ಜಾಹ್ನವಿಯ ಫೋಟೋ ಬಗ್ಗೆ ಇಷ್ಟು ಖುಷಿ ಏಕೆ?
ಶ್ರೀದೇವಿಯ ಮಗಳು ಜಾಹ್ನವಿ ತನ್ನ ತಂಗಿ ಖುಷೀ ಜೊತೆ ಇತ್ತೀಚೆಗೆ ದುಬೈನಲ್ಲೇ ನೆಲೆಸಿಬಿಟ್ಟಿದ್ದಾಳೆ, ಅಲ್ಲಿ ಅಡ್ವೆಂಚರ್ ಶೂಟ್ ಮೋಜು ಮಸ್ತಿ ಎಲ್ಲಾ ನಡೆಯುತ್ತಿದೆ. ಜಾಹ್ನವಿ ಇತ್ತೀಚೆಗೆ ಅಲ್ಲಿಂದಲೇ ತನ್ನ ಅತಿ ಬೋಲ್ಡ್ ಪೋಸ್‌ನ ಫೋಟೋಗಳನ್ನು FBಗೆ ಅಪ್ ಲೋಡ್ ಮಾಡಿದ್ದಳು, ಇದನ್ನು ನೋಡಿ ಶಿಖರ್ ಪಹಾಡಿಯಾ ಹೊಗಳಿದ್ದೂ ಹೊಗಳಿದ್ದೇ! ಈ ಶಿಖರ್ ಗೆ ಇಷ್ಟು ಖುಷಿಯಾಗಲು ಕಾರಣ….. ಈತನೇ ಈಗ ಜಾಹ್ನವಿಯ ಲೇಟೆಸ್ಟ್ ಬಾಯ್ ಫ್ರೆಂಡ್ ಅಂತೆ! ಈ ಸಂಬಂಧ ಎಷ್ಟು ಟೊಳ್ಳು ಗಟ್ಟಿ ಎನ್ನುವುದು ಪಕ್ಕಾ ಆಗಿದೆ, ಅಂತೆಕಂತೆಗಳಲ್ಲಿಯೇ ಇದೆಯೇ, ಆದರೆ ಒಂದಂತೂ ನಿಜ….. ಬೆಂಕಿ ಇಲ್ಲದೆ ಹೊಗೆ ಆಡದು!
ನನ್ನದು ಅಲ್ಲ ಅದ್ಧೂರಿ ಮದುವೆ!
ಬಾಲಿವುಡ್ ನಲ್ಲಂತೂ ಇದೀಗ ವೆಡ್ಡಿಂಗ್ ಸೀಸನ್ ಎನ್ನಬಹುದು. ಆಲಿಯಾ-ರಣಬೀರ್, ರಾಜ್ ಕುಮಾರ್-ಪತ್ರೀಖಾ, ವಿಕ್ಕಿ ಕೌಶಲ್-ಕತ್ರೀನಾರ ಜೋಡಿಗಳಲ್ಲಿ ಯಾರ ಮದುವೆ ಮೊದಲು ಎಂಬ ಪೈಪೋಟಿ ಇತ್ತು. ರಾಜ್ ಲೇಖಾ ಕಳೆದ ತಿಂಗಳೇ ಈ ರೇಸ್ ನಲ್ಲಿ ಮೊದಲಿಗರೆನಿಸಿದರು. ಇದೀಗ ಈ ಸಾಲಿಗೆ ಸೇರಲಿರುವ ಹೊಸಬನೆಂದರೆ ನಟ ವಿಕ್ರಾಂತ್. ಮದುವೆಗೆ ಬಹುತೇಕ ಸಿದ್ಧನಾಗಿರುವ ಬಾಲಿವುಡ್ ನ ಈ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್, ತನ್ನದು ಖಂಡಿತಾ ಅದ್ಧೂರಿಯಲ್ಲ, ಅತಿ ಸಿಂಪಲ್ ವೆಡ್ಡಿಂಗ್ ಆಗಲಿದೆ ಅಂತಾನೆ. ಬಲು ಹತ್ತಿರದ ನೆಂಟರು ಮತ್ತು ಆಪ್ತೇಷ್ಟರು ಮಾತ್ರ ಈ ಮದುವೆಯಲ್ಲಿ ಇರುತ್ತಾರಂತೆ. ನೀನು ಹೇಳ್ತಿರೋದೇನೋ ಸರಿ ಕಣಪ್ಪ ವಿಕ್ರಾಂತ್, ನಿನ್ನ ಫಿಯಾನ್ಸಿಗೂ ಇದೇ ಫೀಲಿಂಗಾ? ಅಂತ ಕೇಳ್ತಿದ್ದಾರೆ ಹಿತೈಷಿಗಳು.
