ಕಾನೂನಲ್ಲ, ಧರ್ಮ ಮತ್ತು ಸಮಾಜದ ತಪ್ಪು

ಆರ್ಥಿಕವಾಗಿ ಸಮೃದ್ಧವಾಗಿರುವ ಕೆಲವು ಕುಟುಂಬಗಳ ಪುರುಷರು ಕಾರ್ಮಿಕರ ಪುಟ್ಟ ಹುಡುಗಿಯರನ್ನು ನೋಡಿ ಜೊಲ್ಲು ಸುರಿಸುತ್ತಾರೆ. ಅದಕ್ಕೊಂದು ಉದಾಹರಣೆ ಇತ್ತೀಚೆಗೆ ದೆಹಲಿಯಲ್ಲಿ ನೋಡಲು ಸಿಕ್ಕಿತು. 13 ವರ್ಷದ ಬಾಲೆ ತನ್ನ 3 ಜನ ಅಣ್ಣ ತಂಗಿಯರ ಜೊತೆ, ತಾಯಿ ತಂದೆಯರೊಂದಿಗೆ ವಾಸಿಸುತ್ತಿದ್ದಳು. ಆ ಮನೆಯ ಮೂಲಕ ಹುಡುಗಿಯ ತಾಯಿ ತಂದೆಯನ್ನು ಪುಸಲಾಯಿಸಿ, ತನ್ನ ಸಂಬಂಧಿಕರ ಮಕ್ಕಳ ಜೊತೆ ಆಟ ಆಡುತ್ತಿರು ಎಂದು ಆ ಹುಡುಗಿಯನ್ನು ಗುರುಗ್ರಾಮಕ್ಕೆ ಕಳಿಸಿಕೊಟ್ಟ.

1 ತಿಂಗಳ ಬಳಿಕ ಆ ವ್ಯಕ್ತಿ ಹುಡುಗಿಯ ತಾಯಿ ತಂದೆಗೆ ``ಫುಡ್‌ ಪಾಯಿಸನಿಂಗ್‌ ನಿಂದಾಗಿ ಹುಡುಗಿ ಮೃತಪಟ್ಟಿದ್ದು, ಬಾಡಿಯನ್ನು ಆಂಬ್ಯುಲೆನ್ಸ್ ಮೂಲಕ ದೆಹಲಿಗೆ ತೆಗೆದುಕೊಂಡು ಬರುತ್ತಿದ್ದೇವೆ,'' ಎಂದು ಫೋನ್‌ ಮಾಡಿ ಹೇಳಿದ. ಹುಡುಗಿಯ ತಂದೆ ಅದನ್ನು ಸತ್ಯ ಎಂದು ನಂಬಿದ್ದ. ಆದರೆ ಅಕ್ಕಪಕ್ಕದವರ ಹೇಳಿಕೆಯ ಮೇರೆಗೆ ಹುಡುಗಿಯ ದೇಹವನ್ನು ಗಮನಿಸಿದಾಗ ಆಕೆಯ ದೇಹದ ಮೇಲೆ ಕೆಲವು ಗುರುತುಗಳು ಕಂಡುಬಂದವು. ಒಂದು ಆಸ್ಪತ್ರೆಗೆ ಒಯ್ದು ತಪಾಸಣೆ ಮಾಡಿದಾಗ, ರೇಪ್‌ ಮಾಡಿ ಅವಳ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಗೊತ್ತಾಯಿತು.

ಇಂತಹ ಘಟನೆಗಳು ಸಾವಿರಾರು ಸಂಖ್ಯೆಯಲ್ಲಿ ಪ್ರತಿ ತಿಂಗಳು ಮರುಕಳಿಸುತ್ತಿರುತ್ತವೆ. ಆದರೆ ಅದರಲ್ಲಿ ಕೆಲವೇ ಕೆಲವು ಪ್ರಕರಣಗಳು ಪೊಲೀಸ್‌ ಠಾಣೆಗೆ ಬರುತ್ತವೆ. ಹೆಚ್ಚಿನ ಪ್ರಕರಣಗಳು ಮುಚ್ಚಿ ಹಾಕಲ್ಪಡುತ್ತವೆ. ಸಾವಿನ ಪ್ರಕರಣ ನಡೆಯದ ಕಡೆ ಹುಡುಗಿ ಹಲವು ವರ್ಷಗಳ ತನಕ ದೈಹಿಕ ಹಾಗೂ ಮಾನಸಿಕ ನೋವಿನಿಂದ ನರಳುತ್ತಿರುತ್ತಾಳೆ.

