ಕೊರೋನಾದ ಹಾವಳಿ ಕಡಿಮೆಯಾದರೂ ಅದರ ಪಾರ್ಶ್ವ ಪರಿಣಾಮಗಳು ಇನ್ನೂ ಹಾಗೆಯೇ ಇವೆ. ಅದರಿಂದಾಗಿ ನಿರುದ್ಯೋಗ ಸಮಸ್ಯೆ ಹಾಗೂ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ವ್ಯಕ್ತಿ ವ್ಯಕ್ತಿಗಳ ನಡುವೆ ಅಂತರ ಹೆಚ್ಚಿಸುವಂತೆ ಮಾಡಿವೆ. ಏನನ್ನಾದರೂ ಹೊಸದಾಗಿ ಯೋಚಿಸಬೇಕೆನ್ನುವ ಉತ್ಸಾಹವನ್ನು ಕುಂದಿಸಿಬಿಟ್ಟಿವೆ. ಇಂತಹದರಲ್ಲಿ ಹಬ್ಬಗಳ ಸೀಸನ್‌ ಹೊಸ ಹುರುಪು ಹಾಗೂ ನವ ಕಿರಣಗಳನ್ನು ಹೊತ್ತು ತಂದಿದೆ.

ಅಂದಹಾಗೆ ಈಗ ಜನರಿಗೆ ಹಬ್ಬ ಆಚರಿಸಲು ಕೂಡ ಭೀತಿ ಉಂಟಾಗುತ್ತಿದೆ. ಹಬ್ಬಗಳೆಂದರೆ ಒಬ್ಬರು ಇನ್ನೊಬ್ಬರ ಮನೆಗೆ ಹೋಗುವುದು, ಭೇಟಿಯಾಗುವುದು, ಶಾಪಿಂಗ್‌ ಮಾಡುವುದು ಹೀಗೆ ಏನೆಲ್ಲ ಚಟುವಟಿಕೆಗಳು ಇದ್ದೇ ಇರುತ್ತವೆ. ಆದರೆ ಕೊರೋನಾದ ಭೀತಿಯ ನಡುವೆ ಇದೆಲ್ಲ ಮಾಡುವುದು ರೋಗ ಹರಡಬಹುದೆಂಬ ಭೀತಿ ಹೆಚ್ಚಿಸುತ್ತದೆ. ಆದರೆ ಹೆದರಿಕೊಂಡು ನಾವು ನಮ್ಮ ಹಳೆಯ ಉತ್ಸವಗಳನ್ನು ಆಚರಿಸುವ ಅವಕಾಶ ತಪ್ಪಿಸಿಕೊಳ್ಳಬಾರದು. ಹಬ್ಬಗಳು ನಮ್ಮನ್ನು ಪರಸ್ಪರರ ಪ್ರೀತಿಯ ಅನುಬಂಧದಲ್ಲಿ ಬೆಸೆಯುತ್ತವೆ. ಪ್ರೀತಿ ಹೆಚ್ಚಿಸಲು ಕಾರಣವಾಗುತ್ತದೆ. ಜೀವನದಲ್ಲಿ ಉತ್ಸಾಹ, ಹುಮ್ಮಸ್ಸನ್ನು ತೆಗೆದುಕೊಂಡು ಬರುತ್ತವೆ.

ಇಂತಹದರಲ್ಲಿ ಜೀವನದಲ್ಲಿ ಮತ್ತೊಮ್ಮೆ ಸಕಾರಾತ್ಮಕತೆ ಹಾಗೂ ಖುಷಿಯನ್ನು ತರಲು ಹಬ್ಬವನ್ನು ಆಚರಿಸಲು ಭೀತಿಯನ್ನು ಸ್ವಲ್ಪ ಬದಿಗೊತ್ತಿ ಹಾಗೂ ಹೊಸ ರೀತಿಯಲ್ಲಿ ಹಬ್ಬವನ್ನು ಆಚರಿಸಿ.

ದೂರವಿದ್ದೂ ಹತ್ತಿರವಾಗಿ….

