ಹಬ್ಬಗಳ ಅರ್ಥವೇ ಸಾಕಷ್ಟು ಖುಷಿಪಡುವುದಾಗಿದೆ. ಸಾಕಷ್ಟು ಸಿಹಿ ಪದಾರ್ಥಗಳು ಹಾಗೂ ಇತರೆ ಆಹಾರಗಳನ್ನು ತಯಾರಿಸುವುದು ಮತ್ತು ಮನೆಯನ್ನು ಚೆಂದವಾಗಿಡುವುದಾಗಿದೆ. ಮನೆಯ ಸ್ವಚ್ಛತೆಯ ಬಗ್ಗೆ ಪ್ರಸ್ತಾಪ ಬಂದಾಗ, ಅಡುಗೆಮನೆಯನ್ನು ಸ್ವಚ್ಛವಾಗಿಡುವುದರ ಬಗ್ಗೆ ಗಮನ ಕೊಡುವುದಾಗಿದೆ. ಏಕೆಂದರೆ ಅದರಲ್ಲಿಯೇ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆ ಜೊತೆಗೆ ಹಬ್ಬದಲ್ಲಿ ಬಗೆ ಬಗೆಯ ಪಕ್ವಾನ್ನಗಳನ್ನು ತಯಾರಿಸಿ ಅತಿಥಿಗಳನ್ನು ಸ್ವಾಗತಿಸುತ್ತೇವೆ.
ಒಂದು ವೇಳೆ ನಿಮ್ಮ ಅಡುಗೆಮನೆ ಸ್ವಚ್ಛವಾಗಿರದೇ ಇದ್ದರೆ, ಸಲಕರಣೆಗಳನ್ನು ಸರಿಯಾಗಿ ಪೇರಿಸಿ ಇಡದೇ ಇದ್ದರೆ, ನಿಮಗೆ ಹಬ್ಬದ ಆನಂದದ ಅನುಭವ ಪಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಈ ಹಬ್ಬದಲ್ಲಿ ನೀವು ನಿಮ್ಮ ಅಡುಗೆಮನೆಯ ನೈರ್ಮಲ್ಯವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಹಬ್ಬಕ್ಕಾಗಿ ಹೀಗೆ ಸಜ್ಜುಗೊಳಿಸಿ. ಕೆಲವು ಸುಲಭ ಟಿಪ್ಸ್ ತಿಳಿದುಕೊಳ್ಳಿ :
ನಿಮ್ಮ ಸ್ವಚ್ಛತೆಯಿಂದ ಆರಂಭವಾಗಲಿ…..
ಅಡುಗೆಮನೆಯ ನೈರ್ಮಲ್ಯದ ಬಗ್ಗೆ ಯೋಚಿಸುವ ಮೊದಲು ನೀವು ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತದೆ. ಏಕೆಂದರೆ ಪ್ರತಿದಿನ ಮನೆ ಹಾಗೂ ಹೊರಗಿನ ಕೆಲಸ ಮಾಡುತ್ತ ಯಾವಾಗ ನಾವು ರೋಗಾಣುಗಳ ಸಂಪರ್ಕಕ್ಕೆ ಬರುತ್ತೇವೋ ಗೊತ್ತೇ ಆಗುವುದಿಲ್ಲ. ಅವು ನಮ್ಮ ಕಣ್ಣಿಗೆ ಗೋಚರಿಸದ ಕಾರಣ, ನಮ್ಮ ಕೈಗಳು ಸ್ವಚ್ಛವಾಗಿವೆ ಎಂದು ನಾವು ಭಾವಿಸುತ್ತೇವೆ. ಆದರೆ ಅದು ಹಾಗಲ್ಲ.