ಕಾನೂನು ಹೇಗೇ ಇರಲಿ, ಅತ್ಯಾಚಾರಿಗೆ ಎಂಥದೇ ಶಿಕ್ಷೆಯಾದರೂ ಒಂದು ಸಂಗತಿ ಪಕ್ಕ, ಅದೇನೆಂದರೆ, ಯಾವ ಅಪರಾಧ ಘಟಿಸಿರುತ್ತೊ, ಅದರ ಸಾಮಾಜಿಕ ಹಾಗೂ ನೈತಿಕ ಪರಿಣಾಮವನ್ನು ಕಾನೂನಿನ ಮುಖಾಂತರ ಸರಿಪಡಿಸಲು ಆಗುವುದಿಲ್ಲ. ವಾಸ್ತವದಲ್ಲಿ ಹುಡುಗಿಯ ರೇಪ್‌ ಆಗಿದ್ದರಿಂದ ಅಪರಾಧಿಗೆ ಶಿಕ್ಷೆ ವಿಧಿಸಲ್ಪಡುತ್ತದೆ. ಆದರೆ ಹೇಳಿಕೊಳ್ಳುವವರು ಮಾತ್ರ ಅದು ಸಮ್ಮತಿಯ ಸೆಕ್ಸ್ ಆಗಿತ್ತು, ಆ ಬಳಿಕ ಕೊಡು ತೆಗೆದುಕೊಳ್ಳುವುದರಲ್ಲಿ ಜಗಳಾಯಿತು ಎಂದು ಹೇಳುತ್ತಾರೆ. ರೇಪ್‌ ಗೆ ತುತ್ತಾದವಳಿಗೆ ವೇಶ್ಯೆ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ.

ರೇಪ್‌ ನ ಅಪರಾಧ ಒಂದು ದೈಹಿಕ ಅಪರಾಧದ ಜೊತೆಗೆ ಸಾಮಾಜಿಕ ವೈಕಲ್ಯತೆಯನ್ನುಂಟು ಮಾಡುತ್ತದೆ. ಇದು ಈ ಅಪರಾಧ ಎಸಗಲು ಎಲ್ಲಕ್ಕೂ ದೊಡ್ಡ ಹೊಣೆಗಾರ ಎಂದು ಹೇಳಬಹುದು. ಒಂದು ವೇಳೆ ರೇಪ್‌ನ್ನು ಕೇವಲ ಹೊಡೆದು ಬಡಿದು ಮಾಡುವುದೆಂದು ಒಪ್ಪುದಾದರೆ, ಪ್ರತಿಯೊಂದು ರೇಪ್‌ ಬಗೆಗೂ ಮುಕ್ತವಾಗಿ ದೂರುಗಳು ಕೇಳಿಬರುತ್ತಿದ್ದವು ಹಾಗೂ ಪ್ರತಿಯೊಬ್ಬ ಅತ್ಯಾಚಾರಿ ಹೆದರಿಕೊಳ್ಳುತ್ತಿದ್ದ. ತಾನು ಬಂಧಿಸಲ್ಪಟ್ಟರೆ ಏನಾಗುತ್ತದೋ ಎಂಬ ಭೀತಿ ಇರುತ್ತಿತ್ತು. ಈಗ ಪ್ರತಿಯೊಬ್ಬ ಅತ್ಯಾಚಾರಿ ತಿಳಿದುಕೊಳ್ಳುವುದೇನೆಂದರೆ, ಹುಡುಗಿ ಸುಮ್ಮನೇ ಇರುತ್ತಾಳೆ. ಏಕೆಂದರೆ ವಿಷಯ ಬಹಿರಂಗವಾದರೆ ಆಕೆಯದೇ ಮರ್ಯಾದೆ ಹೋಗುತ್ತದೆ. ಕುಟುಂಬದ ಗೌರ ಮಣ್ಣುಪಾಲಾಗುತ್ತದೆ. ಆಕೆಯ ಅಣ್ಣ ತಮ್ಮ ಆಕೆಯನ್ನು ದ್ವೇಷಿಸುತ್ತಾರೆ. ತಾಯಿ ತಂದೆ ಸದಾ ಅಪರಾಧೀಪ್ರಜ್ಞೆ ಹೊತ್ತು ತಿರುಗುವಂತಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