ಕರೀನಾ ಕೇಳಿದಳು 12 ಕೋಟಿ!

ಕರೀನಾಳ ಫ್ಯಾನ್‌ ಫಾಲೋಯರ್ಸ್‌ಗೆ ಏನೂ ಕೊರತೆ ಇಲ್ಲ. ಆದರೆ ಅವಳು ತನ್ನ ಮುಂದಿನ ಚಿತ್ರಕ್ಕಾಗಿ 12 ಕೋಟಿ ಡಿಮ್ಯಾಂಡ್‌ಮುಂದಿಟ್ಟಾಗ, ಅವಳನ್ನು ಟೀಕಿಸುವ ಟ್ರೋಲಿಗರ ದಂಡೆ ಬೆಳೆಯಿತು. ಇಂದಿನ ಆಧುನಿಕ ಯುಗದಲ್ಲಿ `ದೇವಿ ಸೀತಾ’ ಎಂಬ ಪೌರಾಣಿಕ ಚಿತ್ರಕ್ಕೆ ಅವಳಿಗೆ ಸೀತೆಯ ಪಾತ್ರ ದೊರೆತಾಗ, ಹೀಗೆ ಸಂಭಾವನೆ ಕೇಳಿದಳಂತೆ. `ನನ್ನ ಸಂಭಾವನೆ ಇಷ್ಟು ಅಂತ ಹೇಳಿದ್ದೇನೆ, ಒಪ್ಪುವುದು ಬಿಡುವುದು ನಿರ್ಮಾಪಕರಿಗೆ ಬಿಟ್ಟಿದ್ದು,’ ಎಂದು ಖಡಾಖಂಡಿತವಾಗಿ ಉತ್ತರಿಸಿದ್ದಾಳೆ. ಇದೀಗ ಬಂದ ಸುದ್ದಿ  ಆ ಪಾತ್ರ ಈಗ ಕಂಗನಾಳ ಪಾಲಾಗಿದೆಯಂತೆ!

ವಿಶಿಷ್ಟ ನಟಿಗೆ ಸಂದ ವಿಶೇಷ ಗೌರವ

Khas-Bandi-Ko-Khas-Jagah

`ಆರ್ಮ್ಯಾಕ್ಸ್ ಸ್ಟಾರ್ಸ್‌ ಇಂಡಿಯಾ ಲವ್ಸ್’ ಸಂಸ್ಥೆಯ ಸೂಚನೆ ಪ್ರಕಾರ ನಟಿ ಕಿಯಾರಾ ಆಡ್ವಾಣಿ ವಿಶೇಷ 4ನೇ ಸ್ಥಾನ ಗಳಿಸಿದ ನಟಿ ಎನಿಸಿದ್ದಾಳೆ. ಈ ಆಯ್ಕೆಯ ಪ್ರಕಾರ ಭಾರತದ ಅತಿ ಜನಪ್ರಿಯ ಹಾಗೂ ಅಚ್ಚುಮೆಚ್ಚಿನ ನಟಿಯರಲ್ಲಿ ಇವಳೂ ಒಬ್ಬಳೆನಿಸಿದ್ದಾಳೆ. ಈ ಪಟ್ಟಿಯಲ್ಲಿ ಇವಳೊಂದಿಗೆ ಆಲಿಯಾಭಟ್‌, ದೀಪಿಕಾ ಪಡುಕೋಣೆ, ಕತ್ರೀನಾರ ಹೆಸರೂ ಸೇರಿವೆ. `ಕಬೀರ್‌ಸಿಂಗ್‌’ ಚಿತ್ರದಿಂದ ಕಿಯಾರಾ ಸಾಕಷ್ಟು ಮನ್ನಣೆ ಗಳಿಸಿದಳು, ಇದಾದ ಮೇಲೆ ಇವಳಿಗೆ ಹಲವು ಭಾರಿ ಚಿತ್ರಗಳಲ್ಲಿ ಅವಕಾಶ ಸಿಕ್ಕಿತು.