ನಾವು ಯಾವುದಾದರೂ ಒಂದು ವಸ್ತುವನ್ನು ಮುಟ್ಟಿದಾಗ ಅಥವಾ ಯಾರದ್ದಾದರೂ ಕೈ ಮುಟ್ಟಿದಾಗ, ನಾವು ಪ್ರತಿಸಲ ರೋಗಾಣುಗಳು ನಮ್ಮ ಕೈಗೆ ಪ್ರವೇಶಿಸಲು ಆಮಂತ್ರಣ ಕೊಡುತ್ತೇವೆ. ಆ ಕಾರಣದಿಂದ ಇನ್‌ಫೆಕ್ಷನ್ ಹಾಗೂ ಫುಡ್ ಪಾಯಿಸನಿಂಗ್ ಆಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಅದು ಜೀವಕ್ಕೆ ಕುತ್ತು ತರಬಹುದು. ಇಂತಹ ಸ್ಥಿತಿಯಲ್ಲಿ ನಾವು ಮೇಲಿಂದ ಮೇಲೆ ನಮ್ಮ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸುತ್ತ ಇರಬೇಕು. ಹೀಗೆ ಮಾಡುವುದರಿಂದ ನಾವು ಅನಾರೋಗ್ಯ ಪೀಡಿತರಾಗುವುದು ತಪ್ಪುತ್ತದೆ ಮತ್ತು ಹಬ್ಬದ ಸಂದರ್ಭದಲ್ಲಿ ನಮ್ಮವರ ಬಗ್ಗೆ ಹೆಚ್ಚು ಗಮನಕೊಡಲು ಸಾಧ್ಯವಾಗುತ್ತದೆ.
ವಸ್ತುಗಳನ್ನು ಸರಿಯಾಗಿ ಜೋಡಿಸಿ
ನೀವು ವಾರ್ಡ್ ರೋಬ್ ನ್ನು ಅರೇಂಜ್ ಮಾಡಿ ಇಟ್ಟರೆ, ವಾರ್ಡ್ ರೋಬ್ ಸುಂದರವಾಗಿ ಕಾಣುವುದರ ಜೊತೆಗೆ, ವಸ್ತುಗಳು ಸಹ ಸುಲಭವಾಗಿ ಸಿಗುತ್ತವೆ. ಅದೇ ರೀತಿ ನೀವು ನಿಮ್ಮ ಅಡುಗೆಮನೆಯ ವಸ್ತುಗಳನ್ನು ಅರೇಂಜ್ ಮಾಡಿಡಿ. ಬಹಳಷ್ಟು ಮಹಿಳೆಯರು ಸಣ್ಣಪುಟ್ಟ ವಸ್ತುಗಳನ್ನು ಅಡುಗೆಮನೆಯಲ್ಲಿ ಅಲ್ಲಿ ಇಲ್ಲಿ ಇಡುತ್ತಾರೆ. ಹೀಗಾಗಿ ಅಡುಗೆಮನೆ ಚೆಂದವಾಗಿ ಕಾಣುವುದಿಲ್ಲ. ಅಷ್ಟೇ ಅಲ್ಲ, ವಸ್ತುಗಳು ಹಾಗೆಯೇ ಮುಕ್ತವಾಗಿ ಬಿದ್ದುಕೊಳ್ಳುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಉತ್ಪನ್ನವಾಗುವ ಸಾಧ್ಯತೆ ಹೆಚ್ಚುತ್ತದೆ. ಅಂತಹ ಸಾಮಗ್ರಿಗಳನ್ನು ಬಳಸುವುದರಿಂದ ನಾವು ರೋಗಪೀಡಿತರಾಗಬಹುದು.
ಹಬ್ಬ ಬರುವ ಸಂದರ್ಭದಲ್ಲಿ ನಿಮ್ಮ ಒಂದಿಷ್ಟು ನಿರ್ಲಕ್ಷತೆ ಹಬ್ಬದ ಉತ್ಸಾಹಕ್ಕೆ ಭಂಗವನ್ನುಂಟು ಮಾಡಬಹುದು. ಹೀಗಾಗಿ ನೀವು ಮೊದಲಿನಿಂದಲೇ ಅಡುಗೆಮನೆಯ ಯಾವುದೇ ಒಂದು ಸಾಮಗ್ರಿಯನ್ನು ಡಬ್ಬಗಳಲ್ಲಿ ಹಾಕಿಡಲು ಕಲಿಯಿರಿ. ಆದ್ದರಿಂದ ವಸ್ತುಗಳು ಸುಲಭವಾಗಿ ದೊರೆಯುತ್ತವಲ್ಲದೆ, ಅಡುಗೆಮನೆಯು ಸುಂದರವಾಗಿ ಕಾಣುತ್ತದೆ. ವಸ್ತುಗಳು ಹಾಳಾಗುವ ಟೆನ್ಷನ್ ಕೂಡ ಇರುವುದಿಲ್ಲ.
