ಅಶ್ವಿನಿ ತಾಯಿಯಾಗಲು ಬಯಸಿದ್ದಳು. ಆದರೆ ವೈದ್ಯರು ಹೇಳಿದ ವಿಷಯ ಕೇಳಿ ಅವಳು ದಂಗಾಗಿ ಹೋದಳು. ಅವಳು ಮೆನೋಪಾಸ್ ನತ್ತ ಸಾಗುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದರು. ಆದರೆ ಅವಳಿಗಾಗ ವಯಸ್ಸು ಕೇವಲ 32.
``ನನ್ನ ಗುರುತನ್ನು ನನ್ನ ಸ್ತ್ರೀತ್ವದ ಗುಣಗಳಿಂದ ಅಳೆಯಬೇಡಿ. ಅದು ಕೇವಲ ನನ್ನ ಅಸ್ತಿತ್ವದ ಒಂದು ಭಾಗ. ಜೀವನದಲ್ಲಿ ಇನ್ನೂ ಬಹಳಷ್ಟು ಆಗುಹೋಗುಗಳನ್ನು ನೋಡುವುದಿದೆ. ಅದಕ್ಕೆಲ್ಲ ನಾನು ಸನ್ನದ್ಧಳಾಗಿರುವೆ.'' ಇಂದು ಪಾರ್ಟಿಯಲ್ಲಿ ಎಲ್ಲರೂ ನನ್ನ ಬಣ್ಣ ರೂಪದ ಬಗ್ಗೆಯೇ ಪ್ರಶಂಸೆ ಮಾಡುತ್ತಿದ್ದರು. ನಿರ್ಮಲಾ ಹೇಳಿದಳು, ``ಅಕ್ಕಾ, ನಿಮ್ಮ ವಯಸ್ಸು ರಿವರ್ಸ್ ಗೇರ್‌ನಲ್ಲಿ ಚಲಿಸುತ್ತಿದೆ. ನಿಮಗೆ 4 ವರ್ಷದ ಮಗಳಿದ್ದಾಳೆಂದು ಹೇಳೋಕೇ ಆಗದು.''
ಸುಜಾತಾ ಕೂಡ ನಗುತ್ತಾ ಹೇಳಿದಳು, ``ನಿಮ್ಮ ತ್ವಚೆಯಿಂದ ನಿಮ್ಮ ವಯಸ್ಸೇ ಗೊತ್ತಾಗುವುದಿಲ್ಲ. ಇದು ಸಂತೂರ್ ಸೋಪ್ ನ ಚಮತ್ಕಾರ!'' ಮತ್ತೊಮ್ಮೆ ಎಲ್ಲರೂ ಸೇರಿ ನಕ್ಕಿದ್ದರಿಂದ ಅನುಶ್ರೀ ಅಕ್ಕನ ಡ್ರಾಯಿಂಗ್ ರೂಮ್ ಪ್ರತಿಧ್ವನಿಸಿತು.
ನಾನೂ ಕೂಡ ಮುಗುಳ್ನಗುತ್ತಾ ಎಲ್ಲ ಹೊಗಳಿಕೆಗಳ ಮಜ ಪಡೆಯುತ್ತಲಿದ್ದೆ. 32 ವರ್ಷದ ಸಾಧಾರಣ ಬಣ್ಣ ರೂಪದ ಮಹಿಳೆ. ಯಾವಾಗಿನಿಂದ ನಾನು ನೌಕರಿ ಮಾಡಲು ಆರಂಭಿಸಿರುವೆನೋ, ಆಗಿನಿಂದ ಕೈ ಸ್ವಲ್ಪ ಮುಕ್ತವಾಗಿದೆ. ನನ್ನ ನಿರ್ವಹಣೆ ಅನ್ನಿ ಅಥವಾ ನನ್ನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡಲು ಆರಂಭಿಸಿರುವೆ. ಇದರ ಪರಿಣಾಮವೆಂಬಂತೆ 2 ವರ್ಷಗಳಲ್ಲಿಯೇ ನನಗೆ ನಾನೇ ತಂಗಿಯೆಂಬಂತೆ ಗೋಚರಿಸುತ್ತಿರುವೆ.