ಕಾಲಕಾಲಕ್ಕೆ ಬರುವ ಹಬ್ಬಗಳು ಎಂತಹ ಸಂದರ್ಭಗಳಾಗಿರುತ್ತವೆಯೆಂದರೆ, ಅವು ಸಂಬಂಧದಲ್ಲಿ ಮಾಧರ್ಯ ತರಲು ನೆರವಾಗುತ್ತವೆ. ಆದರೆ ಕೊರೋನಾದ ಭೀತಿಯಿಂದಾಗಿ ನಾವು ಹಬ್ಬಗಳ ಆನಂದ ಪಡೆಯುತ್ತೇವೆ, ಇಲ್ಲವೇ ಎನ್ನುವುದರ ಬಗ್ಗೆ ಸಂದೇಹ ಮನೆ ಮಾಡಿದೆ. ಕೆಲವರಂತೂ ಮನೆಯಿಂದ ಹೊರಗೆ ಬರಲು ಇಷ್ಟಪಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀವು ವರ್ಚುವಲ್ ಮೀಟಿಂಗ್‌ ಮುಖಾಂತರ ನಮ್ಮವರ ಜೊತೆ ನೇರ ಸಂಪರ್ಕ ಪಡೆಯಬಹುದು. ನೀವು ಲ್ಯಾಪ್‌ ಟಾಪ್‌ ಅಥವಾ ಮೊಬೈಲ್ ‌ನಲ್ಲಿ ವರ್ಚುವಲ್ ‌ಮೀಟಿಂಗ್‌ ಮಾಡಬಹುದು. ಗ್ರೂಪ್‌ ಚಾಟ್‌ ಮಾಡಬಹುದು. ಝೂಮ್ ಮೀಟಿಂಗ್‌ ಅಥವಾ ವಾಚ್ಸ್ ಆ್ಯಪ್‌ ಕಾಲ್ ‌ಮೂಲಕ ಸಂಪರ್ಕ ಪಡೆಯಬಹುದು. ಹಬ್ಬದ ಸೊಗಸನ್ನು ಕಣ್ತುಂಬಿಸಿಕೊಳ್ಳುತ್ತಾ ಸಂಬಂಧಿಕರು ಹಾಗೂ ಸ್ನೇಹಿತರಿಗೆ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಶೇರ್‌ ಮಾಡಿ. ಮಕ್ಕಳಿಗೂ ಪರಸ್ಪರ ಮಾತನಾಡಿಸಲು ಅವಕಾಶ ಕೊಡಿ. ಆಗ ನಿಮಗೆ ದೂರ ಇರುವುದರ ಅನುಭವ ಇರುವುದಿಲ್ಲ.

ಮನೆಯ ಕಲಾತ್ಮಕ ಅಲಂಕಾರ

IB131321-131321142946517-SM362203

ನೀವು ಮಾರುಕಟ್ಟೆಗೆ ಹೋಗಿ ಅಲಂಕಾರದ ಸಾಮಗ್ರಿಗಳನ್ನು ತರುವುದಕ್ಕಿಂತ ನಿಮ್ಮ ಕೈಯಾರೆ ತಯಾರಿಸಿದ ವಸ್ತುಗಳಿಂದಲೇ ಮನೆಯ ಅಂದ ಹೆಚ್ಚಿಸಬಹುದು. ರಾಂಪ್ಸ್, ರಂಗೋಲಿ, ತೋರಣ, ಮೇಣದ ಬತ್ತಿಗಳು, ಪೇಂಟ್‌ ಮಾಡಿದ ಸುಂದರ ದೀಪಗಳು ಹೀಗೆ ಏನೆಲ್ಲ ಸಿದ್ಧಪಡಿಸಬಹುದು. ನೀವು ಮಕ್ಕಳನ್ನು ಕೂಡ ಇದರಲ್ಲಿ ತೊಡಗಿಸಬಹುದು. ಈ ತೆರನಾದ ಚಟುವಟಿಕೆಗಳ ವಿಡಿಯೋಗಳು ನಮಗೆ ಯೂಟ್ಯೂಬ್‌ ಚಾನೆಲ್ ‌ಗಳಲ್ಲಿ ದೊರಕುತ್ತವೆ. ಅವನ್ನು ನೋಡಿ ನಿಮ್ಮ ಕಲಾತ್ಮಕತೆಯನ್ನು ಇನ್ನಷ್ಟು ಅಪ್ ಡೇಟ್‌ ಮಾಡಿಕೊಳ್ಳಬಹುದು.

ಸ್ವಚ್ಛತೆ ಹಾಗೂ ಪೇಂಟಿಂಗ್

ಹಬ್ಬಕ್ಕೂ ಮುನ್ನ ಮನೆಯ ಸ್ವಚ್ಛತೆ ಹಾಗೂ ಬಣ್ಣ ಹೊಡೆಸುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಿಂದ ಮನೆಯು ಸ್ವಚ್ಛವಾಗುತ್ತದೆ ಹಾಗೂ ಪ್ರತಿವರ್ಷ ಮನೆಗೆ ಹೊಸ ಲುಕ್‌ ದೊರಕುತ್ತದೆ. ಕೊರೋನಾದಿಂದಾಗಿ ನೀವು ಹೊರಗಿನಿಂದ ಕೆಲಸಗಾರರನ್ನು ಕರೆಸಲು ಇಷ್ಟಪಡದಿದ್ದರೆ, ಮನೆಯ ಎಲ್ಲ ಸದಸ್ಯರು ಸೇರಿ ಈ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಬಹುದು.

ವೈಟ್‌ ವ್ಶಿಂಗ್‌ ಆಗಿರಬಹುದು ಅಥವಾ ಗೋಡೆಗಳಿಗೆ, ಬಾಗಿಲುಗಳಿಗೆ ಪೇಂಟ್‌ ನ್ನು ನೀವು ಬಹಳ ಒಳ್ಳೆಯ ರೀತಿಯಲ್ಲಿ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾಡಬಹುದು.

ಈ ರೀತಿ ನೀವು ನಿಮ್ಮ ಕಲೆಯನ್ನು ತೋರಿಸಬಹುದು. ಒಂದೆಡೆ ನೀವೆಲ್ಲ ಸೇರಿ ಈ ಎಲ್ಲ ಕೆಲಸ ಮಾಡುವುದನ್ನು ಎಂಜಾಯ್ ಮಾಡುವಿರಿ ಹಾಗೂ ನಿಮ್ಮ ಕಲೆಯ ಪ್ರಶಂಸೆಯಾದರೆ ನಿಮ್ಮ ಮನಸ್ಸು ಪ್ರಪಲ್ಲಿತವಾಗುತ್ತದೆ.

