ಗುಲಾಮಗಿರಿಯತ್ತ ತಳ್ಳುವ ಉಪಾಯ
ಅದೊಂದು ಕಾಲದಲ್ಲಿ ಸ್ಟೀಮ್ ಎಂಜಿನ್ ನಿಂದ ನಡೆಯುವ ಕಾರ್ಖಾನೆಗಳು ಲಕ್ಷಾಂತರ ಕಾರ್ಮಿಕರ ಕೆಲಸ ಕಸಿದುಕೊಂಡಿದ್ದವು. ಅದರ ಬದಲಿಗೆ ಕೆಲಸಗಾರರಿಗೆ ಒಳ್ಳೆಯ ಸೌಲಭ್ಯ ಹಾಗೂ ಗ್ರಾಹಕರಿಗೆ ಒಳ್ಳೆಯ ಸಮ್ಮಾನ ಕೊಟ್ಟಿತ್ತು. ಇಂದಿನ ಡಿಜಿಟಲ್ ಕ್ರಾಂತಿ ಕೂಡ ಚಿಕ್ಕ ಅಂಗಡಿಕಾರರು, ಸೇವೆ ನೀಡುವವರು ಹಾಗೂ ಚಿಕ್ಕ ಮೆಕ್ಯಾನಿಕ್ ಗಳನ್ನು ಮುಗಿಸಿ ಹಾಕುತ್ತಿವೆ. ಆದರೆ ಈ ಸಲ ವ್ಯಾಪಾರದ ಚುಕ್ಕಾಣಿ ದೊಡ್ಡ ಕಂಪನಿಗಳ ಕೈಯಲ್ಲಿ ಕ್ರೋಢೀಕರಣಗೊಳ್ಳುತ್ತಿದೆ. ಮೊಬೈಲ್ ಬೇಸ್ಡ್ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಕಾರಣದಿಂದ ಈಗ ಸಣ್ಣ ಅಂಗಡಿಕಾರರು, ಟೇಲರ್ ಗಳು, ಪೇಂಟರ್ಸ್, ಅಡುಗೆ ತಯಾರಿಸುವವರು ಮಾಯಾವಾಗುತ್ತಿದ್ದಾರೆ.
ಫ್ಲಿಪ್ ಕಾರ್ಟ್, ಅಮೆಝಾನ್ ನಂತಹ ಅನೇಕ ಕಂಪನಿಗಳು ಹೆಚ್ಚಿಗೆ ಏನನ್ನೂ ಮಾಡುತ್ತಿಲ್ಲ. ಆದರೆ ಬೇರೆಯವರಿಗೆ ತಯಾರಿಸಿದ ಸಾಮಾನುಗಳನ್ನು ಮಾಡಿ ಭಾರಿ ಲಾಭ ಗಳಿಸುತ್ತಿವೆ.
ಓಲಾ ರೈಡ್ ಕಂಪನಿ ದೇಶದಲ್ಲಿರುವ ಟ್ಯಾಕ್ಸಿಗಳನ್ನು ನುಂಗಿ ಹಾಕಿಬಿಟ್ಟಿದೆ. ಅದೀಗ ಆಟೋಗಳನ್ನು ಕೂಡ ಮುಗಿಸಿ ಹಾಕುವುದರಲ್ಲಿದೆ. ಬೈಕ್, ಟ್ಯಾಕ್ಸಿ ಉದ್ಯಮ ಕೂಡ ಅದೇ ತಂತ್ರಜ್ಞಾನ ಹೊಂದಿದೆ. ಕಾರನ್ನು ಖರೀದಿಸಲು ಹಾಗೂ ತನ್ನ ಹಳೆಯ ಕಾರುಗಳನ್ನು ಮಾರುವಲ್ಲಿ ನೈಪುಣ್ಯತೆ ಸಾಧಿಸಿದ ಬಳಿಕ ಓಲಾ ಕಂಪನಿ ಹಳೆಯ ವಾಹನ ಉದ್ಯಮದಲ್ಲಿ ಕಾಲಿರಿಸುತ್ತಿದೆ. ಈ ಮೂಲಕ ಹಳೆಯ ಕಾರುಗಳನ್ನು ಮಾರುವವರನ್ನು ನುಂಗಿ ಹಾಕಬಹುದು.
