ಪ್ರತಿ ಹೆಣ್ಣಿಗೂ ತಾನು ಪರರಿಗಿಂತ ಅತಿ ಸುಂದರ, ವಿಭಿನ್ನ ಫ್ರೆಶ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆಗ ಎಲ್ಲರೂ ತನ್ನತ್ತ ಪ್ರಶಂಸಾಪೂರ್ವಕವಾಗಿ ನೋಡಲಿ ಎಂದು ಅವಳು ವೈಯಾರದಿಂದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾಳೆ.
ಈ ಮಳೆಗಾಲದಲ್ಲಿ ನಿಮ್ಮನ್ನು ನೀವು ರೀಫ್ರೆಶ್ ಮಾಡಿಕೊಂಡು, ನಿಮ್ಮದೇ ವಿಭಿನ್ನ ಐಡೆಂಟಿಟಿ ಕ್ರಿಯೇಟ್ ಮಾಡಿಕೊಳ್ಳಲು ಬಯಸುತ್ತೀರಾ? ಫ್ಯಾಷನ್ ತಜ್ಞರು ಈ ನಿಟ್ಟಿನಲ್ಲಿ ನೀಡಿರುವ ಸಲಹೆಗಳನ್ನು ವಿವರವಾಗಿ ಗಮನಿಸೋಣ :
ಕ್ಯಾಶುಯೆಲ್ ಲುಕ್ಸ್ ಗಾಗಿ : ಯಾವುದೇ ಪಾರ್ಟಿಗೆ ಹೋಗಬೇಕೇ? ಮೂವಿ ನೈಟ್ ಪ್ಲಾನ್ ಇದೆಯೇ ಅಥವಾ ಗೆಳತಿಯರೊಂದಿಗೆ ಕಿಟಿ ಪಾರ್ಟಿಗೆ ಹೋಗಬೇಕೇ? ನೀವು ನಿಮ್ಮದೇ ಸ್ಟೈಲ್ ಸ್ಟೇಟ್ ಮೆಂಟ್ ಮಾಡಿಕೊಳ್ಳಲು ತುಸು ಬೋಲ್ಡ್ ಟ್ರೈ ಮಾಡಿ ನೋಡಿ. ಇದಕ್ಕಾಗಿ ನೀವು ಹೊಸ ಪ್ರಿಂಟ್ಸ್, ಡಿಫರೆಂಟ್ ಆ್ಯಕ್ಸೆಸರೀಸ್, ಫ್ಯಾಬ್ರಿಕ್ಸ್ ಹಾಗೂ ಕಲರ್ಸ್ ಟ್ರೈ ಮಾಡಬಹುದು.
ಪಫ್ ಶೋಲ್ಡರ್ : ವಿಂಟೇಜ್ ಪಫ್ ಶೋಲ್ಡರ್ ಮತ್ತೆ ಟ್ರೆಂಡ್‌ಗೆ ಬಂದಿದೆ. ಟಾಪ್ ಡ್ರೆಸ್‌ಬ್ಲೌಸ್ ಇತ್ಯಾದಿಗಳಲ್ಲಿ ಪಫ್ಡ್ ಸ್ಲೀವ್ ಟ್ರೈ ಮಾಡಿ ಯಾವುದೇ ಪಾರ್ಟಿಯಲ್ಲಿ ಪಫ್ಡ್ ಸ್ಲೀವ್ ಇರುವ ಬ್ಲ್ಯಾಕ್ ಪೆನ್ಸಿಲ್ ಡ್ರೆಸ್ ಧರಿಸಿ ನೋಡಿ, ನೀವು ಖಂಡಿತಾ ಅಂದಿನ ಪಾರ್ಟಿಯ ಆಕರ್ಷಣೆಯ ಕೇಂದ್ರಬಿಂದು ಆಗಿರುತ್ತೀರಿ. ನೀವು ಕೂಲ್ ಗರ್ಲ್ ಲುಕ್ಸ್ ಹೊಂದಬೇಕೇ? ಓವರ್ ಸೈಡ ಶೋಲ್ಡರ್‌ವುಳ್ಳ ಲಾಂಗ್ ಶರ್ಟ್ ಆ್ಯಂಕಲ್ ಲೆಂಥ್ ಬೂಟ್ ಜೊತೆ ಧರಿಸಿ, ಪರ್ಫೆಕ್ಟ್ ಕೂಲ್ ಲುಕ್ಸ್ ಪಡೆಯಿರಿ.
