ಈಗ ಅರ್ಥವಾಗುತ್ತಿರುವ ವಿಷಯ ಅನಾಮಿಕಾಗೆ ಮೊದಲೇ ಅರ್ಥ ಆಗಿದ್ದರೆ, ನೆರೆಮನೆಯವನ ಚಿತಾವಣೆಗೊಳಗಾಗಿ ತನ್ನ ಪತಿ ಕಿರಣ್‌ ನನ್ನು ಹತ್ಯೆ ಮಾಡುವ ಪ್ರಸಂಗವೇ ಬರುತ್ತಿರಲಿಲ್ಲ. ಈಗ ಅವಳು ಜೈಲಿನ ಸರಳುಗಳ ಹಿಂದೆ ಇರುವ ಸಂದರ್ಭವೇ ಉಂಟಾಗುತ್ತಿರಲಿಲ್ಲ. ಅವಳ ಗಂಡ ಸಾಧಾರಣ ವ್ಯಕ್ತಿಯಾಗಿದ್ದರೂ, ಗಂಡನಂತೂ ಆಗಿಯೇ ಆಗಿದ್ದ. ಅವಳ ಜೊತೆಗೆ ಪ್ರೀತಿಯಿಂದಲೇ ಇದ್ದ. ಅವನದ್ದೇ ಆದ ಪುಟ್ಟ ಮನೆ, ಪುಟ್ಟ ಸಂಸಾರ. ಅವನಶ್ಯಕ ತೋರಿಕೆ ಇರಲಿಲ್ಲ ಅವನಿಗೆ.

ಸಮೀರ್‌ ಮಾತ್ರ ತೋರಿಕೆಯ ವ್ಯಕ್ತಿಯಾಗಿದ್ದ. ಅಂದರೆ ಸಮೀರ್‌ ಬೇರಾರೂ ಅಲ್ಲ. ಅವನು ಕಿರಣ್‌ ನ ಗೆಳೆಯ. ಇವಳನ್ನು ಅತ್ತಿಗೆಯೆಂದು ಕರೆಯುವ ವ್ಯಕ್ತಿ. ಅವಳನ್ನು ಪ್ರಭಾವಿತಗೊಳಿಸಲು ಏನೆಲ್ಲ ತಂತ್ರಗಳನ್ನು ಮಾಡುತ್ತಿದ್ದ. ಆದರೆ ಅವು ಕಿರಣನಿಗೆ ತಂತ್ರಗಳೆನಿಸದೆ ವಾಸ್ತವ ಎಂದೆನಿಸುತ್ತಿದ್ದವು. ಪಕ್ಕದ ಮನೆಯವನಾಗಿರುವ ಕಾರಣದಿಂದ ಸಮೀರ್‌ ಆಗಾಗ ಮನೆಗೆ ಬಂದು ಹೋಗಿ ಮಾಡುತ್ತಿದ್ದ.

 

ಸಮೀರ್‌ ಬಹಳ ಲವಲವಿಕೆಯ ಸ್ಟೈಲಿಂಗ್‌ ವ್ಯಕ್ತಿಯಾಗಿದ್ದ. ತನ್ನ ಗೆಳೆಯನ ಪತ್ನಿಯಾಗಿರುವ ಕಾರಣದಿಂದ ಅವನು ಅನಾಮಿಕಾಳ ಜೊತೆ ತಮಾಷೆ ಕೀಟಲೆ ಮಾಡುತ್ತಿದ್ದ. ಕ್ರಮೇಣ ಇಬ್ಬರಲ್ಲೂ ನಿಕಟತೆ ಹೆಚ್ಚುತ್ತಾ ಹೋಯಿತು. ಗಂಡ ಕಿರಣ್‌ ಗೆ ಹೋಲಿಸಿದರೆ ಅನಾಮಿಕಾಗೆ ಸಮೀರ್‌ ಬಹಳ ಇಷ್ಟವಾಗುತ್ತಿದ್ದ. ಸಮಯ ಸಿಕ್ಕಾಗೆಲ್ಲ ಸಮೀರ್‌ ಅನಾಮಿಕಾಳ ಜೊತೆ ಫೋನ್‌ ನಲ್ಲಿ ಮಾತನಾಡುತ್ತಿದ್ದ. ಆರಂಭದಲ್ಲಿ ಸಾಧಾರಣ ಮಾತುಗಳು, ನಗೆ ಚಟಾಕಿಗಳನ್ನು ಫಾರ್ವರ್ಡ್ ಮಾಡುತ್ತಿದ್ದರು. ಆ ಬಳಿಕ ಎಂತಹ ಕೆಲವು ಮೆಸೇಜ್‌ ಗಳನ್ನು ಕಳುಹಿಸುತ್ತಿದ್ದನೆಂದರೆ, ಅವನ್ನು ತೀರಾ ನಿಕಟವರ್ತಿಗಳು ಮಾತ್ರ ಓದಬಹುದಿತ್ತು. ಆ ಬಳಿಕ ಅಂತರಂಗದ ಸಂಗತಿಗಳು. ಸಮೀರ್‌ ನ ನಂಬರನ್ನು ಅವಳು ಸಮೀರಾ ಎಂದು ಸೇವ್ ಮಾಡಿದ್ದಳು. ಯಾರಾದರೂ ನೋಡಿದರೆ ಅದು ಗೆಳತಿಯ ನಂಬರ್‌ ಎನಿಸಬೇಕು. ಸಮೀರ್‌ ತನ್ನ ಡಿಪಿಯಲ್ಲಿ ಹೂವಿನ ಫೋಟೋ ಹಾಕಿಕೊಂಡಿದ್ದ. ಅದನ್ನು ನೋಡಿದರೆ ಅದು ಯಾರ ನಂಬರ್‌ ಎಂದು ಸಹಜವಾಗಿ ಗೊತ್ತಾಗುತ್ತಿರಲಿಲ್ಲ.

