ಸಮಾಜ ಇದನ್ನು ಸಹಿಸಲೇಬೇಕು :

ತಾಲಿಬಾನಿಗಳು ಆಗಸ್ಟ್ 15ಕ್ಕೆ ಆಫ್ಘಾನಿಸ್ತಾನ ಆಕ್ರಮಿಸಿದಾಗ, ಅಲ್ಲಿಂದ ಆ ಮೊದಲೇ ಜಾಗ ಬಿಟ್ಟಿದ್ದ 10-20 ಸಾವಿರ ಆಫ್ಘನ್ನರಲ್ಲಿ ಸಹಾರಾ ಕರೀಮಿ ಸಹ ಒಬ್ಬರು. ತಮ್ಮದೇ ಧರ್ಮ, ತಮ್ಮದೇ ದೇಶದ, ತಮ್ಮ ಆಡಳಿತಗಾರರ ನೆರವು ಇಲ್ಲದೆ ದಿಕ್ಕಾಪಾಲಾಗ ಬೇಕಾದ ಈ ಪರಿಸ್ಥಿತಿ ಮಾನವ ಜನಾಂಗ ತಲೆ ತಗ್ಗಿಸುವಂಥದ್ದು. ಇದು ಹೊಸತೇನಲ್ಲ. ಹೀಗಾಗಿ ಚಿತ್ರದ ನಿರ್ಮಾಪಕಿ ಸಹಾರಾ `ಫ್ಲೈಟ್‌ ಫ್ರಂ ಕಾಬೂಲ್‌’ ಕುರಿತಾಗಿ ಹಾಲಿವುಡ್‌ ನಲ್ಲಿ ಚಿತ್ರ ಶುರು ಮಾಡಿದ್ದಾರೆ. ತಾಲಿಬಾನಿಗಳ ಅಮಾನವೀಯ ಕುಕೃತ್ಯಗಳಿಗೆ ಹೆಣ್ಣು ಹೇಗೆ ಈಡಾಗಿದ್ದಾಳೆ ಎಂಬ ಈ ವಾಸ್ತವವನ್ನು ಧರ್ಮಾಂಧರು, ಕಂದಾಚಾರಿ ಸಮಾಜ ಇದನ್ನು ತೆರೆದ ಮನದಿಂದ ಸಹಿಸಲೇಬೇಕು. ಅಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಖುಷಿಯಾಗಿ, ಇತರರ ಒತ್ತಾಯಕ್ಕೆ ಮಣಿದು ಒಪ್ಪುವಂಥದ್ದನ್ನೇ ಆ ತಾಲಿಬಾನಿಗಳು ಜಬರ್ದಸ್ತಿನಿಂದ ಮಾಡುತ್ತಿದ್ದಾರೆ. ಸುಶಿಕ್ಷಿತರು ಎಂಬುದು ಬಿಟ್ಟರೆ, ಹಿಂದೂ, ಕ್ರೈಸ್ತ ಹೆಂಗಸರು ಸಹ ಗಂಡಸರಿಗೆ ಸರಿಸಮ ಅಲ್ಲ.

ಪ್ರತಿ ಸಮಾಜದಲ್ಲೂ ಗೌರವಾದರ :

GetImage

ವಿಶ್ವದ ಯಾವ ಸಮಾಜವೇ ಆಗಲಿ, ಅಲ್ಲಿನ ಶಿಕ್ಷಕರಿಗೆ ಹೆಚ್ಚಿನ ಗೌರಾವದರ ನೀಡುತ್ತದೆ, ಏಕೆಂದರೆ, ಇವರೇ ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುವವರು. ವಿವಿಧ ಕಷ್ಟಕರ ಹಂತ ದಾಟಿ ಮುಂದೆ ಹೋಗುವುದನ್ನು ಮಕ್ಕಳು ಇವರಿಂದ ಕಲಿಯುತ್ತಾರೆ. ಶಿಕ್ಷಕರು ಇಡೀ ಶಾಲೆಯ ಫಲಿತಾಂಶದ ಹೊಣೆ ಹೊರುವುದರ ಜೊತೆಗೆ, ಪೋಷಕರಿಗೆ ಮಕ್ಕಳು ಸರಿಯಾಗಿ ಕಲಿಯುತ್ತಿದ್ದಾರೆಂದೂ ಮನವರಿಕೆ ಮಾಡಿಕೊಡಬೇಕು. ನ್ಯೂಜಿಲೆಂಡ್‌ನ ಈ ಸಣ್ಣ ನಗರ ಅದ್ಧೂರಿಯಿಂದ ಟೀಚರ್ಸ್‌ ಡೇ ಆಚರಿಸಿದ ಪರಿ!