ಫುಡ್ ಕ್ಲಿಪ್ಸ್ ನಿಂದ ಲಾಕ್ ಮಾಡಿ
ನೀವು ಏನನ್ನು ಸೇವಿಸುತ್ತೀರೊ, ಅದು ಆರೋಗ್ಯವಾಗಿರುವುದರ ಜೊತೆಗೆ, ಅದು ದೀರ್ಘಕಾಲ ಫ್ರೆಶ್ ಕೂಡ ಆಗಿರಬೇಕು ಎಂದು ನೀವು ಬಯಸುತ್ತೀರಿ ಅಲ್ಲವೇ? ನಿಮ್ಮ ಚಿಕ್ಕ ಹವ್ಯಾಸ ಸ್ನ್ಯಾಕ್ಸ್ ಐಟಮ್ಸ್ ಹಾಗೂ ಬೇರೆ ವಸ್ತುಗಳನ್ನು ದೀರ್ಘ ಸಮಯದ ತನಕ ತಾಜಾ ಆಗಿಡಲು ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಕಂಡುಬರುವ ಸಂಗತಿಯೇನೆಂದರೆ, ಸ್ಟೋರೇಜ್ ಬಾಕ್ಸ್ ಇಲ್ಲದೇ ಇರುವ ಕಾರಣದಿಂದ ವಸ್ತುಗಳನ್ನು ಮುಕ್ತವಾಗಿ ಇಡುವ ಕಾರಣದಿಂದ ಅದರಲ್ಲಿ ತೇವಾಂಶ ಉಂಟಾಗಿ ರೋಗಾಣುಗಳು ತಗಲುತ್ತವೆ. ಹೀಗಾಗಿ ನೀವು ಅಡುಗೆಮನೆಯಲ್ಲಿ ಚಿಕ್ಕಪುಟ್ಟ ವಸ್ತುಗಳು ಅಂದರೆ ಮಸಾಲೆ, ಹರ್ಬ್ಸ್, ಬಿಸ್ಕತ್ತು, ಚಿಪ್ಸ್ ಬ್ಯಾಗ್‌ಗಳನ್ನು ಫುಡ್ ಕ್ಲಿಪ್ ಗಳಿಂದ ಲಾಕ್ ಮಾಡಿ ಇಡಿ. ಏಕೆಂದರೆ ಹಬ್ಬದ ಸಂದರ್ಭದಲ್ಲಿ ಈ ಫುಡ್ ಕ್ಲಿಪ್‌ಗಳು ಬಹಳ ಉಪಯೋಗಕ್ಕೆ ಬರುತ್ತವೆ. ಮನೆಯಲ್ಲಿ ಅತಿಥಿಗಳು ಹೋಗುವುದು, ಬರುವುದು ನಡೆದೇ ಇರುತ್ತದೆ. ಹೀಗಾಗಿ ವಸ್ತುಗಳನ್ನು ಮೇಲಿಂದ ಮೇಲೆ ತೆಗೆಯುವುದು ಮಾಡುವುದರಿಂದ ಅವು ಬೇಗ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚುತ್ತದೆ. ಆದರೆ ಈ ಕ್ಲಿಪ್‌ಗಳು ಪ್ಯಾಕೆಟ್‌ನಲ್ಲಿ ಗಾಳಿ ಮತ್ತು ತೇವಾಂಶ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಆಹಾರ ಪದಾರ್ಥಗಳು ಹಾಳಾಗದಿರಲು ಮತ್ತು ನಿಮ್ಮನ್ನು ರೋಗದಿಂದ ರಕ್ಷಿಸಿಕೊಳ್ಳಲು ಫುಡ್ ಕ್ಲಿಪ್ಸ್ ಗಳನ್ನು ಅವಶ್ಯವಾಗಿ ಬಳಸಿ.
