ಬ್ಯೂಟಿ ಅಂಡ್ ಬ್ರೈನ್ ಜೊತೆ ಜೊತೆಯಾಗಿ ಸಿಗೋದು ಅಪರೂಪ. ಆದರೆ ದಕ್ಷಿಣ ಭಾರತದಲ್ಲಿ ಇಂತಹ ಪ್ರತಿಭೆಗಳಿಗೆ ಬರವಿಲ್ಲ ಎನ್ನಬಹುದು. ಅದರಲ್ಲೂ ಕರ್ನಾಟಕದಲ್ಲಿ ಹಾಗೆ ಮಿಂಚಿದರ ನಿದರ್ಶನಗಳು ಬಹಳ. ಇಷ್ಟೆಲ್ಲ ಪೀಠಿಕೆ ಏಕೆ ಅಂದರೆ ದರ್ಶನ್ ನಟಿಸುತ್ತಿರುವ ರಾಬರ್ಟ್ ಜೊತೆಯಲ್ಲಿ ನಾಯಕಿಯಾಗಿರುವ ಸುಂದರಿ ಆಶಾ ಭಟ್ ಎಂಬ ಮಸ್ತ್ ಮಸ್ತ್ ಹುಡುಗಿ ಕೂಡಾ ಇಂಥದೇ ಅಪ್ಪಟ ಕನ್ನಡತಿ.
ಆಶಾ ಭಟ್ ಭದ್ರಾವತಿ ಮೂಲದ ಭಾರತೀಯ ಟಾಪ್ ಮಾಡೆಲ್. ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡಂಥ ಮೊದಲ ಭಾರತೀಯ ಮಹಿಳೆ.
ಆಶಾ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರೆ. ಭದ್ರಾವತಿ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ವ್ಯಾಸಂಗ, ನಂತರ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ. ನಂತರ ಪುಣೆ ಐ.ಐ.ಟಿ.ಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಹಿಸೋದು. ಆಳ್ವಾಸ್ ನಲ್ಲಿದ್ದಾಗ NCC ಸೇರಿಕೊಂಡಿದ್ದ ಆಶಾ ಗಣರಾಜ್ಯೋತ್ಸ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಳಂತೆ.
ಟೈಮ್ಸ್ ಗ್ರೂಪ್ ಆಯೋಜಿಸಿದ್ದ `ಮಿಸ್ ದಿ' ಸೌಂದರ್ಯ ಸ್ಪರ್ಧೆಯಲ್ಲಿ ಆಶಾ ಮಿಸ್ ಇಂಡಿಯಾ ಸುಪ್ರಾ ನ್ಯಾಷನಲ್ ಕ್ರೌನ್ ಧರಿಸಿದ್ದಳು. ಮಿಸ್ ಬ್ಯೂಟಿಫುಲ್ ಸ್ಮೈಲ್, ಮಿಸ್ ಫ್ಯಾಸಿನೇಟಿಂಗ್....... ಇವು ಆಶಾಳನ್ನು ಇನ್ನಷ್ಟು ಎತ್ತರಕ್ಕೆ ನಿಲ್ಲಿಸಿದ.
ಆಶಾ ಅನೇಕ ಜಾಹೀರಾತುಗಳಿಗೆ ಮಾಡೆಲ್ ಆದಳು. ನಂತರ ಬಾಲಿವುಡ್‌ಗೆ `ಜಂಗ್ಲಿ' ಚಿತ್ರದ ಮೂಲಕ ಎಂಟ್ರಿ. ಈಗ ಸ್ಯಾಂಡಲ್ ವುಡ್ ಪ್ರವೇಶಿಸಿರುವ ಆಶಾ ಭಟ್ ಜೊತೆ ಒಂದಿಷ್ಟು ಮಾತುಕತೆ.
ನಟಿಯಾಗುವ ಆಸೆ ಇತ್ತಾ?
