ಮೇಕಪ್‌ ಪ್ರೈಮರ್‌ ಮೊದಲು ನೀವು ನೀಟಾಗಿ ನಿಮ್ಮ ಚರ್ಮದ ಕ್ಲೆನ್ಸಿಂಗ್‌, ಟೋನಿಂಗ್‌ ಮಾಡಿಕೊಂಡು ರೆಡಿಯಾಗಿ. ನಡುನಡುವೆ ಬೆವರುವುದರಿಂದ, ಮೇಕಪ್‌ಗೆ ವಾಟರ್‌ ಪ್ರೂಫ್‌ ಪ್ರಾಡಕ್ಟ್ಸ ನ್ನೇ ಖರೀದಿಸಿ.

ಈ ಹಂತದ ನಂತರ ನೀವು ಪ್ರೈಮರ್‌ (ಮೇಕಪ್‌ ಸೀರಂ)ನ್ನು ಪ್ರೀ ಬೇಸಾಗಿ ಹಚ್ಚಿಕೊಳ್ಳಿ. ಇದರ ಮೇಲೆ ಲೈಟ್‌ ಬೇಸ್‌ ಹಚ್ಚಿರಿ, ಆಗ ನಿಮ್ಮ ಅನ್‌ ಈವೆನ್‌ ಸ್ಕಿನ್‌ ಟೋನ್‌ ಮರೆಯಾಗುತ್ತದೆ. ಮೇಕಪ್‌ ಬೇಸ್‌ ಗಾಗಿ ಮಾರುಕಟ್ಟೆಯಲ್ಲಿ ಬಹಳಷ್ಟು ಬಗೆಯ ಫೌಂಡೇಶನ್‌ ಕ್ರೀಂ ಲಭ್ಯ. ಇದು ಚರ್ಮಕ್ಕೆ ಬೇರೆ ಬೇರೆ ಫಿನಿಶ್‌ ನೀಡುತ್ತದೆ. ಫೌಂಡೇಶನ್‌ ನಿಮ್ಮ ಸ್ಕಿನ್‌ ಟೋನ್‌ ಗಿಂತ ಹೆಚ್ಚು ಲೈಟ್‌ ಯಾ ಡಾರ್ಕ್‌ ಆಗಬಾರದು. ಇದನ್ನು ನಿಮ್ಮ ಬೆರಳಿನ ಮೇಲೆ ತೀಡಿಕೊಂಡು ಮುಖ, ಕುತ್ತಿಗೆ ಪೂರ್ತಿ ಸಣ್ಣ ಬಿಂದಿ ತರಹ ಇರಿಸಿಕೊಳ್ಳಿ. ನಂತರ ಬ್ಲೆಂಡಿಂಗ್‌ ಸ್ಪಾಂಜ್‌ ನಿಂದ ಫೌಂಡೇಶನ್‌ ನ್ನು ಎಲ್ಲಾ ಕಡೆ ನೀಟಾಗಿ ಬ್ಲೆಂಡ್‌ ಆಗುವಂತೆ ಮಾಡಿ. ಇದಾದ ಮೇಲೆ ಅದೇ ಸ್ಪಾಂಜ್‌ ನಿಂದ ತುಸು ಪೌಡರ್‌ ಹಚ್ಚಿಕೊಳ್ಳಿ. ಬೋಲ್ಡ್ ಐ ಮೇಕಪ್‌ ಹೀಗೆ ಬೇಸ್‌ ರೆಡಿ ಆದಮೇಲೆ, ಈಗ ಐ ಮೇಕಪ್ ಗೆ ಮುಂದಾಗಿ. ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಬೋಲ್ಡ್ ಮೇಕಪ್‌ ಚೆನ್ನ. ಆಗಲೇ ಹಬ್ಬ ಕಳೆಗಟ್ಟುವುದು. ಕಾಜಲ್, ಐ ಲೈನರ್‌, ಐ ಶ್ಯಾಡೋ ಬಳಸಿ ನಿಮ್ಮ ಕಂಗಳನ್ನು ಬ್ಯೂಟಿಫುಲ್ ಮಾಡಿ. ಕಂಗಳ ಬಳಿಯ ಕಪ್ಪು ವೃತ್ತಗಳಿಗಾಗಿ ಒಂದು ಶೇಡ್‌ಡಾರ್ಕ್‌ ಕನ್ಸೀಲರ್‌ ಬಳಸಿರಿ.