ಆನ್ಲೈನ್ಶಾಪಿಂಗ್ಮಜಾ

ಕೊರೋನಾದ ಭೀತಿಯ ದಿನಗಳಲ್ಲಿ ಹೊರಗಡೆ ಹೋಗಿ ಶಾಪಿಂಗ್‌ ಮಾಡುವುದು ನಿಮಗೆ ಸೂಕ್ತ ಎನಿಸಲಿಕ್ಕಿಲ್ಲ. ಅಂತಹ ಸಂದರ್ಭದಲ್ಲಿ ನೀವು ಶಾಪಿಂಗ್‌ ಮಾಡದೇ ಇರಲು ಹೇಗೆ ಸಾಧ್ಯ? ಅಂದಹಾಗೆ ಹೊಸ ಹೊಸ ಬಟ್ಟೆಗಳು, ಬೇರೆಯವರಿಗೆ ಗಿಫ್ಟ್, ಮನೆಗಾಗಿ ಹೊಸ ಸಾಮಾನು ಖರೀದಿಸಿ ಮನಸ್ಸಿಗೆ ಸಕಾರಾತ್ಮಕ ಶಕ್ತಿ ಹುಟ್ಟುಹಾಕಬಹುದು. ಹೊಸ ಬಟ್ಟೆಗಳು ನಿಮ್ಮ ಅಪೇಕ್ಷೆಗಳಿಗೆ ಹೊಸತನ ತರುತ್ತವೆ. ನಿಮ್ಮಲ್ಲಿ ಹೊಸ ಹುರುಪು ಬರುತ್ತದೆ. ಇಂತಹದರಲ್ಲಿ ಶಾಪಿಂಗ್‌ ಮಾಡುವ ಸರಳ ವಿಧಾನವೆಂದರೆ ಆನ್‌ ಲೈನ್‌ ಶಾಪಿಂಗ್‌. ನೀವು ಮನೆಯಲ್ಲಿ ಕುಳಿತುಕೊಂಡೇ ನಿಮಗಿಷ್ಟವಾದ ವಸ್ತುವನ್ನು ಸೂಕ್ತ ಬೆಲೆಗೆ ಖರೀದಿಸಬಹುದು. ಇಲ್ಲಿ ನಿಮಗೆ ಸಾಕಷ್ಟು ಪರ್ಯಾಯಗಳಿರುತ್ತವೆ. ಆ ಮೂಲಕ ಸೇವಿಂಗ್‌ ಕೂಡ ಮಾಡಬಹುದು.

ಸ್ನೇಹಿತರೊಂದಿಗೆ ಖುಷಿಯ ಸಿಂಚನ

ಕೊರೋನಾದ ಭೀತಿಯ ನಡುವೆ ನೀವು ಸ್ನೇಹಿತರ ಮನೆಗೆ ಹೋಗಲಾಗದಿದ್ದರೆ ಏನಾಯ್ತು? ಸ್ನೇಹಿತರೊಂದಿಗೆ ಖುಷಿಪಡಲು ಬೇರೆ ವಿಧಾನ ಅನುಸರಿಸಿ. ಸ್ನೇಹಿತರು ಹಾಗೂ ಆಪ್ತರೊಂದಿಗೆ ಕುಳಿತು ನಕ್ಕು ಖುಷಿಪಟ್ಟಾಗಲೇ ಹಬ್ಬದ ಮಜ ದ್ವಿಗುಣಗೊಳ್ಳುತ್ತದೆ. ನೀವು ನಿಮ್ಮ ವಾಹನ ಹೊರತೆಗೆಯಿರಿ. ನಿಮ್ಮಲ್ಲಿ ಸ್ವಂತ ವಾಹನ ಇರದೇ ಇದ್ದರೆ ಯಾವುದಾದರೂ ವಾಹನ ಬುಕ್‌ ಮಾಡಿಕೊಂಡು ನಿಮ್ಮ ಸ್ನೇಹಿತರು ಅಥವಾ ಗೆಳತಿಯರು ಇರುವ ಸ್ಥಳಕ್ಕೆ ಹೋಗಿ ಗಾಡಿಯಲ್ಲಿಯೇ ಕುಳಿತು ಹರಟೆ ಹೊಡೆಯಿರಿ.

ಅಲ್ಲಿಯೇ ಅಕ್ಕಪಕ್ಕದಲ್ಲಿಯೇ ನಿಮ್ಮ ಬೇರೆ ಯಾರಾದರೂ ಸ್ನೇಹಿತರು ಇದ್ದರೆ, ಅವರನ್ನು ಅಲ್ಲಿಯೇ ಕರೆಯಿಸಿಕೊಳ್ಳಿ. ಹಳೆಯ ನೆನಪುಗಳನ್ನು ಮೆಲುಕು ಹಾಕಿ ನಿಮಗಿಷ್ಟವಾದ ತಿಂಡಿಗಳನ್ನು ಆಸ್ವಾದಿಸಿ.

