ಜಾಹ್ನವಿಯ ಫೋಟೋ ಬಗ್ಗೆ ಇಷ್ಟು ಖುಷಿ ಏಕೆ?

ಶ್ರೀದೇವಿಯ ಮಗಳು ಜಾಹ್ನವಿ ತನ್ನ ತಂಗಿ ಖುಷೀ ಜೊತೆ ಇತ್ತೀಚೆಗೆ ದುಬೈನಲ್ಲೇ ನೆಲೆಸಿಬಿಟ್ಟಿದ್ದಾಳೆ, ಅಲ್ಲಿ ಅಡ್ವೆಂಚರ್‌ ಶೂಟ್ ಮೋಜು ಮಸ್ತಿ ಎಲ್ಲಾ ನಡೆಯುತ್ತಿದೆ. ಜಾಹ್ನವಿ ಇತ್ತೀಚೆಗೆ ಅಲ್ಲಿಂದಲೇ ತನ್ನ ಅತಿ ಬೋಲ್ಡ್ ಪೋಸ್‌ನ ಫೋಟೋಗಳನ್ನು FBಗೆ ಅಪ್‌ ಲೋಡ್‌ ಮಾಡಿದ್ದಳು, ಇದನ್ನು ನೋಡಿ ಶಿಖರ್‌ ಪಹಾಡಿಯಾ ಹೊಗಳಿದ್ದೂ ಹೊಗಳಿದ್ದೇ! ಈ ಶಿಖರ್‌ ಗೆ ಇಷ್ಟು ಖುಷಿಯಾಗಲು ಕಾರಣ..... ಈತನೇ ಈಗ ಜಾಹ್ನವಿಯ ಲೇಟೆಸ್ಟ್ ಬಾಯ್‌ ಫ್ರೆಂಡ್‌ ಅಂತೆ! ಈ ಸಂಬಂಧ ಎಷ್ಟು ಟೊಳ್ಳು ಗಟ್ಟಿ ಎನ್ನುವುದು ಪಕ್ಕಾ ಆಗಿದೆ, ಅಂತೆಕಂತೆಗಳಲ್ಲಿಯೇ ಇದೆಯೇ, ಆದರೆ ಒಂದಂತೂ ನಿಜ..... ಬೆಂಕಿ ಇಲ್ಲದೆ ಹೊಗೆ ಆಡದು!

ನನ್ನದು ಅಲ್ಲ ಅದ್ಧೂರಿ ಮದುವೆ!

manushi_1

ಬಾಲಿವುಡ್‌ ನಲ್ಲಂತೂ ಇದೀಗ ವೆಡ್ಡಿಂಗ್‌ ಸೀಸನ್‌ ಎನ್ನಬಹುದು. ಆಲಿಯಾ-ರಣಬೀರ್‌, ರಾಜ್‌ ಕುಮಾರ್‌-ಪತ್ರೀಖಾ, ವಿಕ್ಕಿ ಕೌಶಲ್-ಕತ್ರೀನಾರ ಜೋಡಿಗಳಲ್ಲಿ ಯಾರ ಮದುವೆ ಮೊದಲು ಎಂಬ ಪೈಪೋಟಿ ಇತ್ತು.  ರಾಜ್‌ ಲೇಖಾ ಕಳೆದ  ತಿಂಗಳೇ ಈ ರೇಸ್‌ ನಲ್ಲಿ ಮೊದಲಿಗರೆನಿಸಿದರು. ಇದೀಗ ಈ ಸಾಲಿಗೆ ಸೇರಲಿರುವ ಹೊಸಬನೆಂದರೆ ನಟ ವಿಕ್ರಾಂತ್‌. ಮದುವೆಗೆ ಬಹುತೇಕ ಸಿದ್ಧನಾಗಿರುವ ಬಾಲಿವುಡ್‌ ನ ಈ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್‌, ತನ್ನದು ಖಂಡಿತಾ ಅದ್ಧೂರಿಯಲ್ಲ, ಅತಿ ಸಿಂಪಲ್ ವೆಡ್ಡಿಂಗ್ ಆಗಲಿದೆ ಅಂತಾನೆ. ಬಲು ಹತ್ತಿರದ ನೆಂಟರು ಮತ್ತು ಆಪ್ತೇಷ್ಟರು ಮಾತ್ರ ಈ ಮದುವೆಯಲ್ಲಿ ಇರುತ್ತಾರಂತೆ. ನೀನು ಹೇಳ್ತಿರೋದೇನೋ ಸರಿ ಕಣಪ್ಪ ವಿಕ್ರಾಂತ್‌, ನಿನ್ನ ಫಿಯಾನ್ಸಿಗೂ ಇದೇ ಫೀಲಿಂಗಾ? ಅಂತ ಕೇಳ್ತಿದ್ದಾರೆ ಹಿತೈಷಿಗಳು.

