ಸಮಾಜ ಇದನ್ನು ಸಹಿಸಲೇಬೇಕು :
ತಾಲಿಬಾನಿಗಳು ಆಗಸ್ಟ್ 15ಕ್ಕೆ ಆಫ್ಘಾನಿಸ್ತಾನ ಆಕ್ರಮಿಸಿದಾಗ, ಅಲ್ಲಿಂದ ಆ ಮೊದಲೇ ಜಾಗ ಬಿಟ್ಟಿದ್ದ 10-20 ಸಾವಿರ ಆಫ್ಘನ್ನರಲ್ಲಿ ಸಹಾರಾ ಕರೀಮಿ ಸಹ ಒಬ್ಬರು. ತಮ್ಮದೇ ಧರ್ಮ, ತಮ್ಮದೇ ದೇಶದ, ತಮ್ಮ ಆಡಳಿತಗಾರರ ನೆರವು ಇಲ್ಲದೆ ದಿಕ್ಕಾಪಾಲಾಗ ಬೇಕಾದ ಈ ಪರಿಸ್ಥಿತಿ ಮಾನವ ಜನಾಂಗ ತಲೆ ತಗ್ಗಿಸುವಂಥದ್ದು. ಇದು ಹೊಸತೇನಲ್ಲ. ಹೀಗಾಗಿ ಚಿತ್ರದ ನಿರ್ಮಾಪಕಿ ಸಹಾರಾ `ಫ್ಲೈಟ್ ಫ್ರಂ ಕಾಬೂಲ್' ಕುರಿತಾಗಿ ಹಾಲಿವುಡ್ ನಲ್ಲಿ ಚಿತ್ರ ಶುರು ಮಾಡಿದ್ದಾರೆ. ತಾಲಿಬಾನಿಗಳ ಅಮಾನವೀಯ ಕುಕೃತ್ಯಗಳಿಗೆ ಹೆಣ್ಣು ಹೇಗೆ ಈಡಾಗಿದ್ದಾಳೆ ಎಂಬ ಈ ವಾಸ್ತವವನ್ನು ಧರ್ಮಾಂಧರು, ಕಂದಾಚಾರಿ ಸಮಾಜ ಇದನ್ನು ತೆರೆದ ಮನದಿಂದ ಸಹಿಸಲೇಬೇಕು. ಅಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಖುಷಿಯಾಗಿ, ಇತರರ ಒತ್ತಾಯಕ್ಕೆ ಮಣಿದು ಒಪ್ಪುವಂಥದ್ದನ್ನೇ ಆ ತಾಲಿಬಾನಿಗಳು ಜಬರ್ದಸ್ತಿನಿಂದ ಮಾಡುತ್ತಿದ್ದಾರೆ. ಸುಶಿಕ್ಷಿತರು ಎಂಬುದು ಬಿಟ್ಟರೆ, ಹಿಂದೂ, ಕ್ರೈಸ್ತ ಹೆಂಗಸರು ಸಹ ಗಂಡಸರಿಗೆ ಸರಿಸಮ ಅಲ್ಲ.
ಪ್ರತಿ ಸಮಾಜದಲ್ಲೂ ಗೌರವಾದರ :
ವಿಶ್ವದ ಯಾವ ಸಮಾಜವೇ ಆಗಲಿ, ಅಲ್ಲಿನ ಶಿಕ್ಷಕರಿಗೆ ಹೆಚ್ಚಿನ ಗೌರಾವದರ ನೀಡುತ್ತದೆ, ಏಕೆಂದರೆ, ಇವರೇ ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುವವರು. ವಿವಿಧ ಕಷ್ಟಕರ ಹಂತ ದಾಟಿ ಮುಂದೆ ಹೋಗುವುದನ್ನು ಮಕ್ಕಳು ಇವರಿಂದ ಕಲಿಯುತ್ತಾರೆ. ಶಿಕ್ಷಕರು ಇಡೀ ಶಾಲೆಯ ಫಲಿತಾಂಶದ ಹೊಣೆ ಹೊರುವುದರ ಜೊತೆಗೆ, ಪೋಷಕರಿಗೆ ಮಕ್ಕಳು ಸರಿಯಾಗಿ ಕಲಿಯುತ್ತಿದ್ದಾರೆಂದೂ ಮನವರಿಕೆ ಮಾಡಿಕೊಡಬೇಕು. ನ್ಯೂಜಿಲೆಂಡ್‌ನ ಈ ಸಣ್ಣ ನಗರ ಅದ್ಧೂರಿಯಿಂದ ಟೀಚರ್ಸ್ ಡೇ ಆಚರಿಸಿದ ಪರಿ!