ಹಾಗೇನಿಲ್ಲ.... ಯಾವತ್ತೂ ಅಂತಹ ಕನಸುಗಳನ್ನು ಕಂಡವಳಲ್ಲ. ಆದರೆ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಭರತನಾಟ್ಯ, ಗಾಯನ, ಸ್ಪೋರ್ಟ್ಸ್ ಎಲ್ಲದರಲ್ಲೂ ನಾನು ತೊಡಗಿಸಿಕೊಳ್ಳುವಂತೆ ಉತ್ಸಾಹ, ಪ್ರೋತ್ಸಾಹ ಎರಡನ್ನೂ ತುಂಬಿದ್ದರು. ಮಾಡೆಲಿಂಗ್, ಸಿನಿಮಾಗಳಲ್ಲಿ ಅವಕಾಶ ಬಂದಾಗ ಹುರಿದುಂಬಿಸಿ ಕಳಿಸಿದರು.
ಮೊದಲ ಸಿನಿಮಾ ಜಂಗ್ಲಿ ಅನುಭವ ಹೇಗಿತ್ತು?
ಒಳ್ಳೆಯ ಅನುಭವ, ಒಂದೂವರೆ ವರ್ಷ ತೆಗೆದುಕೊಂಡಿತ್ತು. ಬಾಲಿವುಡ್ ಟೆಕ್ನೀಶಿಯನ್ಸ್ ಜೊತೆ ಕೆಲಸ ಮಾಡುವ ಅವಕಾಶ, ಜೊತೆಗೆ ವನ್ಯ ಪ್ರಾಣಿಗಳು, ಕಾಡು.... ಇವೆಲ್ಲ ಮರೆಯುವಂತಿಲ್ಲ.
ಅತ್ಯಂತ ಸಂತೋಷದ ಕ್ಷಣ ಯಾವುದು?
ಬೆಸ್ಟ್ ಥಿಂಗ್ಸ್ ಹ್ಯಾಪನ್ಸ್ ಅಂದರೆ ಸ್ಯಾಂಡಲ್ ವುಡ್ ನಲ್ಲಿ! ಇಲ್ಲಿ ನಟಿಸಲು ಕರೆ ಬಂದಾಗ... ಡೈರೆಕ್ಟರ್ ತರುಣ್ ಸರ್ ಫೋನ್‌ಮಾಡಿ ರಾಬರ್ಟ್ ಚಿತ್ರದ ಬಗ್ಗೆ ಹೇಳಿದಾಗ ಬಹಳ ಖುಷಿಯಾಯ್ತು.
ರಾಬರ್ಟ್ ಚಿತ್ರದಲ್ಲಿನ ವರ್ಕಿಂಗ್ ಎಕ್ಸ್ ಪೀರಿಯನ್ಸ್ ಹೇಗಿತ್ತು?
ಕನ್ನಡದ ಸಿನಿಮಾ...... ದರ್ಶನ್ ಸರ್ ಜೊತೆ, ತರುಣ್ ಸರ್ ಡೈರೆಕ್ಷನ್. ಇಡೀ ತಂಡ ತೋರುತ್ತಿದ್ದ ಪ್ರೀತಿ, ಒಂದೇ ಕುಟುಂಬದವರಂತಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಖುಷಿ ಕೊಟ್ಟಿದ್ದು ಎಲ್ಲರೂ ಆರಾಮವಾಗಿ ಕನ್ನಡದಲ್ಲಿ ಹರಟುತ್ತಿದ್ದುದು.
ಪಾತ್ರದ ಬಗ್ಗೆ ಹೇಳು.
ದಯವಿಟ್ಟು ಅದನ್ನು ಮಾತ್ರ ಕೇಳಬೇಡಿ.... ತುಂಬಾ ಸೀಕ್ರೆಟ್ ಆಗಿಡಲಾಗಿದೆ. ತುಂಬಾ ಚೆನ್ನಾಗಿದೆ ಎಂದಷ್ಟೇ ಹೇಳಬಲ್ಲೆ.
ಹೋಗಲಿ, ನಿನಗೆಂಥ ಪಾತ್ರ ಇಷ್ಟ?
ಕಥೆ ಬಹಳ ಮುಖ್ಯ. ನನ್ನ ಕಾಂಟ್ರಿಬ್ಯೂಷನ್ ಬಗ್ಗೆ ತಿಳಿದುಕೊಳ್ತೀನಿ. ನನ್ನ ಇಂಪಾರ್ಟೆನ್ಸ್ ಎಷ್ಟಿರಬಹುದು. ಇದೆಲ್ಲ ಬಹಳ ಮುಖ್ಯ.