ಈ ತೆರನಾದ ಕಂಪನಿಗಳು ಕಾನೂನನ್ನು ಕೂಡ ಬದಲಿಸಬಹುದು. ಅವು ಸರ್ಕಾರದ ಮೇಲೆ ಒತ್ತಡ ಹೇರಬಹುದು, ಎಲ್ಲಿಯವರೆಗೆ ಸರ್ಟಿಫೈಡ್ ಕಾರು ಇರುವುದಿಲ್ಲ ಅಲ್ಲಿಯವರೆಗೆ ಯಾರೂ ಹಳೆಯ ಕಾರನ್ನು ಮಾರಾಟ ಮಾಡಬಾರದು ಹಾಗೂ ಸರ್ಟಿಫಿಕೇಶನ್ ಬಿಸ್‌ನೆಸ್ ಗಳನ್ನು ಖರೀದಿಸಲು ಆರಂಭಿಸಬಹುದು. ಅವು ರಸ್ತೆ ಪಕ್ಕದಲ್ಲಿ ಇರುವ ಮಾರುಕಟ್ಟೆ ಬದಲು ನಗರದ ಹೊರಭಾಗದಲ್ಲಿ ಸಾವಿರಾರು ಗಾಡಿಗಳನ್ನು ಒಂದೇ ಕಡೆ ನಿಲ್ಲಿಸುವ ವ್ಯವಸ್ಥೆ ಮಾಡಬಹುದು. ಸೌಲಭ್ಯದ ಹೆಸರಿನಲ್ಲಿ ನಿಮಗೆ ವಾಹನದ ಬಣ್ಣ, ಸರಿಯಾದ ಸ್ಥಿತಿಯಲ್ಲಿದೆ, ಎಷ್ಟು ಕಿ.ಮೀ. ಓಡಿತು, ಸೇಫ್ಟಿ ಫೀಚರ್ ಹೀಗೆ ಎಲ್ಲ ಮಾಹಿತಿಗಳು ನಿಮ್ಮ ಮೊಬೈಲ್ ತೆರೆಯ ಮೇಲೆ ಲಭಿಸುತ್ತವೆ.
ಇದರರ್ಥ ಇಷ್ಟೇ, ಲಕ್ಷಾಂತರ ಹಳೆಯ ಕಾರು ಮಾರಾಟಗಾರರ ಮಕ್ಕಳು ಈಗ ಓಲಾ ಅಥವಾ ಬೇರೆ ಕೆಲವು ಕಂಪನಿಗಳಲ್ಲಿ ನೌಕರಿ, ಚಾಕರಿ ಮಾಡಬೇಕಾಗಿಬರಬಹುದು. ಒಂದು ಸ್ವತಂತ್ರ ಉದ್ಯೋಗದಲ್ಲಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು, ಕಣ್ಮರೆಯಾಗಿ ಹೋಗಬಹುದು.
ಇದೇ ಕೆಲಸವನ್ನು ಟಾಟಾ ಒನ್ ಎಂಜಿ ಕಂಪನಿಗಳು ಮಾಡಲು ಹೊರಟಿವೆ. ಅವು ಔಷಧಿಗಳನ್ನು ಫಾರ್ಮಾ ಕಂಪನಿಗಳಿಂದ ಖರೀದಿಸಿ, ತಮ್ಮ ಫ್ರಾಂಚೈಸ್ ಮುಖಾಂತರ ಮನೆ ಮನೆಗೆ ತಲುಪಿಸಲಿವೆ. ನಿಮ್ಮ ಪಕ್ಕದಲ್ಲಿಯೇ ಇರುವ ಔಷಧಿ ಅಂಗಡಿಯ ಮುಂಚೆ ಡಾಕ್ಟರ್ ಆಗಿ ಸಹ ಕೆಲಸ ಮಾಡುತ್ತಿದ್ದ. ಅವನೀಗ ತನ್ನ ಅಂಗಡಿ ವ್ಯಾಪಾರವಿಲ್ಲದೆ ಮುಚ್ಚುವ ಸ್ಥಿತಿ ಬರಬಹುದು. ಇದೂ ಕೂಡ ಡಿಜಿಟಲ್ ಟೆಕ್ನಾಲಜಿಯ ಚಮತ್ಕಾರ. ಗ್ರಾಹಕರು ಇದನ್ನು ಕೂಡ ಸೌಲಭ್ಯವೆಂದು ಭಾವಿಸಬಹುದು. ಆದರೆ ವಾಸ್ತವದಲ್ಲಿ ಇದು ಕೆಮಿಸ್ಟ್ ಗಳನ್ನು ಡೆಲಿವರಿ ಬಾಯ್ ಆಗಿ ಪರಿವರ್ತಿಸುತ್ತದೆ.