ಹಬ್ಬಗಳ ಸಂದರ್ಭದಲ್ಲಿ ಉಟ್ಟು ತೊಟ್ಟು ಪುಟ್ಟಕ್ಕನಾಗಿ ಮೆರೆಯಲು ಯಾವ ಹೆಣ್ಣು ತಾನೇ ಬಯಸುವುದಿಲ್ಲ? ತಮ್ಮ ಚರ್ಮದ ಮೇಲಿನ ಅನಗತ್ಯ ಕೂದಲಿನ ಕಾರಣ ಅವರು ಬಿಂದಾಸ್ ಆಗಿ ಸ್ಲೀವ್ ಲೆಸ್, ಮಾಡ್ ಡ್ರೆಸೆಸ್ ಧರಿಸಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಇದನ್ನು ತೊಲಗಿಸಿ ಫ್ಲಾಲೆಸ್ ಸ್ಕಿನ್ ಪಡೆಯಲು ವಿವಿಧ ವಿಧಾನ ಅನುಸರಿಸುತ್ತಾರೆ. ಅಷ್ಟು ಮಾತ್ರವಲ್ಲ, ಕೈಕಾಲುಗಳ ಮೇಲಿನ ಕೂದಲಿನಿಂದ ಮುಕ್ತಿ ಪಡೆಯಲು ಗಂಟೆಗಟ್ಟಲೆ ಪಾರ್ಲರ್ ಗಳಲ್ಲಿ ಕಾದು ತಮ್ಮ ಪರ್ಸ್ ಖಾಲಿ ಮಾಡಿಸಿಕೊಳ್ಳುತ್ತಾರೆ. ಆದರೆ ಫೇರ್ ನೆಸ್ ನ್ಯಾಚುರಲ್ ಹೇರ್ ರಿಮೂವರ್ ಕ್ರೀಂ ಬಳಸುವುದರಿಂದ ನಿಮ್ಮ ಹಣ, ಸಮಯ ಎರಡನ್ನೂ ಉಳಿಸುತ್ತದೆ, ಅದೂ ಪರ್ಫೆಕ್ಟ್ ಆಗಿ ಕೆಲವೇ ನಿಮಿಷಗಳಲ್ಲಿ! ಜೊತೆಗೆ ಈ ಹೇರ್ ರಿಮೂವರ್ ಕ್ರೀಂ ನಿಮ್ಮ ಸೌಂದರ್ಯ ಹಾಳುಗೆಡಹುವ ಅನಗತ್ಯ ಕೂದಲಿನಿಂದ ಮುಕ್ತಿ ಕೊಡಿಸುತ್ತದೆ. ಜೊತೆಗೆ ನಿಮ್ಮ ಚರ್ಮವನ್ನು ಸಾಫ್ಟ್ ಗ್ಲೋಯಿಂಗ್ ಮಾಡುತ್ತದೆ. ಇದರಿಂದಾಗಿ ಫೆಸ್ಟಿವಲ್ ಪಾರ್ಟಿಗಳಲ್ಲಿ ನಿಮ್ಮ ಚರ್ಮದ ನುಣುಪು, ಲಾವಣ್ಯ ಗುಂಪಿನಲ್ಲಿ ಎದ್ದು ಕಾಣುತ್ತದೆ, ಎಲ್ಲರೂ ನಿಮ್ಮನ್ನು ಹೊಗಳುವಂತಾಗುತ್ತದೆ.
