ಹೆಣ್ಣಿನ ಜೀವನದಲ್ಲಿ ಮದುವೆ ಅತಿ ವಿಶೇಷ ಪಾತ್ರ ವಹಿಸುತ್ತದೆ. ಮದುಮಕ್ಕಳಿಗೆ ಪರಸ್ಪರ ಚಿಂತೆಯಾದರೆ, ಬಂದವರಿಗೆ ಊಟದ ಚಿಂತೆ ಎಂಬಂತೆ ಎಲ್ಲರೂ ಇದರಲ್ಲಿ 100% ತಲ್ಲೀನರಾಗುತ್ತಾರೆ. ಮದುವೆಗೆ ಬಂದ ಪ್ರತಿಯೊಬ್ಬ ಮಹಿಳೆ ತಾನು ಅತಿ ಸುಂದರವಾಗಿ ಕಂಗೊಳಿಸಬೇಕೆಂದು ಪ್ರಯತ್ನಿಸುತ್ತಾಳೆ.

ಆದರೆ ಈ ಕೋವಿಡ್‌ ಕೊರೋನಾ ಕಾಟದಿಂದಾಗಿ ಮೊದಲಿನಷ್ಟು ಆಡಂಬರ, ಪ್ರದರ್ಶನ, ಜನಜಂಗುಳಿ ಇಲ್ಲ. ಎಲ್ಲವೂ ಹಿತಮಿತವಾಗಿ, ಇರುದರಲ್ಲಿ ಕ್ಲುಪ್ತವಾಗಿ ನಡೆಯಬೇಕಿದೆ. ಆದರೆ ಜನ ತಮ್ಮ ಉತ್ಸಾಹ, ಸಡಗರ, ಸಂಭ್ರಮಗಳ ಜೊತೆ ಕಾಂಪ್ರಮೈಸ್‌ ಆಗುವುದಿಲ್ಲ ಎಂಬುದು ನಿಶ್ಚಿತ.

`ನ್ಯೂ ನಾರ್ಮಲ್’ ಎಂಬ ಈ ಸ್ಥಿತಿಯಲ್ಲಿ ವರ್ಚುವಲ್ ವೆಡ್ಡಿಂಗ್‌, ಕಡಿಮೆ ಅತಿಥಿಗಳು ಹಾಗೆಂದು ಬಂದ ಜನರೆದುರು ಯಾವುದೋ ಸುಮಾರಾದ ಡ್ರೆಸ್‌ ಧರಿಸಲು ಸಾಧ್ಯವೇ? ನವ ವಧು ಅಥವಾ ಅವಳ ಸಖಿಯರೇ ಇರಲಿ, ನೇರ ಬಂದಿರುವಾಗ ಯಾವ ರೀತಿಯ ಡ್ರೆಸ್ಸಿಂಗ್‌ ಸೆನ್ಸ್ ಇರಬೇಕೆಂದು ತಜ್ಞರಿಂದ ಕೇಳಿ ತಿಳಿಯೋಣವೇ? ಈ ಟ್ರೆಂಡ್‌ ಅನುಸರಿಸಿ ನೀವು ಮದುವೆಗಳಲ್ಲಿ ಮಿರಿಮಿರಿ ಮಿಂಚಬಹುದು.

ಏನಾದರೂ ಹೊಸತಿರಲಿ

Balmy-White (1)

ನೀವು ಅನೂಹ್ಯ ಮಿಕ್ಸ್ ಮ್ಯಾಚ್‌ ಡ್ರೆಸೆಸ್‌ ನಿಂದ ನಿಮ್ಮ ವಾರ್ಡ್‌ ರೋಬಿಗೆ ಹೊಸ ಟಚ್‌ ಕೊಡಿ. ಕಡಿಮೆ ಹಣದಲ್ಲಿ ಉತ್ತಮ ಉಡುಗೆ ಕೊಂಡು ನಿಮ್ಮ ಲುಕ್ಸ್ ಗೆ ಹೊಸ ಟಚ್‌ ನೀಡಿ. ಸ್ಯಾರಿ ಡ್ರೇಪಿಂಗ್‌ ನ ಹೊಸ ಹೊಸ ವಿಧಾನ ಅನುಸರಿಸಿ ಅಥವಾ ಡ್ರೇಪ್ ನ್ನು ಹೊಸ ಸ್ಟೈಲಿಂಗ್‌ ನಲ್ಲಿ ಸಿಂಗರಿಸಿ, ನೀವು ಬೇರೆ ಸ್ಟೈಲ್ ಸ್ಟೇಟ್‌ ಮೆಂಟ್‌ ನೀಡಬಹುದು. ಹೀಗೆ ಫ್ಯಾಷನ್ನಿಗೆ ಹೊಸ ಟ್ವಿಸ್ಟ್ ನೀಡಬಹುದು.

