ಯಾವುದೇ ಒಬ್ಬ ಮಹಿಳೆಯ ಬಟ್ಟೆಗಳ ಬಗ್ಗೆ, ಆಕೆಯ ರಾಜಕೀಯ ಪರ್ಯಾಯಗಳು, ಉದ್ಯೋಗ, ಮನರಂಜನೆಗಳ ಬಗ್ಗೆ ಟೀಕಿಸಲಾಗುತ್ತದೆ. ಅಂದಹಾಗೆ ಈ ಟೀಕೆ ಅವಳ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದ್ದಾಗಿರುತ್ತದೆ. ನಿನ್ನಲ್ಲಿ ಅಷ್ಟು ಬುದ್ಧಿಯಿಲ್ಲ, ನೀನು ಅಂತಹ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಮಾಜ ಬಿಂಬಿಸಲು ಪ್ರಯತ್ನಿಸುತ್ತದೆ. ನೀನು ಶತ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ ಎನ್ನುತ್ತದೆ.

ನಮ್ಮ ಸಮಾಜ ಇಬ್ಬಗೆಯ ಮಾನದಂಡದ ಚಾಂಪಿಯನ್‌ ಆಗಿದೆ. ಅದು ಒಮ್ಮೊಮ್ಮೆ ಕಪಟತನದಿಂದ ಮಹಿಳೆಯನ್ನು ಪುರುಷನ ವಶದಲ್ಲಿರುವಂತೆ ಮಾಡುತ್ತದೆ. ಇನ್ನು ಕೆಲವೊಮ್ಮೆ ಒಬ್ಬ ಬಲಿಷ್ಠ, ನಗುಮೊಗದ ಪುರುಷನನ್ನು ದುರ್ಬಲ ಹಾಗೂ ಖಿನ್ನತೆಗೆ ದೂಡುತ್ತದೆ. ಪ್ರತಿಯೊಂದು ಕೆಡುಕಿಗೆ, ಅದರಲ್ಲೂ ನೈಸರ್ಗಿಕ ದುರಂತಗಳಿಗೂ ಯಾವುದಾದರೂ ಮಹಿಳೆಯನ್ನು  ಹೊಣೆಗಾರರನ್ನಾಗಿಸುವ ಸಂಚು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವೊಂದು ಕಡೆ ಮಹಿಳೆಯನ್ನು ನಗ್ನಗೊಳಸಿ ಊರೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಮತ್ತೆ ಕೆಲವು ಕಡೆ ಅವುಗಳನ್ನು ಮಾಟಗಾತಿ ಎಂದು ಹೇಳಿ ಚಿತ್ರಹಿಂಸೆ ನೀಡಿ ಹತ್ಯೆ ಸಹ ಮಾಡಲಾಗುತ್ತದೆ.

ನೀವು ಎಂದಾದರೂ ಇಂತಹ ಕಾರಣಗಳಿಂದ ಯಾವುದಾದರೂ ಪುರುಷನಿಗೆ ಚಿತ್ರಹಿಂಸೆ ನೀಡಿದ್ದನ್ನು ಕಂಡಿದ್ದೀರಾ? ಕೇಳಿದ್ದೀರಾ? ತಪ್ಪು ಯಾರದ್ದೇ ಆಗಿರಲಿ, ಅದರ ಹೊಣೆಯನ್ನು ಮಹಿಳೆಯ ತಲೆಗೆ ಕಟ್ಟುತ್ತಿರುವುದೇಕೆ? ನಮ್ಮ ಸಮಾಜ ಲಿಂಗ ಸಮಾನತೆಯಲ್ಲಿ ಬಹಳ ಹಿಂದುಳಿದಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆಯರನ್ನು ಕೇವಲ ಮಹಿಳೆಯರೆಂದು ಭಾವಿಸದೆ, ಪುರುಷರಂತೆ ಒಬ್ಬ ವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.