ಹೇರ್ ರಿಮೂವಿಂಗ್ ಹೋಮ್
ಹಬ್ಬಗಳ ಸಂದರ್ಭದಲ್ಲಿ ಹೆಂಗಸರು ಬಹಳ ಬಿಝಿ ಇರುತ್ತಾರೆ. ಹೀಗಾಗಿ ಚರ್ಮವನ್ನು ಹೇರ್ ಫ್ರೀ ಮಾಡಿಕೊಳ್ಳುವುದರತ್ತ ಗಮನವೇ ಹೋಗಿರುವುದಿಲ್ಲ. ಆದರೆ ಈಗ ಇದು ಟೆನ್ಶನ್ ವಿಷಯವಲ್ಲ ಬಿಡಿ, ಏಕೆಂದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ನ್ಯಾಚುರಲ್ ಹೇರ್ ರಿಮೂವಿಂಗ್ ಕ್ರೀಂ ಲಭ್ಯವಿವೆ. ಅತ್ಯುತ್ತಮ ಗುಣಮಟ್ಟದ ಬ್ರ್ಯಾಂಡಿನದನ್ನೇ ನೋಡಿ ಆರಿಸಿಕೊಳ್ಳಿ. ಇದರಿಂದ ಮನೆಯಲ್ಲಿ ಕುಳಿತೇ ಹೇರ್ ರಿಮೂವಿಂಗ್ ಪ್ರಕ್ರಿಯೆಯನ್ನು ಈಝಿ ಮಾಡಿಕೊಳ್ಳಬಹುದು. ನೀವು ಯಾವಾಗ ಬಯಸಿದರೂ, ಮತ್ತು ಹೊರಗೆ ತಂಗಿದ್ದ ಕಡೆಯೂ ಕ್ಷಣಗಳಲ್ಲಿ ಅನಗತ್ಯ ಕೂದಲನ್ನು ನಿವಾರಿಸಿಕೊಳ್ಳಬಹುದು. ಇದಕ್ಕಿಂತ ಸುಲಭ ವಿಧಾನ ಇಲ್ಲ ಎಂದೇ ಹೇಳಬೇಕು.
ಚರ್ಮ ಹೊಳೆಯುತ್ತದೆ
ಈ ಹೇರ್ ರಿಮೂವರ್ ಕ್ರೀಂ ನಿಮ್ಮ ಅನಗತ್ಯ ಕೂದಲನ್ನು ಬಲು ಸುಲಭವಾಗಿ ನಿವಾರಿಸಿ, ನಿಮ್ಮ ಚರ್ಮಕ್ಕೆ ಅತ್ಯುತ್ತಮ ಹೊಳೆಯುವ ಕಾಂತಿ ನೀಡುತ್ತದೆ. ಇದು ಅಷ್ಟೇ ಸುರಕ್ಷಿತ ಕೂಡ. ಏಕೆಂದರೆ ಇದು ಡರ್ಮಟಾಲಜಿಕಲಿ ಕ್ಲಿನಿಕಲಿ ಟೆಸ್ಟೆಡ್ ಆಗಿದೆ. ಇದರ ಇನ್ನೊಂದು ಉತ್ತಮ ಗುಣವೆಂದರೆ, ಇದು ಎಲ್ಲಾ ತರಹದ ಚರ್ಮಕ್ಕೂ (ಆಯ್ಲಿ, ಡ್ರೈ, ನಾರ್ಮಲ್) ಹೊಂದುತ್ತದೆ. ಹೀಗಾಗಿ ಅನಗತ್ಯ ಕೂದಲಿನ ನಿವಾರಣೆಯ ಜೊತೆಗೆ ಸ್ಕಿನ್ ಟೋನ್ ಫಳಫಳ ಹೊಳೆಯುವಂತೆಯೂ ಮಾಡುತ್ತದೆ.