ಡ್ರಮಾಟಿಕ್ಸ್ಲೀವ್ಸ್

Signature-Set (1)

ಈ ಸೀಸನ್‌ ನಲ್ಲಿ ಡ್ರಮಾಟಿಕ್‌ ಸ್ಲೀವ್ಸ್ ಫ್ಯಾಷನ್‌ ನಲ್ಲಿ ಇನ್‌. ಇದರಲ್ಲಿ ಧಾರಾಳ ಉದ್ದನೆ ಬೆಲ್‌ಶೇಪ್‌, ಫ್ಲೌಸಿ, ಫುಲ್ ಸ್ಲೀವ್ಸ್ ಟ್ರೆಂಡ್‌ ನಲ್ಲಿದೆ. ನೀವು ನಿಮ್ಮ ಸೀರೆ ಯಾ ಲೆಹಂಗಾದ ಬ್ಲೌಸ್‌ ನಲ್ಲಿ, ಇಂಥ ಸ್ಪೆಷಲ್ ಸ್ಲೀವ್ ‌ಮಾಡಿಸಿಕೊಳ್ಳಿ, ಫ್ಯಾಷನ್‌ ದೀವಾ ಎನಿಸಿರಿ. ನಿಮ್ಮ ಬೆಸ್ಟ್ ಫ್ರೆಂಡ್‌ ಮದುವೆಗೆ ಹೀಗೆ ಸಿಂಗರಿಸಿಕೊಂಡು ಪುಟ್ಟಕ್ಕನಾಗಿ ಹೊರಟು, ಎಲ್ಲರ ಗಮನ ಸೆಳೆಯಿರಿ.

ಮಾಸ್ಕ್ ಇದ್ದರೂ ಅಡ್ಡಿಯಿಲ್ಲ

Bomber-Set-(1) (1)

ಸುರಕ್ಷತೆ, ಹೈಜೀನ್‌ ದೃಷ್ಟಿಯಿಂದ ಇತ್ತೀಚೆಗೆ ಎಲ್ಲಾ ಸಮಾರಂಭಕ್ಕೂ ಮಾಸ್ಕ್ ಕಡ್ಡಾಯವಾಗಿದೆ. ವಧೂ ವರರಿಂದ ಹಿಡಿದು ಬಂದ ಅತಿಥಿಗಳು, ಬಂಧುಬಳಗ ಎಲ್ಲಾ ಮಾಸ್ಕ್, ಫೇಸ್‌ ಶೀಲ್ಡ್, ಕೈಗವಸು, ಸ್ಯಾನಿಟೈಸರ್‌ ಇಲ್ಲದೆ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಎಷ್ಟೇ ಜನ ಬಂದಿರಲಿ ಸೋಶಿಯಲ್ ಡಿಸ್ಟೆನ್ಸಿಂಗ್‌ ಬಗ್ಗೆ ಕಾಳಜಿ ಇರಲಿ.

ನಿಮಗಾಗಿ, ನಿಮ್ಮವರಿಗಾಗಿ ಮಾಸ್ಕ್ ಕಡ್ಡಾಯ ಧರಿಸಿರಿ. ಇದಕ್ಕಾಗಿ ಮಾಸ್ಕ್ ನ್ನು ಫ್ಯಾಷನೆಬಲ್ ಸ್ಟೈಲಿಶ್‌ ಆಗಿಸಿಕೊಳ್ಳಿ. ಜೊತೆಗೆ ದಂಪತಿಗಳು ತಮ್ಮ ಉಡುಗೆಗೆ ತಕ್ಕಂತೆ ಮಾಸ್ಕ್ ನ್ನು ಕಸ್ಟಮೈಸ್‌ ಮಾಡಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಆ್ಯಕ್ಸೆಸರೀಸ್‌, ಕಸೂತಿ, ಹೆಸರಿನ ಇನಿಶಿಯಲ್ಸ್, ಇತರ ಪ್ರಿಂಟ್ಸ್ ಅಳವಡಿಸಿ. ಇದು ಸುರಕ್ಷತೆ ಜೊತೆ ನಿಮಗೆ ಫ್ಯಾಷನ್‌ ಸ್ಟೇಟ್‌ ಮೆಂಟ್‌ ಸಹ ಆಗುತ್ತದೆ.

