ಈಗ ಅರ್ಥವಾಗುತ್ತಿರುವ ವಿಷಯ ಅನಾಮಿಕಾಗೆ ಮೊದಲೇ ಅರ್ಥ ಆಗಿದ್ದರೆ, ನೆರೆಮನೆಯವನ ಚಿತಾವಣೆಗೊಳಗಾಗಿ ತನ್ನ ಪತಿ ಕಿರಣ್‌ ನನ್ನು ಹತ್ಯೆ ಮಾಡುವ ಪ್ರಸಂಗವೇ ಬರುತ್ತಿರಲಿಲ್ಲ. ಈಗ ಅವಳು ಜೈಲಿನ ಸರಳುಗಳ ಹಿಂದೆ ಇರುವ ಸಂದರ್ಭವೇ ಉಂಟಾಗುತ್ತಿರಲಿಲ್ಲ. ಅವಳ ಗಂಡ ಸಾಧಾರಣ ವ್ಯಕ್ತಿಯಾಗಿದ್ದರೂ, ಗಂಡನಂತೂ ಆಗಿಯೇ ಆಗಿದ್ದ. ಅವಳ ಜೊತೆಗೆ ಪ್ರೀತಿಯಿಂದಲೇ ಇದ್ದ. ಅವನದ್ದೇ ಆದ ಪುಟ್ಟ ಮನೆ, ಪುಟ್ಟ ಸಂಸಾರ. ಅವನಶ್ಯಕ ತೋರಿಕೆ ಇರಲಿಲ್ಲ ಅವನಿಗೆ.

ಸಮೀರ್‌ ಮಾತ್ರ ತೋರಿಕೆಯ ವ್ಯಕ್ತಿಯಾಗಿದ್ದ. ಅಂದರೆ ಸಮೀರ್‌ ಬೇರಾರೂ ಅಲ್ಲ. ಅವನು ಕಿರಣ್‌ ನ ಗೆಳೆಯ. ಇವಳನ್ನು ಅತ್ತಿಗೆಯೆಂದು ಕರೆಯುವ ವ್ಯಕ್ತಿ. ಅವಳನ್ನು ಪ್ರಭಾವಿತಗೊಳಿಸಲು ಏನೆಲ್ಲ ತಂತ್ರಗಳನ್ನು ಮಾಡುತ್ತಿದ್ದ. ಆದರೆ ಅವು ಕಿರಣನಿಗೆ ತಂತ್ರಗಳೆನಿಸದೆ ವಾಸ್ತವ ಎಂದೆನಿಸುತ್ತಿದ್ದವು. ಪಕ್ಕದ ಮನೆಯವನಾಗಿರುವ ಕಾರಣದಿಂದ ಸಮೀರ್‌ ಆಗಾಗ ಮನೆಗೆ ಬಂದು ಹೋಗಿ ಮಾಡುತ್ತಿದ್ದ.

 