`ಛೋರಿ’ ಚಿತ್ರದ ಪೋಸ್ಟರ್‌ ರಿಲೀಸ್‌

Chorri-Poster-Release

ಹಾರರ್‌ ಚಿತ್ರ ಪ್ರೇಮಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌! ಅಮೆರನ್‌ ಪ್ರೈಮ್ ತನ್ನ ಮುಂದಿನ OTT ಚಿತ್ರವಾಗಿ `ಛೋರಿ’ ದೆವ್ವದ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದರ ಒಂದು ಝಲಕ್‌ ವೀಕ್ಷಕರನ್ನು ದಂಗುಬಡಿಸಿದೆ! ವಿಶಾಲ್ ‌ಪರಿಯಾ ನಿರ್ದೇಶಿತ ಈ ಚಿತ್ರ ಬೆಚ್ಚಿ ಬೀಳಿಸುತ್ತದೆ. ಈ ಚಿತ್ರ ಮುಂದಿನ ದೀಪಾವಳಿ ಹೊತ್ತಿಗೆ ರಿಲೀಸ್‌ ಆಗುತ್ತೆ ಎಂದು ಭರವಸೆ ನೀಡುತ್ತಾರೆ ನಿರ್ಮಾಪಕರು. ಈ ಚಿತ್ರದ ಝಲಕ್‌ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಥಿಯೇಟರಿನಲ್ಲಿ ಈ ದೆವ್ವ ಕಂಡು ಯಾವಾಗ ಬೆಚ್ಚಿ ಬೀಳುವುದೋ ಎಂದು ಕಾಯುತ್ತಿದ್ದಾರಂತೆ!

ಅಶ್ಲೀಲ ವೆಬ್‌ ಸೀರೀಸ್‌

Ashlil-Web-Series

ಇದರ ಹೆಸರು ಕೇಳುತ್ತಲೇ ಪ್ರೇಕ್ಷಕರಿಗೆ ಮಜಾ ಎನಿಸುತ್ತದೆ, ಆದರೆ ಈ ಮಹಾಶಯನ ವಿಷಯವೇ ಬೇರೆ. ಈತನಿಗೆ ಈ ಸೀರೀಸ್ ನಲ್ಲಿ ಪಾತ್ರ ವಹಿಸುವ ಒಂದು ಅವಕಾಶ ಸಿಕ್ಕಿತು, ಆದರೆ ಆತ ಸಾರಾಸಗಟಾಗಿ ಅದನ್ನು ತಿರಸ್ಕರಿಸುವುದೇ? ಹೌದು, ನಾವಿಲ್ಲಿ ಹೇಳುತ್ತಿರುವುದು ಮಹಾಭಾರತದ ಭೀಷ್ಮ ಪಿತಾಮಹ, ಮುಖೇಶ್‌ ಖನ್ನಾ ಕುರಿತು. OTT ಸೀರೀಸ್‌ ನಲ್ಲಿ ಈತನಿಗೆ ಇಂಥ ಅವಕಾಶ ದೊರೆತಾಗ, ಕಿರುತೆರೆಯಲ್ಲಿ ಭೀಷ್ಮನಂಥ ಆದರ್ಶ ಪಾತ್ರ ವಹಿಸಿ, ಇದೀಗ ಇಂಥ ಕೆಳಮಟ್ಟದ ಪಾತ್ರ ವಹಿಸಿಯೇ ಎಂದು ನಿರಾಕರಿಸಿದನಂತೆ. ಯಾವ ಪಾತ್ರ ಆದರೇನು…. ಕೊರೋನಾ ಕಾಲದಲ್ಲಿ ಆದಾಯ ಕಳೆದುಕೊಳ್ಳಬಾರದು ಎನ್ನುತ್ತಿದ್ದಾರೆ ಬಾಲಿವುಡ್‌ ಮಂದಿ. ಇದನ್ನು ಈತ ತನ್ನ `ಮುಖೇಶ್‌ ಖನ್ನಾ ಶೋ’ನಲ್ಲಿ ಹೇಳಿಕೊಂಡಿದ್ದಾನೆ, ಜೊತೆಗೆ ಕರಣ್‌ ವೀರ್‌ ಲೋಹ್ರಾ ಕೂಡಾ ಇರುತ್ತಾನೆ.

