ಮಧ್ಯಮ ವರ್ಗದ ದಂಪತಿ ವಿವೇಕ್‌ ಹಾಗೂ ವಿನುತಾ, ತಮ್ಮ ಏಕೈಕ ಪುತ್ರಿ ಊವರ್ಶಿ ಹಾಗೂ ವೃದ್ಧ ತಾಯಿ ತಂದೆಯರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಕುಟುಂಬ ಚಿಕ್ಕದಾಗಿತ್ತು. ಮನೆಯಲ್ಲಿ ಎಲ್ಲವೂ ಅತ್ಯವಶ್ಯಕ ವಸ್ತುಗಳು ಲಭ್ಯವಾಗಿದ್ದವು. ಅವರಿಗೆ ಹೆಚ್ಚಿನ ದುರಾಸೆಯೇನೂ ಇರಲಿಲ್ಲ. ಅವರಿಗಿದ್ದ ಏಕೈಕ ಅಪೇಕ್ಷೆಯೆಂದರೆ, ತಮ್ಮ ಪುತ್ರಿಯನ್ನು ಚೆನ್ನಾಗಿ ಓದಿಸಿ ಅವಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂಬುದಾಗಿತ್ತು.

ಊವರ್ಶಿ ಕೂಡ ತನ್ನ ತಾಯಿ ತಂದೆಯರ ಅಪೇಕ್ಷೆಯನ್ನು ವಾಸ್ತವ ರೂಪಕ್ಕೆ ತರಲು ಪ್ರಯತ್ನ ನಡೆಸಿದ್ದಳು. 10 ವರ್ಷದ ಊವರ್ಶಿ ಓದಿನಲ್ಲಷ್ಟೇ ಅಲ್ಲ ಕ್ರೀಡೆಯಲ್ಲೂ ಕೂಡ ಮುಂದಿದ್ದಳು. ಅವಳು ಎಲ್ಲ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿದ್ದಳು.

ವಿನುತಾ ತನ್ನ ಮಗಳ ಓದಿನ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದಳು. ಮಗಳಿಗೆ ದಿನ ಓದಿಸುವುದು ಅವಳ ದಿನಚರಿಯೇ ಆಗಿಬಿಟ್ಟಿತ್ತು. ತಂದೆ ವಿವೇಕ್‌ತನ್ನ ಆಫೀಸಿನಿಂದ ಬರುತ್ತಿದ್ದಂತೆ ಮಗಳನ್ನು ಪಾರ್ಕಿಗೆ ಕರೆದುಕೊಂಡು ಹೋಗುತ್ತಿದ್ದ. ರಾತ್ರಿ ಅವಳು ತನ್ನ ಅಜ್ಜಿ ತಾತನಿಂದ ಕಥೆಗಳನ್ನು ಕೇಳುವುದರ ಮೂಲಕ ಅವಳ ದಿನ ಕೊನೆಗೊಳ್ಳುತ್ತಿತ್ತು. ಈ ರೀತಿಯಾಗಿ ಅವಳಲ್ಲಿ ಒಳ್ಳೆಯ ಸಂಸ್ಕಾರ ಮನೆ ಮಾಡುತ್ತಿತ್ತು.

ಊವರ್ಶಿ ಓದುತ್ತಿದ್ದುದು 5ನೇ ಕ್ಲಾಸಿನಲ್ಲಿ. ಅವಳು ತನ್ನೂರಿನಿಂದ ಬಸ್ಸಿನಲ್ಲಿ ಶಾಲೆಗೆ ಹೋಗಿ ಬಂದು ಮಾಡುತ್ತಿದ್ದಳು. ತಾಯಿ ವಿನುತಾ ಮಗಳನ್ನು ಶಾಲೆಗೆ ಕಳಿಸಲು ಹಾಗೂ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಬರುತ್ತಿದ್ದಳು. ಅಕಸ್ಮಾತ್‌ ಬಸ್ ಬರಲು ತಡವಾದರೆ ಬಸ್‌ ಡ್ರೈವರ್‌ಗೆ ಫೋನ್‌ ಮಾಡಿ ಕೇಳುತ್ತಿದ್ದಳು.