ನಿಮಿಷಗಳಲ್ಲೇ ಪರಿಣಾಮ
ಈ ಹೇರ್ ರಿಮೂವರ್ ಕ್ರೀಂ ಬಲು ಸಕ್ರಿಯವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ಈ ಕ್ರೀಂ ಕೂದಲಿನ ಬುಡದಲ್ಲಿನ ಪ್ರೋಟೀನ್ ಅಂಶವನ್ನು ನಷ್ಟಗೊಳಿಸುತ್ತದೆ. ಅದರಿಂದಾಗಿ ನಮ್ಮ ಅನಗತ್ಯ ಕೂದಲು ದುರ್ಬಲಗೊಂಡು ಸುಲಭವಾಗಿ ತೊಲಗುತ್ತದೆ. ಜೊತೆಗೆ ಇದು ಬಳಸಲಿಕ್ಕೂ ಅತಿ ಸುಲಭ. ಇದನ್ನು ತೆರೆದು, ಅಪ್ಲೈ ಮಾಡಿ, ಕ್ರೀಂ ಒರೆಸಿಬಿಟ್ಟರೆ ಮುಗಿಯಿತು. ಇದು ತನ್ನ ಪರಿಣಾಮವನ್ನು 5-6 ನಿಮಿಷಗಳಲ್ಲೇ ತೋರಿಸಿಬಿಡುತ್ತದೆ. ಇದು ನಿಮ್ಮ ಚರ್ಮವನ್ನು ಫೇರ್ ಸಾಫ್ಟ್ ಮಾಡುತ್ತದೆ.
ಕಳೆದುಕೊಂಡ ಬಣ್ಣ ವಾಪಸ್
ಹೆಂಗಸರು ಗೃಹಿಣಿ ಅಥವಾ ಉದ್ಯೋಗಸ್ಥೆಯರಾಗಿರಲಿ, ಆಗಾಗ ಬಿಸಿಲಿನ ಝಳಕ್ಕೆ ಸಿಲುಕಿಕೊಳ್ಳುತ್ತಾರೆ ಹಾಗೂ ಟ್ಯಾನಿಂಗ್ ಗೆ ಬಲಿಯಾಗುತ್ತಾರೆ. ಹೀಗಾಗಿ ಅವರು ತಮ್ಮ ಚರ್ಮ ಸೌಂದರ್ಯ ಕಳೆದುಕೊಳ್ಳುತ್ತಾರೆ. ಹೀಗಾಗಿ ಅವರ ಚರ್ಮ ನಿಸ್ತೇಜ, ಕಳಾಹೀನ ಆಗುತ್ತದೆ. ಆದರೆ ಈ ಅತ್ಯಾಧುನಿಕ ಹೇರ್ ರಿಮೂವರ್ ಕ್ರೀಮುಗಳು ನಿಮ್ಮ ಈ 3 ಸಮಸ್ಯೆಗಳಿಗೂ ಒಂದೇ ರಾಮಬಾಣವಾಗಿದೆ. ಇದರಿಂದ ಚರ್ಮ ಸಾಫ್ಟ್ ಬ್ರೈಟ್ ಆಗುತ್ತದೆ. ಇದರಿಂದ ನೀವು ಗುಂಪಿನ ನಾಲ್ವರಲ್ಲಿ ಎದ್ದು ಕಾಣುವಿರಿ.
ಕರ್ವ್ಸ್ ಯಾ ಬರ್ನ್ಸ್ ಇಲ್ಲ
ಪಾರ್ಲರ್ ನಲ್ಲಿ ಕೆಲಸ ಮಾಡುವವರು ಎಷ್ಟೋ ಸಲ ಸೂಕ್ತ ತರಬೇತಿ ಪಡೆದಿರುವುದಿಲ್ಲ. ಇಂಥವರು ಅನಗತ್ಯ ಕೂದಲು ತೆಗೆಯುವ ನೆಪದಲ್ಲಿ ವ್ಯಾಕ್ಸಿಂಗ್ ಮಾಡಲು ಹೋಗಿ ನಿಮ್ಮ ಕೈಕಾಲು ಸುಟ್ಟಾರು! ಅಥವಾ ರೇಝರ್ ನಿಂದ ತೆಗೆಯುವಾಗ ಕಟ್ಸ್ ನಿಂದ ಗಾಯ ಮಾಡಬಹುದು. ಹೀಗಾಗಿ ಹೇರ್ ರಿಮೂವ್ ಮಾಡುವ ಅತಿ ಸುರಕ್ಷಿತ ವಿಧಾನ ಎಂದರೆ, ಈ ಆಧುನಿಕ ಹೇರ್ ರಿಮೂವರ್ ಫೇರ್ ನೆಸ್ ನ್ಯಾಚುರಲ್ ಕ್ರೀಮಗಳು ಮಾತ್ರ. ಇದು ಎಲ್ಲಾ ಸ್ಕಿನ್ ಟೈಪ್‌ಗೂ ಒಪ್ಪುತ್ತದೆ, ಜೊತೆಗೆ ಕೆಮಿಕಲ್ ಫ್ರೀ ಕೂಡ!