ಚಿಂದಿ ಉಡಾಯಿಸಿ ಚಮಕಾಯಿಸಿ :

MG_6869-1024x683

ಚೀನೀ ಮೂಲದ ಗಾಯಕಿ ಕೀರನ್‌ ಮೂಸ್‌, ತೈಲಾನಿನ ಒಂದು ಶೋದಲ್ಲಿ, 4 ತಿಂಗಳಿನಿಂದ ವಾರ್ಡ್‌ ರೋಬಿನಲ್ಲಿ ಸಂಗ್ರಹಿಸಿದ್ದ ವಿವಿಧ ಡ್ರೆಸ್‌ ಗಳನ್ನು ಒಂದೇ ಹಾಡಿನಲ್ಲಿ ಪ್ರದರ್ಶಿಸಿದಳು! ಮೊದಲು ಲಾಂಗ್‌ ಗೌನ್‌, ನಂತರ ಹೊಳೆಯುವ ನಕ್ಷತ್ರಗಳದ್ದು, ನಂತರ ಸೀ ಥ್ರೂ ಡ್ರೆಸ್‌. ಇವಳ ಹಾಡುಗಳಿಂದ ಸೋನಿ ಎಂಟರ್‌ ಟೇನ್‌ ಮೆಂಟ್‌ ಕಂಪನಿಯು ಚಿಂದಿ ಉಡಾಯಿಸಿ ಚಮಕಾಯಿಸುತ್ತಿದೆ!

ಮರಳಿ ನಾರ್ಮಲ್ ಬದುಕಿಗೆ :

B48I0094

ಸ್ಟೋನಿ ಬ್ರೂಸ್‌ ಯೂನಿರ್ಸಿಟಿಯ ಸಾಂಸ್ಕೃತಿಕ ವಿಭಾಗ ಈಗ ಕೋವಿಡ್‌ ಜೊತೆ ಎಂದಿನಂತೆ ಬದುಕಲು ಸಿದ್ಧವಾಗುತ್ತಿದೆ, ಲೈವ್ ‌ಪ್ರೋಗ್ರಾಂ ಒಂದಾದ ಮೇಲೆ ಒಂದು ಸಿದ್ಧವಾಗುತ್ತಿದೆ. ಶೀಲಾಳ ಪಿಯಾನೋ ಪ್ರೋಗ್ರಾಂ ಈಗಾಗಲೇ ಬುಕ್‌ ಆಗಿದೆ, ಆದರೆ ಅದು ನಡೆಯುವುದು ನವೆಂಬರ್‌ನಲ್ಲಿ. ಮಂದಿರ, ಮಸೀದಿ, ಚರ್ಚುಗಳ ಬದಲಿಗೆ ಪ್ರಯೋಗಾಲಯಗಳು ಮಾನವರನ್ನು ಮತ್ತೆ ಎಂದಿನ ನಾರ್ಮಲ್ ಜೀವನಕ್ಕೆ ಮರಳುವೆತೆ ಮಾಡಿವೆ. ಲಕ್ಷಾಂತರ ಜನ ಸತ್ತವರೆಂಬುದು ನಿಜ, ಉಳಿದವರ ಜೀವನವಂತೂ ಎಂದಿನಂತೆ ಆಗುತ್ತಿದೆ?

ಇಂಥ ಮೋಡಿಗೆ ಬೆರಗಾಗದವರಾರು? :

C7C81CB7-E14F-446D-8DAA-7D8A4DB31E17

ಪಾಪ್‌ ಮ್ಯೂಸಿಕ್‌ನಲ್ಲಿ ಲಿಟಲ್ ‌ಸ್ಮಿಜ್‌ ಅತಿ ಜನಪ್ರಿಯ ಹೆಸರು. ಇವಳ ಹಾಡು ಕೇಳಲು ಯಾರೇ ಆಗಲಿ ಲಕ್ಷಾಂತರ ಖರ್ಚು ಮಾಡಲು ಹಿಂದೇಟು ಹಾಕರು. ಇವಳ ಮ್ಯೂಸಿಕ್‌ ಆಲ್ಬಂಗಳೂ ಹಾಗೇ ಖರ್ಚಾಗುತ್ತವೆ. 2016 ರಿಂದ ಪಾಪ್‌ ಮ್ಯೂಸಿಕ್‌ನಲ್ಲಿ ಎಂಟ್ರಿ ಪಡೆದ ಈ ನೀಗ್ರೋ ಮೂಲದ ಕಪ್ಪು ಹುಡುಗಿ, ನಮ್ಮಲ್ಲಿ ತಮಾಷಾ ಮೂಲಕ ಮಹಾರಾಷ್ಟ್ರದ ಜಾನಪದ ಗೀತೆ ಜನಪ್ರಿಯ ಆಗಿರುವಂತೆ, ಅಲ್ಲಿ ಅಬ್ಬರದ ಪ್ರಚಾರ ಪಡೆಯುತ್ತಿದ್ದಾಳೆ!