ಬಸ್ಸಿನಿಂದ ಇಳಿಯುತ್ತಿದ್ದಂತೆ ಊವರ್ಶಿ ತನ್ನ ಅಮ್ಮನಿಗೆ, ``ಮಮ್ಮಿ, ಕೆಲವು ಮಕ್ಕಳ ತಾಯಂದಿರು ಬರುವುದು ತಡವಾಗುತ್ತದೆ. ಹಾಗಾಗಿ ಬಸ್‌ ಹೊರಡುವುದು ತಡವಾಗುತ್ತದೆ. ಎಲ್ಲಿಯವರೆಗೆ ಪುಟ್ಟ ಮಕ್ಕಳ ಅಮ್ಮಂದಿರು ಬರುವುದಿಲ್ಲವೋ ಅಲ್ಲಿಯವರೆಗೆ ಅವರನ್ನು ಬಸ್ಸಿನಿಂದ ಇಳಿಯಲು ಅವಕಾಶ ಕೊಡುವುದಿಲ್ಲ. ನೀನೇಕೆ ಚಿಂತೆ ಮಾಡ್ತೀಯಾ? ಮಮ್ಮಿ, ನಮ್ಮ ಶಾಲೆಯಲ್ಲಿ ಹಾಗೂ ಬಸ್ಸಿನಲ್ಲಿ ಎಲ್ಲರೂ ಒಳ್ಳೆಯವರಿದ್ದಾರೆ,'' ಎಂದು ತಿಳಿಹೇಳುತ್ತಿದ್ದಳು.

ಊವರ್ಶಿಗೆ ವಾರದಲ್ಲಿ ಎರಡು ದಿನ ಆಟದ ಪೀರಿಯಡ್‌ ಇರುತ್ತಿತ್ತು. ಆ ಒಂದು ಪೀರಿಯಡ್‌ ಗಾಗಿ ಮಕ್ಕಳು ಬಹಳ ಉತ್ಸಾಹದಿಂದ ನಿರೀಕ್ಷಿಸುತ್ತಿದ್ದರು. ಊವರ್ಶಿಗೂ ಅದೇ ನಿರೀಕ್ಷೆ ಇರುತ್ತಿತ್ತು. ಚಿಕ್ಕ ತರುಣ ದೈಹಿಕ ಶಿಕ್ಷಕ ಮಹೇಶ್‌ಎಲ್ಲರಿಗಿಂತಲೂ ಊವರ್ಶಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ. ಅವಳ ಬೆನ್ನು ನೇವರಿಸುವುದು, ಅವಳನ್ನು ಹೊಗಳುವುದು ಮಹೇಶನಿಗೇ ಅಭ್ಯಾಸವೇ ಆಗಿಹೋಗಿತ್ತು. ಪುಟ್ಟ ಹುಡುಗಿ ಊವರ್ಶಿ ಕೂಡ ಮಹೇಶ್‌ ಜೊತೆಗೆ ಚೆನ್ನಾಗಿ ನಗುತ್ತಾ ಮಾತನಾಡುತ್ತಿದ್ದಳು.

ಮಹೇಶನಿಗೆ ಮಾತ್ರ ಅವಳ ಮೇಲಿನ ದೃಷ್ಟಿ ಬೇರೆಯೇ ಆಗಿತ್ತು. ದಿನದಿಂದ ದಿನಕ್ಕೆ ಅವನು ಅವಳನ್ನು ತನ್ನ ಲಾಲಸೆಗೆ ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸುತ್ತಿದ್ದ. ಅವಳನ್ನು ತಾನು ಬಳಸಿಕೊಂಡರೂ ಅದರಿಂದ ಹೇಗೆ ಪಾರಾಗಬೇಕೆಂದು ಅವನ ಮನಸ್ಸಿನಲ್ಲಿ ಸದಾ ಯೋಚನೆ ನಡೆಯುತ್ತಿತ್ತು.

ಒಂದು ದಿನ ಅವನು ಊವರ್ಶಿಯನ್ನು ತನ್ನ ಬಳಿ ಕರೆದು, ``ಊವರ್ಶಿ ಪುಟ್ಟಾ, ಇಂಟರ್‌ ಸ್ಕೂಲ್‌ ಕಾಂಪಿಟಿಶನ್‌ ನಡೆಯಲಿದೆ. ನೀನಂತೂ ಎಷ್ಟೊಂದು ವೇಗವಾಗಿ ಓಡ್ತೀಯ.... ನೀನು ಆ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಳ್ಳಬೇಕು. ನಾನು ನಿನ್ನ ಹೆಸರನ್ನು ಬರೆಸ್ತೀನಿ. ನೀನು ಇನ್ನು ಮುಂದೆ ಹೆಚ್ಚೆಚ್ಚು ಪ್ರಾಕ್ಟೀಸ್‌ ಮಾಡಬೇಕು. ಈ ವಿಷಯವನ್ನು ನಿನ್ನ ತಾಯಿ ತಂದೆಯರಿಗೆ ತಿಳಿಸಬೇಕು,'' ಎಂದು ಹೇಳಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