ಸಮೀರ್‌ ಬಹಳ ಲವಲವಿಕೆಯ ಸ್ಟೈಲಿಂಗ್‌ ವ್ಯಕ್ತಿಯಾಗಿದ್ದ. ತನ್ನ ಗೆಳೆಯನ ಪತ್ನಿಯಾಗಿರುವ ಕಾರಣದಿಂದ ಅವನು ಅನಾಮಿಕಾಳ ಜೊತೆ ತಮಾಷೆ ಕೀಟಲೆ ಮಾಡುತ್ತಿದ್ದ. ಕ್ರಮೇಣ ಇಬ್ಬರಲ್ಲೂ ನಿಕಟತೆ ಹೆಚ್ಚುತ್ತಾ ಹೋಯಿತು. ಗಂಡ ಕಿರಣ್‌ ಗೆ ಹೋಲಿಸಿದರೆ ಅನಾಮಿಕಾಗೆ ಸಮೀರ್‌ ಬಹಳ ಇಷ್ಟವಾಗುತ್ತಿದ್ದ. ಸಮಯ ಸಿಕ್ಕಾಗೆಲ್ಲ ಸಮೀರ್‌ ಅನಾಮಿಕಾಳ ಜೊತೆ ಫೋನ್‌ ನಲ್ಲಿ ಮಾತನಾಡುತ್ತಿದ್ದ. ಆರಂಭದಲ್ಲಿ ಸಾಧಾರಣ ಮಾತುಗಳು, ನಗೆ ಚಟಾಕಿಗಳನ್ನು ಫಾರ್ವರ್ಡ್ ಮಾಡುತ್ತಿದ್ದರು. ಆ ಬಳಿಕ ಎಂತಹ ಕೆಲವು ಮೆಸೇಜ್‌ ಗಳನ್ನು ಕಳುಹಿಸುತ್ತಿದ್ದನೆಂದರೆ, ಅವನ್ನು ತೀರಾ ನಿಕಟವರ್ತಿಗಳು ಮಾತ್ರ ಓದಬಹುದಿತ್ತು. ಆ ಬಳಿಕ ಅಂತರಂಗದ ಸಂಗತಿಗಳು. ಸಮೀರ್‌ ನ ನಂಬರನ್ನು ಅವಳು ಸಮೀರಾ ಎಂದು ಸೇವ್ ಮಾಡಿದ್ದಳು. ಯಾರಾದರೂ ನೋಡಿದರೆ ಅದು ಗೆಳತಿಯ ನಂಬರ್‌ ಎನಿಸಬೇಕು. ಸಮೀರ್‌ ತನ್ನ ಡಿಪಿಯಲ್ಲಿ ಹೂವಿನ ಫೋಟೋ ಹಾಕಿಕೊಂಡಿದ್ದ. ಅದನ್ನು ನೋಡಿದರೆ ಅದು ಯಾರ ನಂಬರ್‌ ಎಂದು ಸಹಜವಾಗಿ ಗೊತ್ತಾಗುತ್ತಿರಲಿಲ್ಲ.

ಕ್ರಮೇಣ ಪರಿಸ್ಥಿತಿ ಹೇಗಾಗಿಬಿಟ್ಟಿತೆಂದರೆ,  ಅನಾಮಿಕಾಳಿಗೆ ಸಮೀರ್‌ ನನ್ನು ಹೊರತಪಡಿಸಿ ಬೇರಾರೂ ಒಳ್ಳೆಯವರೆಸುತ್ತಿರಲಿಲ್ಲ. ಎಷ್ಟೋ ಸಲ ಅವಳು ಏಕಾಂಗಿಯಾಗಿದ್ದಾಗೆಲ್ಲಾ ಸಮೀರ್‌ ಗೆ ಫೋನ್‌ ಮಾಡಿ ಅವನನ್ನು ಕರೆಸಿಕೊಳ್ಳುತ್ತಿದ್ದಳು. ಇಬ್ಬರೂ ಸಾಕಷ್ಟು ಹೊತ್ತು ಮೋಜು ಮಸ್ತಿಯಲ್ಲಿ ತಲ್ಲೀನರಾಗಿರುತ್ತಿದ್ದರು. ಮನೆಯ ಹೆಚ್ಚಿನ ಸದಸ್ಯರು ಮನೆಯ ಕೆಳಭಾಗದಲ್ಲಿ ಇರುತ್ತಿದ್ದುದರಿಂದ ಯಾರಿಗೂ ಅದರ ಬಗ್ಗೆ ಒಂದಿಷ್ಟೂ ಸಂದೇಹ ಕೂಡ ಬರುತ್ತಿರಲಿಲ್ಲ. ಆದರೆ ಅದು ಕಿರಣ್‌ ಗೆ ಹೇಗೋ ಗೊತ್ತಾಯ್ತು.

ಅವನು ಅನಾಮಿಕಾಳಿಗೆ ಹೇಳಿದ, “ನೀನು ಯಾವ ಆಟ ಆಡ್ತಿರುವೆಯೋ, ಅದರಿಂದ ನಿನಗೂ ಹಾನಿ, ನನಗೂ ಹಾನಿ ಹಾಗೂ ಸ್ವತಃ ಸಮೀರ್‌ ಗೂ ಕೂಡ. ಆ ನಿನ್ನ ಆಟ ಕೊನೆಯತನಕ ನಡೆಯದು. ನೀನು ನಿನ್ನ ವರ್ತನೆಯನ್ನು ಬದಲಿಸಿಕೊ.”

