ದಿನವಿಡಿಯ ಧಾವಂತದ ಬಳಿಕ ಚೆನ್ನಾಗಿ ಸಜ್ಜುಗೊಳಿಸಿದ ಬೆಡ್‌ ರೂಮ್ ನಿಮ್ಮ ದಣಿವನ್ನು ನಿವಾರಿಸುತ್ತದೆ. ಹೀಗಾಗಿ ಬೆಡ್‌ ರೂಮ್ ನ್ನು ಚೆನ್ನಾಗಿ ಸಜ್ಜುಗೊಳಿಸುವುದು ಮುಖ್ಯ. ನಮ್ಮ ಬೆಡ್‌ ರೂಮ್ ಗೆ ನಾವೇ ಅಂದದ ರೂಪ ಕೊಟ್ಟರೆ ಅದು ವಿಶಿಷ್ಟ ಅನುಭವ ನೀಡುತ್ತದೆ. ಬೆಡ್‌ ರೂಮ್ ಗೆ ಅಂದಚೆಂದದ ರೂಪ ಕೊಡಲು ನಿಮಗೆ ತಿಳಿಯದಿದ್ದಲ್ಲಿ ಆಧುನಿಕ ಇಂಟೀರಿಯರ್ ಡಿಸೈನರ್‌ಗಳ ಟಿಪ್ಸ್ ಓದಿ.

ಬೆಡ್‌ ನ್ನು ಸರಿಯಾಗಿ ಸಜ್ಜುಗೊಳಿಸುವುದು ಒಂದು ಕಲೆ. ಅದಕ್ಕಾಗಿ ಸೂಕ್ತ ಆಕಾರದ ಬೆಡ್‌ ಆಯ್ಕೆ ಮಾಡಿಕೊಳ್ಳಿ. ಅದನ್ನು ರೂಮ್ ನಲ್ಲಿ ಹಾಕಿದಾಗ ಇನ್ನಷ್ಟು ಜಾಗ ಹಾಗೆಯೇ ಉಳಿದಿರಬೇಕು.

ಬೆಡ್‌ ರೂಮ್ ಗೆ ಸಂಬಂಧಪಟ್ಟ ಯಾವುದೇ ಸಲಕರಣೆಗಳನ್ನು ಹೊರಗೆ ಇಡುವಂತಾಗಬಾರದು. ಹಾಗಾಗಿ ಬೆಡ್‌ ನಲ್ಲಿ ಬಾಕ್ಸ್  ವ್ಯವಸ್ಥೆ ಮಾಡಿಕೊಳ್ಳಿ.

ಗೋಡೆಗಳ ಬಣ್ಣಕ್ಕನುಗುಣವಾಗಿ ಬೆಡ್‌ ನ್ನು ಆಯ್ಕೆ ಮಾಡಿಕೊಳ್ಳಿ. ಅದರಿಂದ ಕೋಣೆಗೆ ಹೊಸ ಲುಕ್‌ ಬರುತ್ತದೆ. ನಿಮ್ಮ ಮೆಚ್ಚಿನ ಆಯ್ಕೆಯ ಬೆಡ್‌ ಖರೀದಿಸಲು ನೀವು ಆನ್‌ ಲೈನ್‌ ಶಾಪಿಂಗ್‌ ನ ನೆರವು ಪಡೆಯಬಹುದು.

ಬೆಡ್‌ ಗಾಗಿ ಆರಾಮದಾಯಕ ದಿಂಬು ಆಯ್ಕೆ ಮಾಡಿ. ಅದು ಹೆಚ್ಚು ಮೃದುವಾಗಲಿ ಅಥವಾ ಕಠೋರವಾಗಲಿ ಇರಬಾರದು. ನಿಮ್ಮ ಬೆನ್ನಿಗೆ ವಿಶ್ರಾಂತಿ ಸಿಗಬೇಕು, ಚೆನ್ನಾಗಿ ನಿದ್ರೆ ಲಭಿಸಬೇಕು.