ಮಲ್ಟಿ ಸ್ಪೇಸ್ ಕಂಟೇನರ್ ಬಳಕೆ
ಕೊರೋನಾ ಕಾರಣದಿಂದ ಜನರ ಮನಸ್ಸಿನಲ್ಲಿ ಈ ಸಲ ಭೀತಿ ಇದೆ. ಹೀಗಾಗಿ ಹಬ್ಬದ ಕಳೆ ಅಷ್ಟಾಗಿ ಇಲ್ಲ. ಆದರೆ ಎಲ್ಲಿಯವರೆಗೆ ಜನರು ತಮ್ಮವರನ್ನು ಭೇಟಿ ಆಗದೇ ಇರಲು ಸಾಧ್ಯ? ಕಡಿಮೆ ಜನರಾದರೂ ನಿಮ್ಮನ್ನು ಭೇಟಿ ಆಗಲು ಬಂದೇ ಬರುತ್ತಾರೆ. ಇಂತಹ ಸ್ಥಿತಿಯಲ್ಲಿ ಬೌಲ್ ನಲ್ಲಿ ಡ್ರೈ ಫ್ರೂಟ್ಸ್, ಬಿಸ್ಕತ್ತು ಹಾಗೂ ಹುರಿದಕರಿದ ಪದಾರ್ಥಗಳನ್ನು ಕೊಡುವ ಬದಲು ಹಬ್ಬಕ್ಕಿಂತ ಮುಂಚೆಯೇ ನೀವು ನಿಮ್ಮ ಅಡುಗೆಮನೆಯಲ್ಲಿ ಮಲ್ಟಿ ಬಾಕ್ಸ್ ಕಂಟೇನರ್ ಗಳಲ್ಲಿ ಸ್ನ್ಯಾಕ್ಸ್ ತುಂಬಿಸಿ ಇಡಿ. ಇದಕ್ಕಾಗಿ ನೀವು ಯಾವ ಕಂಟೇನರ್ ಗಳನ್ನು ಬಳಸಲು ಹೊರಟಿದ್ದೀರೊ, ಅದರ ಮೇಲೆ ಕವರ್ ಮಾಡುವ ಆಪ್ಶನ್ ಕೂಡ ಇಟ್ಟುಕೊಳ್ಳಿ. ಇದರಿಂದ ನೀವು ಮೇಲಿಂದ ಮೇಲೆ ಸರ್ವ್ ಮಾಡುವುದರಿಂದ ಬಚಾವ್ ಆಗುವಿರಲ್ಲದೆ, ಪದಾರ್ಥಗಳು ಹಾಳಾಗುವುದನ್ನು ತಡೆಯಬಹುದು.
ಮೈಕ್ರೋವೇವ್ ಕಡೆ ಗಮನವಿರಲಿ
ಮೈಕ್ರೋವೇವ್ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಅದರಲ್ಲಿ ಆಹಾರ ತಯಾರಿಸುವುದರಿಂದ ಹಿಡಿದು ಆಹಾರ ಬಿಸಿ ಮಾಡುವ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಹೀಗಾಗಿ ಅದು ಅಡುಗೆಮನೆಯ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಅದನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದೆ ಇದ್ದರೆ ಅದು ನಿಮ್ಮನ್ನು ರೋಗಪೀಡಿತಗೊಳಿಸಬಹುದು. ಏಕೆಂದರೆ ಮೈಕ್ರೋವೇವ್ ನಲ್ಲಿ ಆಹಾರವನ್ನು ಬಿಸಿ ಮಾಡುವಾಗ ಅಥವಾ ಆಹಾರ ಸಿಡ್ಢಪಡಿಸುವಾಗ ಅದರ ಆಸುಪಾಸು ಹಾಗೂ ಮೈಕ್ರೊವೇವ್ ಪ್ಲೇಟ್ ನಲ್ಲಿ ಆಹಾರ ಕಣಗಳು ಜಮೆಗೊಳ್ಳುವ ಕಾರಣದಿಂದ ಅಲ್ಲಿ ಬ್ಯಾಕ್ಟೀರಿಯಾ ಉತ್ಪನ್ನವಾಗುತ್ತವೆ. ಅವು ನಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತವೆ.