“ಅದೇನು ಮಾತು ಆಡ್ತಿದೀರಾ? ಸಮೀರ್‌ ನಿಮ್ಮ ಸ್ನೇಹಿತ. ಆ ಕಾರಣದಿಂದ ನಾನು ಅವರೊಂದಿಗೆ ಮಾತನಾಡ್ತೀನಿ. ಅದು ನಿಮಗೆ ಆಟ ಅಂತಾ ಅನಿಸುತ್ತಾ? ನೀವು ಬೇಡ ಅಂತ ಹೇಳಿದರೆ ನಾನು ಅವರೊಂದಿಗೆ ಮಾತಾಡೋದನ್ನು ನಿಲ್ಲಿಸ್ತೀನಿ,” ಎಂದು ಅನಾಮಿಕಾ ತನ್ನ ವಿರೋಧ ವ್ಯಕ್ತಪಡಿಸಿದಳು. ಆದರೆ ಅವಳ ಧ್ವನಿಯಲ್ಲಿ ಸತ್ಯದ ಸುಳಿವು ಕಾಣುತ್ತಿರಲಿಲ್ಲ.

ವಿಷಯ ಪತಿಗೆ ಗೊತ್ತಾಗಿ ಹೋಗಿಯೇ ಬಿಟ್ಟಿದೆಯೆಂದರೆ, ಅನಾಮಿಕಾ ಹಾಗೂ ಸಮೀರ್‌ ಗೆ ಭೇಟಿ ಅಸಾಧ್ಯವಂತೂ ಆಗಿರಲಿಲ್ಲ. ಆದರೆ ಸ್ವಲ್ಪ ಕಷ್ಟಕರವಂತೂ ಆಗಿತ್ತು. ಆದರೆ ಅನಾಮಿಕಾ ಸಮೀರ್‌ ನ ಪ್ರೀತಿಯಲ್ಲಿ ಕುರುಡಾಗಿ ಹೋಗಿದ್ದಳು. ಸಮೀರ್‌ ಗೆ ಅವಳ ಮೇಲೆ ಪ್ರೀತಿಯೇನೂ ಇರಲಿಲ್ಲ. ಆದರೆ ತನ್ನ ಬಯಕೆ ತೀರಿಸಿಕೊಳ್ಳಲು ಅವಳು ಒಂದು ಸಾಧನವಾಗಿದ್ದಳು ಅಷ್ಟೇ. ಹೀಗಾಗಿ ಅವನು ಸದ್ಯಕ್ಕಂತೂ ಅವಳನ್ನು ತೊರೆದುಹೋಗುವ ಸ್ಥಿತಿಯಲ್ಲಿರಲಿಲ್ಲ. ಅದೊಂದು ದಿನ ಸಮೀರ್‌ ಅವಕಾಶ ನೋಡಿಕೊಂಡು ಅನಾಮಿಕಾಳಿಗೆ ಫೋನ್‌ ಮಾಡಿದ.

“ಹಲೋ, ಎಲ್ಲಿದೀಯಾ ಡಾರ್ಲಿಂಗ್‌? ಯಾವಾಗ ಭೇಟಿ ಆಗ್ತಿಯಾ?”

“ಈಗ ಭೇಟಿ ಆಗಲು ಎಲ್ಲಿ ಸಾಧ್ಯವಿದೆ? ಕಿರಣ್‌ ಗೆ ಈ ಬಗ್ಗೆ ಗೊತ್ತಾಗಿ ಹೋಗಿದೆ.“

“ಕಿರಣ್‌ ನನ್ನೇ ನಮ್ಮ ದಾರಿಯಿಂದ ನಿನೈರಿಸಿಬಿಟ್ಟರೆ ಹೇಗೆ?”

“ಅದು ಅಷ್ಟೊಂದು ಸುಲಭ ಕೆಲಸವೇ? ಇದೇನು ಸಿನಿಮಾ ಕಥೆಯಲ್ಲ, ವಾಸ್ತವ ಜೀವನ.”

