ಭಾರತೀಯ ಪುತ್ರಿಯರು ಈ ಸಲ ಟೋಕಿಯೊ ಒಲಿಂಪಿಕ್‌ ಕ್ರೀಡೆಯಲ್ಲಿ ತಮ್ಮ ಅಗಾಧ ಶಕ್ತಿಯನ್ನು ಪ್ರದರ್ಶಿಸಿ ಇಡೀ ಭಾರತ ದೇಶವೇ ಅವರಿಗೆ ಜೈಕಾರ ಹಾಕುವಂತಾಯಿತು. ಕ್ರೀಡೆಯ ಬಗೆಗಿನ ಅವರ ಒಲವು ಸರ್ವರೂ ಹುಬ್ಬೇರಿಸುವಂತೆ ಮಾಡಿತು. ಈವರೆಗಿನ ಒಲಿಂಪಿಕ್‌ ಕ್ರೀಡಾ ಕೂಟದ ಇತಿಹಾಸದಲ್ಲಿಯೇ ಭಾರತ ಅತಿ ಹೆಚ್ಚು 7 ಪದಕ ಗಳಿಸಿತು.

ಭಾರತೀಯ ಶಟ್ಲರ್‌ ಪಿ.ವಿ. ಸಿಂಧು ಅವರಂತೂ ಹೊಸ ಇತಿಹಾಸವನ್ನೇ ಬರೆದರು. ಅವರು ಸಿಂಗಲ್ಸ್ ನಲ್ಲಿ ಚೀನಾದವರಾದ ಜಿಂಗ್‌ ಜಯಾಹೋ ಅವರನ್ನು 2೦15ರಲ್ಲಿ ಸೋಲಿಸಿ ಕಂಚಿನ ಪದಕ ಗಳಿಸಿದರು. ಕೇವಲ 52 ನಿಮಿಷದಲ್ಲಿಯೇ ಅವರು ಆಟ ಮುಗಿಸಿ ಪದಕವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಸಿಂಧು ಸತತ 2 ಒಲಿಪಿಂಕ್‌ ಗಳಲ್ಲಿ ಪದಕ ಗಳಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡರು, 2016ರಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

ಪ್ರಸಿದ್ಧ ಮರಳು ಶಿಲ್ಪಕಲಾವಿದ ಸುದರ್ಶನ್‌ ಪಟ್ನಾಯಕ್‌ ಸಿಂಧುವಿಗೆ ವಿಶಿಷ್ಟ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರು. ಅವರು ಪುರಿ ಸಮುದ್ರ ತೀರದ ಮರಳಲ್ಲಿ ಸಿಂಧು ಆಕೃತಿ ಮೂಡಿಸಿ ಅಭಿನಂದನೆ ಸಲ್ಲಿಸಿದರು.

ಪ್ರಬಲ ಧೈರ್ಯ ಅದೇ ರೀತಿ ಮಹಿಳಾ ಹಾಕಿ ತಂಡ ಇದೇ ಒಲಿಂಪಿಕ್ಸ್ ನಲ್ಲಿ ಅದ್ಭುತ ಕ್ರೀಡಾ ಪ್ರದರ್ಶನ ನೀಡಿ ಇಡೀ ದೇಶವನ್ನು ಗೌರವಾನ್ವಿತಗೊಳಿಸಿತು. ಟೋಕಿಯೊ ಕ್ರೀಡಾಂಗಣದಲ್ಲಿ ದೇಶದ ಪುತ್ರಿಯರ ಪ್ರಬಲ ಧೈರ್ಯ ಹಾಗೂ ಉತ್ಸಾಹ ಎಲ್ಲರ ಹೃದಯನ್ನು ಗೆದ್ದಿತು.

ಭಾರತೀಯ ಮಹಿಳಾ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಅದು ಎಷ್ಟು ಆತ್ಮವಿಶ್ವಾಸದಿಂದ ಬ್ರಿಟನ್‌ ನಂತಹ ಬಲಿಷ್ಠ ತಂಡವನ್ನು ಎದುರಿಸಿತೊ ಮರೆಯಲಾಗದು.

ಆಸ್ಟ್ರೇಲಿಯಾದಂತಹ ದಿಗ್ಗಜ ತಂಡವನ್ನು ಸೋಲಿಸಿ ಭಾರತೀಯ ಹಾಕಿ ತಂಡ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತ್ತು. ಸ್ವತಃ ಪ್ರಧಾನಿಯವರೇ ತಂಡಕ್ಕೆ ಅಭಿನಂದನೆ ಸಲ್ಲಿಸಿ ಅವರ ಧೈರ್ಯವನ್ನು ಕೊಂಡಾಡಿದ್ದರು.

ಈಗ ಬಾಕ್ಸಿಂಗ್‌ ಬಗ್ಗೆ ಮಾತನಾಡುವುದಾದರೆ, ಲಲೀನಾ ಬೊರ್‌ ಗೊಹೆನ್‌ 69 ಕಿಲೋ ವರ್ಗದಲ್ಲಿ ಟರ್ಕಿಯ ಹೆಸರಾಂತ ಬಾಕ್ಸಿಂಗ್‌ ಚಾಂಪಿಯನ್‌ ಬುನೆನಾಜ್‌ ಸುರಮೇನೆಲಿ ವಿರುದ್ಧ ಸೆಣಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯ್ತು.

ಆದರೆ ಅವರು ಒಲಿಂಪಿಕ್ಸ್ ಬಾಕ್ಸಿಂಗ್‌ ನಲ್ಲಿ ಪದಕ ಗೆದ್ದ ಎರಡನೇ ಮಹಿಳಾ ಬಾಕ್ಸರ್‌ ಅನಿಸಿಕೊಂಡರು. ಲನೀಲಾ ಅವರಿಗಿಂತ ಮುಂಚೆ ಮೇರಿಕೋಮ್ ಅವರಷ್ಟೇ ಈ ಸಾಧನೆ ಮಾಡಿದ್ದರು. ಈ ರೀತಿಯಾಗಿ 9 ವರ್ಷಗಳ ಬಳಿಕ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಪದಕ ಬಂತು.

ಅಸ್ಸಾಂನ 23 ವರ್ಷದ ಲಲೀನಾ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಮೂರನೆಯ ಕ್ರೀಡಾಪಟು ಆಗಿದ್ದಾರೆ. ಲಲೀನಾ ಸೆಮಿ ಫೈನಲ್ ನ ಫಾರ್ಮಾದಲ್ಲಿ ಕಂಡು ಬಂದಿದ್ದರು. ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ತಲುಪಿ ಅದ್ಭುತ ಸಾಧನೆ ಮಾಡಿದರು. ಲಲೀನಾ ಸೆಮಿಫೈನಲ್ ನಲ್ಲಿ ಚೀನಾ ತೈಪೆಯ ಚಿನ್‌ ಚೆನ್‌ರನ್ನು 41 ರಿಂದ ಸೋಲಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