ಪೃಥ್ವಿರಾಜ್ ಡೆಬ್ಯು ಚಿತ್ರಕ್ಕಾಗಿ ಕಾಯುತ್ತಿರುವ ಮಾನುಷಿ
ಬಾಲಿವುಡ್ ಗೆ ಹೊಸ ಎಂಟ್ರಿ ಪಡೆಯುತ್ತಿರುವ ನವ ನಟಿ ಮಾನುಷಿಗೆ ಬಲು ಕಷ್ಟದಿಂದ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕಿತು. ಕೊರೋನಾ ಮಹಾಮಾರಿ ಇದಕ್ಕೂ ಲತ್ತೆ ಹೊಡೆಸಿತು. ಅದುವೇ ಇವಳ ಡೆಬ್ಯು ಚಿತ್ರ `ಪೃಥ್ವಿರಾಜ್’! ಕೊರೋನಾದಿಂದ ಕುಂಟುತ್ತಿದ್ದ ಈ ಚಿತ್ರ ಅಂತೂ ಶೂಟಿಂಗ್ ಮುಂದುವರಿಸಿದೆ. ಇದರಿಂದ ಅವಳು `ಗಗನವು ಎಲ್ಲೋ…. ಭೂಮಿಯು ಎಲ್ಲೋ….’ ಎಂದು ಸಂಭ್ರಮಿಸುತ್ತಿದ್ದಾಳೆ. ಅಕ್ಷಯ್ ಕುಮಾರ್, ಸಂಜಯ್ ದತ್ತ್, ಸೋನು ಸೂದ್‌ರಂಥ ಘಟಾನುಘಟಿಗಳು ಮೊದಲ ಚಿತ್ರದಲ್ಲೇ ಇವಳ ಜೊತೆಗೂಡಿದ್ದಾರೆಂದ ಮೇಲೆ ಮಾನುಷಿ ಹೀಗೆ ಹಾಡಬೇಕಾದ್ದೇ! ಇಂಥವರ ಮಧ್ಯೆ ಇವಳು ಕೇವಲ ಶೋಪೀಸ್ ಆಗಿದ್ದಾಳಾ ಅಥವಾ ನಟನೆಯನ್ನೂ ಮಾಡಿದ್ದಾಳಾ? ಚಿತ್ರದ ಭವಿಷ್ಯವೇ ಇದನ್ನು ಹೇಳಬೇಕು!
ಇದರಲ್ಲಿದೆ ದಮ್!