ಮಕ್ಕಳಿಗೆ ಪಿಕ್ನಿಕ್

ನಿಮ್ಮ ಮನೆಯ ಮಕ್ಕಳನ್ನು ಯಾವುದಾದರೂ ಮುಕ್ತ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ದೀಪ ಬೆಳಗಿಸಿ ಇಲ್ಲಿ ಕ್ಯಾಂಡಲ್ ಹಚ್ಚಿಸಿ. ಪಟಾಕಿ ಸಿಡಿಸಿ. ನೀವು ಅಲ್ಲಿ ಅಕ್ಕಪಕ್ಕದ ಸ್ನೇಹಿತರ ಮಕ್ಕಳನ್ನು ಕೂಡ ಕರೆಸಿ ಅವರಿಗೂ ಇದರ ಆನಂದ ಪಡೆಯಲು ಪ್ರೇರೇಪಿಸಿ. ಈ ರೀತಿ ಅವರಿಗೆ ಪಿಕ್ನಿಕ್‌ ಪಾರ್ಟಿ ಆಗುತ್ತದೆ.

ಅದನ್ನು ಅವರು ಎಂಜಾಯ್‌ ಮಾಡುತ್ತಾರೆ. ನಿಮಗೂ ಕೂಡ ವಿಭಿನ್ನ ರೀತಿಯ ಮನರಂಜನೆ ಸಿಗುತ್ತದೆ. ಎಲ್ಲರಿಗೂ ಕೂಡ ಹಬ್ಬ ಆಚರಿಸಿದ ಖುಷಿಯೂ ಸಿಗುತ್ತದೆ ಹಾಗೂ ಸಾಮಾಜಿಕ ಅಂತರ ಪಾಲಿಸಿದಂತೆಯೂ ಆಗುತ್ತದೆ.

ಫುಡ್ಜಾಯಿಂಟ್ಆಹಾರ ಕಳಿಸಿ

IB131321-131321165152273-SM159430

 

ನೀವು ನಿಮ್ಮ ಸ್ನೇಹಿತರಿಗೆ ಹಲವು ರೀತಿಯಲ್ಲಿ ಅಚ್ಚರಿ ಉಂಟು ಮಾಡಬಹುದು. ಆದರೆ ಹಬ್ಬದ ಸಂದರ್ಭದಲ್ಲಿ ಅತ್ಯಂತ ಪ್ರೀತಿಪಾತ್ರ ಸರ್ಪ್ರೈಸ್‌ ಎಂದರೆ, ನೀವು ಅವರಿಗೆ ಯಾವುದಾದರೂ ಫುಡ್‌ ಜಾಯಿಂಟ್‌ ನ ಆಹಾರವನ್ನು ಕಳಿಸಿಕೊಡಿ. ಹೀಗೆ ಮಾಡುವುದರಿಂದ ನಿಮ್ಮ ಮತ್ತು ಅವರ ನಡುವಿನ ಸ್ನೇಹ ಮತ್ತಷ್ಟು  ಬಲವರ್ಧನೆ ಆಗುವುದಲ್ಲದೆ, ಅವರಿಗೆ ಹಬ್ಬದ ನಿಜವಾದ ಅನುಭವ ಆಗುತ್ತದೆ.

ಲೈವ್ ಮೀಟಿಂಗ್ನಲ್ಲಿ ಕುಳಿತುಕೊಳ್ಳಿ

ಕೊರೋನಾದ ಆತಂಕದ ನಡುವೆ ಯಾರ ಮನೆಗೂ ಹೋಗಲಾಗುತ್ತಿಲ್ಲ. ಇದರರ್ಥ ಹಬ್ಬದ ಸೊಗಡಿನ ಆನಂದ ಪಡೆಯಬಾರದು ಅಂತಲ್ಲ. ಹಬ್ಬದ ಆಗಮನ ಮಹಿಳೆಯರಿಗೆ ಏಕೆ ಹುಚ್ಚು ಖುಷಿ ಕೊಡುತ್ತದೆಂದರೆ ಅವರಿಗೆ ಅಲಂಕರಿಸಿಕೊಳ್ಳಲು, ಹೊಸ ಬಟ್ಟೆಗಳನ್ನು ಧರಿಸಲು ಅವಕಾಶ ದೊರಕುತ್ತದೆ. ಹೊಸ ಹೊಸ ಆಭರಣ ಧರಿಸಲು ಹಾಗೂ ಸ್ಟೈಲಿಶ್‌ ಬಟ್ಟೆ ಧರಿಸಲು ಹಾಗೂ ಚೆಂದ ಕಾಣಲು ಇದಕ್ಕಿಂತ ಬೇರೆ ಅವಕಾಶಗಳೇ ಇರುವುದಿಲ್ಲ. ಇದರಿಂದ ಹೊಸ ಹುಮ್ಮಸ್ಸು ಬರುತ್ತದೆ. ಬೇರೆಯವರು ನಿಮ್ಮನ್ನು ಹೊಗಳಿದಾಗ ಮನಸ್ಸು ಅರಳುತ್ತದೆ. ಜೀವನದಲ್ಲಿ ಹೊಸ ಮೆರುಗು ಬರುತ್ತದೆ. ಆದರೆ ಕೊರೋನಾದ ಆತಂಕದ ನಡುವೆ ಹೊಸ ಬಟ್ಟೆ, ಅಲಂಕಾರ ಮೇಕಪ್‌ ನ ಅರ್ಥವೇನು? ಮನೆಯಲ್ಲಿಯೇ ಕುಳಿತುಕೊಂಡಿದ್ದರೆ ಅದೆಲ್ಲ ಯಾರಿಗಾಗಿ ಎಂದು ನೀವೆಲ್ಲ ಪ್ರಶ್ನಿಸಬಹುದು. ಆದರೆ ಸ್ವಲ್ಪ ಯೋಚಿಸಿ. ಇದಕ್ಕೂ ಒಂದು ಉಪಾಯವಿದೆ. ನೀವು ಚೆನ್ನಾಗಿ ಅಲಂಕರಿಸಿಕೊಂಡು ಸಿದ್ಧರಾಗಿ ಹಾಗೂ ಸಂಬಂಧಿಕರು ಹಾಗೂ ಗೆಳತಿಯರೊಂದಿಗೆ ಝೂಮ್ ಮೀಟಿಂಗ್‌ ಮಾಡಿ ಇಲ್ಲಿ ಗೂಗಲ್ ಮೀಟ್‌ ಮಾಡಿ.

