ಕೆಲಸ ಕಡಿಮೆ ಉಪದೇಶ ಜಾಸ್ತಿ :

ನಮ್ಮ ದೇಶದಲ್ಲಿ ಪರಿವರ್ತನೆಯಂತೂ ಸಾಧ್ಯವಿಲ್ಲದ ಮಾತು. ಆದರೆ ಬಾಯಿ ಮಾತಿನಲ್ಲಿ ಜಾಗತಿಕ ಯುಗದ ಪರಿವರ್ತನೆಯಂಥ  ಬಡಾಯಿ ಕೇಳಿಬರುತ್ತಿದೆ. ಈ ಕುರಿತಾಗಿ ಉ.ಪ್ರ.ದ ರಾಜ್ಯಪಾಲೆ ವೆಬ್‌ ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣ ಮಾಡಿದರು. ಇದರಲ್ಲಿ ನಮ್ಮನ್ನು ಚಿಂತೆಗೆ ದೂಡುವ ವಿಚಾರ ಅಂದ್ರೆ, ನಮ್ಮ ದೇಶ ಪ್ರಾಚೀನ ಯುಗದತ್ತ ತೆವಳುತ್ತಿರುವಾಗ, ಇಂಥ ಸಮ್ಮೇಳನಗಳ ಅಗತ್ಯವಾದರೂ ಏನು? ನಿವೃತ್ತರಾದ ಜನ ರಾಜ್ಯಪಾಲರಾದ ಮೇಲೆ ಉಪದೇಶ ನೀಡಲು ಅವಕಾಶ ಸಿಗಲಿ ಅಂತೀವಿ?

ಡ್ಯಾನ್ಸ್ ಮಸ್ತಿ :

GettyImages-1256558922-900x600

ಗ್ಲೋಬಲ್ ವಾಟರ್‌ ಡ್ಯಾನ್ಸ್ ಕಾಂಪಿಟೇಶನ್‌ ದಿನಗಳು ಮರಳುತ್ತಿವೆ, ಏಕೆಂದರೆ ವಿದೇಶಗಳಲ್ಲಿ ಈಗ ಕೋವಿಡ್‌ ನ ಅಪಾಯ ಬಹುತೇಕ ಮುಗಿದಿದೆ. ಸಾಗರದ ಅಲೆಗಳ ಮಧ್ಯೆ ಇಂಥ ಸಮೂಹ ನೃತ್ಯ ಸುಲಭವಲ್ಲ, ಏಕೆಂದರೆ ಯಾವಾಗ ಯಾರು ಅಲೆಗಳಲ್ಲಿ ಕೊಚ್ಚಿಹೋಗುತ್ತಾರೋ ಹೇಳಲಾಗದು.....

ಬ್ಯಾನರ್‌ಗೆ ಹೀಗೆ ವಿರೋಧವೇಕೆ? :

mom-daughters-at-beach

ಹೆಂಗಸರಿಗಿರುವ ಅವಕಾಶಗಳ ಮಾರ್ಗ ಮುಚ್ಚಿಹಾಕಲು ಅವರ ವಿರುದ್ಧ ಸತತ ಹಿಂಸೆ ನಡೆಯುತ್ತದೆ. ಕೆಲವು ದೇಶಗಳಲ್ಲಿ ಹೆಂಗಸರು ಜಾಗೃತರಾಗುತ್ತಿದ್ದಾರೆ, ಅಂಥವರ ವಿರುದ್ಧ ಹಿಂಸೆ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ಅನಂತ ಪ್ರಯತ್ನಗಳ ನಂತರ ಏನೂ ಲಾಭ ಆಗುತ್ತಿಲ್ಲ. ಕೇವಲ ಪ್ರೊಟೆಸ್ಟ್ ಬ್ಯಾನರ್‌ ಹಿಡಿದು ನಿಂತ ಮಾತ್ರಕ್ಕೆ ಏನೂ ಆಗಿಬಿಡುವುದಿಲ್ಲ.

ಮಾಸ್ಕ್ ಅಗತ್ಯ, ಆರು ಗಜಗಳ ಅಂತರ ಸಹ :