ಇದೇ ಕಾರಣವೆಂಬಂತೆ ಪುರುಷರಿಗೆ ಏನೊಂದು ಹಕ್ಕು ಹಾಗೂ ಅಧಿಕಾರಗಳು ದೊರೆತಿವೆಯೋ, ಅವು ಮಹಿಳೆಯರಿಗೂ ದೊರೆತಿವೆ. ಅತ್ಯಾಚಾರ ಆದ ಬಳಿಕ ಮಹಿಳೆಯನ್ನು ಸಂತ್ರಸ್ತೆ ಎಂದು ಪರಿಗಣಿಸಲಾಗುತ್ತದೆಯೇ ವಿನಾ, ಅವಳದ್ದೇ ತಪ್ಪು ಎಂದು ಹೇಳಲಾಗುವುದಿಲ್ಲ. ನಮ್ಮ ಸಮಾಜ ಹಾಗೂ ಅದರಲ್ಲಿ ಅಡಕವಾಗಿರುವ ಧರ್ಮ ಸಾಮಾನ್ಯವಾಗಿ ಮಹಿಳೆಯನ್ನೇ ಅವಳ ಮೇಲಾಗಿರುವ ದೌರ್ಜನ್ಯಕ್ಕೆ ಹೊಣೆಯಾಗಿಸುತ್ತದೆ.

ಇದು ಸರಿಯೇ? ಖಾಪ್‌ ಪಂಚಾಯತ್‌ಗಳು, ಮುಖಂಡರು, ಊರಿನ ಮುಖ್ಯಸ್ಥರು, ಅಷ್ಟೇ ಏಕೆ ಸ್ವತಃ ಮಹಿಳೆಯರು ಮಹಿಳೆಯರನ್ನೇ `ತಪ್ಪಿತಸ್ಥೆ' ಎಂದು ಘೋಷಿಸುತ್ತಾರೆ. ಆಕೆ ಧರಿಸುವ ಬಟ್ಟೆ, ಕತ್ತಲಾದ ಬಳಿಕ ಹೊರಗೆ ಹೋಗುವುದು, ನಿರ್ಜನ ರಸ್ತೆಯಲ್ಲಿ ಸಾಗುವುದು ಇವೆಲ್ಲವನ್ನು ಅಪರಾಧಕ್ಕೆ ಕಾರಣ ಎಂದು ಗೂಬೆ ಕೂರಿಸಲಾಗುತ್ತದೆ. ಅತ್ಯಾಚಾರದಂತಹ ಘಟನೆಯ ಸಂದರ್ಭದಲ್ಲಿ ಅಪರಾಧಿಗಳ ತಪ್ಪಿನ ಜೊತೆಗೆ ಸಂತ್ರಸ್ತೆಯಿಂದಾದ ನಿರ್ಲಕ್ಷ್ಯತೆಯನ್ನು ಹುಡುಕತೊಡಗುತ್ತವೆ. ಇದು ಸರಿಯೇ? ಹುಡುಗರ ಹಾಗೆ ಹುಡುಗಿಯರಿಗೂ ಹೊರಗೆ ಹೋಗಲು, ನೌಕರಿ ಮಾಡಲು ಪಾರ್ಟಿ ಮಾಡಲು ಅಥವಾ ತಮ್ಮವರೊಂದಿಗೆ ಖುಷಿಯಿಂದಿರಲು ಅವಕಾಶ ಇರಬೇಕು. ಏಕೆಂದರೆ ಅವರೂ ಕೂಡ ಹುಡುಗರ ಹಾಗೆ ಸಮಾಜದ ಒಂದು ಭಾಗವಾಗಿದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಇಬ್ಬಗೆಯ ಮಾನದಂಡ ಅನುಸರಿಸಲಾಗುತ್ತದೆ. ಅದು ಅತ್ಯಂತ ಪುರಾತನ. ಇದು ಅತ್ಯಂತ ಆಳವಾಗಿ ಬೇರೂರಿದೆ.

ಒಂದು ಹಳೆಯ ಗಾದೆ ಮಾತಿದೆ, `ಕತ್ತಿ ಕಲ್ಲಂಗಡಿಯ ಮೇಲೆ ಬೀಳಲಿ, ಕಲ್ಲಂಗಡಿ ಕತ್ತಿಯ ಮೇಲೆ ಬೀಳಲಿ, ಕತ್ತರಿಸುವುದು ಕಲ್ಲಂಗಡಿಯೇ' ಸಾಮಾನ್ಯವಾಗಿ ಹುಡುಗಿಯರ ಸುರಕ್ಷತೆಗಾಗಿಯೂ ಇದೇ ಗಾದೆ ಅನುಸರಿಸಲಾಗುತ್ತದೆ. ಅವರ ದೃಷ್ಟಿಯಲ್ಲಿ ಜೀವಂತಿಕೆಯಿಂದ ನಳನಳಿಸುವ ಹುಡುಗಿಯರು ಹಾಗೂ ನಿರ್ಜೀವ ಕಲ್ಲಂಗಡಿಗೂ ಯಾವುದೇ ವ್ಯತ್ಯಾಸವಿಲ್ಲವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