ಫ್ಯಾಷನ್ನಿನ ಫಂಡಾ ಬ್ರೀಝಿ ಲೈಟ್ ಡ್ರೆಸ್, ಸ್ಟ್ರಿಫಿ ಸ್ಯಾಂಡ್, ಸಿಲ್ಕಿ ಮಿನಿ ಸ್ಕರ್ಟ್, ಸ್ಮೋಕ್ಡ್ ಟಾಪ್, ಚೆಕ್ಡ್ ಪ್ಯಾಂಟ್ ಮತ್ತು ಅಸಿಮೆಟ್ರಿಕ್ ನೆಕ್ ಲೈನ್ಸ್ ಇತ್ತೀಚೆಗೆ ಹೆಚ್ಚು ಫ್ಯಾಷನ್ನಿನಲ್ಲಿದೆ. ವಿಂಗ್ಸ್/ಫರ್ ವುಳ್ಳ ಡ್ರೆಸೆಸ್ ಮತ್ತೆ ಚಾಲ್ತಿಯಲ್ಲಿದೆ. ಲೈಲಾಕ್ ಫ್ಯಾಷನ್‌ನಲ್ಲಿದೆ ಹಾಗೂ ರೆಡ್‌ಪಿಂಕ್ ಕಾಂಬಿನೇಶನ್‌ನ್ನು ಎಲ್ಲರೂ ಅಧಿಕ ಫಾಲೋ ಮಾಡುತ್ತಿದ್ದಾರೆ.
ಲೈಟ್ ಟ್ಯಾಂಕ್ ಟಾಪ್ : ಒಂದು ಉತ್ತಮ ಫಿಟ್ಟಿಂಗ್‌ವುಳ್ಳ ಬಿಳಿಯ ಟ್ಯಾಂಕ್ ಟಾಪ್, ಅಗಲ ಬಾಟಂವುಳ್ಳ ಪ್ಯಾಂಟ್, ಪ್ಲಾಜೋ ಯಾವ ಜೀನ್ಸ್, ಸಿಲರ್ ಪ್ಯಾಂಟ್ ಯಾ ಜೋಧ್ ಪುರಿ ಪಾಜಾಮಾ ಜೊತೆ ಧರಿಸಿರಿ ಮತ್ತು ಒಂದು ಪ್ರಿಂಟೆಡ್ ಸ್ಕಾರ್ಫ್ ನಿಂದ ಕೂದಲಿಗೆ ಮೆಸಿ ಅಪ್ ಡೂ ಲುಕ್ಸ್ ನೀಡಿ, ನೀವು ಪರ್ಫೆಕ್ಟ್ ಲೇಡಿ ಲುಕ್ಸ್ ಗಳಿಸಬಹುದು.
ಪ್ರೊಫೆಶನ್ ಲುಕ್ಸ್ ಗಾಗಿ : ನಾವು ಫ್ಯಾಷನ್ ಜೊತೆ ಆಡುತ್ತಾ, ಸ್ಟೈಲ್ ನ್ನು ನಮ್ಮ ಆಫೀಸ್ ಔಟ್ ಫಿಟ್ಸ್ ಜೊತೆ ಫಿಟ್ ಮಾಡಬೇಕಿದೆ. ಆಫೀಸ್ ಫ್ಯಾಷನ್ನಿನಲ್ಲಿ ಒಂದು ಸಮತೋಲನ ಹಾಗೂ ಸರಳತೆ ಬೆರೆತ ಗ್ಲಾಮರ್‌ನ ಅಗತ್ಯವಿದೆ. ಹೀಗಾಗಿ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಬಾಟಮ್ ವುಳ್ಳ ಡ್ರೆಸ್ ಕೋಡ್ ಪ್ರಿಫರ್ ಮಾಡುತ್ತಿವೆ. ನೀವು ಇದರಲ್ಲೂ ಸ್ಟೈಲ್ ಫ್ಯಾಷನ್ ಸಂಗಮವನ್ನು ಕಂಡುಕೊಳ್ಳಬಹುದು.
