ಜನಪ್ರಿಯ ಧಾರಾವಾಹಿ `ಕುಂಕುಮ ಭಾಗ್ಯ' ಹಾಗೂ `ಲವ್ ಸೋನಿಯಾ' ಚಿತ್ರಗಳಿಂದ ಸದಾ ಚರ್ಚೆಯಲ್ಲಿರುವ ಮಾಡೆಲ್‌, ನಟಿ ಮೃಣಾಲ್ ‌ಠಾಕುರ್‌ ಮಹಾರಾಷ್ಟ್ರದ ಧುವೆ ಜಿಲ್ಲೆಯವಳು. ಹಿಂದಿ ಮಾತ್ರವಲ್ಲದೆ, ಮರಾಠಿ ಸಿನಿಮಾ, ಧಾರಾವಾಹಿಗಳಲ್ಲೂ ಅಷ್ಟೇ ಖ್ಯಾತಿ ಪಡೆದಳು. ಇವಳ ಕೆರಿಯರ್‌ ಗೆ ತಾಯಿ ತಂದೆ ಬಹಳ ಸಹಕರಿಸಿದ್ದಾರೆ.

ಇವಳಿಗೆ ಬಾಲ್ಯದಿಂದಲೇ ಸಿನಿಮಾ ಎಂದರೆ ಹುಚ್ಚು. ತನ್ನ ಈ ಜರ್ನಿಯಿಂದ ಅವಳಿಗೆ ಮಹಾ ಖುಷಿ ಸಿಕ್ಕಿದೆ. ಲಾಕ್‌ ಡೌನ್‌ ಮುಗಿದ ನಂತರ ಇವಳ ಅಪೂರ್ಣವಾಗಿದ್ದ ತನ್ನ ಧಾರಾವಾಹಿ, ಚಿತ್ರಗಳನ್ನು ಮುಗಿಸುತ್ತಿದ್ದಾಳೆ. ಅವಳೊಡನೆ ನಡೆಸಿದ ಮಾತುಕಥೆ :

ಇತ್ತೀಚೆಗೆ ನೀನು ಏನು ಮಾಡುತ್ತಿರುವೆ?

ಲಾಕ್‌ ಡೌನ್‌ ನಂತರ  ನನ್ನ ಅಪೂರ್ಣ ಧಾರಾವಾಹಿ, ಸಿನಿಮಾಗಳನ್ನು ಕಂಪ್ಲೀಟ್‌ ಮಾಡುತ್ತಿದ್ದೇನೆ. ನಾನು ಸದಾ ವಿಭಿನ್ನ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತೇನೆ. ನನ್ನ ಚಿತ್ರಗಳಾದ , `ಲವ್ ಸೋನಿಯಾ, ಸೂಪರ್‌, ಬಾಟ್ಲಾ ಹೌಸ್‌' ರಿಲೀಸ್‌ಆದಾಗಿನಿಂದ, ಉತ್ತಮ ಸ್ಕ್ರಿಪ್ಟ್ ನನಗೆ ಬರುತ್ತಿವೆ. ಉತ್ತಮ ಅವಕಾಶಗಳು ಸಿಗತೊಡಗಿವೆ. `ತೂಫಾನ್‌'  ಸಹ  OTT, ಸಿನಿಮಾ ಥಿಯೇಟರ್‌ ಗಳಲ್ಲಿ ಒಳ್ಳೆಯ ಹೆಸರು ಗಳಿಸಿತು. ಕೊರೋನಾ ಅಲೆ ತಗ್ಗಿದೆ, ಹೀಗಾಗಿ ಚಂಡೀಘಡಕ್ಕೆ ಒಂದು `ಜರ್ಸಿ' ಚಿತ್ರೀಕರಣದಲ್ಲಿ ಬಿಝಿ ಆಗಿದ್ದೇನೆ. ಜೊತೆಗೆ 90 ಮಕ್ಕಳನ್ನು ಒಳಗೊಂಡ, `ಪ್ರಿಯಾಸ್‌ ಮಾಸ್ಕ್' ನಮ್ಮ ದೇಶದ ಮೊಟ್ಟ ಮೊದಲ ಸಂಪೂರ್ಣ ಅನಿಮೇಟೆಡ್‌ ಕಮರ್ಷಿಯಲ್ ಚಿತ್ರವಾಗಲಿದೆ. ಕೋವಿಡ್‌ ಜಾಗೃತಿ ಮೂಡಿಸುವ ಚಿತ್ರವಿದು. ಇಲ್ಲಿ ನಾನು ನಾಯಕಿ ಪ್ರಿಯಾಳಿಗೆ ಧ್ವನಿ ನೀಡಿದ್ದೇನೆ.