ಬೆಡ್‌ ರೂಮ್ ನ್ನು ಅಲಂಕರಿಸಲು ಡೆಕೊರೇಟಿವ್ ‌ದಿಂಬುಗಳು, ಉತ್ತಮ ಗುಣಮಟ್ಟದ ದಿಂಬಿನ ಆಕಾರ ಬೆಡ್‌ ಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ. ಈಗ ದಿಂಬುಗಳು ಬೇರೆ ಬೇರೆ ಆಕಾರದಲ್ಲಿ ದೊರೆಯುತ್ತವೆ. ನಿಮ್ಮ ಇಷ್ಟದ 2-3 ಆಕಾರದ ದಿಂಬುಗಳನ್ನು ಆಯ್ಕೆ ಮಾಡಿ.

ಬೆಡ್‌ ಮೇಲಿನ ಹೊದಿಕೆ ಯಾವಾಗಲೂ ತಿಳಿವರ್ಣದ್ದಾಗಿರಲಿ. ಗೋಡೆಯ ಬಣ್ಣಕ್ಕೆ ಹೊಂದುವಂಥದ್ದಾಗಿರಲಿ. ನಿಮ್ಮ ಕೋಣೆ ಚಿಕ್ಕದಾಗಿದ್ದರೆ, ದೊಡ್ಡ ಪ್ರಿಂಟ್‌ ಹಾಗೂ ಗಾಢ ವರ್ಣದ ಹೊದಿಕೆಯನ್ನು ತೆಗೆದುಕೊಳ್ಳಬೇಡಿ. ಒಂದಷ್ಟು ಕಸೂತಿಯಿರುವ ಹೊದಿಕೆ ಕೋಣೆಗೆ ಲುಕ್‌ ಕೊಡುತ್ತದೆ.

ಬೆಡ್‌ ರೂಮಿನಲ್ಲಿ ಬೆಡ್‌ ಪೂರ್ತಿ ಜಾಗ ಆಕ್ರಮಿಸಿಕೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ಅಕ್ಕಪಕ್ಕ ಉಳಿದ ಜಾಗದಲ್ಲಿ ಸೈಡ್‌ ಟೇಬಲ್ ಒಂದು ಚೇರ್‌ ಇಟ್ಟುಕೊಳ್ಳಬಹುದು. ಅಲ್ಲಿ ಕುಳಿತು ನೀವು ಓದಬಹುದು, ಬರೆಯಬಹುದು. ಅದರ ಹೊರತಾಗಿ ಸೈಡ್‌ ಟೇಬಲ್ ಮೇಲೆ ಒಂದಿಷ್ಟು ಅಲಂಕಾರಿಕ ವಸ್ತುಗಳನ್ನು ಕೂಡ ಇಡಬಹುದು.

ಬೆಡ್‌ ರೂಮಿನಲ್ಲಿ ಪ್ರಖರ ಲೈಟು ಬೇಡ. ಹಳದಿ ಅಥವಾ ಡಿವೈಟ್‌ ನ ಬಳಕೆ ಸೂಕ್ತ ಎನಿಸುತ್ತದೆ. ಮಧ್ಯಮ ಬೆಳಕಿನಲ್ಲಿ ಬೆಡ್‌ ರೂಮ್ ಇನ್ನಷ್ಟು ರೋಮಾಂಚಕವಾಗುತ್ತದೆ.

ಬೆಡ್‌ ರೂಮ್ ನ್ನು ಹೆಚ್ಚು ಸಾಮಾನುಗಳಿಂದ ತುಂಬದಿರಿ. ಆದಷ್ಟು ಕಡಿಮೆ ಸಾಮಾನುಗಳಿಂದ ಕೋಣೆಯನ್ನು ಸ್ವಚವಾಗಿಡಿ.

ಬೆಡ್‌ ರೂಮಿನ ಅಲಂಕಾರದ ಮೇಲೆ ಹವಾಮಾನ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಬೇಸಿಗೆಯಲ್ಲಿ ಕಾಟನ್‌ ನ ಹೊದಿಕೆಗಳನ್ನು ಬಳಸಿ. ಮಳೆಗಾಲದಲ್ಲಿ ಬೇಗ ಒಣಗುವಂತಹ ಹೊದಿಕೆಗಳನ್ನು ಉಪಯೋಗಿಸಿ. ಚಳಿಗಾಲದಲ್ಲಿ ಬೆಚ್ಚಗಿನ ಆರಾಮದಾಯಕ ಬೆಡ್‌ ಹಿತಕರ ಎನಿಸುತ್ತದೆ.

- ಕೋಮಲಾ ರವಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