ಇದರಲ್ಲಿ ನೀವು ಪರಸ್ಪರರ ಹಬ್ಬದ ಸಿದ್ಧತೆಯನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ನಿಮ್ಮ ಹೊಸ ಲುಕ್‌ ಬಗ್ಗೆ ಜನರ ಕಮೆಂಟ್ ಕೇಳಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹಾಗಾದರೆ ತಡವೇಕೆ? ಪರಿಪೂರ್ಣ ಉತ್ಸಾಹದೊಂದಿಗೆ ಸಿದ್ಧರಾಗಿ ಮತ್ತು ಹಬ್ಬದ ಆನಂದ ಪಡೆಯಿರಿ.

ಬಡವರಿಗೆ ನೆರವು

ಕೊರೋನಾದಿಂದಾಗಿ ಬಡವರ ಬದುಕು ಛಿದ್ರಗೊಂಡಿದೆ. ಎಷ್ಟೋ ಜನ ಉದ್ಯೋಗ ಕಳೆದುಕೊಂಡರು. ಎಷ್ಟೋ ಜನರ ಪುಟ್ಟ ಅಂಗಡಿಗಳು ಕೂಡ ನಡೆಯುತ್ತಿಲ್ಲ. ಅವರ ಬಳಿ ಉಳಿತಾಯ ಕೂಡ ಇರುವುದಿಲ್ಲ. ಹೀಗಾಗಿ ಅವರ ಕುಟುಂಬ ನಡೆಯುವುದು ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ನೀವು ನಿಮ್ಮ ಒಂದಿಷ್ಟು ಸಮಯ ಖರ್ಚು ಮಾಡಿ ಕೆಲವರಿಗಾದರೂ ಸಿಹಿ ತಿಂಡಿ ಬಟ್ಟೆ ಒಯ್ದು ಕೊಡಿ. ಅವರ ಮುಖದಲ್ಲಿ ಅರಳುವ ಖುಷಿ ನಿಮ್ಮ ಹೃದಯದಲ್ಲಿ ತೃಪ್ತಿಯನ್ನುಂಟು ಮಾಡುತ್ತದೆ. ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಉಪಯುಕ್ತ ವಸ್ತುವನ್ನು ಖರೀದಿಸಿ ಕೊಡಬಹುದು.

ಹಿರಿಯ ನಾಗರಿಕರ ಜೊತೆ

27 ವರ್ಷದ ಹರ್ಷಿತಾ ಹೇಳುತ್ತಾರೆ, “ನಮ್ಮ ಏರಿಯಾದಲ್ಲಿ ಮಹಿಳೆಯರ ವೃದ್ಧಾಶ್ರಮವೊಂದಿದೆ. ಅಲ್ಲಿ 200ಕ್ಕೂ ಹೆಚ್ಚು ವೃದ್ಧರಿದ್ದಾರೆ. ನಾನು ಸಾಮಾನ್ಯವಾಗಿ ಸಂಜೆ ಹೊತ್ತು ಅಲ್ಲಿಗೆ ಹೋಗುತ್ತಿರುತ್ತೇನೆ. ಸ್ವಲ್ಪ ಹೊತ್ತೂ ಅವರೊಂದಿಗೆ ಮಾತನಾಡುತ್ತೇನೆ. ಕೆಲವು ಪುಸ್ತಕಗಳ ಬಗ್ಗೆ ಹೇಳುತ್ತೇನೆ. ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತೇವೆ. ನನಗೀಗ ಎಲ್ಲರೊಂದಿಗೆ ಸ್ನೇಹ ಆಗಿಬಿಟ್ಟಿದೆ.