ಕ್ರಮೇಣ ಪರಿಸ್ಥಿತಿ ಹೇಗಾಗಿಬಿಟ್ಟಿತೆಂದರೆ,  ಅನಾಮಿಕಾಳಿಗೆ ಸಮೀರ್‌ ನನ್ನು ಹೊರತಪಡಿಸಿ ಬೇರಾರೂ ಒಳ್ಳೆಯವರೆಸುತ್ತಿರಲಿಲ್ಲ. ಎಷ್ಟೋ ಸಲ ಅವಳು ಏಕಾಂಗಿಯಾಗಿದ್ದಾಗೆಲ್ಲಾ ಸಮೀರ್‌ ಗೆ ಫೋನ್‌ ಮಾಡಿ ಅವನನ್ನು ಕರೆಸಿಕೊಳ್ಳುತ್ತಿದ್ದಳು. ಇಬ್ಬರೂ ಸಾಕಷ್ಟು ಹೊತ್ತು ಮೋಜು ಮಸ್ತಿಯಲ್ಲಿ ತಲ್ಲೀನರಾಗಿರುತ್ತಿದ್ದರು. ಮನೆಯ ಹೆಚ್ಚಿನ ಸದಸ್ಯರು ಮನೆಯ ಕೆಳಭಾಗದಲ್ಲಿ ಇರುತ್ತಿದ್ದುದರಿಂದ ಯಾರಿಗೂ ಅದರ ಬಗ್ಗೆ ಒಂದಿಷ್ಟೂ ಸಂದೇಹ ಕೂಡ ಬರುತ್ತಿರಲಿಲ್ಲ. ಆದರೆ ಅದು ಕಿರಣ್‌ ಗೆ ಹೇಗೋ ಗೊತ್ತಾಯ್ತು.

ಅವನು ಅನಾಮಿಕಾಳಿಗೆ ಹೇಳಿದ, ``ನೀನು ಯಾವ ಆಟ ಆಡ್ತಿರುವೆಯೋ, ಅದರಿಂದ ನಿನಗೂ ಹಾನಿ, ನನಗೂ ಹಾನಿ ಹಾಗೂ ಸ್ವತಃ ಸಮೀರ್‌ ಗೂ ಕೂಡ. ಆ ನಿನ್ನ ಆಟ ಕೊನೆಯತನಕ ನಡೆಯದು. ನೀನು ನಿನ್ನ ವರ್ತನೆಯನ್ನು ಬದಲಿಸಿಕೊ.''

``ಅದೇನು ಮಾತು ಆಡ್ತಿದೀರಾ? ಸಮೀರ್‌ ನಿಮ್ಮ ಸ್ನೇಹಿತ. ಆ ಕಾರಣದಿಂದ ನಾನು ಅವರೊಂದಿಗೆ ಮಾತನಾಡ್ತೀನಿ. ಅದು ನಿಮಗೆ ಆಟ ಅಂತಾ ಅನಿಸುತ್ತಾ? ನೀವು ಬೇಡ ಅಂತ ಹೇಳಿದರೆ ನಾನು ಅವರೊಂದಿಗೆ ಮಾತಾಡೋದನ್ನು ನಿಲ್ಲಿಸ್ತೀನಿ,'' ಎಂದು ಅನಾಮಿಕಾ ತನ್ನ ವಿರೋಧ ವ್ಯಕ್ತಪಡಿಸಿದಳು. ಆದರೆ ಅವಳ ಧ್ವನಿಯಲ್ಲಿ ಸತ್ಯದ ಸುಳಿವು ಕಾಣುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