ಚಿಂದಿ ಉಡಾಯಿಸಿ ಚಮಕಾಯಿಸಿ :
ಚೀನೀ ಮೂಲದ ಗಾಯಕಿ ಕೀರನ್ ಮೂಸ್, ತೈಲಾನಿನ ಒಂದು ಶೋದಲ್ಲಿ, 4 ತಿಂಗಳಿನಿಂದ ವಾರ್ಡ್ ರೋಬಿನಲ್ಲಿ ಸಂಗ್ರಹಿಸಿದ್ದ ವಿವಿಧ ಡ್ರೆಸ್ ಗಳನ್ನು ಒಂದೇ ಹಾಡಿನಲ್ಲಿ ಪ್ರದರ್ಶಿಸಿದಳು! ಮೊದಲು ಲಾಂಗ್ ಗೌನ್, ನಂತರ ಹೊಳೆಯುವ ನಕ್ಷತ್ರಗಳದ್ದು, ನಂತರ ಸೀ ಥ್ರೂ ಡ್ರೆಸ್. ಇವಳ ಹಾಡುಗಳಿಂದ ಸೋನಿ ಎಂಟರ್ ಟೇನ್ ಮೆಂಟ್ ಕಂಪನಿಯು ಚಿಂದಿ ಉಡಾಯಿಸಿ ಚಮಕಾಯಿಸುತ್ತಿದೆ!
ಮರಳಿ ನಾರ್ಮಲ್ ಬದುಕಿಗೆ :
ಸ್ಟೋನಿ ಬ್ರೂಸ್ ಯೂನಿರ್ಸಿಟಿಯ ಸಾಂಸ್ಕೃತಿಕ ವಿಭಾಗ ಈಗ ಕೋವಿಡ್ ಜೊತೆ ಎಂದಿನಂತೆ ಬದುಕಲು ಸಿದ್ಧವಾಗುತ್ತಿದೆ, ಲೈವ್ ಪ್ರೋಗ್ರಾಂ ಒಂದಾದ ಮೇಲೆ ಒಂದು ಸಿದ್ಧವಾಗುತ್ತಿದೆ. ಶೀಲಾಳ ಪಿಯಾನೋ ಪ್ರೋಗ್ರಾಂ ಈಗಾಗಲೇ ಬುಕ್ ಆಗಿದೆ, ಆದರೆ ಅದು ನಡೆಯುವುದು ನವೆಂಬರ್‌ನಲ್ಲಿ. ಮಂದಿರ, ಮಸೀದಿ, ಚರ್ಚುಗಳ ಬದಲಿಗೆ ಪ್ರಯೋಗಾಲಯಗಳು ಮಾನವರನ್ನು ಮತ್ತೆ ಎಂದಿನ ನಾರ್ಮಲ್ ಜೀವನಕ್ಕೆ ಮರಳುವೆತೆ ಮಾಡಿವೆ. ಲಕ್ಷಾಂತರ ಜನ ಸತ್ತವರೆಂಬುದು ನಿಜ, ಉಳಿದವರ ಜೀವನವಂತೂ ಎಂದಿನಂತೆ ಆಗುತ್ತಿದೆ?
ಇಂಥ ಮೋಡಿಗೆ ಬೆರಗಾಗದವರಾರು? :
ಪಾಪ್ ಮ್ಯೂಸಿಕ್‌ನಲ್ಲಿ ಲಿಟಲ್ ಸ್ಮಿಜ್ ಅತಿ ಜನಪ್ರಿಯ ಹೆಸರು. ಇವಳ ಹಾಡು ಕೇಳಲು ಯಾರೇ ಆಗಲಿ ಲಕ್ಷಾಂತರ ಖರ್ಚು ಮಾಡಲು ಹಿಂದೇಟು ಹಾಕರು. ಇವಳ ಮ್ಯೂಸಿಕ್ ಆಲ್ಬಂಗಳೂ ಹಾಗೇ ಖರ್ಚಾಗುತ್ತವೆ. 2016 ರಿಂದ ಪಾಪ್ ಮ್ಯೂಸಿಕ್‌ನಲ್ಲಿ ಎಂಟ್ರಿ ಪಡೆದ ಈ ನೀಗ್ರೋ ಮೂಲದ ಕಪ್ಪು ಹುಡುಗಿ, ನಮ್ಮಲ್ಲಿ ತಮಾಷಾ ಮೂಲಕ ಮಹಾರಾಷ್ಟ್ರದ ಜಾನಪದ ಗೀತೆ ಜನಪ್ರಿಯ ಆಗಿರುವಂತೆ, ಅಲ್ಲಿ ಅಬ್ಬರದ ಪ್ರಚಾರ ಪಡೆಯುತ್ತಿದ್ದಾಳೆ!