“ನಾನು ದೀಪಾವಳಿ ಸಮಯದಲ್ಲಿ ಬಹಳಷ್ಟು ಉಡುಗೊರೆ ಸಿಹಿ ತಿಂಡಿ, ಮೇಣದ ಬತ್ತಿ ತೆಗೆದುಕೊಂಡು ಹೋಗುತ್ತೇನೆ. ಎಲ್ಲರೂ ಸೇರಿ ದೀಪ ಬೆಳಗಿಸುತ್ತೇವೆ. ಬಳಿಕ ಸಿಹಿ ತಿಂಡಿ ತಿನ್ನುತ್ತೇವೆ. ಈ ಸಲ ಕೊರೋನಾದಿಂದಾಗಿ ನನಗೆ ಅಲ್ಲಿ ಭೇಟಿ ಕೊಡಲು ಆಗುತ್ತಿಲ್ಲ. ಹೀಗಾಗಿ ನಾನು ಅವರಿಗಾಗಿ ಕೆಲವು ತಿಂಡಿಗಳನ್ನು, ವಸ್ತುಗಳನ್ನು ಕೊರಿಯರ್‌ ಮೂಲಕ ಕಳಿಸಿಕೊಟ್ಟಿರುವೆ. ದೀಪಾವಳಿ ದಿನವೇ ಅವರಿಗೆ ವಿತರಿಸಬೇಕೆಂದು ಮನವಿ ಮಾಡಿರುವೆ. ದೀಪಾವಳಿ ರಾತ್ರಿ ವಿಡಿಯೋ ಕಾಲ್ ಮೂಲಕ ನಾನು ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತೇನೆ.”

ಈ ರೀತಿಯಾಗಿ ನೀವು ವೃದ್ಧರಲ್ಲಿ ಖುಷಿಯನ್ನು ಹಂಚಿ ನಿಮ್ಮ ಜೀವನದಲ್ಲಿ ವಿಭಿನ್ನ ರೀತಿಯ ಸಕಾರಾತ್ಮಕತೆಯನ್ನು ಅನುಭವ ಮಾಡಿಕೊಳ್ಳಬಹುದು. ಇದು ಎಂತಹ ಒಂದು ಸಮಯವೆಂದರೆ, ಅವರಲ್ಲಿ ನಮ್ಮತನದ ಅನುಭವವನ್ನುಂಟು ಮಾಡಬಹುದು.

ಸಂಬಂಧಗಳ ಮರ್ಮ ಅರಿಯಿರಿ

IB136041-136041160004710-DY414494

ಲಾಕ್‌ ಡೌನ್‌ ಸಮಯದಲ್ಲಿ ನಮಗೆ ಚೆನ್ನಾಗಿ ಮನರಿಕೆಯಾಗಿರುವ ವಿಷಯವೆಂದರೆ, ಜೀವನ ಕೇವಲ ಭೌತಿಕ ವಸ್ತುಗಳಿಂದಷ್ಟೇ ಅಲ್ಲ, ಜೀವನದಲ್ಲಿ ಸಹನಶೀಲತೆ, ಪ್ರೀತಿ ಸದ್ಭಾವನೆ ಆಪ್ತತೆ, ಪರಸ್ಪರರನ್ನು ಅರಿತುಕೊಳ್ಳುವುದು ಹಾಗೂ ಎಲ್ಲರ ಬಗ್ಗೆ ಕಾಳಜಿ ವಹಿಸುವುದು ಎಷ್ಟು ಮುಖ್ಯ ಎನ್ನುವುದು ತಿಳಿಯಿತು. ಎಲ್ಲರೂ ಸೇರಿ ಹಬ್ಬ ಆಚರಿಸಿದರೆ ಅದರ ಖುಷಿಯೇ ಬೇರೆ.

ನಾವು ಹೇಗೆ ಯೋಚಿಸಬೇಕೆಂದರೆ, ನಮಗೆ ಇಷ್ಟೆಲ್ಲ ಒಳ್ಳೆಯ ಜೀವನ ಸಿಕ್ಕಿದೆ, ನಾವು ಬದುಕುಳಿದಿದ್ದೇನೆ. ನಾವು ನಮ್ಮ ಕುಟುಂಬದವರ ಜೊತೆ ಇವರು ಅವಕಾಶ ಕೊಟ್ಟಿದೆ. ಹಾಗಾಗಿ ನಾವು ಇದನ್ನು ಸೆಲೆಬ್ರೇಟ್‌ ಮಾಡುವ ಅವಶ್ಯಕತೆ ಇದೆ. ಈಗ ನಮ್ಮ ಭೌತಿಕ ವಸ್ತುಗಳಿಲ್ಲ ಕಪಾಟುಗಳಲ್ಲಿ ಬಂಧಿಯಾಗಿವೆ. ಜೀವನದಲ್ಲಿ ನಾವು ಎಷ್ಟೊಂದು ಧಾವಂತ ಮಾಡಿ ಯಾವ ವಸ್ತುಗಳನ್ನು ತಂದು ಇಟ್ಟಿದ್ದೇವೆ ಅವುಗಳಲ್ಲಿ ಕೆಲವು ನಿರರ್ಥಕ ಅನಿಸುತ್ತವೆ. ಆದರೆ ಪರಿಸ್ಥಿತಿಯ ಕಾರಣದಿಂದ ಇಂದು ನಮ್ಮ ಜೊತೆಗಿದ್ದಾರೊ, ನಮ್ಮ ಆಸುಪಾಸಿನಲ್ಲಿದ್ದಾರೊ, ಅವರನ್ನು ನಾವು ಫೋನ್‌ ನಲ್ಲಿ ಬಂಧಿಯಾಗಿಸಿಬಿಟ್ಟಿದ್ದೇವೆ.