ಪೃಥ್ವಿರಾಜ್ಡೆಬ್ಯು ಚಿತ್ರಕ್ಕಾಗಿ ಕಾಯುತ್ತಿರುವ ಮಾನುಷಿ

slmaan_1

 

ಬಾಲಿವುಡ್‌ ಗೆ ಹೊಸ ಎಂಟ್ರಿ ಪಡೆಯುತ್ತಿರುವ ನವ ನಟಿ ಮಾನುಷಿಗೆ ಬಲು ಕಷ್ಟದಿಂದ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕಿತು. ಕೊರೋನಾ ಮಹಾಮಾರಿ ಇದಕ್ಕೂ ಲತ್ತೆ ಹೊಡೆಸಿತು. ಅದುವೇ ಇವಳ ಡೆಬ್ಯು ಚಿತ್ರ `ಪೃಥ್ವಿರಾಜ್‌'! ಕೊರೋನಾದಿಂದ ಕುಂಟುತ್ತಿದ್ದ ಈ ಚಿತ್ರ ಅಂತೂ ಶೂಟಿಂಗ್‌ ಮುಂದುವರಿಸಿದೆ. ಇದರಿಂದ ಅವಳು `ಗಗನವು ಎಲ್ಲೋ.... ಭೂಮಿಯು ಎಲ್ಲೋ....' ಎಂದು ಸಂಭ್ರಮಿಸುತ್ತಿದ್ದಾಳೆ. ಅಕ್ಷಯ್‌ ಕುಮಾರ್‌, ಸಂಜಯ್‌ ದತ್ತ್, ಸೋನು ಸೂದ್‌ರಂಥ ಘಟಾನುಘಟಿಗಳು ಮೊದಲ ಚಿತ್ರದಲ್ಲೇ ಇವಳ ಜೊತೆಗೂಡಿದ್ದಾರೆಂದ ಮೇಲೆ ಮಾನುಷಿ ಹೀಗೆ ಹಾಡಬೇಕಾದ್ದೇ! ಇಂಥವರ ಮಧ್ಯೆ ಇವಳು ಕೇವಲ ಶೋಪೀಸ್ ಆಗಿದ್ದಾಳಾ ಅಥವಾ ನಟನೆಯನ್ನೂ ಮಾಡಿದ್ದಾಳಾ? ಚಿತ್ರದ ಭವಿಷ್ಯವೇ ಇದನ್ನು ಹೇಳಬೇಕು!

ಇದರಲ್ಲಿದೆ ದಮ್!

spical_1

ಕೆ.ಕೆ ಮೆನನ್‌, ಆಫ್‌ ತಾಬ್‌ ಶಿವದಾಸಾನಿಯರಂಥ ಉತ್ತಮ ಕಲಾವಿದರು ನಟಿಸಿರುವ `ಸ್ಪೆಷಲ್ ಆಪ್ಸ್ 1.5' ವೆಬ್‌ ಸೀರೀಸ್‌ ಚಿತ್ರ ರಿಲೀಸ್‌ ಆದಂತೆಯೇ ತನ್ನ ದಮ್ ಏನೆಂದು ತೋರಿಸಿದೆ. ಪ್ರೇಕ್ಷಕರು, ವಿಮರ್ಶಕರು ಇದನ್ನು ಬಹು ಮೆಚ್ಚಿಕೊಂಡರು. ಇಲ್ಲಿ ಕೆ.ಕೆ. ಮೆನನ್‌ ನ ಧೀಶಕ್ತಿಯನ್ನು ಕೊಂಡಾಡಬೇಕು, ಆತ ತನ್ನ ಯಾವುದೇ ಚಿತ್ರ ಫ್ಲಾಪ್‌ ಆಗದಂತೆ ಎಚ್ಚರವಹಿಸುತ್ತಾನೆ. ಈತನ  ಜೊತೆ ಆಫ್‌ ತಾಬ್‌, ವಿನಯ್‌ ಪಾಠಕ್‌ ಸಹ ಅಷ್ಟೇ ಶ್ರಮವಹಿಸಿದ್ದಾರೆ. ಇದರ ಪೂರ್ವಾರ್ಧದ ಚಿತ್ರದಲ್ಲಿ ಡೈಲಾಗ್‌ ಬಹಳ ಶಾರ್ಪ್‌ ಆಯ್ತು. ಇದರಲ್ಲಿ ಅದರ ಕೊರತೆ ಕಾಡಬಹುದು, ಆದರೂ ಚಿತ್ರದಲ್ಲಿ ದಮ್ ಇದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