ಒಂದು ಸಂಶೋಧನೆಯಿಂದ ತಿಳಿದು ಬಂದ ಸಂಗತಿಯೆಂದರೆ, ಶೇ.50ರಷ್ಟು ಮೈಕ್ರೋವೇವ್ ಡೋರ್ ಗಳ ಹ್ಯಾಂಡಲ್ ಮೇಲೆ ಎಟಿಪಿಗಳ ಸಂಖ್ಯೆ 300 ಕ್ಕಿಂತ ಹೆಚ್ಚು ಕಂಡುಬಂತು. ಎಟಿಪಿ ಅಂದರೆ ಎಂಡಾನೋಸೀನ್ ಟ್ರೈ ಫಾಸ್ಛೇಟ್ ಒಂದು ಮಾಲಿಕ್ಯೂಆಗಿದ್ದು, ಅದರ ಪದರು ಎಷ್ಟೊಂದು ಕೊಳಕಾಗಿದೆ ಎಂಬುದನ್ನು ಕಂಡುಕೊಳ್ಳಲು ಮಾನದಂಡ ಎಂಬಂತೆ ಬೆಳೆಸಲಾಗುತ್ತದೆ. ಒಂದು ವೇಳೆ ಎಟಿಪಿಯ ಸಂಖ್ಯೆ 100 ರಿಂದ 300ರ ನಡುವೆ ಬಂದರೆ, ಅದನ್ನು ಬೇಗ ಬೇಗ ಸ್ವಚ್ಛಗೊಳಿಸುವ ಅವಶ್ಯಕತೆ ಉಂಟಾಗುತ್ತದೆ. ಒಂದು ವೇಳೆ 300 ಅಥವಾ ಅದಕ್ಕೂ ಹೆಚ್ಚು ಇದ್ದರೆ, ಅದರ ಪದರು ಬಹಳ ಕೊಳಕಾಗಿದೆ ಎಂದರ್ಥ.
ಈಗ ನಿಮಗೆ ಅರ್ಥ ಆಗಿರಬೇಕಲ್ಲವೇ, ಮೈಕ್ರೊವೇವ್ ನಿಮಗೆ ಸೌಲಭ್ಯ ಕೊಡುವುದರ ಜೊತೆ ಜೊತೆಗೆ, ನಿಮಗೆ ಆರೋಗ್ಯ ಸಮಸ್ಯೆ ಸಹ ತಂದೊಡ್ಡಬಹುದು. ನೀವು ಬೇಗ ಅದನ್ನು ಸ್ವಚ್ಛಗೊಳಿಸುವ ಅಭ್ಯಾಸ ಇಟ್ಟುಕೊಂಡಿರದೇ ಇದ್ದರೆ ಹೀಗಾಗಬಹುದು. ನೀವು ಮೇಕ್ರೋವೇವ್ ನಲ್ಲಿ ಆಹಾರ ತಯಾರಿಸುವ ಹಾಗೂ ಬಿಸಿ ಮಾಡುವ ಮಜವೇ ಬೇರೆ ಆಗಿರುತ್ತದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಬಹಳ ಗಡಿಬಿಡಿಯಲ್ಲಿರುವ ಕಾರಣದಿಂದ ನಿಮಗೆ ಅದರ ಅವಶ್ಯಕತೆ ಹೆಚ್ಚಾಗಿರುತ್ತದೆ.