ಯಾವಾಗಾದರೊಮ್ಮೆ ನೆನಪಿಗೆ ಬರುತ್ತಿದ್ದವರನ್ನು ಭೇಟಿಯಾಗಲು ನಮ್ಮ ಬಳಿ ಸಮಯಲೇ ಇಲ್ಲವಾಗಿದೆ. ಈಗ ಅವರು ಹಾಗೂ ಅವರ ಪ್ರೀತಿ ಎಲ್ಲಕ್ಕೂ ಮಹತ್ವದ್ದಾಗಿದೆ. ಈ ಸಂಕಷ್ಟದ ಸಮಯದಲ್ಲಿ ಇಡೀ ಕುಟುಂಬ ನಿಜವಾದ ಅರ್ಥದಲ್ಲಿ ಜೊತೆಗಿದ್ದರೆ, ನಾವೇಕೆ ಈ ಆಪ್ತತೆಯ ಖುಷಿಯನ್ನು ಪ್ರೀತಿಯ ದಾರದಲ್ಲಿ ಬಂಧಿಸಬಾರದು? ಹೌದು ಹಬ್ಬಗಳ ಖುಷಿಯ ಸಂದರ್ಭದಲ್ಲಿ ನಾವು ಈ ಪ್ರೀತಿಯನ್ನು ಸೆಲೆಬ್ರೇಟ್‌ ಮಾಡಬೇಕು.

ಸಕಾರಾತ್ಮಕತೆಯ ಗಾಢ ಸಂಬಂಧ

ಒಳ್ಳೆಯ ಆರೋಗ್ಯವೆಂದರೆ, ನಾವು ಯಾವುದೇ ತೊಂದರೆಯಿಲ್ಲದೆ ನಮ್ಮ ಜೀವನವನ್ನು ಖುಷಿಯಿಂದ ಕಳೆಯುವುದಾಗಿದೆ. ವ್ಯವಸ್ಥಿತ ಜೀವನಶೈಲಿ ಅಳವಡಿಸಿಕೊಂಡು ನಾವು ನಮ್ಮ ದೇಹವನ್ನು ಮುಂಬರುವ ತೊಂದರೆಯಿಂದ ರಕ್ಷಿಸುತ್ತೇವೆ. ಯಾವುದಾದರೂ ತೊಂದರೆ ಬಂದಾಗ ನಾವು ವೈದ್ಯರನ್ನು ಭೇಟಿಯಾಗುತ್ತೇವೆ. ಏಕೆಂದರೆ ಅವರು ಕೊಟ್ಟ ಔಷಧಿಯಿಂದ ನಮ್ಮ ದೇಹದ ರೋಗ ನಿವಾರಣೆ ಆಗಬೇಕು ಎನ್ನುವುದು ನಮ್ಮ ಯೋಚನೆಯಾಗಿರುತ್ತದೆ. ಆದರೆ ನಮ್ಮ ಮೆದುಳು ಅನಾರೋಗ್ಯ ಪೀಡಿತವಾದಾಗ ನಾವು ವೈದ್ಯರ ಬಳಿ ಹೋಗುವುದಿಲ್ಲ. ಏಕೆಂದರೆ ಯಾರಾದರೂ ನಮ್ಮನ್ನು ಹುಚ್ಚರೆಂದು ಕರೆದರೆ ಏನು ಗತಿ ಎಂಬ ಚಿಂತೆ ಕಾಡುತ್ತದೆ. ಇತ್ತೀಚೆಗೆ ನಾವು ಎಷ್ಟೊಂದು ಒತ್ತಡಲ್ಲಿದ್ದೇವೆಂದರೆ, ಹಗಲುರಾತ್ರಿ ಕೆಲಸ ಮಾಡಿ ಹೆಚ್ಚೆಚ್ಚು ಹಣ ಗಳಿಸಬೇಕೆಂಬ ದುರಾಸೆ ಬಂದುಬಿಟ್ಟಿದೆ. ನಾವು ನಮ್ಮ ದೈಹಿಕ ಅವಶ್ಯಕತೆಗಳನ್ನು ಪೂರ್ತಿಗೊಳಿಸಿಕೊಳ್ಳಲು ನಾವು ಮಾನಸಿಕ ಅಗತ್ಯಗಳನ್ನು ಮರೆತು ಬಿಡುತ್ತೇವೆ. ಜೀವನದಲ್ಲಿ ಸಕಾರಾತ್ಮಕತೆ ಮರೆತುಹೋಗುತ್ತದೆ. ಅದರಿಂದ ಖಿನ್ನತೆ ಮನೆ ಮಾಡುತ್ತದೆ. ಎಷ್ಟೋ ಸಲ ನಮ್ಮನ್ನು ಯಾರೂ ಪ್ರೀತಿಸುವುದಿಲ್ಲ. ಆದರಿಸುವುದಿಲ್ಲ ಎನಿಸಿಬಿಡುತ್ತದೆ.

