೀಜಿ ಸಹ ತಮ್ಮ `ಮನ್ ಕೀ ಬಾತ್’ನಲ್ಲಿ ಇಂಥದೇ ಮಕ್ಕಳ ಕಥೆ ಹೇಳುತ್ತಿರುತ್ತಾರಲ್ಲವೇ…..?
ತಾಯಿಗೆ ಶಿಕ್ಷೆಯಾದರೆ ಮಗುವಿಗೇಕೆ ಹಿಂಸೆ? :
ಭಾರತದಲ್ಲಿ ಏನು ಕಥೆಯೋ ಏನೋ, ಆದರೆ ಅಮೆರಿಕಾದಲ್ಲಂತೂ ಬಹುತೇಕ ಮಕ್ಕಳ ತಂದೆ ಅವರನ್ನು ತೊರೆದಿದ್ದಾರೆ, ತಾಯಿ ಏನೋ ಕಾರಣಕ್ಕೆ ಜೇಲು ಸೇರಿರುತ್ತಾಳೆ. ಇಂಥ ತಾಯಂದಿರನ್ನು ಮದರ್ಸ್‌ಡೇಯಂದು ಅವರನ್ನು ಬಿಡುಗಡೆ ಮಾಡಬೇಕೆಂದು, ಅಲ್ಲಿನ ಸರ್ಕಾರೇತರ ಸಂಸ್ಥೆ ನ್ಯಾಷನಲ್ ಬೆಲ್ ಔಟ್ ಇನಿಶಿಯೇಟಿವ್ ಬಹಳ ಪ್ರಯಾಸಪಟ್ಟಿತು, ಆಗ ಆ ತಾಯಂದಿರು ಕನಿಷ್ಠ 1 ದಿನವಾದರೂ ಮಕ್ಕಳ ಜೊತೆ ಕಳೆಯಲಿ ಅಂತ. ಹಾಗೆ ನೋಡಿದರೆ, ಸಿಂಗಲ್ ಮದರ್ ಗೆ ಶಿಕ್ಷೆ ಆಗದಂಥ ಕಾನೂನು ಜಾರಿಯಾಗಬೇಕು, ಏಕೆಂದರೆ ತಾಯಿಗೆ ಶಿಕ್ಷೆಯಾದರೆ ಮಗುವಿಗೇಕೆ ಹಿಂಸೆ? ಆದರೆ ವಿಶ್ವದ ಯಾವುದೇ ದೇಶ ಇಂಥ ಉದಾರತನ ತೋರಿಲ್ಲ, ಏಕೆಂದರೆ ನಮ್ಮಲ್ಲಿ ಮಾತ್ರವಲ್ಲ, ಇಡೀ ವಿಶ್ವ ಪುರುಷ ಪ್ರಧಾನ ಸಮಾಜ ಆಗಿರುವುದರಿಂದ ಹೆಂಗಸರ ಸಂಕಟ, ಅವರಿಗೆ ಚೆಲ್ಲಾಟ!
ಈ ಸುಖ ನಮ್ಮ ದೇಶದಲ್ಲಿದೆ ? :
ಫಿನ್ ಲೆಂಡ್ ನ ಸರ್ಕಾರ ಕೋವಿಡ್ ಕಟ್ಟುಪಾಡುಗಳನ್ನು ಸಡಿಲಗೊಳಿಸಿ, ಮಾಸ್ಕ್ ರಹಿತ ಪಾರ್ಟಿ ನಡೆಸಬಹುದೆಂದು ಆದೇಶ ಹೊರಡಿಸಿದೆ. ಈಗ ಅವರು ಭಾರತದಲ್ಲಿ ಕೋವಿಡ್ ಸ್ಟ್ರೇನ್ ಡೆಲ್ಟಾ ಯಾವಾಗ ಅಲ್ಲಿ ತಲುಪುತ್ತದೋ ಅಂತ ಕಾಯುತ್ತಿದ್ದಾರೆ. ಇಡೀ ವಿಶ್ವ ಭಾರತದ ಈ ಮಹಾನ್ ಸ್ಟ್ರೇನ್ ಡೆಲ್ಟಾ ನಿಂದ ಭಯಭೀತವಾಗಿದೆ. ನಮ್ಮ ದೇಶದಲ್ಲಂತೂ ಕೊರೋನಾ ಮಹಾಮಾರಿ ರುದ್ರತಾಂಡವ ಆಡುತ್ತಿದೆ, ಸಾನೋ ತುಂಬಿರುವಾಗ ಇಂಥ ಪಾರ್ಟಿಗಳ ಸುಖವೆಲ್ಲಿ?
ಗುಡಿಗಳ ಬದಲು ಲೈಬ್ರೆರಿ ಕಟ್ಟಬಾರದೇ? :
ಮೋರಿಯಾನಾ ದ್ವೀಪದಲ್ಲಿ ನಿಮಗೆ ಬೇರೇನು ಸಿಗುತ್ತದೋ ಇಲ್ಲವೋ, ಲೈಬ್ರೆರಿಗಳು ಧಂಡಿಯಾಗಿ ಸಿಗುತ್ತವೆ. ಈ ಸಲದ ಬೇಸಿಗೆಯಲ್ಲಿ ಇವಕ್ಕೆ ಧಾರಾಳ ಸಹಾಯ ಸಿಕ್ಕಿತ್ತು. ವಿದೇಶಗಳ ಒಂದು ನಿಲುವು ಎಂದರೆ ಮುಂದಿನ ಪೀಳಿಗೆಯ ಏಳಿಗೆಗಾಗಿ ಅವರು ಹೆಚ್ಚು ಹೆಚ್ಚು ಓದುವಂತಾಗಬೇಕು ಎಂಬುದು. ನಮ್ಮಲ್ಲಿ ದಿನೇ ದಿನೇ ಗುಡಿ ಕಟ್ಟುತ್ತಿದ್ದು, ಹಳೆಯ ಕಾಲಕ್ಕೆ ಕೊಂಡೊಯ್ದರೆ, ಅಲ್ಲಿ ಲೈಬ್ರೆರಿ ಮೂಲಕ ಜ್ಞಾನ ದಾಹ ತಣಿಸಲಾಗುತ್ತದೆ. ನಮ್ಮಲ್ಲಿ ಲೈಬ್ರೆರಿಗೆ ಬೆಲೆಯೇ ಇಲ್ಲವಾಗಿದೆ.