ಹೈಜೀನ್ ನಲ್ಲಿ ನಂ.1 ಹೇರ್ ರಿಮೂವ್ ಮಾಡುವಾಗ ಹೈಜೀನ್ ವಿಷಯ ಬಂದರೆ, ಈ ಆಧುನಿಕ ವಿಶ್ವಾಸಾರ್ಹ ಬ್ರಾಂಡ್‌ಗಳ ಕ್ರೀಮನ್ನಷ್ಟೇ ಬಳಸಿರಿ. ಏಕೆಂದರೆ ಪಾರ್ಲರ್‌ಗಳಲ್ಲಿ ಭಾರಿ ಜನದಟ್ಟಣೆ ಇರುತ್ತದೆ, ಹೀಗಾಗಿ ಬೇಗ ಬೇಗ ಗ್ರಾಹಕರನ್ನು ಕ್ಲಿಯರ್‌ಮಾಡುವ ಹುನ್ನಾರದಲ್ಲಿ ಅವರು ಅಗತ್ಯವಿರುವಷ್ಟು ಗ್ರಾಹಕರ ಹೈಜೀನ್‌ಕುರಿತು ಚಿಂತಿಸುವುದಿಲ್ಲ. ಅದೇ ಈ ಕ್ರೀಮುಗಳಾದರೆ ನೀವು ಇದನ್ನು ಎಲ್ಲಿ ಯಾವಾಗ ಬೇಕಾದರೂ ಹಾಯಾಗಿ ಅಪ್ಲೈ ಮಾಡಬಹುದು. ಇದು ಹೈಜೀನ್‌ಕುರಿತು 100% ಕಾಳಜಿ ವಹಿಸುತ್ತದೆ.
ಇದು ಗುಣಗಳ ಗಣಿ
ಈ ಕ್ರೀಂ ಹಲವು ಬಗೆಗಳಲ್ಲಿ ಲಭ್ಯ. ರೋಸ್ (ಸೆನ್ಸಿಟಿವ್‌ಸ್ಕಿನ್ ಟೈಪ್), ಗೋಲ್ಡ್ (ಎಲ್ಲಾ ಬಗೆಯ ಚರ್ಮದವರಿಗೂ), ಸ್ಯಾಂಡಲ್ (ಡ್ರೈ ಸ್ಕಿನ್‌ಗಾಗಿ), ಟರ್ಮರಿಕ್ (ಆಯ್ಲಿ ಸ್ಕಿನ್‌ಗಾಗಿ).
ಇದು ಕೇವಲ 5-6 ನಿಮಿಷಗಳಲ್ಲೇ ತನ್ನ ಚಮತ್ಕಾರಿ ಪರಿಣಾಮ ತೋರಿಸಬಲ್ಲದು. ಜೊತೆಗೆ ಇದು ಡರ್ಮಟಾಲಜಿಕಲಿ ಕ್ಲಿನಿಕಲಿ ಟೆಸ್ಟೆಡ್ ಕೂಡ.
ಇದರಲ್ಲಿ ಫೇರ್ ನೆಸ್ ಪ್ರಾಪರ್ಟೀಸ್ ಅಡಗಿದ್ದು ಅಂಡರ್ ಆರ್ಮ್ಸ್, ಬಿಕಿನಿ ಲೈನ್, ಕೈಕಾಲುಗಳಿಗೆ 100% ಸುರಕ್ಷಿತ ಎನಿಸಿದೆ.
– ಪ್ರತಿನಿಧಿ