ಫಾರ್ಮ್ ಡ್ರೆಸಿಂಗ್ ಗಾಗಿ ಟಿಪ್ಸ್ ಬಣ್ಣಗಳ ವಿಷಯದಲ್ಲಿ ಜಾಗೃತಿ : ಪ್ರೊಫೆಶನಲ್ ಇಮೇಜ್‌ನಲ್ಲಿ ಬಣ್ಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನ್ಯೂಟ್ರಲ್ ಕಲರ್ಸ್ ಆದ ಕಪ್ಪು, ಮೆರೂನ್, ಬಿಳಿ, ನೇವಿ, ಕ್ರೀಂ, ಚಾರ್ಕೋ್, ಗ್ರೇ ಇತ್ಯಾದಿ ಬಣ್ಣಗಳಿಗೆ ಆದ್ಯತೆ ಕೊಡಿ. ಇದರಲ್ಲಿ ಬಹುತೇಕ ಬಣ್ಣಗಳು ಪ್ಯಾಂಟ್‌ಸೂಟ್, ಸ್ಕರ್ಟ್, ಶೂಸ್‌ನಲ್ಲಿ ಚೆನ್ನಾಗಿ ಕಾಣಿಸುತ್ತದೆ. ಈ ಬಣ್ಣಗಳನ್ನು ಸಾಫ್ಟ್ ಫೆಮಿನೈನ್ ಬಣ್ಣಗಳಾದ ಐಸ್ ಬ್ಲೂ, ಲೈಲಾಕ್, ಸಾಫ್ಟ್ ಪಿಂಕ್, ಐವರಿ ಜೊತೆ ಮ್ಯಾಚ್ ಆಗುವಂತೆ ನೋಡಿಕೊಳ್ಳಿ.
ಕಾಂಪ್ಲಿಕೇಟೆಡ್ ಹೇರ್ ಸ್ಟೈಲ್ ಮತ್ತು ಆ್ಯಕ್ಸೆಸರೀಸ್ ಮಿಕ್ಸ್ ಮಾಡಿ : ನೆನಪಿಡಿ, ಆ್ಯಕ್ಸೆಸರೀಸ್‌ನ ಕೊರತೆಯನ್ನು ಪ್ರಿಂಟ್ ನೀಗಿಸುತ್ತದೆ. ನಿಮ್ಮ ಲುಕ್ಸ್ ನ್ನು ಅಧಿಕ ಪ್ರೊಫೆಶನಲ್ ಆಗಿ ತೋರ್ಪಡಿಸಲು ದೊಡ್ಡ ದೊಡ್ಡ ಇಯರ್ ರಿಂಗ್ಸ್, ಹೊಳೆಯುವ ಬಣ್ಣದ ಹ್ಯಾಂಡ್ ಬ್ಯಾಗ್ ಮತ್ತು ಬ್ರೈಟ್ ಗ್ಲಾಸಸ್ ನಿಂದ ದೂರವಿರಿ. ನಿಮ್ಮ ಆ್ಯಕ್ಸೆಸರೀಸ್‌ನಲ್ಲಿ ಮಲ್ಟಿ ಕಲರ್ಸ್ ಬೇಡ. ಕೂದಲನ್ನು ಫ್ರೆಶ್‌ಬ್ರೆಡ್, ಸೈಡ್ ಜಡೆ, ಫ್ರೆಂಚ್ ರೋಲ್ ಇತ್ಯಾದಿ ಟ್ರೈ ಮಾಡಿ. ಸ್ಲೀಕ್ ಹೇರ್ ಸ್ಟೈಲ್ ಇತ್ತೀಚೆಗೆ ಫ್ಯಾಷನ್ ಎನಿಸಿದೆ. ಇದಕ್ಕಾಗಿ ಒಂದು ನೀಟಾದ ರಾಪ್ ಅರೌಂಡ್, ಪೋನಿಟೇಲ್ ಟ್ರೈ ಮಾಡಿ ನೋಡಿ.