ಅಜಯ್‌ ದೇವ‌ಗನ್‌ನ ಮೆಗಾ ಪ್ರಾಜೆಕ್ಟ್

Ajay-Devgan-Ka-Megaproject

ಅಜಯ್‌ಎಂಥ ಉತ್ತಮ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ, ಈತನ ಫ್ಯಾನ್‌ ಫಾಲೋಯರ್ಸ್‌ಗೆ ಏನೂ ಕಡಿಮೆ ಇಲ್ಲ. ಈ ಕೊರೋನಾ ಕಾಲದಲ್ಲೂ ಈತ ಬಿಝಿ ಆಗಿರುವುದೇ ಈತನ ಜನಪ್ರಿಯತೆಗೆ ಸಾಕ್ಷಿ, ಅಂಥ ಮೆಗಾ ಪ್ರಾಜೆಕ್ಟ್ ಗೆ ಕೈಹಾಕಿದ್ದಾನೆ. ಹೌದು, ಈತ ಇದೀಗ 400 ಕೋಟಿಗೂ ಅಧಿಕ ಭಾರಿ ಭರ್ಜರಿ ಬಜೆಟ್‌ನ ಚಿತ್ರ ತಯಾರಿಸುತ್ತಿದ್ದಾನೆ. ಇದು ಈತನ ಬಹುದಿನಗಳ ಕನಸಂತೆ! ಹಲವು ವರ್ಷಗಳಿಂದ ಈ ವಿಷಯದ ರೂಪು ರೇಷೆ ನಡೆಯುತ್ತಿತ್ತು, ಇದೀಗ ಚಿತ್ರಕಥೆಯಾಗಿ ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಿದೆಯಂತೆ. ಈ ಚಿತ್ರ 100% ಎಮೋಷನ್‌(ಬಾಹುಬಲಿ ತರಹ) ಆಧಾರಿತವಂತೆ…. ಆಲ್ ದಿ ಬೆಸ್ಟ್ ಅಜಯ್!

ಧೂಳೆಬ್ಬೆಸಿದ ರಿಹಾನಾ

Rihana_Ne_Machaya_Tofan

ಬಾಲಿವುಡ್‌ ಸಿಂಗರ್‌ ರಿಹಾನಾ FB‌ನಲ್ಲಿ ಧೂಳೆಬ್ಬೆಸಿದ್ದಾಳೆ ಎಂದೇ ಹೇಳಬೇಕು. ಅಸಲಿ ವಿಷಯ ಎಂದರೆ, ಇವಳು ತನ್ನ ಪ್ಯಾಂಟಿ ಬ್ರಾಂಡಿನ ಹೊಸ ಸಂಗ್ರಹ ಲಾಂಚ್‌ ಮಾಡಿದ್ದಾಳೆ. ಇದರಲ್ಲಿ ಇವಳು ಪರ್ಪಲ್ ಬಿಕಿನಿ ಧರಿಸಿ ಫೋಟೋ ಶೂಟ್‌ ಮಾಡಿಸಿದ್ದಾಳೆ. ಈ ಸೆಕ್ಸೀ ಅವತಾರದಲ್ಲಿ ಇವಳನ್ನು ಕಂಡು FB ‌ಫಾಲೋಯರ್ಸ್‌ ಹುಚ್ಚೆದ್ದು ಕುಣಿದಿದ್ದಾರೆ. ಮುಖ್ಯ ವಿಷಯ, ಇವಳ ಸೆಕ್ಸೀ ಬ್ರಾದ ಲೇಸಿನಲ್ಲಿ `ಬೈಟ್‌’ ಎಂದು ಬರೆಸಿದ್ದಾಳೆ, ಇದನ್ನು ಕಂಡು FB ‌ಪಡ್ಡೆಗಳ ಸ್ಥಿತಿ ಹೆಂಡ ಕುಡಿದ ಮಂಗ ಅಲ್ಲದೆ ಮತ್ತೇ ಏನಾಗಿರಬೇಡ…..?

ಮಲ್ಲಿಕಾ ಜ್ಯೂವೆಲರಿ ಕಳ್ಳಿಯೇ?

