ಪ್ರತಿ ಹೆಣ್ಣಿಗೂ ತಾನು ಪರರಿಗಿಂತ ಅತಿ ಸುಂದರ, ವಿಭಿನ್ನ ಫ್ರೆಶ್‌ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆಗ ಎಲ್ಲರೂ ತನ್ನತ್ತ ಪ್ರಶಂಸಾಪೂರ್ವಕವಾಗಿ ನೋಡಲಿ ಎಂದು ಅವಳು ವೈಯಾರದಿಂದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾಳೆ.

ಈ ಮಳೆಗಾಲದಲ್ಲಿ ನಿಮ್ಮನ್ನು ನೀವು ರೀಫ್ರೆಶ್‌ ಮಾಡಿಕೊಂಡು, ನಿಮ್ಮದೇ ವಿಭಿನ್ನ ಐಡೆಂಟಿಟಿ ಕ್ರಿಯೇಟ್‌ ಮಾಡಿಕೊಳ್ಳಲು ಬಯಸುತ್ತೀರಾ? ಫ್ಯಾಷನ್‌ ತಜ್ಞರು ಈ ನಿಟ್ಟಿನಲ್ಲಿ ನೀಡಿರುವ ಸಲಹೆಗಳನ್ನು ವಿವರವಾಗಿ ಗಮನಿಸೋಣ :

ಕ್ಯಾಶುಯೆಲ್ ಲುಕ್ಸ್ ಗಾಗಿ : ಯಾವುದೇ ಪಾರ್ಟಿಗೆ ಹೋಗಬೇಕೇ? ಮೂವಿ ನೈಟ್‌ ಪ್ಲಾನ್‌ ಇದೆಯೇ ಅಥವಾ ಗೆಳತಿಯರೊಂದಿಗೆ ಕಿಟಿ ಪಾರ್ಟಿಗೆ ಹೋಗಬೇಕೇ? ನೀವು ನಿಮ್ಮದೇ ಸ್ಟೈಲ್ ಸ್ಟೇಟ್‌ ಮೆಂಟ್‌ ಮಾಡಿಕೊಳ್ಳಲು ತುಸು ಬೋಲ್ಡ್ ಟ್ರೈ ಮಾಡಿ ನೋಡಿ. ಇದಕ್ಕಾಗಿ ನೀವು ಹೊಸ ಪ್ರಿಂಟ್ಸ್, ಡಿಫರೆಂಟ್‌ ಆ್ಯಕ್ಸೆಸರೀಸ್‌, ಫ್ಯಾಬ್ರಿಕ್ಸ್ ಹಾಗೂ ಕಲರ್ಸ್‌ ಟ್ರೈ ಮಾಡಬಹುದು.

ಪಫ್‌ ಶೋಲ್ಡರ್‌ : ವಿಂಟೇಜ್‌ ಪಫ್‌ ಶೋಲ್ಡರ್‌ ಮತ್ತೆ ಟ್ರೆಂಡ್‌ಗೆ ಬಂದಿದೆ. ಟಾಪ್‌ ಡ್ರೆಸ್‌ಬ್ಲೌಸ್‌ ಇತ್ಯಾದಿಗಳಲ್ಲಿ ಪಫ್ಡ್ ಸ್ಲೀವ್ ‌ಟ್ರೈ ಮಾಡಿ ಯಾವುದೇ ಪಾರ್ಟಿಯಲ್ಲಿ ಪಫ್ಡ್ ಸ್ಲೀವ್ ‌ಇರುವ ಬ್ಲ್ಯಾಕ್‌ ಪೆನ್ಸಿಲ್ ‌ಡ್ರೆಸ್‌ ಧರಿಸಿ ನೋಡಿ, ನೀವು ಖಂಡಿತಾ ಅಂದಿನ ಪಾರ್ಟಿಯ ಆಕರ್ಷಣೆಯ ಕೇಂದ್ರಬಿಂದು ಆಗಿರುತ್ತೀರಿ. ನೀವು ಕೂಲ್ ‌ಗರ್ಲ್ ಲುಕ್ಸ್ ಹೊಂದಬೇಕೇ? ಓವರ್‌ ಸೈಡ ಶೋಲ್ಡರ್‌ವುಳ್ಳ ಲಾಂಗ್‌ ಶರ್ಟ್‌ ಆ್ಯಂಕಲ್ ಲೆಂಥ್‌ ಬೂಟ್‌ ಜೊತೆ ಧರಿಸಿ, ಪರ್ಫೆಕ್ಟ್ ಕೂಲ್ ಲುಕ್ಸ್ ಪಡೆಯಿರಿ.