ಕೆ.ಕೆ ಮೆನನ್, ಆಫ್ ತಾಬ್ ಶಿವದಾಸಾನಿಯರಂಥ ಉತ್ತಮ ಕಲಾವಿದರು ನಟಿಸಿರುವ `ಸ್ಪೆಷಲ್ ಆಪ್ಸ್ 1.5′ ವೆಬ್ ಸೀರೀಸ್ ಚಿತ್ರ ರಿಲೀಸ್ ಆದಂತೆಯೇ ತನ್ನ ದಮ್ ಏನೆಂದು ತೋರಿಸಿದೆ. ಪ್ರೇಕ್ಷಕರು, ವಿಮರ್ಶಕರು ಇದನ್ನು ಬಹು ಮೆಚ್ಚಿಕೊಂಡರು. ಇಲ್ಲಿ ಕೆ.ಕೆ. ಮೆನನ್ ನ ಧೀಶಕ್ತಿಯನ್ನು ಕೊಂಡಾಡಬೇಕು, ಆತ ತನ್ನ ಯಾವುದೇ ಚಿತ್ರ ಫ್ಲಾಪ್ ಆಗದಂತೆ ಎಚ್ಚರವಹಿಸುತ್ತಾನೆ. ಈತನ ಜೊತೆ ಆಫ್ ತಾಬ್, ವಿನಯ್ ಪಾಠಕ್ ಸಹ ಅಷ್ಟೇ ಶ್ರಮವಹಿಸಿದ್ದಾರೆ. ಇದರ ಪೂರ್ವಾರ್ಧದ ಚಿತ್ರದಲ್ಲಿ ಡೈಲಾಗ್ ಬಹಳ ಶಾರ್ಪ್ ಆಯ್ತು. ಇದರಲ್ಲಿ ಅದರ ಕೊರತೆ ಕಾಡಬಹುದು, ಆದರೂ ಚಿತ್ರದಲ್ಲಿ ದಮ್ ಇದೆ!
ನೆನೆದ ಮಾತ್ರಕ್ಕೆ ಬಳುಕು ಬಳ್ಳಿ ಆಗಲಾದೀತೇ?
ಈಗ ಎಲ್ಲೆಲ್ಲೂ ದಿಶಾ ಪಟಾನಿಯ ಫಿಗರ್‌ಚರ್ಚೆ ಕೇಳಿಬರುತ್ತಿದೆ. ಫ್ಯಾನ್ಸ್ ಈಕೆಯ ಪರ್ಫೆಕ್ಟ್ ಫಿಗರ್‌ರಹಸ್ಯದ ಬಗೆ ಅರಿಯಲು ತವಕಗೊಂಡಿದ್ದಾರೆ. ಕೇವಲ ರಹಸ್ಯ ತಿಳಿದರೆ ಆಯ್ತೇ? ದಿಶಾಳಂತೆ ಹಗಲೂ ರಾತ್ರಿ ದೇಹ ದಂಡಿಸಬೇಕು. ಈ ಸಲವಂತೂ ದಿಶಾ ಜಿಮ್ ನಲ್ಲಿ 720 ಕಿಕ್ಸ್ ಬಾರಿಸಿ ತಾನೆಷ್ಟು ಫಿಟ್‌ಎಂದು ನಿರೂಪಿಸಿದ್ದಾಳೆ. ಇಂದಿನ ಆಧುನಿಕ ತರುಣಿಯರು, ವಿವಾಹಿತೆಯರು ಸಹ ಇವಳಿಂದ ಕಲಿಯುವುದು ಬಹಳಷ್ಟಿದೆ. ಇದು ಸುಲಭಸಾಧ್ಯ ಅಲ್ಲ ಎಂಬುದು ನಿಜವಾದರೂ, ಅಸಾಧ್ಯವೇನಲ್ಲ ಎಂಬುದನ್ನೂ ನೆನಪಿಡಿ!
