ಸರ್ನೇಮ್ ಹೆಸರಿನಲ್ಲಿ ಪ್ರೆಶರ್ಇಲ್ಲ

ತಾಪಸಿ ಪನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪ್ರೆಸ್‌ ಮೀಟ್‌ ಗಳಲ್ಲಿ ಮನಸ್ಸು ಬಿಚ್ಚಿ ಮಾತನಾಡುತ್ತಾಳೆ. ಒಂದು ಚಿತ್ರ ಯಶಸ್ವಿ ಅಥವಾ ಫ್ಲಾಪ್‌ ಆದದ್ದರ ಪ್ರೆಶರ್‌ ಎಷ್ಟರ ಮಟ್ಟಿಗೆ ಹೊರುತ್ತೀರಿ ಎಂದಾಗ, ಆಕೆ ನಸುನಗುತ್ತಾ, ನಾನಂತೂ ಬಾಲಿವುಡ್‌ ನ ಯಾವ ಸ್ಟಾರ್‌ ಪರಿವಾರಕ್ಕೂ ಸೇರಿದವಳಲ್ಲ. ಹೀಗಾಗಿ ಕುಟುಂಬದ ಪ್ರೆಸ್ಟೀಜ್‌, ಹೆಸರು ಉಳಿಸಬೇಕೆಂಬ ಘನವಾದ ಪ್ರೆಶರ್‌ ಏನೂ ಇಲ್ಲ. ನಾನು 100% ಪ್ರಾಮಾಣಿಕಳಾಗಿ ನನ್ನ ಕೆಲಸ ಮಾಡ್ತೀನಿ, ಮುಂದೆಯೂ ಮಾಡುತ್ತಿರುತ್ತೀನಿ ಎಂದಳು. ಶಭಾಷ್‌ ತಾಪಸಿ, ಯಾವ ಗಾಡ್‌ ಫಾದರ್‌ ಇಲ್ಲದೆಯೇ ಬಾಲಿವುಡ್‌ ನಲ್ಲಿ ಸ್ಥಾನ ಭದ್ರಪಡಿಸಿ ಕೊಳ್ಳುವುದು ಗೌರಿಶಂಕರ ಗಿರಿಯನ್ನೇರುವುದಕ್ಕಿಂತ ಕಡಿಮೆಯೇನಲ್ಲ.

ಮರಳಿ ಬಂದ ಸುಷ್ಮಿತಾ

SUSMITA

`ದಿಲ್ ‌ಬರ್‌ ದಿಲ್ ಬರ್‌.....' ಹಾಡಿನಿಂದ ಪಡ್ಡೆಗಳ ಎದೆಗೆ ಕಿಚ್ಚಿಟ್ಟು ಕುಣಿಸಿದ ಹೆಣ್ಣು ಸುಷ್ಮಿತಾ, ದೊಡ್ಡ ಗ್ಯಾಪ್‌ ನಂತರ ಬೆಳ್ಳಿ ತೆರೆಗೆ ಮತ್ತೆ ಮರಳಿದ್ದಾಳೆ. ಇವಳ ಹಿಂದಿನ ಯಶಸ್ವಿ ಚಿತ್ರಗಳು ನೆನಪಾದರೂ ಕೊನೆಯದಾಗಿ ಈಕೆ ನಟಿಸಿದ ಚಿತ್ರವೇ ನೆನಪಾಗದು. ಇದೀಗ ತನ್ನ ಫಿಟ್‌ ನೆಸ್‌ ವಿಡಿಯೋಸ್‌ ಮತ್ತು ರಾಂಪ್‌ ವಾಕ್‌ ಮೂಲಕ ಆಕೆ ತನ್ನ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಇತ್ತೀಚೆಗೆ ಆಕೆ ಫೇಸ್‌ ಬುಕ್‌ ನಲ್ಲಿ ಒಂದು ಪೋಸ್ಟ್ ಹಾಕಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾಳೆ. ಆಕೆ ಹೇಳಿದ್ದು, ಕಳೆದ 10 ವರ್ಷಗಳಿಂದ ಅಭಿಮಾನಿಗಳಾಗಿ ನೀವು ತೋರಿದ ಪ್ರೀತಿಗೆ ನಾನು ಚಿರಋಣಿ.

ಇನ್ನು ಮುಂದೆ ನಿಮ್ಮ ನಿರೀಕ್ಷೆ ಮುಗಿಯುಲಿದೆ. ನಂಬಲರ್ಹ ಮೂಲಗಳ ಪ್ರಕಾರ, ಈಕೆ ಇಷ್ಟರಲ್ಲೇ ಬಾಲಿವುಡ್‌ ನ ಚಿತ್ರದಲ್ಲಿ ಕಾಣಿಸಲಿದ್ದಾಳೆ!

