ಕಂಗನಾ ರಾಣಾವತ್‌ ಳನ್ನೂ ಸೇರಿಸಿ ಬಾಲಿವುಡ್‌ ನಲ್ಲಿ ಇಂದು ಹಲವು ನಟಿಯರು ನ್ಯಾಪೋಟಿಸಮ್ ಕುರಿತು ಕೆಂಡ ಕಾರುತ್ತಿರುತ್ತಾರೆ. ಇವರುಗಳ ಆರೋಪವೆಂದರೆ, ಬಾವುಲಿಡ್‌ ನ ನ್ಯಾಪೋಟಿಸಮ್ ಕಾರಣ, ಎಷ್ಟೋ ಅಪ್ಪಟ ಪ್ರತಿಭಾಶಾಲಿಗಳಿಗೆ ಬೇಕೆಂದೇ ಎತ್ತಂಗಡಿ ಮಾಡಿಸಿ, ಇತರೇ ತುಚ್ಛ ಕಾರಣಗಳಿಗಾಗಿ ಅಭಿನಯದ ಗಂಧಗಾಳಿ ಅರಿಯದ ಬೇರೆ ನಟನಟಿಯರನ್ನು ಮೆರೆಸುತ್ತಿದ್ದಾರೆ ಅಂತ.

ಆದರೆ ಮಧ್ಯಪ್ರದೇಶ ರಾಜ್ಯದ ಭೋಪಾಲ್ ನಗರದ ಮಧ್ಯಮ ವರ್ಗದ ಕುಟುಂಬದವಳಾದ ಹಾಗೂ 2008ರಲ್ಲಿ `ಮೂರ್ತಿಕಲೆ/ಚಿತ್ರಕಲೆ'ಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ, ಪದಕ ಗಳಿಸಿದ ನಟಿ ಇಂದಿರಾ ತಿವಾರಿ, 2018ರ ಆಗಸ್ಟ್ ನಲ್ಲಿ ರಾಷ್ಟ್ರೀಯ ನಾಟ್ಯ ವಿದ್ಯಾಲಯದಲ್ಲಿ ಕಲಿಕೆ ಪೂರೈಸಿದ ಎರಡೇ ವರ್ಷಗಳಲ್ಲಿ, ಸುಮನ್‌ ಮುಖ್ಯೋಪಾಧ್ಯಯರು ನಿರ್ದೇಶಿಸಿದ `ನಝರ್‌ ಬಂದ್‌' ಚಿತ್ರದಿಂದ ಎಂಟ್ರಿ ಪಡೆದು, ಸುಧೀರ್‌ ಮಿಶ್ರಾರ `ಸೀರಿಯಸ್‌ ಮ್ಯಾನ್‌,' ಪಾಲ್‌ ರತನ್‌ ರಾಜ್‌ ರ `ಪುಷ್ಟಿ' ಸಂಜಯ್‌ ಲೀಲಾ ಭನ್ಸಾಲಿಯರ `ಗಂಗೂಬಾಯಿ ಕಾಠಿಯಾವಾಡಿ' ಚಿತ್ರಗಳಲ್ಲಿ ನಟಿಸಿ ಸೈ ಎನಿಸಿದ್ದಾಳೆ.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಇವಳನ್ನು ತಾಯಿ ಸಾಕಿ ಸಲಹಿದರು. 2010ರಲ್ಲಿ ಪ್ರಕಾಶ್‌ರ ಭೋಪಾಲ್‌ ಗೆ `ಆರಕ್ಷಣ್' ಚಿತ್ರದ ಶೂಟಿಂಗ್‌ ಗೆ ಬಂದಿದ್ದಾಗ, ಅವರು ಅಮಿತಾಭ್‌ ಮಗಳಾಗಿ ಇಂದಿರಾ ನಟಿಸಲು ಸಣ್ಣ ಅವಕಾಶ ನೀಡಿದ್ದರು. ಅಲ್ಲಿಂದ ಶುರುವಾಯ್ತು, ಇಂದಿರಾಳ ನಾಟ್ಯ ವಿದ್ಯಾಲಯ ಹಾಗೂ ಸಿನಿಮಾ ಕೆರಿಯರ್‌.

ನೀನು ಪೇಂಟಿಂಗ್‌, ಮೂರ್ತಿಕಲೆ, ಶಾಸ್ತ್ರೀಯ ಸಂಗೀತ, ನೃತ್ಯ, ನಟನೆ..... ಎಲ್ಲ ಕಲಿತಿದ್ದೀಯ. ಆದರೆ ಅಭಿನಯವನ್ನೇ ಕೆರಿಯರ್ಆಗಿಸಿಕೊಂಡದ್ದೇಕೆ?