ಸಣ್ಣ ಪ್ರಿಂಟ್ಸ್ ನೋಡಲು ಉತ್ತಮ : ನೀವು ನಿಮ್ಮ ಆಫೀಸಿನಲ್ಲಿ ಅನಾವಶ್ಯಕ ಆಕರ್ಷಣೆಯ ಕೇಂದ್ರ ಆಗಲು ಬಯಸುವುದಿಲ್ಲವಾದರೆ, ನಿಮ್ಮ ಉಡುಗೆಯ ಪ್ರಿಂಟ್ಸನ್ನು ಆದಷ್ಟೂ ಗಾಡಿ ಗಾಡಿ ಆಗಿ ಮುಖಕ್ಕೆ ರಾಚದಂತೆ ನೋಡಿಕೊಳ್ಳಿ. ಲೌಡ್ ಪ್ರಿಂಟ್ಸ್ ಬದಲು ಥಾಟ್ ಫುಲ್ ಪ್ರಿಂಟ್ಸ್ ಬೆಟರ್ ಎನಿಸುತ್ತದೆ. ಪ್ಲೇರ್ ಪ್ರಿಂಟ್ಸ್ ಫ್ಯಾಷನ್ನಿನಲ್ಲಿದೆ. ನೀವು ಬಿಳಿ ಅಥವಾ ಪಿಸ್ತಾ ಕಲರ್‌ಬೇಸ್ ಮೇಲೆ ಸಣ್ಣ ಗುಲಾಬಿಯ ಪ್ರಿಂಟ್ಸಿನ ಬ್ಲೌಸ್ ಟ್ರೈ ಮಾಡಿ ನೋಡಿ.
ಮೈಂಡ್ ಫುಲ್ ಪೇವರಿಂಗ್ : ಬಾಟಂ ಟಾಪ್ ವೇರ್ ಗಳ ಮಧ್ಯೆ ಬ್ಯಾಲೆನ್ಸ್ ಇರಬೇಕಾದದು ಅತ್ಯಗತ್ಯ. ಫ್ಲವರ್ ಪ್ರಿಂಟ್ಸ್/ ಹಾರ್ಟ್ ಪ್ರಿಂಟ್ಸ್ ವುಳ್ಳ ಬ್ಲೌಸನ್ನು ಸಾಂಪ್ರದಾಯಿಕ ಬಾಟಂ ವೇರ್ ಜೊತೆ ಧರಿಸಿರಿ.
ಪ್ಲಾಜೋ ಪ್ಯಾಂಟ್ : ನಿಮ್ಮ ಪರ್ಸನಾಲಿಟಿ ಆಕರ್ಷಕ ಹಾಗೂ ಆರಾಮದಾಯಕ ಎನಿಸಬೇಕಿದ್ದರೆ, ನಿಮ್ಮ ವಾರ್ಡ್ ರೋಬಿನಲ್ಲಿ ಪ್ಲಾಜೋ ಪ್ಯಾಂಟ್ ಅಗತ್ಯ ಇರಲೇಬೇಕು. ಇದು ಆರಾಮ ನೀಡುವುದು ಮಾತ್ರವಲ್ಲದೆ, ಟ್ರೆಂಡಿ ಆಗಿರುವುದರಿಂದ ಹೆಚ್ಚು ಜನ ಇಷ್ಟಪಡುತ್ತಾರೆ. ಕ್ಯಾಶುಯೆಲ್ ಅಥವಾ ಸಾಂಪ್ರದಾಯಿಕ ಇರಲಿ, ಪ್ಲಾಜೋ ಪ್ಯಾಂಟ್ ಎಲ್ಲಾ ಸಂದರ್ಭಗಳಿಗೂ ಸೂಕ್ತ. ಸಾಂಪ್ರದಾಯಿಕ ಲುಕ್ಸ್ ಗಳಿಸಲು, ಆಕರ್ಷಕ ಪ್ಲಾಜೋ ಜೊತೆ ಸುಂದರ ಕುರ್ತಿ ಇರಲಿ ಹಾಗೂ ಆಧುನಿಕ ರೂಪಕ್ಕಾಗಿ ಸಾದಾ ಬಿಳಿ ಯಾ ಕಲರ್ ಫುಲ್ ಟಾಪ್ ಜೊತೆ ಪ್ಲಾಜೋ ಧರಿಸಿರಿ.