ಆಯುಷ್ಮಾನ್ಜಾಡಿನಲ್ಲೇ ಕಾರ್ತಿಕ್

kartik (1)

`ಪ್ಯಾರ್‌ ಕಾ ಪಂಚ್‌ ನಾಮಾ-2' ಚಿತ್ರದಿಂದ `ಪತಿ ಪತ್ನಿ ಜೌರ್‌ ವೋ' ಚಿತ್ರದವರೆಗೂ (ಅದರಲ್ಲಿ `ಗೆಸ್ಟ್ ಇನ್‌ ಲಂಡನ್‌' ಬಿಟ್ಟು) ಕಾರ್ತಿಕ್‌ ನ ಎಲ್ಲಾ ಚಿತ್ರಗಳೂ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಗಳಿಸಿವೆ. ಇದುವರೆಗೂ ಆಯುಷ್ಮಾನ್‌ ಖುರಾನಾ ಮಾತ್ರವೇ ಇಂಥ ಜಾದೂ ಮಾಡಬಲ್ಲವನಾಗಿದ್ದ. ಬಹುಶಃ ಕಾರ್ತಿಕ್‌ ಆರ್ಯನ್‌ ಸಹ ಆಯುಷ್ಮಾನ್‌ ನ ಜಾಡಿನಲ್ಲೇ ಮುಂದುವರಿಯುತ್ತಿದ್ದಾನೆ ಎನಿಸುತ್ತದೆ. ಇವರಿಬ್ಬರ ಮುನ್ನುಗ್ಗುವ ವೇಗ ಗಮನಿಸಿದರೆ ಖಾನ್‌ ಗಳು, ಕುಮಾರರು, 80ರ ದಶಕದ ಸ್ಟಾರ್‌ ಗಳು ಇವರಿಂದ ಕಲಿಯಬೇಕಿದೆ. ಅವರುಗಳು ಈಗಲೂ ಸಹ ಮೆಗಾ ಬಜೆಟ್‌ ನ ಚಿತ್ರಗಳ ವ್ಯಾಮೋಹದಿಂದ ಇನ್ನೂ ಹೊರಬಂದಿಲ್ಲ.

ರಣವೀರ್ಸಿಂಗ್ ಹೊಸ ಚಿತ್ರದ ಜೋಶ್

Jayeshbhai

ಇತ್ತೀಚಿನ ದಿನಗಳಲ್ಲಿ ಯಾವ ಹೀರೋ ದೊಡ್ಡ ಧಮಾಕಾ ಮಾಡುತ್ತಿದ್ದಾನೆ ಎಂದರೆ ಅದು ರಣವೀರ್‌ ಸಿಂಗ್‌ ಮಾತ್ರ! ಆತನ ಇತ್ತೀಚಿನ ಚಿತ್ರ `ಗಲಿ ಬಾಯ್ಸ್'ಗೆ ಪ್ರಶಸ್ತಿ ಸಹ ಸಿಕ್ಕಿತು. ಇಷ್ಟು ಮಾತ್ರವಲ್ಲ, ಅವನ ಮುಂದಿನ ಹೊಸ ಚಿತ್ರಗಳಾದ `1983, ಜಯೇಶ್‌ ಭಾಯಿ ಜೋರ್‌ ದಾರ್‌'ಗಳಿಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೆ ಈತ `ಜಯೇಶ್‌ ಭಾಯಿ' ಚಿತ್ರದ ಫಸ್ಟ್ ಲುಕ್‌ ರಿಲೀಸ್‌ ಆದಾಗ ಈ ಚಿತ್ರದ ಕುರಿತಾಗಿ ಅಭಿಮಾನಿಗಳ ಹುಚ್ಚುಹೊಳೆಯೇ ಹರಿಯಿತು. ಈ ಹೊಸ ವರ್ಷ ಮಿಸ್ಟರ್‌ ಮಿಸೆಸ್‌ ರಣವೀರ್‌ ಸಿಂಗ್‌ ಇಬ್ಬರೂ ಮಿಂಚಲಿದ್ದಾರೆ ಅನ್ಸುತ್ತೆ. ದೀಪಿಕಾಳ ಹೊಸ ಚಿತ್ರ `ಛಪಾಕ್‌'ಗೂ ಸಹ ಅಭಿಮಾನಿಗಳು ಇಷ್ಟೇ ಉತ್ಸಾಹ ತೋರುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