``ದೈನಂದಿನ ಕಿರಿಕಿರಿಯಿಂದ ನಾನು ಬೇಸತ್ತು ಹೋಗಿರುವೆ. ನನಗಿಷ್ಟವಾದುದನ್ನು ತಿನ್ನಲು ಆಗುವುದಿಲ್ಲ. ಧರಿಸಲು ಆಗುವುದಿಲ್ಲ. ಯಾವಾಗ ನೋಡಿದರೂ ನಿರ್ಬಂಧ. ಯಾರಾದರೂ ಎಷ್ಟು ಅಂತ ಸಹಿಸಿಕೊಳ್ತಾರೆ....?''

ಮಧ್ಯಾಹ್ನ 2 ಗಂಟೆಯಾಗುತ್ತಾ ಬಂದಿತ್ತು. ಊಟ ಮುಗಿಸಿ ಕಾವ್ಯಾ ಮಂಚದ ಮೇಲೆ ಹಾಗೆಯೇ ವಿಶ್ರಾಂತಿ ಪಡೆಯುತ್ತಿದ್ದ. ಅಷ್ಟರಲ್ಲಿ ಹಿರಿಯ ಅಕ್ಕ ನಳಿನಿಯ ಫೋನ್‌ ಬಂತು ಇಬ್ಬರೂ ಅಕ್ಕ ತಂಗಿಯರು ತಮ್ಮ ತಮ್ಮ ಅತ್ತೆ ಮನೆ ಪುರಾಣ ಪಠಣ ಮಾಡತೊಡಗಿದರು.

``ಅತ್ತೆಯ ಕಾಟವನ್ನು ನೀನೇಕೆ ಸಹಿಸಿಕೊಳ್ಳುತ್ತಿಯೋ? ಅಭಯ್‌ ಗೆ ಇದೆಲ್ಲವನ್ನು ಏಕೆ ಹೇಳುವುದಿಲ್ಲ? ನಾನಂತೂ ನನ್ನ ಗಂಡನಿಂದ ಯಾವ ಮಾತನ್ನು ಬಚ್ಚಿಡುವುದಿಲ್ಲ. ಮಲಗುವ ಮುನ್ನ ಅವರ ಅಮ್ಮನ ಅಂದಿನ ಸಂಪೂರ್ಣ ವಿವರ ಅವರ ಮುಂದೆ ತೆರೆದಿಡ್ತೀನಿ. ಎಲ್ಲಿಯವರೆಗೆ ಅವರು ನನ್ನ ಮಾತಿಗೆ `ಹ್ಞೂಂ' ಎಂದು ಹೇಳುವುದಿಲ್ಲವೋ, ಅಲ್ಲಿಯವರೆಗೆ ಅವರು ನನ್ನನ್ನು ಮುಟ್ಟಲು ಅವಕಾಶ ಸಿಗುವುದಿಲ್ಲ,'' ಎಂದು ನಳಿನಿ ತನ್ನ ಅನುಭವದ ಕಡತ ಬಿಚ್ಚಿಟ್ಟಳು.

``ಅಕ್ಕಾ, ಅಭಯ್‌ ಮಮ್ಮಾಸ್‌ ಬಾಯ್‌. ತನ್ನ ಅಮ್ಮನ ವಿರುದ್ಧ ಅವರು ಒಂದೇ ಒಂದು ಶಬ್ದ ಕೇಳಲು ಇಷ್ಟಪಡುವುದಿಲ್ಲ. ಅದಕ್ಕೆ ತದ್ವಿರುದ್ಧ ಎಂಬಂತೆ ಅವರೇ ನನಗೆ ಹೊಂದಾಣಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ. ಅತ್ತೆ ಮನೆಯ ಬಾಬತ್ತಿನಲ್ಲಿ ನೀನು ಬಹಳ ಅದೃಷ್ಟವಂತೆ. ನಿನ್ನ ಗಂಡ ನೀನು ಹೇಳಿದಂತೆ ಕುಣಿಯುತ್ತಾನೆ. ನನಗೆ ಯಾವಾಗ ಒಳ್ಳೆಯ ದಿನಗಳು ಬರುತ್ತವೆ ಏನೋ.....'' ಎಂದು ಹೇಳುತ್ತ ಗಾಢ ಉಸಿರು ಎಳೆದುಕೊಂಡಳು.

``ಅದಂತೂ ಇದೆ. ನಾನು ಅವರನ್ನು ಹಾಗೆಯೇ ನನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದೇನೆ. ಈಗಾಗಲೇ ನಿನ್ನ ಭಾವನಿಂದ ಎರಡು ಸಲ ಫೋನ್‌ ಬಂದಿದೆ. ನನ್ನನ್ನು ಬಿಟ್ಟು ಅವರಿಗೆ ನೆಮ್ಮದಿಯೇ ಇಲ್ಲ,'' ನಳಿನಿ ಖುಷಿಯಿಂದ ಹೇಳಿಕೊಂಡಳು.