Elise_Zepeda_UN_WOMEN

ಎಲ್ಲಾ ದೇಶಗಳೂ ಬೀಚ್‌ ಯಾ ಮಾರ್ಕೆಟಿಗೆ ಹೋಗುವವರಿಗೆ, ಸರ್ಕಾರಗಳು ನೀಡುವ ಸಲಹೆ ಎಂದರೆ, ನೀರಿಗೆ ಅಥವಾ ರೆಸ್ಟೋರೆಂಟಿಗೆ ಹೋಗಿ, ಯಾರ ಜೊತೆ ಒಂದೇ ಸೂರಿನಡಿ ವಾಸಿಸುತ್ತಿಲ್ಲವೋ ಅಂಥವರಿಂದ 6 ಗಜಗಳ ಅಂತರ ಉಳಿಸಿಕೊಂಡು, ಮಾಸ್ಕ್ ಧರಿಸಿ ಅಂತ. ಅತ್ತೆ ಸೊಸೆ ಒಂದೇ ಮನೆ ಏನು, ಒಂದೇ ಊರಿನಲ್ಲೂ ಇರೋಲ್ಲ ಅನ್ನೋದು ಗೊತ್ತಿರೋದೇ. ಹೀಗಾದಾಗ ಇವರು ಪರಸ್ಪರ ಭೇಟಿ ಆದರೆ ಮಾಸ್ಕ್ ಅಂತರ, ನೋಡ್ತಾರಾ ಜಗಳ ಕಾಯ್ತಾರಾ?

ರೋಚಕ ಕಾರ್ಯಕ್ರಮ :

ThumbImg_202106051613168529

ಮಾರ್ಕ್‌ ಕಂಪನಿಯ ಆಫ್ರಿಕಾದ ಬ್ರಾಂಚಿನ ನಾಮಿಬಿಯಾ ನಗರದಲ್ಲಿ ಮಕ್ಕಳಿಗೆ ಕಲಿಸಲೆಂದು ರೋಚಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಅಲ್ಲಿನ ರಾಷ್ಟ್ರಪತಿಯರ ಪತ್ನಿ ಮೋನಿಕಾ ಜಿಯೋನ್ಸ್ ಮಕ್ಕಳಿಗೆ ಕಥೆಗಳನ್ನು ಓದಿ ಹೇಳಿದರು! ಇದಂತೂ ಅಲ್ಲಿ ಬಹಳ ಜನಪ್ರಿಯವಾಯಿತು. ನಮ್ಮ ಮೋದೀಜಿ ಸಹ ತಮ್ಮ `ಮನ್‌ ಕೀ ಬಾತ್‌'ನಲ್ಲಿ ಇಂಥದೇ ಮಕ್ಕಳ ಕಥೆ ಹೇಳುತ್ತಿರುತ್ತಾರಲ್ಲವೇ.....?

ತಾಯಿಗೆ ಶಿಕ್ಷೆಯಾದರೆ ಮಗುವಿಗೇಕೆ ಹಿಂಸೆ? :

106534

ಭಾರತದಲ್ಲಿ ಏನು ಕಥೆಯೋ ಏನೋ, ಆದರೆ ಅಮೆರಿಕಾದಲ್ಲಂತೂ ಬಹುತೇಕ ಮಕ್ಕಳ ತಂದೆ ಅವರನ್ನು ತೊರೆದಿದ್ದಾರೆ, ತಾಯಿ ಏನೋ ಕಾರಣಕ್ಕೆ ಜೇಲು ಸೇರಿರುತ್ತಾಳೆ. ಇಂಥ ತಾಯಂದಿರನ್ನು ಮದರ್ಸ್‌ಡೇಯಂದು ಅವರನ್ನು ಬಿಡುಗಡೆ ಮಾಡಬೇಕೆಂದು, ಅಲ್ಲಿನ ಸರ್ಕಾರೇತರ ಸಂಸ್ಥೆ ನ್ಯಾಷನಲ್ ಬೆಲ್ ‌ಔಟ್‌ ಇನಿಶಿಯೇಟಿವ್ ‌ಬಹಳ ಪ್ರಯಾಸಪಟ್ಟಿತು, ಆಗ ಆ ತಾಯಂದಿರು ಕನಿಷ್ಠ 1 ದಿನವಾದರೂ ಮಕ್ಕಳ ಜೊತೆ ಕಳೆಯಲಿ ಅಂತ. ಹಾಗೆ ನೋಡಿದರೆ, ಸಿಂಗಲ್ ಮದರ್‌ ಗೆ ಶಿಕ್ಷೆ ಆಗದಂಥ ಕಾನೂನು ಜಾರಿಯಾಗಬೇಕು, ಏಕೆಂದರೆ ತಾಯಿಗೆ ಶಿಕ್ಷೆಯಾದರೆ ಮಗುವಿಗೇಕೆ ಹಿಂಸೆ? ಆದರೆ ವಿಶ್ವದ ಯಾವುದೇ ದೇಶ ಇಂಥ ಉದಾರತನ ತೋರಿಲ್ಲ, ಏಕೆಂದರೆ ನಮ್ಮಲ್ಲಿ ಮಾತ್ರವಲ್ಲ, ಇಡೀ ವಿಶ್ವ ಪುರುಷ ಪ್ರಧಾನ ಸಮಾಜ ಆಗಿರುವುದರಿಂದ ಹೆಂಗಸರ ಸಂಕಟ, ಅವರಿಗೆ ಚೆಲ್ಲಾಟ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