ಫ್ಯಾಷನ್ನಿನ ಫಂಡಾ ಬ್ರೀಝಿ ಲೈಟ್‌ ಡ್ರೆಸ್‌, ಸ್ಟ್ರಿಫಿ ಸ್ಯಾಂಡ್‌, ಸಿಲ್ಕಿ ಮಿನಿ ಸ್ಕರ್ಟ್‌, ಸ್ಮೋಕ್ಡ್ ಟಾಪ್‌, ಚೆಕ್ಡ್ ಪ್ಯಾಂಟ್‌ ಮತ್ತು ಅಸಿಮೆಟ್ರಿಕ್‌ ನೆಕ್‌ ಲೈನ್ಸ್ ಇತ್ತೀಚೆಗೆ ಹೆಚ್ಚು ಫ್ಯಾಷನ್ನಿನಲ್ಲಿದೆ. ವಿಂಗ್ಸ್/ಫರ್‌ ವುಳ್ಳ ಡ್ರೆಸೆಸ್‌ ಮತ್ತೆ ಚಾಲ್ತಿಯಲ್ಲಿದೆ. ಲೈಲಾಕ್ ಫ್ಯಾಷನ್‌ನಲ್ಲಿದೆ ಹಾಗೂ ರೆಡ್‌ಪಿಂಕ್‌ ಕಾಂಬಿನೇಶನ್‌ನ್ನು ಎಲ್ಲರೂ ಅಧಿಕ ಫಾಲೋ ಮಾಡುತ್ತಿದ್ದಾರೆ.

ಲೈಟ್‌ ಟ್ಯಾಂಕ್‌ ಟಾಪ್‌ : ಒಂದು ಉತ್ತಮ ಫಿಟ್ಟಿಂಗ್‌ವುಳ್ಳ ಬಿಳಿಯ ಟ್ಯಾಂಕ್‌ ಟಾಪ್‌, ಅಗಲ ಬಾಟಂವುಳ್ಳ ಪ್ಯಾಂಟ್‌, ಪ್ಲಾಜೋ ಯಾವ ಜೀನ್ಸ್, ಸಿಲರ್‌ ಪ್ಯಾಂಟ್‌ ಯಾ ಜೋಧ್‌ ಪುರಿ ಪಾಜಾಮಾ ಜೊತೆ ಧರಿಸಿರಿ ಮತ್ತು ಒಂದು ಪ್ರಿಂಟೆಡ್‌ ಸ್ಕಾರ್ಫ್‌ ನಿಂದ ಕೂದಲಿಗೆ ಮೆಸಿ ಅಪ್‌ ಡೂ ಲುಕ್ಸ್ ನೀಡಿ, ನೀವು ಪರ್ಫೆಕ್ಟ್ ಲೇಡಿ ಲುಕ್ಸ್ ಗಳಿಸಬಹುದು.

ಪ್ರೊಫೆಶನ್‌ ಲುಕ್ಸ್ ಗಾಗಿ : ನಾವು ಫ್ಯಾಷನ್‌ ಜೊತೆ ಆಡುತ್ತಾ, ಸ್ಟೈಲ್ ನ್ನು ನಮ್ಮ ಆಫೀಸ್‌ ಔಟ್‌ ಫಿಟ್ಸ್ ಜೊತೆ ಫಿಟ್ ಮಾಡಬೇಕಿದೆ. ಆಫೀಸ್‌ ಫ್ಯಾಷನ್ನಿನಲ್ಲಿ ಒಂದು ಸಮತೋಲನ ಹಾಗೂ ಸರಳತೆ ಬೆರೆತ ಗ್ಲಾಮರ್‌ನ ಅಗತ್ಯವಿದೆ. ಹೀಗಾಗಿ ಹೆಚ್ಚು ಕಾರ್ಪೊರೇಟ್‌ ಕಂಪನಿಗಳು ಬಾಟಮ್ ವುಳ್ಳ ಡ್ರೆಸ್‌ ಕೋಡ್‌ ಪ್ರಿಫರ್‌ ಮಾಡುತ್ತಿವೆ. ನೀವು ಇದರಲ್ಲೂ ಸ್ಟೈಲ್ ಫ್ಯಾಷನ್ ಸಂಗಮವನ್ನು ಕಂಡುಕೊಳ್ಳಬಹುದು.

ಫಾರ್ಮ್‌ ಡ್ರೆಸಿಂಗ್‌ ಗಾಗಿ ಟಿಪ್ಸ್ ಬಣ್ಣಗಳ ವಿಷಯದಲ್ಲಿ ಜಾಗೃತಿ : ಪ್ರೊಫೆಶನಲ್ ಇಮೇಜ್‌ನಲ್ಲಿ ಬಣ್ಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನ್ಯೂಟ್ರಲ್ ಕಲರ್ಸ್‌ ಆದ ಕಪ್ಪು, ಮೆರೂನ್‌, ಬಿಳಿ, ನೇವಿ, ಕ್ರೀಂ, ಚಾರ್ಕೋ್‌, ಗ್ರೇ ಇತ್ಯಾದಿ ಬಣ್ಣಗಳಿಗೆ ಆದ್ಯತೆ ಕೊಡಿ. ಇದರಲ್ಲಿ ಬಹುತೇಕ ಬಣ್ಣಗಳು ಪ್ಯಾಂಟ್‌ಸೂಟ್‌, ಸ್ಕರ್ಟ್‌, ಶೂಸ್‌ನಲ್ಲಿ ಚೆನ್ನಾಗಿ ಕಾಣಿಸುತ್ತದೆ. ಈ ಬಣ್ಣಗಳನ್ನು ಸಾಫ್ಟ್ ಫೆಮಿನೈನ್‌ ಬಣ್ಣಗಳಾದ ಐಸ್‌ ಬ್ಲೂ, ಲೈಲಾಕ್‌, ಸಾಫ್ಟ್ ಪಿಂಕ್‌, ಐವರಿ ಜೊತೆ ಮ್ಯಾಚ್‌ ಆಗುವಂತೆ ನೋಡಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