ತಾಯಿಗೆ ಮಾತ್ರ ಗರ್ಭದ ಮೇಲೆ ಹಕ್ಕು :

little-simz-photo-by-nwaka-okparaeke

ಕೆಲವು ಪ್ರಕರಣಗಳಲ್ಲಿ ಅಮೆರಿಕಾ ಅತಿ ಉದಾರ ಆಗಿರುವಂತೆ, ಚರ್ಚ್‌ನ ಕಂದಾಚಾರದ ದಬ್ಬಾಳಿಕೆಯಿಂದ ಮಾತ್ರ ಹೊರಬರಲಾಗಿಲ್ಲ. ಗರ್ಭಪಾತವನ್ನು ಅದು ತನ್ನದೇ ಸಂಕುಚಿತ ದೃಷ್ಟಿಯಲ್ಲಿ ನೋಡುತ್ತದೆ. ಟೆಕ್ಸಾಸ್‌ರಾಜ್ಯದ ಕಾನೂನಿನ ಪ್ರಕಾರ, ಅಲ್ಲಿ ಗರ್ಭ ಚಿಗುರಿದೆ ಎಂದು ಖಚಿತವಾದ ಕೇವಲ 6 ವಾರಗಳಲ್ಲಿ ಮಾತ್ರ ಗರ್ಭಪಾತಕ್ಕೆ ಅವಕಾಶ, ಏಕೆಂದರೆ ಗರ್ಭ ಭಗವಂತನ ಕೃಪೆಯಂತೆ! ಗರ್ಭವತಿಯರ ಈ ಸಂಕಟದ ಕುರಿತಾಗಿ ಇಲ್ಲಿನ ಯುವಜನತೆ ಎಷ್ಟು ಕುದಿಯುತ್ತಿದ್ದಾರೆಂದರೆ, ಧರ್ಮನಿಷ್ಠರು ಅಷ್ಟೇ ಖುಷಿಯಾಗಿದ್ದಾರೆ! ಭಾರತದಲ್ಲಿ ಗರ್ಭಪಾತದ ಕಾನೂನು ಕಂದಾಚಾರದ ಕಪಿಮುಷ್ಟಿಯಲ್ಲಿಲ್ಲ ಎಂಬುದೇ ವಿಡಂಬನೆ. ಗರ್ಭಪಾತ ಮಾಡಿಸಬೇಕೋ ಬೇಡವೋ ಎಂಬುದು, ತಾಯಿ ಮತ್ತು ಅವಳ ಡಾಕ್ಟರ್‌ಪಾಲಿಗೆ ಬಿಟ್ಟದ್ದು, ಮೂರನೆಯವರು ಏಕೆ ಮೂಗು ತೂರಿಸಬೇಕು? ಸೆಕ್ಸ್ ಕುರಿತಾಗಿ ಇತರರು ಆಕ್ಷೇಪಿಸುವ ಹಾಗಿಲ್ಲ.

ಪರಿಶ್ರಮಕ್ಕೆ  ದೊರಕಿದ ಫಲ :

Shelea

ಟೋಕಿಯೋ ಒಲಿಂಪಿಕ್‌ ಕ್ರೀಡೆಗಳು ಇದೀಗ ಮುಗಿದಿವೆ, ವಿಶ್ವದ ಎಷ್ಟೋ ದೇಶಗಳು 2024ರ ಒಲಿಂಪಿಕ್‌ಗೆ ಈಗಾಗಲೇ ತಯಾರಿ ಶುರು ಮಾಡಿವೆ. ಮೆಕ್ಸಿಕೋದ ವಾಲಿಬಾಲ್ ‌ತಂಡ ಜಬರ್ದಸ್ತ್ ಅಭ್ಯಾಸ ಶುರುಮಾಡಿದೆ. ನಮ್ಮಲ್ಲೂ ಸಹ ತಯಾರಿ ನಡೆಯುತ್ತಿದೆ, ಗೌರವಾದರ ನೀಡುತ್ತಾ ಹಾರತುರಾಯಿ ನೀಡುತ್ತಾ…. ಆಟೋಟ, ಹೊಲಗದ್ದೆ, ಮರಳುಗಾಡೇ ಇರಲಿ…..ಅದರಲ್ಲಿ ಯಶಸ್ವಿ ಎನಿಸಲು ಪರಿಶ್ರಮ ಅತ್ಯಗತ್ಯ, ಕೇವಲ ಆಡಂಬರ ಇದ್ದರೆ ಸಾಲದು. ಈ ಹೊಣೆಯನ್ನು ಕೇವಲ ಬಡವರ ಹೆಗಲಿಗೇರಿಸಿರುವುದು ಎಷ್ಟು ಸರಿ? ಪದಕಗಳೇನೋ ಸಿಗುತ್ತಿವೆ, ಆದರೆ ಇವರಲ್ಲಿ ಮೆರಿಟ್‌ ಎಂದು ಬೊಬ್ಬೆ ಇಡುವ, ಧರ್ಮ ರಕ್ಷಕರಂತೂ ಇಲ್ಲವಲ್ಲ……?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