ನಟನೆ ಬಿಟ್ಟು ಉಳಿದೆಲ್ಲ ಈಗಲೂ ನನ್ನ ನೆಚ್ಚಿನ ಹವ್ಯಾಸಗಳೇ! ನಾನು ಕಥಕ್‌ ನೃತ್ಯ, ಹಿಂದೂಸ್ಥಾನಿ ಸಂಗೀತ ಇನ್ನೂ ಅಭ್ಯಾಸ ಮಾಡುತ್ತಿದ್ದೇನೆ. `ನಝರ್‌ ಬಂದ್‌' ಚಿತ್ರದ ನಂತರ ಬಾಲಿವುಡ್‌ ನಲ್ಲೇ ಕೆರಿಯರ್‌ ಮುಂದುವರಿಸಲು ಬಯಸಿದೆ.

ಭೋಪಾಲ್, ದೆಹಲಿ, ಮುಂಬೈ.... ಅಂತರ ಇದೆ ಅನ್ಸುತ್ತಾ?

ನನಗೆ ಅಂಥ ಯಾವ ವಿಶೇಷ ವ್ಯತ್ಯಾಸ ಕಾಣಿಸಲಿಲ್ಲ. ನಾನು ಯಾವುದೇ ಹೆಜ್ಜೆ ಇಟ್ಟರೂ ಅಮ್ಮ ಈ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದೇ ಚಿಂತಿಸುವೆ. ದೆಹಲಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯದಲ್ಲಿದ್ದುಕೊಂಡೇ `ನಝರ್‌ ಬಂದ್‌' ಚಿತ್ರದ ನಾಯಕಿಯಾಗಿ ತೊಡಗಿದಾಗ, ಅದರಲ್ಲಿ ಹೀರೋ ಜೊತೆಗೆ ಬೋಲ್ಡ್ ಸೀನ್ಸ್ ಮಾಡಬೇಕಾದಾಗ, ನಿರ್ದೇಶಕರಿಗೆ ನನ್ನ ಇತಿಮಿತಿ ತಿಳಿಸಿ, ಅಷ್ಟರಲ್ಲಿ ಉಳಿದುಕೊಂಡಿರುವೆ.

ಮುಂಬೈಗೆ ಬಂದಾಗ ಇಲ್ಲಿನ ಗ್ಲಾಮರ್‌ನನ್ನನ್ನು ಬೆಚ್ಚಿ ಬೀಳಿಸಿತು. ಸುಧೀರ್‌, ಸಂಜಯ್‌ ರಂಥ ಮಹಾನ್‌ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿದೆ. ಇಂಥವರುಗಳ ಚಿತ್ರಗಳಲ್ಲಿ ಪಳಗಿ, ನಾನೀಗ ಮೈ ಚಳಿ ಬಿಟ್ಟು ನಟಿಸಲು ಮುಂದಾಗಿದ್ದೇನೆ.

ನಿನಗೆ `ಸೀರಿಯಸ್‌ಮ್ಯಾನ್‌' ಚಿತ್ರದಲ್ಲಿ ಪ್ಲಾರ್ಟ್‌ ಫಾರ್ಮ್ ಸಿಕ್ಕಿತು. `ನಝರ್‌ ಬಂದ್‌' ಥಿಯೇಟರ್‌ ನಲ್ಲಿ ಹೆಸರು ಗಳಿಸಿತು.

ಮುಂದೆ ನಿನ್ನ ಆಯ್ಕೆ ಯಾವ ಕಡೆ?

ಮೊದಲು ಥಿಯೇಟರ್‌ ಚಿತ್ರಗಳನ್ನೇ ಆರಿಸುವೆ. ನಾಟ್ಯ ವಿದ್ಯಾಲದಲ್ಲಿದ್ದಾಗಲೇ ಮೊದಲ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾದೆ. ಇದಕ್ಕಾಗಿ ಮೊದಲ ಬಾರಿಗೆ ಕೋಲ್ಕತಾಗೆ ಹೋಗಿ ಶೂಟಿಂಗ್‌ ನಡೆಸಿದೆ. ಆಗಿನಿಂದ ನಾಟಕ, ಸಿನಿಮಾ ಎರಡರಲ್ಲೂ ತೊಡಗಿರುವೆ. ವೇದಿಕೆ ಏರಿ ಡ್ರಾಮಾ ಥಿಯೇಟರ್‌ ನಿಭಾಯಿಸಬೇಕಾಗುವುದಕ್ಕೂ, ಸಿನಿಮಾ ಬೇಸಿಕ್ಸ್ ಗೂ ಇವರು ಸೂಕ್ಷ್ಮ ವ್ಯತ್ಯಾಸ ತಿಳಿಸಿಕೊಟ್ಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