ಇತ್ತೀಚೆಗೆ ಬಹುತೇಕ ಚಿತ್ರಗಳು OTT ಮೂಲಕ ರಿಲೀಸ್ಆಗುತ್ತಿವೆ. ಇದಕ್ಕೆ ನಿನ್ನ ಅಭಿಪ್ರಾಯ?

ಸಣ್ಣ ಮತ್ತು ಕಡಿಮೆ ಬಜೆಟ್‌ ನ ಚಿತ್ರಗಳಿಗೆ OTT ಒಂದು ಉತ್ತಮ ಪ್ಲಾಟ್‌ ಫಾರ್ಮ್ ಆಗಿದೆ. ಆದರೆ ನನ್ನ ಬಹುತೇಕ ಚಿತ್ರಗಳು ಥಿಯೇಟರ್‌ ನಲ್ಲಿ ರಿಲೀಸ್‌ ಆಗುತ್ತಿವೆ. ಆಗ ವೀಕ್ಷಕರಿಗೂ ಶಿಳ್ಳೆ ಹೊಡೆದು, ಚಪ್ಪಾಳೆ ಮೂಲಕ ಅಲ್ಲಿ ಎಂಜಾಯ್‌ ಮಾಡಬಹುದು! ನನ್ನ 2 ಹೊಸ ಚಿತ್ರಗಳೂ ಕ್ರೀಡೆ ಆಧರಿಸಿದ ಲವ್ ಸ್ಟೋರಿಗಳು. ಆದರೆ ಎರಡರಲ್ಲೂ ನನ್ನ ಪಾತ್ರ ವಿಭಿನ್ನ.

ನೀನು ಬಾಲ್ಯದಲ್ಲಿ ಆಟೋಟಗಳಲ್ಲಿ ಆಸಕ್ತಿ ಹೊಂದಿದ್ದೆಯಾ?

ಹೌದು, ನಾನು ಮೊದಲಿನಿಂದಲೂ ಸ್ಪೋರ್ಟ್ಸ್ ಮನ್‌, ನಾನು ಜಿಲ್ಲಾ ಮಟ್ಟದಲ್ಲಿ ಬಾಸ್ಕೆಟ್‌ ಬಾಲ್‌, ಫುಟ್‌ ಬಾಲ್ ‌ಆಡಿ ಪ್ರಶಸ್ತಿ ಗಳಿಸಿದ್ದೇನೆ!

ನೀನು ಬಾಲಿವುಡ್ಗೆ ಬಂದದ್ದು ಹೇಗೆ?

SG-MT-220-0138-(1)

ನಮ್ಮ ಮನೆಯವರಿಗೂ ಬಾಲಿವುಡ್‌ ಗೂ ಸಂಬಂಧವೇ ಇಲ್ಲ. ನಾನು ಸಿನಿಮಾ ನೋಡುವಾಗೆಲ್ಲ, ನಾನು ಬೆಳ್ಳಿತೆರೆಯಲ್ಲಿ ಮಿಂಚಬಲ್ಲನೇ ಎಂಬ ಹಗಲುಗನಸಲ್ಲಿ ತೇಲುತ್ತಿದ್ದೆ.....

`3 ಈಡಿಯಟ್ಸ್' ಚಿತ್ರ ನೋಡಿದ ಮೇಲೆ, ನಮಗೆ ಯಾವ ಕೆಲಸದಲ್ಲಿ ಆಸಕ್ತಿ ಇದೆಯೋ ಅದನ್ನೇ ಮಾಡಬೇಕು ಎಂಬುದನ್ನು ಪ್ರಾಕ್ಟಿಕಲ್ ಆಗಿ ಕಲಿತೆ. ಪಿಯುಸಿ ಓದುತ್ತಿದ್ದ ಆಗ ನನಗೆ ನನ್ನ ಕೆರಿಯರ್‌ ಎಲ್ಲಿಂದ ಆರಂಭಿಸಬೇಕು? ಎಂಬ ಪರಿಜ್ಞಾನವೇ ಇರಲಿಲ್ಲ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಮೆಡಿಸಿನ್‌ ಗೆ ಸೀಟ್‌ ಸಿಗುವ ಅವಕಾಶ ಇದ್ದರೂ, ಅದನ್ನೆಲ್ಲ ಬಿಟ್ಟು ಈ ಗ್ಲಾಮರ್‌ ಲೋಕಕ್ಕೆ ಕಾಲಿಟ್ಟೆ. ಸಿನಿಮಾಗಳಿಂದ ಪ್ರೇರಿತಳಾದ ನಾನು ಅದರ ಮೂಲಕ ಜನರಿಗೆ ಏನಾದರೂ ತಿಳಿಸ ಬಯಸುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