“ನೀನು ಸ್ವಲ್ಪ ಸಹಕಾರ ಕೊಟ್ಟರೆ ಅದು ಸಾಧ್ಯವಿದೆ. ಸಿನಿಮಾ ಕಥೆಗಳು ಕೂಡ ವಾಸ್ತವಿಕತೆಯ ಆಧಾರದ ಮೇಲೆಯೇ ತಯಾರಾಗುತ್ತವೆ. ಅವನನ್ನು ನಮ್ಮ ದಾರಿಯಿಂದ ನಿವಾರಿಸಬೇಕು. ಸಾಧ್ಯವಾದರೆ ನಾವ ಶವವನ್ನು ಎಲ್ಲಿಯಾದರೂ ಒಂದು ಕಡೆ ಸಾಗಿಸೋಣ. ಇಲ್ಲವಾದರೆ ನೀನು ಪೊಲೀಸರಿಗೆ ದೂರು ಕೊಟ್ಟು, ಯಾರೊ ಇವರನ್ನು ಕೊಲೆಗೈದಿದ್ದಾರೆಂದು ಹೇಳಬೇಕು. ಅವರು ನಿನ್ನ ಮೇಲೆ ಸಂದೇಹ ಕೂಡ ವ್ಯಕ್ತಪಡಿಸಲಾರರು. ಆಮೇಲೆ ನಾವು ಎಲ್ಲಿಯಾದರೂ ಓಡಿಹೋಗಿ ಜೀವನ ನಡೆಸೋಣ.”

ಅನಾಮಿಕಾ ಸಮೀರನ ಪ್ರೀತಿಯಲ್ಲಿ ಅದೆಷ್ಟು ಅಂಧಳಾಗಿ ಹೋಗಿದ್ದಳೆಂದರೆ, ಅವಳ ಯೋಚನೆಯ ಸಾಮರ್ಥ್ಯವೇ ಹೊರಟುಹೋಗಿತ್ತು. ಸಮೀರ್‌ ಮೊದಲು ಹೇಳಿದ್ದ ಯೋಜನೆ ಕೇಳಿ ಗಾಬರಿಗೊಂಡಿದ್ದಳು. ಆದರೆ ಆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ರಾಜಿಯಾಗಿದ್ದಳು. ಆ ಯೋಜನೆಯ ಪ್ರಕಾರ, ಆ ರಾತ್ರಿ ಅನಾಮಿಕಾ ಕಿರಣ್‌ ಜೊತೆಗೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತಳು. ನಂತರ ಇಬ್ಬರೂ ಮಲಗಲು ಹೋದರು. ಅನಾಮಿಕಾ ಕಿರಣ್‌ ಜೊತೆಗೆ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದಳು. ಇಬ್ಬರೂ ಮಾತನಾಡುತ್ತಲೇ ಪರಸ್ಪರರನ್ನು ಅಪ್ಪಿಕೊಂಡರು. ಇವತ್ತು ಅನಾಮಿಕಾ ಕಿರಣ್‌ ಜೊತೆಗೆ ಬಹಳಷ್ಟು ಸಹಕಾರ ಕೊಡುತ್ತಿದ್ದಳು. ಕಿರಣ್‌ ಗೂ ಕೂಡ ಇದು ಬಹಳ ಖುಷಿ ಕೊಡುತ್ತಿತ್ತು.

ಅನಾಮಿಕಾ ಎಲ್ಲವನ್ನೂ ಮರೆತು ಪುನಃ ತನ್ನೊಂದಿಗೆ ಬಂದಿದ್ದಾಳೆಂದು ಕಿರಣ್‌ ಭಾವಿಸಿದ. ಅವನೂ ಕೂಡ ಬಹಳ ಉತ್ಸಾಹಿತ, ಉತ್ತೇಜಿತನಾಗಿರುವಂತೆ ಭಾವಿಸುತ್ತಿದ್ದ. ನೋಡು ನೋಡುತ್ತಿರುವಂತೆ ಅವನ ಕೈಗಳು ಅವಳ ದೇಹದ ಮೇಲೆ ಹರಿದಾಡತೊಡಗಿದವು. ಅನಾಮಿಕಾ ಕೂಡ ಅವನ ತಲೆಗೂದಲು ನೇವರಿಸತೊಡಗಿದಳು. ಆಗಾಗ ಚುಂಬನದ ಮಳೆ ಸುರಿಸುತ್ತಿದ್ದಳು. ಅವರ ಪ್ರೀತಿ ಉತ್ತುಂಗದ ಸ್ಥಿತಿ ತಲುಪಿತ್ತು. ಇಬ್ಬರೂ ಪರಸ್ಪರರಲ್ಲಿ ಲೀನರಾದರು. ಬಳಿಕ ಕಿರಣ್‌ ಪ್ರೀತಿಯ ಮಳೆಯಲ್ಲಿ ಮುಳುಗಿ, ಸುಸ್ತಾಗಿ ಮಗ್ಗಲು ಬದಲಿಸಿದ.