ಮ್ಯಾಕ್ಸಿ ಡ್ರೆಸ್ : ಅಲ್ಟ್ರಾ ಕಂಫರ್ಟೆಬಲ್ ಸೆಕ್ಸೀ ಮ್ಯಾಕ್ಸಿ ಡ್ರೆಸ್ ಎಲ್ಲಾ ಋತುವಿನಲ್ಲೂ ಸ್ಟೈಲಿಶ್ ಲುಕ್ಸ್ ನೀಡುತ್ತವೆ. ನಿಮ್ಮ ದೇಹದ ರಚನೆಯ ಪ್ರಕಾರ ಸರಿಯಾದ ಮ್ಯಾಕ್ಸಿ ಡ್ರೆಸ್ ಆರಿಸಿ. ಒಂದು ಲಾಂಗ್ ಮ್ಯಾಕ್ಸಿ ಡ್ರೆಸ್ ಬೀಚ್ ಸೈಡಿನಲ್ಲಿ ಸುತ್ತಾಡಲು ಸರಿ ಎನಿಸುತ್ತದೆ. ನಿಮ್ಮ ಮ್ಯಾಕ್ಸಿ ಡ್ರೆಸ್ ಜೊತೆ ಸೂಕ್ತ ಸ್ಲಿಂಗ್ ಬ್ಯಾಗ್, ಸನೀಸ್‌ಫ್ಲ್ಯಾಟ್ಸ್ ಜೊತೆ ಸ್ಟೈಲಿಶ್ ಆಗಿ ಮೆರೆಯಿರಿ ಯಾವ ಡ್ರೆಸನ್ನು ಲೈಟ್ ಸ್ನೀಕರ್ಸ ಜೊತೆ ಹೊಂದಿಸಿ. ಹೊರಗೆ ಸುತ್ತಾಡಲು ತಯಾರಾಗಿ.
ಶಾರ್ಟ್ಸ್ : ನೀವು ಶಾರ್ಟ್ಸ್ ಧರಿಸುವುದಿಲ್ಲವಾದರೆ ನಿಮ್ಮ ಫ್ಯಾಷನ್ ಅಪೂರ್ಣ ಎಂದು ತಿಳಿಯಿರಿ. ಇದನ್ನು ಒಂದು ಕೂಲ್ ಫಂಕಿ ಟೀ ಶರ್ಟ್ ಯಾ ಸ್ನೀಝಿ ಅಸಿಮೆಟ್ರಿಕ್ ಕ್ರಾಪ್ ಟಾಪ್ ಜೊತೆ ಧರಿಸಿರಿ, ಆಗ ನಿಮಗೆ ಹೊಸ ಲುಕ್ಸ್ ಸಿಗುತ್ತದೆ. ಆ್ಯಕ್ಸೆಸರೀಸ್‌ಚಂಕೀ ಸ್ನೀಕರ್ಸ್ ಜೋಡಿ ಜೊತೆ ಕೂಲ್ ಫ್ಯಾಷನಿಸ್ಟಾ ಆಗಿ ಬದಲಾಗಿ.
ಜಂಪ್ ಸೂಟ್ಸ್ ಪ್ಲೇ ಸೂಟ್ಸ್ : ನೀವು ನಿಮ್ಮ ಕಲೆಕ್ಷನ್ನಿನಲ್ಲಿ ಈ ಫ್ಯಾಷನೆಬಲ್ ಡ್ರೆಸೆಸ್ ಅಗತ್ಯ ಇರಿಸಿಕೊಳ್ಳಬೇಕು. ಜಂಪ್ ಸೂಟ್ಸ್ ಪ್ಲೇ ಸೂಟ್ಸ್ ನಿಮಗೆ ಆಫ್ ಶೋಲ್ಡರ್ ಲುಕ್ಸ್, ಹಾಲ್ಟರ್ ನೆಕ್ ಪ್ಯಾಟರ್ನ್ ಹಾಗೂ ಕೋಲ್ಡ್ ಶೋಲ್ಡರ್ ಡಿಸೈನ್‌ನಂಥ ರಾಕ್ ಹಾಟ್ ಫ್ಯಾಷನ್ ಟ್ರೆಂಡ್ಸ್ ನ ಆಯ್ಕೆ ನೀಡುತ್ತದೆ.
ಕುರ್ತಿ : ಭಾರತೀಯ ಹೆಂಗಸರಲ್ಲಿ ಕುರ್ತಿ ಬಲು ಜನಪ್ರಿಯ. ಇದು ಪ್ರತಿಯೊಬ್ಬರಿಗೂ ಕಂಫರ್ಟೆಬಲ್ ಆಕರ್ಷಕ ಎನಿಸುತ್ತದೆ. ವಿಶೇಷವಾಗಿ ಸ್ಲೀವ್ ಲೆಸ್ ಕುರ್ತಿಗಳು ಸ್ಟೈಲಿಶ್ ಲುಕ್ಸ್ ನೀಡುತ್ತವೆ. ಇವನ್ನು ಪ್ಲಾಜೋ ಪ್ಯಾಂಟ್ ಯಾ ಬೇಸಿಕ್ ಲೆಗ್ಗಿಂಗ್ಸ್ ಮಾತ್ರವಲ್ಲದೆ ಜೀನ್ಸ್ ಜೊತೆ ಸಹ ಧರಿಸಬಹುದು.