ರಕುಲ್ ಳ ಬೋಲ್ಡ್ ಮೂವ್
ಆಯುಷ್ಮಾನ್ ಖುರಾನಾ ಗಂಭೀರ ವಿಷಯಗಳನ್ನು ಆಧರಿಸಿದ ಹೊಸ ಚಿತ್ರಗಳ ಟ್ರೆಂಡ್ ಆರಂಭಿಸಿದ್ದಾನೆ. ಇದೇ ಸೀರೀಸ್ ಮುಂದುವರಿಸುತ್ತಾ, ರಕುಲ್ ಪ್ರೀತ್ ಸಿಂಗ್`ಛತ್ರೀವಾಲಿ’ ಚಿತ್ರದಲ್ಲಿ ಹೆವಿ ಬೋಲ್ಡ್ ಗ್ಲಾಮರಸ್ ಆಗಿ ಮಿಂಚುತ್ತಿದ್ದಾಳೆ. ಮಹಿಳಾ ಕಾಂಡೋಮ್ಸ್, ಅದರ ಬಳಕೆ, ಅದನ್ನು ಯೂಸ್ ಮಾಡುವ ಟೆಸ್ಟರ್….. ಇವಳ ಸುತ್ತಾ ಹೆಣೆಯಲಾದ ಈ ಕಥೆಯಲ್ಲಿ ರಕುಲ್‌ಳ ಬೋಲ್ಡ್ ನೆಸ್ ಮಿಂಚಿದೆ! ಮೊದಲ ದೃಶ್ಯದಿಂದಲೇ ಚಿತ್ರ ಬಹಳ ರೋಚಕ ಎನಿಸುತ್ತದಂತೆ. ನಿರ್ಮಾಪಕರು ಇನ್ನಷ್ಟು ಕಸರತ್ತು ನಡೆಸಿದರೆ ಚಿತ್ರ ಗೆಲ್ಲಬಹುದು. ರಕುಲ್‌ಳ ಈ ಬೋಲ್ಡ್ ಅವಾಂತರ ನೋಡಲು ನೀವಂತೂ ಇನ್ನಷ್ಟು ದಿನ ಕಾಯಲೇಬೇಕು.
ಸನೀ ಸ್ಥಾನ ತುಂಬಲಿದ್ದಾನಾ ಸಲ್ಲೂ
ಸನಿ ಡಿಯೋಲ್ ಆ್ಯಕ್ಷನ್ ಪೂರ್ಣ `ತ್ರಿದೇವ್’ ಚಿತ್ರದಿಂದ ಸ್ಟಾರ್ ಎನಿಸಿದ್ದ. 1989ರ 3 ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಇದೂ ಒಂದಾಗಿತ್ತು. ನಂಬಲರ್ಹ ಮೂಲಗಳ ಪ್ರಕಾರ, ನಿರ್ದೇಶಕ ರಾಜೀವ್‌ರಾಯ್, ಇದರ ರೀಮೇಕ್ ಕೈಗೆತ್ತಿಕೊಂಡಿದ್ದಾರಂತೆ! ಇಲ್ಲಿ ಸನೀ ಪಾತ್ರವನ್ನು ಬ್ಯಾಡ್‌ಬಾಯ್‌ಸಲ್ಲೂ ನಿಭಾಯಿಸುತ್ತಾನೆ. ಅವನೇ ನಿರ್ದೇಶಕರಿಗೆ ಈ ವಿಚಾರ ತಲೆತುಂಬಿಸಿದನಂತೆ. ಹೀಗಾಗಿ ಹಾಟ್‌ನ್ಯೂಸ್‌ಖಿಚಡಿ ತರಹ ರೆಡಿ ಆಗುತ್ತಿದೆ, ಜೊತೆಗೆ ಗ್ಲಾಮರ್ ಗೊಂಬೆಗಳಾರು ತಿಳಿಯಲು ಮುಂದಿನ ಸಂಚಿಕೆ ಗಮನಿಸಿ.
ಸನಿಯ ಸ್ಟಾರ್ಮುಂದೆ ಶೈನ್ ಆಗುತ್ತಾ?