ಕಿರಣ್‌ ನಿಶ್ಚಿಂತನಾಗಿ ಮಲಗಿರುವುದನ್ನು ನೋಡಿ ಅನಾಮಿಕಾ ಹೊರಗೆ ಬಂದು ಸಮೀರ್‌ ಗೆ ಮೆಸೇಜ್‌ ಮಾಡಿದಳು. ಅಳ ಮೇಸೇಜ್‌ ಗಾಗಿಯೇ ಕಾಯುತ್ತಾ ಕುಳಿತಿದ್ದ ಅವನು ತನ್ನ ಮನೆಯ ಮಹಡಿಯಿಂದ ಪಕ್ಕದಲ್ಲಿಯೇ ಇದ್ದ ಕಿರಣ್‌ ನ ಮನೆಯ ಮಹಡಿಗೆ ಬಂದ. ಅನಾಮಿಕಾ ಅವನದೇ ನಿರೀಕ್ಷೆಯಲ್ಲಿದ್ದಳು. ಅನಾಮಿಕಾ ಸಮೀರ್‌ ನನ್ನು ಕಿರಣ್‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನಂತೆ ಮಲಗಿಕೊಂಡಿದ್ದ ರೂಮಿಗೆ ಕರೆದುಕೊಂಡು ಹೋದಳು.

ಸಮೀರ್‌ ತನ್ನೊಂದಿಗೆ ಹಗ್ಗವೊಂದನ್ನು ತೆಗೆದುಕೊಂಡು ಬಂದಿದ್ದ. ಅವನು ನಿಧಾನವಾಗಿ ಕಿರಣನ ಕೊರಳಿನ ಕೆಳಗೆ ಹಗ್ಗ ಹಾಕಿ ಕುಣಿಕೆ ತರಹ ಮಾಡಿ ಜೋರಾಗಿ ಎಳೆದ. ನಿದ್ರೆಯಲ್ಲಿದ್ದ ಕಾರಣ ಕಿರಣ್‌ ಗೆ ಅದು ಗೊತ್ತಾಗುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಕಿರಣ್‌ ಜೋರು ಜೋರಾಗಿ ಒದ್ದಾಡುತ್ತಿದ್ದ. ಅನಾಮಿಕಾ ಅವನ ಕಾಲುಗಳನ್ನು ಒತ್ತಿ ಹಿಡಿದಿದ್ದಳು. ಅತ್ತ ಸಮೀರ್ ಹಗ್ಗವನ್ನು ಜೋರಾಗಿ ಎಳೆದ. ಕೇವಲ 5 ನಿಮಿಷಗಳಲ್ಲಿಯೇ ಕಿರಣನ ದೇಹ ಬಿಗುವು ಕಳೆದುಕೊಂಡಿತು.