``ಸರಿ. ಸರಿ.... ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ಅತ್ತೆ ಮಹಾರಾಣಿಯ ಕಾಫಿ ಟೈಮ್ ಆಗಲಿದೆ. ನನಗಂತೂ ಒಂದಷ್ಟು ಹೊತ್ತು ನೆಮ್ಮದಿಯಿಂದ ಮಲಗಲು ಕೂಡ ಅವಕಾಶ ಸಿಗುವುದಿಲ್ಲ......'' ತನ್ನನ್ನು ತಾನು ಹಳಿದುಕೊಳ್ಳುತ್ತಾ ಕಾವ್ಯಾ ಫೋನ್‌ ಕಟ್ ಮಾಡಿದಳು. ಬಳಿಕ ಅವಳು ಎ.ಸಿ.ಯ ಕೂಲಿಂಗ್‌ ಇನ್ನಷ್ಟು ಹೆಚ್ಚಿಸಿಕೊಂಡು ಹೊದಿಕೆ ಮೈಮೇಲೆ ಎಳೆದುಕೊಂಡಳು.

ಕಾವ್ಯಾಳಿಗೆ ಅಭಯ್‌ ಜೊತೆ ಮದುವೆಯಾಗಿ 3 ವರ್ಷಗಳೇ ಆಗಿವೆ. ಅಭಯ್‌ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾನೆ. ಸಂಬಳ ಪರವಾಗಿಲ್ಲ. ಅಮ್ಮ ಅಪ್ಪ ಜೊತೆಗೆ ಇರುವುದರಿಂದ ಅವನಿಗೆ ಮನೆ ಬಾಡಿಗೆ, ನೀರು, ವಿದ್ಯುತ್‌ ಖರ್ಚು, ಪಡಿತರ ಹೀಗೆ ಯಾವುದರ ಖರ್ಚನ್ನು ಕೈಯಿಂದ ಭರಿಸಬೇಕಾಗಿ ಬರುವುದಿಲ್ಲ. ಅವನ ಖರ್ಚುಗಳೇನಿದ್ದರೂ ತನ್ನ ವೈಯಕ್ತಿಕ ಖರ್ಚುಗಳಿಗೆ ಹಾಗೂ ಕಾವ್ಯಾಳ ಅಗತ್ಯಗಳಿಗಾಗಿ ಮಾತ್ರ. ಮದುವೆಗೂ ಮುಂಚೆ ಕಾವ್ಯಾ ತನ್ನ ಕನಸಿನ ಜೀವನದ ಕಲ್ಪನೆ ಮಾಡಿಕೊಂಡಿದ್ದಳು. ಪತಿಯ ಜೊತೆ ಮೋಜು ಮಸ್ತಿ ಮಾಡುತ್ತಿರಬೇಕು ಎಂದು ಅವಳು ಅಂದುಕೊಂಡಿದ್ದಳು. ಅವಳ ಕನಸಿನ ಲೋಕದಲ್ಲಿ ಅತ್ತೆ ಮಾವರೆಂಬ ಖಳನಾಯಕರು ಇರಲೇ ಇಲ್ಲ.

ತನ್ನದೇ ಗೂಡಿನ ಕನಸು ಹೊತ್ತು ಕಾವ್ಯಾ ಅತ್ತೆಮನೆಯ ಹೊಸ್ತಿಲು ತುಳಿದಿದ್ದಳು. ಆದರೆ ಅಭಯ್‌ ಗೆ ಏಕಾಂಗಿಯಾಗಿ ಇದ್ದುಕೊಂಡು ವೈವಾಹಿಕ ಜೀವನದ ಮೋಜು ಮಜ ಪಡೆದುಕೊಳ್ಳುವ ಯಾವ ಅಪೇಕ್ಷೆಯೂ ಇಲ್ಲ ಎನ್ನುವುದು ಅವಳಿಗೆ ಗೊತ್ತಾಗಿ, ಅವಳ ಆಸೆಗೆ ತಣ್ಣಿರೆರಚಿದಂತಾಯ್ತು. ಅವಳು ಯಾವಾಗಲಾದರೊಮ್ಮೆ ತನ್ನ ಅಮ್ಮನಿಗೆ ತನ್ನ ಗೋಳನ್ನು ಹೇಳಿಕೊಂಡು, ತನ್ನ ಮನಸ್ಸು ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಅಮ್ಮನೆಂದೂ ಅವಳ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ ಹಾಗೂ ಬೇರೆ ಮನೆ ಮಾಡಿಕೊಂಡು ಹೋಗಬೇಕೆನ್ನುವ ಕನಸಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