ಶ್ರೇಯಾ ಸುಧಾಕರ್

Classic-Red (1)

ಕ್ಲಾಸಿಕ್‌ ರೆಡ್‌ ಕೆಂಪು ಬಣ್ಣ ಭಾರತೀಯ ಮದುವೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ವೆಡ್ಡಿಂಗ್‌ ಸೀಸನ್ನಿನ ಅಚ್ಚುಮೆಚ್ಚಿನ ಬಣ್ಣ. ನೀವು ತೆಳು ಕೆಂಬಣ್ಣದಿಂದ ಮೈಲ್ಡ್ ಟೋನ್‌, ರಿಚ್‌ ಬ್ರೈಟ್‌ ರೆಡ್‌ ವರೆಗೂ ಆರಿಸಿಕೊಳ್ಳಬಹುದು. ಎಥ್ನಿಕ್‌ ವೇರ್‌ ಗಾಗಿ ಇದು ಪರ್ಫೆಕ್ಟ್!

ಬಾಲ್ಮಿ ವೈಟ್ಸ್ ನಲ್ಲಿ ಕ್ಲಾಸಿಕ್ಲುಕ್ಸ್

 

ಮದುವೆಯ ನೆಂಟರು ಮತ್ತು ನವ ವಧುವಿನ ಸಖಿಯರಿಗೆ `ಬಾಲ್ಮಿ ವೈಟ್ಸ್’ ಇತ್ತೀಚೆಗೆ ಪರ್ಫೆಕ್ಟ್ ಟ್ರೆಂಡ್‌ ಎನಿಸಿದೆ. ಇದನ್ನು ಗೋಲ್ಡ್ ಯಾ ಸಿಲ್ವರ್‌ ಜ್ಯೂವೆಲರಿ ಜೊತೆ ಮ್ಯಾಚ್‌ ಮಾಡಿ, ಹೊಸ ಲುಕ್‌ ಕೊಡಿ. ಆಗ ಎಲ್ಲರಿಗಿಂತ ಬ್ಯೂಟಿಫುಲ್ ಎನಿಸುವಿರಿ.

ಬೊಂಬರ್ಸೆಟ್ನಲ್ಲಿ ಟ್ರೆಂಡ್

ದಿವಾ ಮದುವೆಗಳಲ್ಲಿ ಸಾಂಪ್ರದಾಯಿಕ ಉಡುಗೆಗಳಿಂದ ಹಿಡಿದು ಆಧುನಿಕ ಎಥ್ನಿಕ್‌ ಉಡುಗೆಗಳವರೆಗೆ ಬೊಂಬರ್‌ ಸೆಟ್ ಟ್ರೆಂಡಿನಲ್ಲಿದೆ. ನೀವು `ಬೊಂಬರ್‌ ಜ್ಯಾಕೆಟ್‌’ನ್ನು ಫ್ಲೇಯರ್ಡ್‌ ಸ್ಕರ್ಟ್‌ ಜೊತೆ ಸ್ಟೈಲ್ ‌ಮಾಡಿಕೊಳ್ಳಿ. ಈ ಸೆಟ್‌ ರಿಚ್‌ ಕಲರ್ಸ್‌ ನಲ್ಲಿ ಲಭ್ಯ. ಇದು ನಿಮಗೆ ಸಾಂಪ್ರದಾಯಿಕ, ಖುಷಿ ಖುಷಿ, ಲವಲವಿಕೆಯ ಅನುಭೂತಿ ತುಂಬುತ್ತದೆ. ನಿಮ್ಮೊಳಗೆ ಅಡಗಿರುವ ಟ್ರೆಂಡಿ ದೀವಾಳನ್ನು ಹೊರಗೆಳೆಯಲು ರೆಡಿಯಾಗಿ. ಸ್ಟೇಟ್‌ ಮೆಂಟ್‌ ಜ್ಯೂವೆಲರಿ ಧರಿಸಿ ಮಿರಿಮಿರಿ ಮಿಂಚಿರಿ.