ನೀವು ಹಬ್ಬಕ್ಕೆ ಬಳಸಿದ ಉಡುಗೆಯ ಬಣ್ಣವೇ, ನಿಮ್ಮ ಐ ಶ್ಯಾಡೋ ಬಣ್ಣ ಆಗಿರಬೇಕು ಎಂದೇನಿಲ್ಲ. ಲೈಟ್‌ ಶಿಮರಿ ಎಲ್ಲಾ ಲುಕ್ಸ್ ಸಗೂ ಸೂಟ್‌ ಆಗುತ್ತವೆ. ಶಿಮರಿ ಶ್ಯಾಡೋ ಬದಲು ನೀವು ನ್ಯಾಚುರಲ್ ಬ್ರೌನ್‌, ಬೇಜ್‌ ಐ ಶ್ಯಾಡೋ ಸಹ ಬಳಸಬಹುದು. ಇಂಥ ಐ ಶ್ಯಾಡೋ ಜೊತೆ ಕಲರ್‌ ಫುಲ್ ಲೈನರ್‌ ಬಳಸಿರಿ. ಐ ಶ್ಯಾಡೋ ಬ್ರಶ್ಶಿನಿಂದ ಇದನ್ನು ನಿಮ್ಮ ಐ ಲಿಡ್‌ ಮೇಲೆ ಹಚ್ಚಿಕೊಳ್ಳಿ. ಬ್ಲೆಂಡ್‌ ಮಾಡಿ. ನೀವು ಇನ್ನಷ್ಟು ಡ್ರಮ್ಯಾಟಿಕ್‌ ಲುಕ್ಸ್ ಬಯಸಿದರೆ, ಮತ್ತೊಂದು ಶೇಡ್‌ ಡಾರ್ಕ್‌ ಶ್ಯಾಡೋವನ್ನು ಕಂಗಳ ಹೊರ ಭಾಗದಲ್ಲಿ ಕ್ರೀಸ್‌ ನಿಂದ ಶುರು ಮಾಡಿ ಕಾರ್ನರ್‌ಗೆ ಹೋಗಿ ಬ್ಲೆಂಡ್‌ ಮಾಡಿ.

ನೀವು ಈವ್ನಿಂಗ್‌ ಪಾರ್ಟಿಗಾಗಿ ಮೇಕಪ್‌ ಮಾಡಿಕೊಳ್ಳುತ್ತಿದ್ದರೆ, ಆಗ ಮಸ್ಕರಾದ ಡಬಲ್ ಕೋಟ್‌ ಹಚ್ಚಿಕೊಳ್ಳಿ. ನಂತರ ಐ ಬ್ರೋಸ್‌ಗೆ ಅದರ ಪೆನ್ಸಿಲ್‌ನಿಂದ ಆಕಾರ ಕೊಡಿ. ನೀವು ಐ ಶ್ಯಾಡೋ ಬಳಸಲು ಬಯಸದಿದ್ದರೆ, ಆಗ ಕಂಗಳನ್ನು ಕೇವಲ ಬಣ್ಣದ ಲೈನರ್‌ನಿಂದ ಅಲಂಕರಿಸಿ. ಕೊನೆಗೆ ಕಾಜಲ್ ನಿಂದ ನೀಟಾಗಿ ತೀಡಿ ಉತ್ತಮ ಲುಕ್‌ ನೀಡಿ.