ನನ್ನ ಹೆಸರು ಅಶ್ವಿನಿ. ನಾನು ಒಂದು ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವೆ. ಮದುವೆಗೂ ಮುಂಚೆ ನಾನು ಕೋಲಿನ ಹಾಗೆ ತೆಳ್ಳಗಿದ್ದೆ. ನಾನು ಕೇವಲ ಕೂದಲು ಕತ್ತರಿಸಿಕೊಳ್ಳಲೆಂದು ಪಾರ್ಲರ್‌ಗೆ ಹೋಗುತ್ತಿದ್ದೆ. ಏಕೆಂದರೆ ಆಗ ಹುಡುಗಿಯರು ಪಾರ್ಲರ್ ಗೆ ಹೋಗುವುದು ಅಷ್ಟೊಂದು ಒಳ್ಳೆಯದೆಂದು ಭಾವಿಸುತ್ತಿರಲಿಲ್ಲ. ಹುಬ್ಬು ಹಾಗೂ ತುಟಿಯ ಮೇಲ್ಭಾಗದಲ್ಲಿ ಕೂದಲಿನ ಸ್ಪಷ್ಟ ರೂಪ ಎದ್ದು ಕಾಣುತ್ತಿತ್ತು. ಆದರೂ ನಾನು ಒಳ್ಳೆಯ ಹುಡುಗಿಯೆಂಬ ಕಾರಣಕ್ಕೆ ಮೀಸೆ ಅಥವಾ ಹುಬ್ಬಿಗೆ ಎಂದೂ ಕೈ ಹಾಕಿರಲಿಲ್ಲ. ಬಟ್ಟೆಗಳನ್ನು ಕೂಡ ನನಗಿಂತ ಸ್ವಲ್ಪ ಓವರ್ ಸೈಜ್ ಆಗಿರುವುದನ್ನೇ ತೊಡುತ್ತಿದ್ದೆವು.
ಏಕೆಂದರೆ ನನ್ನ ತೆಳ್ಳನೆಯ ಕಾಯನ್ನು ಮುಚ್ಚಿಡ ಬೇಕೆನ್ನುವುದು ನನ್ನ ಧೋರಣೆಯಾಗಿತ್ತು. ಇಂತಹ ಸ್ಥಿತಿಯಲ್ಲಿ 10 ಸಲ ನಾನು ವಧು ಪರೀಕ್ಷೆಯಲ್ಲಿ ಫೇಲ್ ಆಗಿದ್ದೆ. ನನ್ನ ಪತಿ ಗಿರೀಶ್‌ಗೆ ಈ ಸಂಬಂಧದಲ್ಲಿ ಅದೇನು ಲಾಭ ಕಂಡಿತೊ ಏನೋ ಅವರು ನನ್ನನ್ನು ನೋಡುತ್ತಲೇ ಇಷ್ಟಪಟ್ಟರು.
ಅಂದಹಾಗೆ, ಗಿರೀಶ್ ಹೀರೋ ಥರ ಇದ್ದರೆಂದು ಭಾವಿಸಬೇಡಿ. ಅವರೂ ಕೂಡ ನನ್ನ ಹಾಗೆಯೇ ಸಾಧಾರಣ ಬಣ್ಣದ ವ್ಯಕ್ತಿ. ಆದರೆ ಈ ದೇಶದಲ್ಲಿ ಸರಿಯಾಗಿ ಗಳಿಸುವ ಹುಡುಗನಿಗೆ ಬೆಲೆ ಇದ್ದೇ ಇರುತ್ತದೆ. ನನಗೂ ಖುಷಿಯಾಗಿತ್ತು. ನಾನು ಮೊದಲ ಬಾರಿ ಫೇಶಿಯಲ್ ಬ್ಲೀಚ್ ವ್ಯಾಕ್ಸಿಂಗ್ ಮುಂತಾದವುಗಳನ್ನು ಮಾಡಿಸಿಕೊಂಡೆವು. ನನ್ನ ದೇಹದ ಅಳತೆಗೆ ತಕ್ಕಂತೆ ಬಟ್ಟೆ ಹೊಲಿಸಿಕೊಂಡೆ. ಮದುವೆಯಲ್ಲಿ ನಾನು ಬಹಳ ಸುಂದರವಾಗಿ ಕಾಣಿಸುತ್ತಿದ್ದೆ ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡಿ ಹಾಗೂ ನನ್ನ ಗೆಳತಿಯರು ಕೂಡ ಅದನ್ನೇ ಹೇಳುತ್ತಿದ್ದರು.