ಸ್ಪಾಂಜ್/ಸಿಂಕ್ ಸ್ವಚ್ಛಗೊಳಿಸಿ
ಒಂದು ಚಿಕ್ಕ ಸ್ಪಾಂಜ್ ನಲ್ಲಿ 54 ಬಿಲಿಯನ್ ಬ್ಯಾಕ್ಟೀರಿಯ್ ಸೆಲ್ಸ್ ಇರುತ್ತವೆ ಎನ್ನುವುದನ್ನು ಕೇಳಿ ನೀವು ಅಚ್ಚರಿಗೊಳಗಾಗಬಹುದು. ಅದೇ ಸ್ಪಾಂಜ್ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಾಗಿ ಸ್ಪಾಂಜ್, ಅಡುಗೆಮನೆಯ ಬಟ್ಟೆಗಳನ್ನು ಮತ್ತು ಸಿಂಕ್ ನ್ನು ಬಿಸಿ ನೀರಿನಲ್ಲಿ ಡಿಶ್ ವಾಶರ್ ಹಾಕಿ ಪ್ರತಿದಿನ ಸ್ವಚ್ಛಗೊಳಿಸಿ. ಬಟ್ಟೆಗಳನ್ನು ಸ್ವಚ್ಛಗೊಳಿಸಿದ ಬಳಿಕ ಅವನ್ನು ಚೆನ್ನಾಗಿ ಒಣಗಿಸಿಯೇ ಉಪಯೋಗಿಸಿ.
ಇನ್ನು ಬೇಗ ಬೇಗ ಸ್ವಚ್ಛಗೊಳಿಸಿ
ಅಡುಗೆಮನೆಯಲ್ಲಿ ಎಂತಹ ಕೆಲವು ಜಾಗಗಳಿವೆ ಎಂದರೆ, ಅವು ಆಹಾರದ ಸಂಪರ್ಕಕ್ಕೆ ಬರುವುದಿಲ್ಲ. ಅವನ್ನು ನಾವು ಕೈಯಿಂದ ಮೇಲಿಂದ ಮೇಲೆ ಮುಟ್ಟುವುದರಿಂದ ಅವು ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬರುತ್ತವೆ. ಉದಾಹರಣೆಗೆ ಡೋರ್ ನಾಬ್ಸ್, ಹ್ಯಾಂಡಲ್ಸ್ ನಲ್ಲಿ ಫ್ರಿಜ್ ಡೋರ್ ಮುಂತಾದವು. ಇಂಥ ಕಡೆ ರೋಗಾಣುಗಳು ಹಬ್ಬುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಹೀಗಾಗಿ ನೀವು ಹ್ಯಾಂಡಲ್ ಮುಂತಾದವುಗಳನ್ನು ಮುಟ್ಟಿದ ಮೇಲೆ ಕೈಗಳನ್ನು ಬೇಗ ಬೇಗ ಸ್ವಚ್ಛಗೊಳಿಸಿಕೊಳ್ಳಿ.
ಹ್ಯಾಂಡಲ್ ಮುಂತಾದವುಗಳನ್ನು ವಾರಕ್ಕೊಮ್ಮೆ ಬ್ಲೀಚ್ ಸಲ್ಯೂಷನ್‌ನಿಂದ ಸ್ವಚ್ಛಗೊಳಿಸಿ.
ಸ್ವಚ್ಛತೆಯಿಂದ ರೋಗಾಣು ದೂರ
ಅಡುಗೆ ಮನೆಯ ಸ್ಲ್ಯಾಬ್ ಆಗಿರಬಹುದು ಸ್ಟವ್ ಇಲ್ಲವೇ ಡಸ್ಟ್ ಬಿನ್‌ನ್ನು ಚೆನ್ನಾಗಿ ಸ್ವಚ್ಛಗೊಳಿಸುವ ಅವಶ್ಯಕತೆ ಇರುತ್ತದೆ. ಸ್ಟವ್ ಮೇಲೆ ದಿನ ಆಹಾರ ಸಿದ್ಧಪಡಿಸುವ ಕಾರಣದಿಂದ ಕೊಳೆ ಜಮೆಗೊಳ್ಳುತ್ತದೆ. ಅಡುಗೆಮನೆ ಸ್ಲ್ಯಾಬ್ ಮೇಲೆ ತರಕಾರಿ ಇಡುವುದರಿಂದ ಹಿಡಿದು ರೊಟ್ಟಿ, ಚಪಾತಿ ಸಹ ಮಾಡುತ್ತೇವೆ. ಹೀಗಾಗಿ ನೀವು ಇಂತಹ ಜಾಗಗಳನ್ನು ಡಿಸ್ ಇನ್‌ಫೆಕ್ಟೆಂಟ್‌ಗಳಿಂದ ಅವಶ್ಯವಾಗಿ ಸ್ವಚ್ಛಗೊಳಿಸಿ. ಅದರಿಂದ ಬ್ಯಾಕ್ಟಿರಿಯಾ ನಿವಾರಣೆ ಆಗುವುದರ ಜೊತೆ ಜೊತೆಗೆ ಅಡುಗೆಮನೆಯೂ ಸ್ವಚ್ಛವಾಗುತ್ತದೆ.