Mallika-Ne-Churai-Jewelery

ಇದುವರೆಗಿನ ಮಲ್ಲಿಕಾಳ ಚಿತ್ರಗಳಲ್ಲಿ ಅವಳ ಬೋಲ್ಡ್ ಸೀನ್ಸ್ ಕಂಡು ನೀವು ಬೆಚ್ಚಿ ಬಿದ್ದಿರಬಹುದು. ಆದರೆ ಈ ಮಲ್ಲಿಕಾ ಶೆರಾವತ್ ತನ್ನ ಫಿಲ್ಮಿ ಕೆರಿಯರ್‌ಆರಂಭಿಸುವ ಮೊದಲು, ಮನೆ ಬಿಟ್ಟು ಮುಂಬೈಗೆ ಓಡಿ ಬಂದಿದ್ದಳಂತೆ. ಮುಂಬೈನಲ್ಲಿ ಬದುಕುಳಿಯಲು ಮನೆಯಿಂದ ಕದ್ದು ತಂದಿದ್ದ ಒಡವೆಗಳನ್ನೆಲ್ಲಾ ಮಾರಿಕೊಂಡಿದ್ದಳಂತೆ! ಇದನ್ನು ಸ್ವತಃ ಇವಳೇ ವೆಬ್‌ ಸೈಟಿನ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿ ಇವಳನ್ನು ಹೊಗಳುವುದೋ, ಶಭಾಷ್‌ ಎನ್ನುವುದೋ, ರೀಲ್ ‌ಮಾತ್ರವಲ್ಲದೆ ರಿಯಲ್ ನಲ್ಲೂ ನೀನು ಮಹಾ ಬೋಲ್ಡ್ ಎನ್ನುವುದೋ ತಿಳಿಯುತ್ತಿಲ್ಲ!

ಬ್ಯೂಟಿ ಕ್ವೀನ್‌ಳ ಕೆಂಪು ಸೀರೆ

Beauty-Queen-Ki-Laal-Sari

ಹರಿಯಾಣಾ ರಾಜ್ಯದ ಸೆಲೆಬ್ರಿಟಿ ಸೋನಾಲಿ ಪೋಗಟ್‌ ಳನ್ನು ಯಾರು ಮರೆಯಲು ಸಾಧ್ಯ? FB ‌ನಲ್ಲಂತೂ ಇವಳ ಡ್ಯಾನ್ಸ್ ಎಲ್ಲರ ನಿದ್ದೆ ಕೆಡಿಸಿದೆ! ಇತ್ತೀಚೆಗಂತೂ FB ‌ನಲ್ಲಿ ಇವಳ ಡ್ಯಾನ್ಸ್ ವಿಡಿಯೋಸ್‌ ಹಾಟ್‌ ಕೇಕ್‌ ಎನಿಸಿದೆ, ಅಷ್ಟು ಜನಪ್ರಿಯ. ಈ ಸಲದ ಲೇಟೆಸ್ಟ್ ವಿಡಿಯೋ ದೊಡ್ಡ ಕಮಾಲ್ ‌ಮಾಡಿದೆ. ಇವಳು ಕೆಂಪು ಬಣ್ಣದ ಸೆಕ್ಸೀ ಸೀರೆ ಉಟ್ಟು,`ಆಖಿರ್‌ ತುಮ್ಹೆ ಆನಾ ಹೀ ಪಡೇಗಾ…..’ ಹಾಡಿಗೆ ಫ್ಯಾನ್ಸ್ ಎಷ್ಟು ಮರುಳಾದರೆಂದರೆ, ಇವಳನ್ನು ನೋಡುವುದೋ ಇವಳ ಕೆಂಪು ಸೀರೆಯನ್ನೋ ಎಂದು ತಬ್ಬಿಬ್ಬಾದರಂತೆ! ಫ್ಯಾನ್ಸ್ ಇವಳಿಂದ ದೃಷ್ಟಿ ಕೀಳಲಾಗಲಿಲ್ಲ. ಹೀಗಾಗಿ ಯಾರೋ ಇವಳನ್ನು `ಬ್ಯೂಟಿ ಕ್ವೀನ್‌’ ಎಂದು ಹೊಗಳಿದ್ದಾರೆ, ಇನ್ನಾರೋ ಇಂಥ ಬ್ಯೂಟಿಗೆ ಸಾಟಿಯುಂಟೆ? ಎಂದು ಕಮೆಂಟ್‌ ಮಾಡಿದ್ದಾರೆ. ಇದಲ್ಲವೇ ಲಕ್ಕಿ ಛಾನ್ಸ್?