ನಿಮ್ಮ ಡೇಲಿ ವೇರ್ಸ್ ನಲ್ಲಿ ಕೋಲ್ಡ್ ಶೋಲ್ಡರ್‌ಕ್ರಾಪ್ ಟಾಪ್ಸ್ ಇರಲಿ. ಯುವತಿಯರಿಗೆ ಇಂಥ ಡ್ರೆಸೆಸ್ ಬಹಳ ಇಷ್ಟ. ಇವನ್ನು ಶಾರ್ಟ್ಸ್ ಜೀನ್ಲ್ ಜೊತೆ ಪೇರ್ ಮಾಡಿ, ಕ್ಲಾಸಿ ಟ್ರೆಂಡಿ ಲುಕ್ಸ್ ಪಡೆಯಬಹುದು.
ಆಧುನಿಕ ತರುಣಿಯರಿಗೆ ಸ್ಕರ್ಟ್ಸ್ ಬಹಳ ಅಚ್ಚುಮೆಚ್ಚು, ಫ್ಯಾಷನೆಬಲ್ ಕೂಡ. ಸ್ನೀಕರ್ಸ್, ಪೆನ್ಸಿಲ್, ಪ್ಲೀಟೆಡ್ ಇತ್ಯಾದಿಯಾಗಿ ಸ್ಕರ್ಟ್ಸ್ ಲಭ್ಯ. ಇವು ಪಾರ್ಟಿಗಳಿಗೆ ಉತ್ತಮ ಲುಕ್ಸ್ ಕೊಡುತ್ತವೆ. ಫ್ರೆಂಡ್ಸ್ ಜೊತೆ ನೈಟ್ ಔಟ್‌ಗೂ ಬಹಳ ಚೆನ್ನಾಗಿರುತ್ತದೆ.
ಇತ್ತೀಚೆಗೆ ಸ್ನೀಕರ್ ಫುಟ್‌ವೇರ್ ಬಹಳ ಚಾಲ್ತಿಯಲ್ಲಿದೆ, ಇದನ್ನು ಎಲ್ಲಾ ಬಗೆಯ ಡ್ರೆಸೆಸ್ ಜೊತೆ ಧರಿಸಬಹುದು. ಹಿಂದೆಲ್ಲ ಕೇವಲ ಹೀಲ್ಸ್ ನ್ನು ಮಾತ್ರ ಕ್ಲಾಸಿ ಎನ್ನುತ್ತಿದ್ದರು. ಇದೀಗ ಸ್ನೀಕರ್ಸ್, ಫ್ಲಾಟರ್ಸ್ ಸಹ ಆ ವರ್ಗ ಸೇರಿವೆ. ಇಂಥ ಸ್ಟೈಲಿಶ್ ಸ್ಯಾಂಡಲ್ಸ್ ಧರಿಸಿ ಗ್ಲಾಮರಸ್ ಎನಿಸಿರಿ. ಸ್ನೀಕರ್ಸ್‌ನ್ನು ಫುಟ್ ವೇರ್ ಆಗಿ ತೊಟ್ಟು, ಯಾವುದೇ ಡ್ರೆಸ್‌ನಲ್ಲೂ ನೀವು ಮಿಂಚಬಹುದು.
ಅಪ್ ಡೂ ಹೇರ್ ಯಾ ಸಿಂಗಲ್ ಬನ್ ನಿಮ್ಮ ಡ್ರೆಸ್ಸಿಂಗ್ ಸ್ಟೈಲನ್ನು ರೀ ಇನ್ವೆಂಟ್ ಮಾಡುವ ಟ್ರೆಂಡಿ ಹೇರ್ ಸ್ಟ್ಸೈಲ್ ಆಗಿವೆ. ಈ ಹೇರ್ ಸ್ಟ್ಸೈಲ್ ನಿಮ್ಮ ಡ್ರೆಸ್ಸಿಂಗ್ ಸ್ಟೈಲನ್ನು ರೀಫ್ರೆಶ್ ಮಾಡುವಲ್ಲಿ ಬಹಳ ಮಹತ್ವಪೂರ್ಣ ಪಾತ್ರ ವಹಿಸುತ್ತವೆ.
– ಜಿ. ಪಂಕಜಾ