ಸಿಗ್ನೇಚರ್ಲುಕ್

ನಿಮಗೆ ಎಥ್ನಿಕ್‌ ಫ್ಯಾಷನ್‌ ಇಷ್ಟವೆಂದರೆ, ಇದಕ್ಕೆ ಸೂಕ್ತ ಲುಕ್‌ ನೀಡಲು ಸಜ್ಜಾಗಿ. ನೀವು ಇದರೊಂದಿಗೆ ಸಿಗ್ನೇಚರ್‌ ಲುಕ್‌ ನೀಡಿ ಬಲು ಗ್ಲಾಮರಸ್‌ ಎನಿಸುವಿರಿ. ಈ ಲುಕ್‌ ನಿಮ್ಮ ಅಡಿಯಿಂದ ಮುಡಿಯವರೆಗೂ ನಿಮ್ಮನ್ನು ಟಿಪ್‌ ಟಾಪ್‌ ಫ್ಯಾಷನೆಬಲ್ ಆಗಿಸುತ್ತದೆ. ಇದಕ್ಕಾಗಿ ನೀವು 2-3 ಪೀಸೆಸ್‌ ಹುಟ್ಸ್ ಆರಿಸಿ, ಬೇರೆ ಬೇರೆ ತರಹದ ಲುಕ್ಸ್ ಜೊತೆ ಸ್ಟೈಲಿಶ್‌ ಆಗಿ ಮಿಂಚಿರಿ!

ರೊಮ್ಯಾಂಟಿಕ್ರೆಟ್ರೋ

Glam-(2) (1)

70-80ರ ದಶಕದ ರೊಮ್ಯಾಂಟಿಕ್‌ ಟೇರ್ಸ್‌ ರಫ್ಸ್‌, ಮತ್ತೊಮ್ಮೆ ಫ್ಯಾಷನ್ನಿಗೆ ಗ್ಲಿಟರಿ ಗ್ಲಾಮರ್‌ ಟಚ್‌ ನೀಡುತ್ತದೆ. ಮದುವೆಯ ಈ ಸೀಸನ್‌ ರೆಟ್ರೋ ವೈಬ್ಸ್ ನಿಂದ ನಿಮಗೆ ಅದ್ಭುತ ರೊಮ್ಯಾಂಟಿಕ್‌ ಲುಕ್ಸ್ ನೀಡುತ್ತದೆ. ನೀವು ರಫ್ಡ್‌ ಕ್ರಾಫ್ಟ್ ಟಾಪ್‌, ಟೇರ್ಡ್ ಶರಾರಾ, ಶಿಯರ್ಡ್‌ ಯಾ ಲೇಯರ್ಡ್‌ ಜ್ಯಾಕೆಟ್‌, ರಫ್ಡ್‌ ಹ್ಯಾವೈನ್ಸ್ ಇದನ್ನು ಪೌಡರ್ಡ್‌ ಬ್ಲೂ, ಬ್ಲಶ್‌ ನೇಲ್ ‌ನಂಥ ಸಾಫ್ಟ್ ಕಲರ್ಸ್ ಜೊತೆ ಪರ್ಫೆಕ್ಟ್ ಲುಕ್‌ ಹೊಂದಿರಿ.

ಒಂದಿಷ್ಟು ಗ್ಲಾಮರಸ್ಟಚ್

ಆರತಕ್ಷತೆಗೆ ಗ್ಲಾಮ್ ಗೌನ್‌ ಇಂದಿನ ಶೋ ಸ್ಟಾಪಿಂಗ್‌ ಟ್ರೆಂಡ್‌ ಆಗಿದೆ. ಆರ್ಮೆಟ್‌ ಮ್ಯಾಟ್ರಿಕ್‌ ಎಂಬ್ರಾಯಿಡರಿ, ಆಕರ್ಷಕ ಬಣ್ಣ ಮತ್ತು ಬೆಸ್ಟ್ ಫ್ಯಾಬ್ರಿಕ್ಸ್ ನಲ್ಲಿ ಈವ್ನಿಂಗ್‌ ಗೌನ್‌ ಆರಿಸಿ ಮದುವೆ ಮನೆಯ ಆಕರ್ಷಣೆಯ ಕೇಂದ್ರಬಿಂದು ಆಗಿರಿ. ಪ್ಲೇರ್‌ ಲೆಂಥ್‌ ಗೌನ್‌ ನಿಮಗೆ ಅತ್ಯುತ್ತಮ ಹೆಣ್ತನದ ಹೆಗ್ಗುರುತೆನಿಸುತ್ತದೆ. ಫ್ಯಾಷನ್ನಿನ ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