ಮುಂದೇನು ಮಾಡಬೇಕು ಎನ್ನುವುದು ಇಬ್ಬರಿಗೂ ಹೊಳೆಯುತ್ತಿರಲಿಲ್ಲ. ಶವವನ್ನು ಹೊರಗೆ ತೆಗೆದುಕೊಂಡು ಹೋದರೆ ಅದು ಜನರಿಗೆ ತಿಳಿಯುವ ಅಪಾಯವಿತ್ತು. ಸಮೀರ್‌ ಪಕ್ಕದಲ್ಲಿಯೇ ಇರುವ ತನ್ನ ಮನೆಗೆ ಸದ್ದಿಲ್ಲದೇ ಹೊರಟುಹೋದ. ಇತ್ತ ಅನಾಮಿಕಾ ರೋದಿಸುತ್ತಾ ಕೆಳಗಿ ಮಲಗಿಕೊಂಡಿದ್ದ ಮನೆಯವರನ್ನೆಲ್ಲ ಎಬ್ಬಿಸಿ ಯಾರೊ ಬಂದು ಕಿರಣ್‌ ನನ್ನು ಕೊಲೆ ಮಾಡಿ ಹೋಗಿದ್ದಾರೆಂದು ಹೇಳಿದಳು. ಇಡೀ ಮನೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಪೊಲೀಸರಿಗೂ ಈ ಬಗ್ಗೆ ಮಾಹಿತಿ ಕೊಡಲಾಯಿತು.

ಪೊಲೀಸರು ಬಂದರು, ತನಿಖೆ ಆರಂಭಿಸಿದರು. ಹೆಂಡತಿ ಪಕ್ಕದಲ್ಲಿಯೇ ಮಲಗಿಕೊಂಡಿದ್ದರೂ ಗಂಡನನ್ನು ಕೊಲೆ ಮಾಡಿ ಹೋದರೂ ಅದು ಅವಳಿಗೆ ಹೇಗೆ ಗೊತ್ತಾಗಲಿಲ್ಲ? ಎಂದು ಪೊಲೀಸರಿಗೆ ಅಚ್ಚರಿಯುಂಟು ಮಾಡುತ್ತಿತ್ತು. ಪೊಲೀಸರು ಅನಾಮಿಕಾ ಹಾಗೂ ಅಕ್ಕಪಕ್ಕದವರನ್ನು ವಿಚಾರಿಸತೊಡಗಿದರು. ಯಾರೊ ಒಬ್ಬರು ಅನಾಮಿಕಾ ಹಾಗೂ ಸಮೀರ್‌ ನಡುವಿನ ಪ್ರೇಮ ಪ್ರಕರಣವನ್ನು ವಿವರಿಸಿದರು. ಪೊಲೀಸರು ಸಮೀರ್‌ ನನ್ನು ಕೂಡ ಕರೆದು ವಿಚಾರಿಸಿದರು. ಅವನ ಉತ್ತರ ಸ್ವಲ್ಪ ಹೋಲಿಕೆ ಇಲ್ಲದ್ದು ಎಂಬುದು ಗೊತ್ತಾಗುತ್ತಿದ್ದಂತೆ ಅವನ ಕಾಲ್ ‌ಡಿಟೇಲ್ಸ್ ತೆಗೆಸಲಾಯಿತು. ಕಳೆದ ಅನೇಕ ವಾರಗಳಿಂದ ಅವರಿಬ್ಬರು ಸಂಪರ್ಕದಲ್ಲಿದ್ದರು. ಇನ್‌ ಸ್ಪೆಕ್ಟರ್‌ ಅನಾಮಿಕಾಳಿಗೆ ಮತ್ತೆ ಮತ್ತೆ ಕೇಳತೊಡಗಿದಾಗ ಅವಳು ತಡವರಿಸತೊಡಗಿದಳು. ಬಳಿಕ ನಡೆದುದೆಲ್ಲವನ್ನೂ ಹೇಳಿಬಿಟ್ಟಳು.

ಅನಾಮಿಕಾ ಹಾಗೂ ಸಮೀರ್‌ ಇಬ್ಬರೂ ಜೈಲು ಕಂಬಿಯ ಹಿಂದೆ ತಳ್ಳಲ್ಪಟ್ಟರು. ಅನಾಮಿಕಾಳಿಗೆ ಈಗ ಸಮೀರ್‌ ನ ಪುಸಲಾಯಿಸುವಿಕೆಯಿಂದ ತಾನು ತಪ್ಪು ಹೆಜ್ಜೆ ಇಟ್ಟೆ ಎಂಬ ಅರಿವು ಬಂತು. ಆದರೆ ಈಗ ಪಶ್ಚಾತ್ತಾಪ ಪಡುವ ಹೊರತು ಬೇರೆ ಪರ್ಯಾಯ ಉಪಾಯವೇ ಇರಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