`ಸೋನೂ ಕೆ ಟೀಟೂ ಕೀ ಸ್ವೀಟಿ, ಪ್ಯಾರ್ ಕಾ ಪಂಚ್ ನಾಮಾ-2′ ಚಿತ್ರಗಳಲ್ಲಿ ಮಿಂಚಿದ್ದ ಸನಿ ಸಿಂಗ್ ಇದೀಗ ಆಕಾಶದೆತ್ತರಕ್ಕೆ ಜಿಗಿಯಲು ಸನ್ನದ್ಧ! ಕೆಲವು ದಿನಗಳ ಹಿಂದೆ ಈತ `ಬಾಹುಬಲಿ’ ಪ್ರಭಾಸ್, ಸೈಫ್‌ಆಲಿ ಖಾನ್‌ರಂಥ ದಿಗ್ಗಜರೊಂದಿಗೆ `ಆದಿಪುರುಷ್’ ಚಿತ್ರ ಪೂರೈಸಿದ್ದ. ಆ ದಿಗ್ಗಜರ ಮಧ್ಯೆ ಈ ಹೊಸಬನ ಪಾತ್ರವೇನು ಎಂಬುದನ್ನು ಚಿತ್ರದ ರಿಲೀಸ್‌ನಂತರವೇ ತಿಳಿಯಬೇಕು. ಆದರೆ ಒಂದಂತೂ ನಿಜ, ಈ ಚಿತ್ರದಿಂದ ಸನಿಯ ಸ್ಟಾರ್ ಖಂಡಿತಾ ಶೈನ್ ಆಗುವ ದಿನಗಳು ದೂರ ಇಲ್ಲವಂತೆ. ಪ್ರಭಾಸ್ ಸೈಫ್‌ಫ್ಯಾನ್ಸ್, ಈ ಚಿತ್ರವನ್ನು ಹಿಟ್‌ಮಾಡಿಸದೆ ಬಿಡರು, ಹೂವಿನೊಂದಿಗೆ ಆಗ ಈ ನಾರೂ ಸ್ವರ್ಗ ಸೇರದೆ ಇದ್ದೀತೇ?
ಹೀಗೆ ಬದಲಾಯಿತು ಜೀವನ!
ಪ್ರತಿಯೊಬ್ಬರೂ ಸಕ್ಸೆಸ್ ಆಗಲು ಜೀವನ ಒಂದು ಅವಕಾಶ ನೀಡುತ್ತದಂತೆ. ಹಿರಿಯ ನಟ ಬೋಮನ್ ಇರಾನಿಗೂ ಈ ಅವಕಾಶ ಸಿಕ್ಕಿತ್ತು. ಮೂಲತಃ ಫೋಟೋಗ್ರಾಫರ್ ಆದ ಈತ, ಹವ್ಯಾಸಿ ನಾಟಕರಂಗದಲ್ಲಿ ದುಡಿದು ಆಂಗ್ಲ ನಾಟಕಗಳಲ್ಲಿ ಹೆಸರು ಗಳಿಸಿದ್ದವು. ಬಾಲಿವುಡ್‌ನ ಒಬ್ಬ ನಿರ್ದೇಶಕರು ಈತನ ಪ್ರತಿಭೆ ಗುರುತಿಸಿ, ತಮ್ಮ ಚಿತ್ರಕ್ಕಾಗಿ ಕೇವಲ 14 ದಿನಗಳನ್ನು ಕೇಳಿದರು. ತನ್ನ ಭಾಗದ ಆ ಕೆಲಸ ಮುಗಿಸಿ, ಈತ ತನ್ನ ಕೆಲಸಕ್ಕೆ ಮರಳಿದ್ದ. 1 ವರ್ಷದ ನಂತರ ಈತ `ಮುನ್ನಾಭಾಯಿ’ಯಂಥ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿದಾಗ, ಮತ್ತೆ ಹಿಂದಿರುಗಿ ನೋಡುವ ಪ್ರಸಂಗ ಬರಲಿಲ್ಲ. ಹೀಗಾಗಿಯೇ `ಗಾಳಿ ಬಂದಾಗ ತೂರಿಕೋ’ ಎಂಬಂತೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ, ಬುದ್ಧಿವಂತಿಕೆ!
ಕಂಗನಾಳಿಗೆ ಯಾರ ಸಂರಕ್ಷಣೆಯ ಗೊಡವೆ?