ಸಾರಾಳ ಹಾಟ್‌ ಫೋಟೋ ಆಯ್ತು ವೈರಲ್

Sara-Ko-Hot-Photo

ಬಲು ಕಡಿಮೆ ಸಮಯದಲ್ಲಿ ತನ್ನ ಅತ್ಯುತ್ತಮ ನಟನೆ, ಹಾವಭಾವಗಳಿಂದ ವೀಕ್ಷಕರ ಮನದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡ ಸಾರಾ ಅಲಿಖಾನ್‌, ಎಲ್ಲರಿಗೂ ಹುಚ್ಚು ಹಿಡಿಸಿದ್ದಾಳೆ. `ಕೇದಾರ್‌ ನಾಥ್‌’ ಚಿತ್ರದಲ್ಲಂತೂ ಇವಳ ನಟನೆ ಬಗ್ಗೆ ಚೂರೂ ಕೊಂಕು ಮಾತಿಲ್ಲ, ಅಷ್ಟು ಪರ್ಫೆಕ್ಟ್! FB ‌ನಲ್ಲಂತೂ ಇವಳಿಗೆ ಕೋಟ್ಯಂತರ ಫ್ಯಾನ್ಸ್! ಇವಳ ಪ್ರತಿ ಪೋಸ್ಟಿಗೂ ಕಾಯುತ್ತಿರುತ್ತಾರೆ. ಇವಳು ಆರೆಂಜ್‌ಪಿಂಕ್‌ ಬಿಕಿನಿ ಧರಿಸಿ ಮರದ ಕಾಂಡಕ್ಕೆ ಒರಗಿದಂತೆ ನೀಡಿರುವ ಪೋಸ್‌ ಕಂಡು, ಫ್ಯಾನ್ಸ್ ಹುಚ್ಚೆದ್ದು ಹೋಗಿದ್ದಾರೆ. ಅಷ್ಟು ಸಾಲದೆಂಬಂತೆ ಇದರ ಕ್ಯಾಪ್ಶನ್‌, `ನೀವು ಕೊಂಬೆ ಮಧ್ಯೆ ಹುಡುಕುತ್ತಿರುವುದು ಬುಡದಲ್ಲೇ ಇರಬಹುದು!’ ಎಂದಿರುವುದು ಎಲ್ಲರ ನಿದ್ದೆ ಕೆಡಿಸಿದೆಯಂತೆ! ಜೊತೆಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲೂ ಇದನ್ನು  ಶೇರ್‌ ಮಾಡಿದ್ದಾಳೆ. ಇವಳ ಈ ಬೆಡಗಿಗೆ ಪಡ್ಡೆಗಳು ಮನ ಸೋಲದಿರಲು ಸಾಧ್ಯವೇ?