ಇವುಗಳ ಬಗ್ಗೆ ಇರಲಿ ಗಮನ
ಚಾಪಿಂಗ್ ಬೋರ್ಡ್‌ನ್ನು ಬ್ಯಾಕ್ಟೀರಿಯಾಗಳ ಹಾಟ್ ಸ್ಪಾಟ್ ಎಂದು ಭಾವಿಸಲಾಗುತ್ತದೆ. ಅದನ್ನು ದಿನ ಸ್ವಚ್ಛಗೊಳಿಸಿ.
ಚಿಮ್ನಿಯನ್ನು 15 ದಿನಕ್ಕೊಮ್ಮೆ ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ಅದರಿಂದ ರೋಗಾಣುಗಳು ಸ್ವಚ್ಛಗೊಳ್ಳುವುದರ ಜೊತೆ ಜೊತೆಗೆ ಸ್ನಿಗ್ಧತೆ ನಿವಾರಣೆಯಾಗುತ್ತದೆ.
ಪಾತ್ರೆಗಳು ಒಣಗಿದ ಬಳಿಕವೇ ಸ್ಟಾಂಡ್ ಮೇಲೆ ಇಡಿ.
ಚಮಚದ ಸ್ಟಾಂಡ್ ನ್ನು ವಾರದಲ್ಲಿ ಒಂದು ದಿನ ಡಿಸ್ ಡಿಸ್ ಇನ್‌ಫೆಕ್ಟೆಂಟ್‌ನಿಂದ ಅವಶ್ಯವಾಗಿ ಸ್ವಚ್ಛಗೊಳಿಸಿ.
ಅಡುಗೆಮನೆಯ ನೆಲವನ್ನು ಕೂಡ ಸ್ವಚ್ಛಗೊಳಿಸಿ.
ಕೊರೋನಾದ ಕಾಲದಲ್ಲಿ ಹಬ್ಬದ ಸಂಪೂರ್ಣ ಮಜ ಪಡೆಯಲು ನೀವು ಹಾಗೂ ನಿಮ್ಮವರ ಸುರಕ್ಷತೆಯ ಬಗ್ಗೆ ವಿಶೇಷ ಗಮನ ಕೊಡು ಅವಶ್ಯಕತೆ ಇರುತ್ತದೆ. ಹೀಗಾಗಿ ನೀವು ಹೊರಗಿನಿಂದ ಯಾವುದೇ ಹಣ್ಣು ತರಕಾರಿ ತಂದರೂ ಅವನ್ನು ವೆಜ್ ವಾಶ್, ನೀರಿನಿಂದ ಸ್ವಚ್ಛಗೊಳಿಸಿಯೇ ಅಡುಗೆಮನೆಗೆ ತೆಗೆದುಕೊಂಡು ಹೋಗಿ ಹೀಗೆ ಮಾಡುವುದರಿಂದ ಸೋಂಕಿನ ಸಾಧ್ಯತೆ ಕಡಿಮೆಯಾಗುತ್ತದೆ ಹೊರಗಿನಿಂದ ತಂದ ಸಾಮಗ್ರಿಗಳನ್ನು ಒಂದು ಮೂಲೆಯಲ್ಲಿಡಿ. ಒಂದು ವೇಳೆ ಕಿಚನ್ ಸ್ಲ್ಯಾಬ್ ಮೇಲೆ ಇಟ್ಟರೆ, ಸ್ಲ್ಯಾಬ್ ಸ್ವಚ್ಛಗೊಳಿಸಲು ಮರೆಯಬೇಡಿ.
– ಸುಧಾ