ನಟಿ ಕಂಗನಾಳಿಗೆ ಅದೃಶ್ಯ ಸಂರಕ್ಷಣೆ ಸಿಕ್ಕಿದೆಯೇ? ಸ್ಪಷ್ಟ ಶಬ್ದಗಳಲ್ಲಿ ಹೇಳಬೇಕೆಂದರೆ 1947ರಲ್ಲಿ ನಮಗೆ ಸಿಕ್ಕಿದ ಸ್ವಾತಂತ್ರ್ಯ ದಯಾಭಿಕ್ಷೆ ಆಗಿತ್ತು. ಇದರ ನಂತರ ಮೋದಿ ಅಧಿಕಾರಕ್ಕೆ ಬಂದ ಮೇಲೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಅಂದ್ರೇನು? ಈಕೆಯ ಈ ಹೇಳಿಕೆ ಹಿಂದೆ ಯಾವ ಶಕ್ತಿ ಅಡಗಿದೆ ಅಂತ ಗೊತ್ತಾಯಿತಲ್ಲ…..? ಅಸಲಿಗೆ ಕಂಗನಾಳಿಗೆ ಯಾವ ರೀತಿ `ಪದ್ಮಶ್ರೀ’ ಪ್ರಶಸ್ತಿ ದೊರಕಿತು, ಯಾವ ರೀತಿಯಲ್ಲಿ ಆಕೆಯ ತಪ್ಪಾದ, ಅರ್ಥಹೀನ ಮಾತುಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ, ಅದಂತೂ ದೇಶದ ಹಿತಕ್ಕಾಗಿ ಅಲ್ಲ. ಆದರೆ ಇದು ಒಂದು ವಿಶಿಷ್ಟ ರಾಜಕೀಯ ದಳಕ್ಕೆ ಹಿತಕರ ಎನಿಸಿದೆ. ಪರಿಣಾಮ, ಇಂದು ಕಂಗನಾ ರಾಷ್ಟ್ರದಲ್ಲಿ ಎಲ್ಲೆಲ್ಲೂ ಚರ್ಚಾರ್ಹಳು. ಕಾನೂನಿಗೆ ಇವಳು ಒಂದು ಸವಾಲೇ ಸರಿ!
ಒಬ್ಬ ಸಮರ್ಥ ರಾಜಕಾರಣಿ ಹಾಗೆ ಗುಂಪು ಬೆಳೆಸಿಕೊಂಡಿರುವ ಈಕೆ, ಮುಂದೆ ಖಂಡಿತಾ ಕನ್ಹೈಯಾ ಕುಮಾರ್‌ತರಹ ಜೇಲಿಗೆ ಹೋಗಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬದಲಿಗೆ ಇವಳ ಬೆಂಬಲಕ್ಕೆ ಮತ್ತಷ್ಟು ಮಹಾನ್‌ಧುರೀಣರು ಧಾವಿಸಿದರೆ ಆಶ್ಚರ್ಯವಿಲ್ಲ, ಮಾತನ್ನು ಹಾಗೆ ಟ್ವಿಸ್ಟ್ ಮಾಡುತ್ತಾಳೆ. ಇಂದಿನ ಕಾಲ ಇರುವುದೇ ಹೀಗೆ. ಇಂದಿನ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ, ಹಿಂದಿನ ಐತಿಹಾಸಿಕ ಸತ್ಯ ಮರೆಯಾಗಿಸಿ ಹೊಸ ಯುಗದ ನಿರ್ಮಾಣ ಮಾಡುವವರ ಭ್ರಮೆಯಲ್ಲಿ ತೇಲುತ್ತಿರುತ್ತದೆ.