ಕನ್ಸೀಲರ್‌ ಮೇಕಪ್‌ ಮಾಡುವಾಗ ಸುಕ್ಕು, ಕಪ್ಪು ವೃತ್ತಗಳು ಬಹಳ ತೊಂದರೆ ಕೊಡುತ್ತವೆ. ಒಂದು ಉತ್ತಮ ಕನ್ಸೀಲರ್ ನೆರವಿನಿಂದ ಕಂಗಳ ಕೆಳಗಿನ ಡಾರ್ಕ್‌ ಸರ್ಕಲ್ಸ್, ಮೊಡವೆಗಳನ್ನು ಅಡಗಿಸಬಹುದು. ಕನ್ಸೀಲರ್‌ನ್ನು ಕಂಗಳ ಕೆಳಗೆ ತ್ರಿಕೋನಾಕಾರಾಗಿ ಹಚ್ಚಿರಿ. ಇದರಿಂದ ಎಲ್ಲರ ಫೋಕಸ್‌ ಕಂಗಳ ಕಡೆಗಿರುತ್ತದೆ, ಮುಖದ ಕಾಂತಿಯೂ ಹೆಚ್ಚುತ್ತದೆ. ಕನ್ಸೀಲರ್‌ನ್ನು ತುಟಿಗಳ ಅಂಚಿನಲ್ಲೂ ಹಚ್ಚಬಹುದು. ಇದನ್ನು ಹಚ್ಚುವುದರಿಂದ ಸ್ಕಿನ್‌ ಒಂದೇ ಸಲ ಕಾಣಿಸುತ್ತದೆ. ಮೇಕಪ್‌ಗೆ ಮೊದಲು ಚರ್ಮದಲ್ಲಿ ಕಾಣುತ್ತಿದ್ದ ಲೋಪದೋಷಗಳನ್ನು ಈ ರೀತಿ ಮರೆಮಾಚಬಹುದು.

ಹೈಲೈಟರ್‌ ನೀವು ನಿಮ್ಮ ಮುಖಕ್ಕೆ ಉತ್ತಮ ಡೈಮೆನ್ಶನ್‌ ನೀಡ ಬಯಸಿದರೆ, ಒಂದು ಉತ್ತಮ ಹೈಲೈಟರ್‌ ಬಳಸಬಹುದು. ನಿಮ್ಮ ಮುಖದ ಹೈ ಪಾಯಿಂಟ್ಸ್ ಅಂದ್ರೆ ಚೀಕ್‌ ಬೋನ್ಸ್, ಮೂಗಿನ ರಿಜ್‌, ಗಲ್ಲದ ಮೇಲೆ ತುಸು ಹೈ ಲೈಟರ್‌ ಹಚ್ಚಿರಿ. ನೀವು ಬಿಸಿಲಲ್ಲಿ ಹೋಗುವಿರಾದರೆ, ಇದನ್ನು ಬಹಳ ಎಚ್ಚರಿಕೆಯಿಂದ ಬಳಸಿರಿ.

ಬ್ಲಶರ್

ಬ್ಲಶರ್‌ನ ತುಸು ಕೆಂಬಣ್ಣ, ನಿಮ್ಮ ಮುಖವನ್ನು ಸಾಫ್ಟ್ ಗ್ಲೋಯಿಂಗ್‌ ಮಾಡುತ್ತದೆ. ಬ್ಲಶರ್‌ನ್ನು ನೇರವಾಗಿ ಕೆನ್ನೆ ಮಧ್ಯೆ ಢಾಳಾಗಿ ಹಚ್ಚಬೇಡಿ. ಬ್ಲಶ್‌ನ್ನು ಆ್ಯಪ್‌ ಆಫ್‌ ಚೀಕ್‌ ಅಂದರೆ ಕೆನ್ನೆಯ ತುಸು ಮೇಲ್ಭಾಗದಲ್ಲಿ ಹಚ್ಚಿರಿ. ಇದಕ್ಕಾಗಿ ತುಸು ಬ್ಲಶ್‌ ನ್ನು ಬ್ರಶ್‌ ಮೇಲೆ ಹಚ್ಚಿಕೊಂಡು ಅದನ್ನು ಒದರಿ ಹೆಚ್ಚುವರಿ ಅಂಶ ತೆಗೆದು, ನಂತರ ಬಳಸಿರಿ.

ಗಿರಿಜಾ ಶಂಕರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