ಹಬ್ಬದ ಅರ್ಥ ಬೆಳಕು, ಸಂಗೀತ, ಸಿಹಿ ಸೇವನೆ, ನಗುವಿನ ಆನಂದ, ನಮ್ಮವರ ಜೊತೆ ಮಿಲನ. ಇದು ಎಂತಹ ಒಂದು ಸಂದರ್ಭವೆಂದರೆ, ಇದರ ಮೂಲಕ ನೀವು ನಿಮ್ಮ ವೈರತ್ವ ಮರೆಯಬಹುದು. ಒಬ್ಬರು ಇನ್ನೊಬ್ಬರಲ್ಲಿ ಪ್ರೀತಿಯಲ್ಲಿ ಕಳೆದು ಹೋಗಬಹುದು. ಇವೆಲ್ಲ ನಮ್ಮನ್ನು ಖಿನ್ನತೆ ಒತ್ತಡಮುಕ್ತಗೊಳಿಸಲು ನೆರವಾಗುತ್ತವೆ. ನಮ್ಮವರನ್ನು ಭೇಟಿಯಾಗಿ ನಾವು ಖುಷಿಗೊಳ್ಳುತ್ತೇವೆ. ತಮಾಷೆ ಮಾಡುತ್ತೇವೆ. ಇದರಿಂದಾಗಿ ನಮ್ಮ ದೇಹದಲ್ಲಿ `ಡೋಪಾಮೈನ್‌’ ಎಂಬ ಹಾರ್ಮೋನು ಸ್ರಾವವಾಗುತ್ತದೆ. ಅದು ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಒತ್ತಡದ ಮಟ್ಟ ಕುಸಿಯುವಂತೆ ಮಾಡುತ್ತದೆ. ಹಾಗಾಗಿ ನಾವು ಮಾನಸಿಕವಾಗಿ ಬಲವಾಗುತ್ತೇವೆ. ಮಾನಸಿಕ ಆರೋಗ್ಯವೆನ್ನುವುದು ನೇರವಾಗಿ ಸರಾಕಾರತ್ಮಕ ಶಕ್ತಿಯೊಂದಿಗೆ ಸಂಪರ್ಕ ಹೊಂದಿದೆ. ಯಾವಾಗ ನಾವು ಒಳ್ಳೆಯದನ್ನು ಯೋಚಿಸುತ್ತೇವೋ, ಹಿತಕರ ಅನುಭವ ಮಾಡಿಕೊಳ್ಳುತ್ತೇವೆ ಆಗ ನಮ್ಮ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ.

ಒಂದು ಸಂಗತಿ ನೆನಪಿನಲ್ಲಿರಲಿ, ಸಕಾರಾತ್ಮಕತೆ ನಮ್ಮ ಮೆದಳನ್ನು ಫಿಟ್‌ ಆಗಿಡಲು ಉಪಯುಕ್ತ ಟಾನಿಕ್‌ ನಂತೆ ಕೆಲಸ ಮಾಡುತ್ತದೆ. ನಮ್ಮ ಮೆದುಳು ಫಿಟ್‌ಆಗಿದ್ದರೆ ಮಾತ್ರ ನಮ್ಮ ದೇಹ ಫಿಟ್‌ ಆಗಿರುತ್ತದೆ. ಇಲ್ಲದಿದ್ದರೆ ಸ್ಟ್ರೆಸ್‌ ಅಥವಾ ಒತ್ತಡದಿಂದ ಸಾವಿರಾರು ರೋಗಗಳು ಬರುತ್ತವೆ. ಹಬ್ಬಗಳ ಈ ಸಂದರ್ಭದಲ್ಲಿ ನಾವು ಖುಷಿಯ ಅನುಭವ ಪಡೆಯುವುದರ ಮೂಲಕ ಸಕಾರಾತ್ಮಕತೆಯ ತರಂಗಗಳನ್ನು ಉತ್ಪತ್ತಿ ಮಾಡಬಹುದು. ಅವು ಮೆದುಳನ್ನು ದೀರ್ಘಾವಧಿಯತನಕ ಫಿಟ್‌ ಆಗಿಡಬಲ್ಲವು.

ದೀಪಾ

ಕೊರೋನಾದ ಕಾರಣದಿಂದ ನೀವು ಪೇಂಟ್‌ ಮಾಡಲು ಕಾರ್ಮಿಕರನ್ನು ಮನೆಗೆ ಕರೆಸಲು ಇಚ್ಛಿಸದಿದ್ದರೆ, ಏನೂ ತೊಂದರೆಯಿಲ್ಲ. ನೀವು ಮನೆಯವರೆಲ್ಲ ಸೇರಿ ಈ ಕೆಲಸವನ್ನು ಮಾಡುವ ಖುಷಿಯನ್ನು ಪಡೆಯಬಹುದು…..ಕೊರೋನಾದ ಭೀತಿಯ ನಡುವೆ ಇಡೀ ಕುಟುಂಬ ಜೊತೆಗಿದೆ. ನಿಜವಾದ ಅರ್ಥದಲ್ಲಿ ನಾವು ಈ ಕ್ಷಣಗಳನ್ನು ಪ್ರೀತಿಯಿಂದ ಏಕೆ ಆಚರಿಸಬಾರದು……?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