ಹೀಗಾಗಿಯೇ ರಾತ್ರೋ ರಾತ್ರಿ ಒಂದು ಹೊಸ ಸಂಸತ್‌ಭವನ ರೂಪುಗೊಳ್ಳಬೇಕು ಎಂದು ನಿರ್ಧರಿಸಲಾಯಿತು. ಗಾಂಧೀಜಿ, ನೆಹರೂ, ಇಂದಿರಮ್ಮ, ರಾಜೀವ್‌ಗಾಂಧಿಯವರುಗಳ ಚಿಹ್ನೆಗಳನ್ನು ನಾಮಾವಶೇಷಗೊಳಿಸಲು ಯತ್ನಿಸಲಾಯಿತು, ಅಲ್ಲಿ ಬೇಕೆಂದೇ ಹೊಸಬರ ಪ್ರತಿಷ್ಠಾಪನೆ ಆಯಿತು. ಇದೇ ರೀತಿ ನೋಟು ರದ್ದುಗೊಳಿಸಲಾಯಿತು, ಅಲ್ಲಿಂದ ಗಾಂಧೀಜಿಗೆ ಖೊಕ್! ಆದರೆ ಇದು ನಡೆಯಲಿಲ್ಲ ಒಟ್ಟಾರೆ ಜನಸಾಮಾನ್ಯರ ನೆನಪಿನಿಂದ ದೇಶದ ಗಣ್ಯರ ನೆನಪನ್ನು ಅಳಿಸಿ ಹಾಕುವ ಹುನ್ನಾರ ನಡೆಸುತ್ತಿದೆ. ಅಧಿಕಾರದ ಮಹಿಮೆ ಇದೆಲ್ಲ ನಡೆಯುತ್ತಿದೆ. ಆದರೆ ಈ ದೇಶ ಇನ್ನೂ ಯುವ ಪೀಳಿಗೆ ಕೈಲಿದೆ ಎಂಬುದನ್ನು ಮರೆಯಬಾರದು. ಅದು ಎಷ್ಟು ಮಾತ್ರ ಉಳಿಯುತ್ತದೋ ಎಂಬುದನ್ನು ಕಾಲವೇ ಹೇಳಬೇಕು.
ಸಣ್ಣಪುಟ್ಟ ವಿಷಯಗಳಿಗೂ ದೇಶವನ್ನೆಳೆ ತಂದು ಮಾತನಾಡಿದರೆ ದೇಶಭಕ್ತಿ ಬಗ್ಗೆ ಹೇಳುವವರು ಇಂದು ಸವಾಲು ಎದುರಿಸುತ್ತಿದ್ದಾರೆ. ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ದಯಾಭಿಕ್ಷೆ ಎಂದಿರುವ ಕಂಗನಾ, ದೇಶಭಕ್ತಿ ತೋರಿಸುವವರಿಗೆ ಕಟೆಕಟೆಯೇ ಸರಿ ಎನ್ನುತ್ತಿದ್ದಾರೆ. ವಿಡಂಬನೆ ಎಂದರೆ, ಯಾರಾದರೂ ತಮ್ಮ ಪರವಾಗಿ ಏನೋ ಒಂದು ತಪ್ಪು ಹೇಳಿದರೆ, ಅದು ಅಕ್ಷಮ್ಯ, ಆದರೆ ಮಾಡಿದ ತಪ್ಪನ್ನೇ ಮಾಡುತ್ತಿದ್ದರೆ? ಕಾರಣವಿಲ್ಲದೆಯೇ ದೇಶ ಹಾಗೂ ದೇಶಭಕ್ತಿಯ ಬಗ್ಗೆ ಬೊಬ್ಬೆ ಹೊಡೆಯುವವರಿಗೆ, ಈಗ ಪ್ರಾಕ್ಟಿಕಲ್ ಆಗಿ ಏನಾದರೂ ಮಾಡಬೇಕಿರುವಾಗ ದಿವ್ಯ ಮೌನ ವಹಿಸುತ್ತಿದ್ದಾರೆ. ನಿಜವಾಗಿಯೂ ಅಧಿಕಾರದ ಚುಕ್ಕಾಣಿ ಹಿಡಿದಿರುವ ಈ ಮಂದಿಯ ಸತ್ಯಸ್ವರೂಪ, ತಡವಾಗಿಯಾದರೂ ಸರಿ, ಜನಸಾಮಾನ್ಯರ ಮುಂದೆ ಪ್ರಕಟಗೊಳ್ಳುತ್ತಿದೆ!