ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲರಿಂದ ಭೇಷ್‌ ಎನಿಸಿಕೊಂಡ `ಕಾಳಿದಾಸ ಕನ್ನಡ ಮೇಷ್ಟ್ರು' ಜಗ್ಗೇಶ್‌ ಮತ್ತು ಮೇಘನಾ ಗಾಂವ್ಕರ್ ಇಬ್ಬರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತು. ಮೇಘನಾ ಗ್ಯಾಪ್‌ ನಂತರ ನಟಿಸಿದ ಚಿತ್ರವಿದು. ಕನ್ನಡದ ಪ್ರತಿಭೆ ಗ್ಲಾಮರ್‌ ಗೂ ಸೈ ಆ್ಯಕ್ಟಿಂಗ್‌ ಗೂ ಸೈ. ಆದರೂ ನಿರೀಕ್ಷಿಸಿದ ಹಾಗೆ ಸಾಲು ಸಾಲಾಗಿ ಚಿತ್ರಗಳು ಬರಲಿಲ್ಲ. ಯಾಕೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು, ಮಾತಿಗೆ ಸಿಕ್ಕಾಗ ಕೇಳಿದೆ.

ಯಾಕೆ..... ಅವಕಾಶಗಳು ಬರ್ತಾ ಇಲ್ವಾ?

ಅವಕಾಶಗಳು ಬರುತ್ತಿಲ್ಲ ಎಂದೇನಿಲ್ಲ. ಯಾವುದೇ ಒಂದು ಪಾತ್ರ ಮಾಡಿದರೂ ಅದು ನನಗೆ ಖುಷಿ ಕೊಡಬೇಕು. ಹಾಗೆಯೇ ನೋಡೋರ ಮನಸ್ಸಿನಲ್ಲಿ ಉಳಿಯಬೇಕು. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎನ್ನುತ್ತಾರಲ್ಲ ಹಾಗೆ. ಆದರೆ ಈ ರಂಗದಲ್ಲಿ  ಸುದ್ದಿಯಲ್ಲಿರಲೇಬೇಕು. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲೇಬೇಕು ಅಂತ ಈಗ ತಿಳಿದಿದೆ. ನನ್ನ ಬಳಿ ಒಂದೊಳ್ಳೆ ಸಬ್ಜೆಕ್ಟ್ ತಗೊಂಡು ಬರೋರು ಹೊಸಬರಿದ್ದರೂ ಆಸಕ್ತಿ ವಹಿಸಿ ಕೇಳ್ತೀನಿ.

ಸಿನಿಮಾರಂಗದಲ್ಲಿ ಕಾಂಪಿಟೇಶನ್ಸಿಕ್ಕಾಪಟ್ಟೆ ಇದೆ ಅನ್ಸೋಲ್ವಾ.......?

ನನಗೇನೋ ಹಾಗನಿಸೋದಿಲ್ಲ. ನನ್ನಿಂದಲೇ ಪಾತ್ರ ಮಾಡಿಸಬೇಕೆನ್ನುವವರು ನನ್ನನ್ನೇ ಹುಡುಕಿಕೊಂಡು ಬರುತ್ತಾರೆ. ಮೇಘನಾಳಿಗೆ ಅವಳದೇ ಆದ ಸ್ಥಾನವಿದೆ. ಹೀಗೆ ಹೇಳುವ ಈ ನಟಿ ಇದೀಗ ಜಿ. ಸಂತೋಷ್‌ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

ನಿರ್ದೇಶಕ ಸಂತೋಷ್ಅವರ ಚಿತ್ರದಲ್ಲಿ ನಟಿಸುತ್ತಿದ್ದೀಯಂತೆ....?

IMG-0260

ಈ ಹಿಂದೆ ಸಂತೋಷ್‌ ಅನೇಕ ಕಿರು ಚಿತ್ರಗಳನ್ನು ಮಾಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರ. ಅವರು ಬಂದು ಕಥೆ ಹೇಳಿದಾಗ ತುಂಬಾ ಹಿಡಿಸಿತು, ನನ್ನ ಪಾತ್ರ ಇಷ್ಟವಾಯಿತು. ತುಂಬಾ ಉತ್ಸುಕಳಾಗಿದ್ದೀನಿ! ಸದ್ಯದಲ್ಲೇ ಟೈಟ್‌ ರಿವೀವ್ ‌ಮಾಡುತ್ತಾರೆ.

ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದೀಯಾ ಎನ್ನುವ ಸುದ್ದಿ ಇದೆಯಲ್ಲ, ನಿಜವೇ.....?

ಸಿನಿಮಾ ತಾರೆಯರು ರಾಜಕೀಯಕ್ಕೆ ಬರೋದು ಹೊಸ ವಿಷಯವೇನಲ್ಲ..... ನನಗೂ ಚಿಕ್ಕವಳಿಂದ ಇಷ್ಟ. ಜನರಿಗೆ ನನ್ನಿಂದ ಏನಾದರೂ ಒಳ್ಳೆಯದಾಗಬೇಕೆಂಬ ಉದ್ದೇಶವಿಟ್ಟುಕೊಂಡು ಒಂದಲ್ಲ ಒಂದು ದಿನ ಪಾಲಿಟಿಕ್ಸ್ ಗೆ ಬಂದೇ ಬರುತ್ತೀನಿ. ಹೀಗೆ ಹೇಳುವ ಮೇಘನಾಳ ಅಜ್ಜಿ ಮಲ್ಲಮ್ಮ ಇತ್ತೀಚೆಗಷ್ಟೆ ಕಲಬುರ್ಗಿ ಮೇಯರ್‌ ಆಗಿ ಆರಿಸಿಬಂದರು. `ನನ್ನ ಅಜ್ಜಿಯೇ ನನಗೆ ಸ್ಛೂರ್ತಿ' ಎಂದು ಮೇಘನಾ ಟ್ವೀಟ್‌ ಮಾಡಿದ್ದಳು.

ನಿನಗಿಷ್ಟವಾದ ಪಾತ್ರಗಳು ಯಾವುದು?

IMG-0455

ವಿದ್ಯಾಬಾಲನ್‌ ಮಾಡುವಂಥ ಪಾತ್ರಗಳು ಅಂದರೆ `ತುಮ್ಹಾರಿ ಸುಲು' ಚಿತ್ರದಲ್ಲಿನ ಪಾತ್ರ ತುಂಬಾ ಇಷ್ಟ. ಹಾಗೆಯೇ ನಟಿ ತಬು ಮಾಡುವಂಥ ಪಾತ್ರಗಳು. ಇತ್ತೀಚೆಗೆ ನಾನು ಮಾಡಿರೋ `ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿನ ಪಾತ್ರ ಕೂಡ.

ನಿನ್ನ ಕನಸುಗಳು.....?

ತುಂಬಾ ಇವೆ..... ನಿರ್ದೇಶಕಿಯಾಗಬೇಕು. ಸಾಕಷ್ಟು ಸಣ್ಣ ಕಥೆಗಳನ್ನು ಬರೆದಿಟ್ಟಿದ್ದೇನೆ. ಯಾವುದನ್ನೂ ಇಲ್ಲಿಯ ತನಕ ಪಬ್ಲಿಶ್ ಮಾಡಿಲ್ಲ. ಪುಸ್ತಕ ಬರೆಯುವಾಸೆ. ಇದೆಲ್ಲದರ ನಡುವೆ ನಾನೀಗ ಪಿ.ಎಚ್‌.ಡಿ. ಮಾಡ್ತಿದ್ದೀನಿ. ನಾನು ಆರಿಸಿಕೊಂಡಿರುವ ವಿಷಯ `ಸಾಹಿತ್ಯದಿಂದ ಸಿನಿಮಾ,' ಬಹಳ ಇಷ್ಟಪಟ್ಟು ಕಷ್ಟಪಟ್ಟು ವರ್ಕ್‌ ಮಾಡ್ತಿದ್ದೀನಿ. ಮುಂಬೈ ಯೂನಿವರ್ಸಿಟಿಯಿಂದ ಪರೀಕ್ಷೆ ಕಟ್ಟಿದ್ದೇನೆ. ಈ ಕನಸೊಂದು ನನಸಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