ಬೊಂಬಾಟ್‌ ಪ್ರಕರಣ

Majedar-Kissa

ಬಾಲಿವುಡ್‌ನ ಮಹಾನಾಯಕ ಅಮಿತಾಬ್, ತಮ್ಮ ನಟನೆಯಿಂದ ಇಡೀ ವಿಶ್ವದ ತುಂಬಾ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಪ್ರಸಾರವಾಗುತ್ತಿರುವ ಸೋನಿಯ `ವೆಬ್’ ಸೀರೀಸ್‌ ನಿಂದ ಮತ್ತೆ ಎಲ್ಲೆಲ್ಲೂ ಮನೆಮಾತಾಗಿದ್ದಾರೆ. ಈ ಶೋ ಮಧ್ಯೆ `ಸಾತ್‌ ಹಿಂದೂಸ್ಥಾನಿ’ ಚಿತ್ರದ ಬಗ್ಗೆ ಪ್ರಶ್ನೆ ಬಂದಾಗ, ತಡೆದುಕೊಳ್ಳಲಾರದೆ ಅವರು ಈ ಪ್ರಕರಣದ ಬಗ್ಗೆ ತಿಳಿಸಿದರು. ಈ ಚಿತ್ರಕ್ಕಾಗಿ ನಿರ್ದೇಶಕ ಈತನ ಆಡಿಶನ್‌ ತೆಗೆದುಕೊಳ್ಳುವಾಗ, ಹೆಸರು ಕೇಳಿದರಂತೆ. ಇವರ ಸರ್‌ ನೇಮ್ ಕೇಳಿ ಬೆಚ್ಚಿಬಿದ್ದರಂತೆ. ತಕ್ಷಣ ತಂದೆಯ ಹೆಸರು ಕೇಳಿದರಂತೆ. ಇವರು ಪ್ರಸಿದ್ಧ ಕವಿ ಹರಿವಂಶರಾಯ್‌ ಬಚ್ಚನ್‌ ರ ಮಗ ಎಂದು ಗೊತ್ತಾದ ತಕ್ಷಣ, ಅದೂ ಸಿನಿಮಾಗಾಗಿ ಈತ ಮನೆ ಬಿಟ್ಟು ಓಡಿ ಬಂದಿದ್ದಾರೆ ಎಂದಾಗ, ನಿರ್ದೇಶಕರು ತಕ್ಷಣ ಇವರ ತಂದೆಗೆ ಫೋನಾಯಿಸಿದ್ದರಂತೆ! ಹಾಗೇನಿಲ್ಲ ಅನುಮತಿ ಪಡೆದೇ ಬಂದಿದ್ದಾರೆ ಎಂದಾದಾಗ ಮಾತ್ರ, `ಸಾತ್‌ ಹಿಂದೂಸ್ಥಾನಿ’ ಚಿತ್ರದಲ್ಲಿ ಪಾತ್ರ ನೀಡಿದರಂತೆ. ಈ ಬೊಂಬಾಟ್‌ ಪ್ರಕರಣವನ್ನು ನಾನೆಂದೂ ಮರೆಯಲಾರೆ ಎಂದು ತಮ್ಮ ಸಿನಿಮಾ ಕೆರಿಯರ್‌ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ ಬಿಗ್‌ ಬಿ‌.

ಸಿನಿಮಾಗಾಗಿ ತಲೆ ಬೋಳಿಸಿದಳಂತೆ!

Film-Ke-Lie-Mundwaya-Sir

ಬಾಲಿವುಡ್‌ ನಟಿಯರ ಹಗರಣ ಕೇಳಿದರೆ ಎಂಥವರೂ ತಲೆದೂಗಬೇಕು. ಚಿತ್ರದಲ್ಲಿ ಬೆಸ್ಟ್ ಎನಿಸಲು ಅವರು ಯಾವುದಕ್ಕೂ ರೆಡಿ. ಎಂಥ ಅದ್ಭುತ ಸವಾಲು ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕೆಲವು ನಟಿಯರಂತೂ ಸಿನಿಮಾಗಾಗಿ ತಲೆ ಬೋಳಿಸಿದ್ದೂ ಉಂಟು! ಅದು ಶಬಾನಾ ಆಜ್ಮಿ, ತನ್ವಿ ಆಜ್ಮಿ, ಅಂತರಾಮಾಲಿ, ಪ್ರಿಯಾಂಕಾ ಚೋಪ್ರಾ, ಶಿಲ್ಪಾ ಶೆಟ್ಟಿ, ಅನುಷ್ಕಾ ಶರ್ಮಾ….. ಯಾರೇ ಆಗಿರಬಹುದು. ದಶಕಗಳ ಹಿಂದೆ ಪ್ರೇಮಾ ಕಾರಂತ್‌ ನಿರ್ದೇಶಿಸಿದ `ಫಣಿಯಮ್ಮ’ (ಮೂಲ ಕಾದಂಬರಿ ಎಂ.ಕೆ. ಇಂದಿರಾ) ಚಿತ್ರದಲ್ಲಿ ಆ ಪಾತ್ರಕ್ಕಾಗಿ, ಇತ್ತೀಚೆಗೆ ನಿಧನರಾದ ಎಲ್.ವಿ. ಶಾರದಾ, ಅಂಥ ಸಾಹಸ ಪ್ರದರ್ಶಿಸಿ ಆ ಕಾಲಕ್ಕೇ ಸೈ ಎನಿಸಿದ್ದರು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