ತೆಲಂಗಾಣದ ಪಶು ವೈದ್ಯೆಯ ಹತ್ಯೆ ಮಾಡಿದವರು ಪೊಲೀಸರ ಬಂಧನದ ಬಳಿಕ ಎನ್‌ ಕೌಂಟರ್‌ ಆದರೋ ಅಥವಾ ಇಲ್ಲವೋ ಎನ್ನುವುದು ಎಂದೂ ತಿಳಿಯದು. ಆದರೆ ಒಂದು ಮಾತಂತೂ ಸತ್ಯ. ಅವರು ಎಷ್ಟೇ ಜನರಿದ್ದರೂ ಹೆಣ್ಣನ್ನು ಕಾಲುಕಸ ಎಂದು ಭಾವಿಸುವವರೇ ಆಗಿದ್ದರು. ಇದನ್ನು ಅರಿತುಕೊಳ್ಳಲು ಈ ಒಂದು ಉದಾಹರಣೆ ಸಾಕು, ಹೈದ್ರಾಬಾದ್‌ನಿಂದ 1100 ಕಿ.ಮೀ. ದೂರದಲ್ಲಿರುವ ಠಾಣೆಯ ಟಿಕ್ರಾ ಎಂಬಲ್ಲಿ ನಡೆದ ಘಟನೆಯಿದು.

ಈ ಗ್ರಾಮದ ಮುಖ್ಯಸ್ಥ ಸುಧೀರ್‌ ಪಟೇಲ್ ‌ತನ್ನ ಮಗನ ಮದುವೆಗೆಂದು ನರ್ತಕಿಯರ ಒಂದು ತಂಡ ಕರೆಸಿದ್ದ. ಇಲ್ಲಿ ಏಳು ಮೊದಲ ಪ್ರಶ್ನೆಯೆಂದರೆ, ಮದುವೆಯಂತಹ ಸಂದರ್ಭದಲ್ಲಿ ಮಹಿಳೆಯರು ನರ್ತಕಿಯರಿಗೆ ಬರಲು ಅವಕಾಶವನ್ನಾದರೂ ಏಕೆ ಕೊಡುತ್ತಾರೆ? ತಾಯಂದಿರು, ಅಜ್ಜಿಯರು, ಅಕ್ಕಪಕ್ಕದವರು ಈ ನೃತ್ಯ ಬೇಕೇ ಎಂದು ಪ್ರಶ್ನಿಸಬಾರದೇಕೆ? ಎರಡನೇ ವಿಷಯ, ನೃತ್ಯದ ವಿಷಯದಲ್ಲಿ 45-50 ವರ್ಷದವರು ಏಕೆ ಮಜ ಪಡೆಯುತ್ತಾರೆ? ಅದಕ್ಕೆ ಜೈ ಎಂದು ಘೋಷಣೆ ಕೂಗುತ್ತಾ ಮರ್ಯಾದೆಯ ಬಗ್ಗೆ ಭಾಷಣ ಬಿಗಿಯುವವರು ಎಲ್ಲರೆದುರು ತಮ್ಮ ಕಾಮುಕತೆಯನ್ನು ಏಕೆ ಜಗಜ್ಜಾಹೀರುಗೊಳಿಸುತ್ತಾರೆ? ಮದುವೆಯಂತಹ ಕೌಟುಂಬಿಕ ಸಮಾರಂಭದಲ್ಲಿ ಅಶ್ಲೀಲತೆಯಿಂದ ಕೂಡಿದ ನೃತ್ಯ ಪ್ರಸ್ತುತಪಡಿಸುವುದಾದರೂ ಏಕೆ?

ಮೂರನೇ ಸಂಗತಿ, ಇಂತಹ ಸಮಾರಂಭಗಳಲ್ಲಿ ಜನರ ಕೈಯಲ್ಲಿ ಬಂದೂಕುಗಳು ಏಕೆ ಇರುತ್ತವೆ? ಯಾವ ಸಮಾಜ ಬಂದೂಕಿನ ನೆರಳಲ್ಲಿ ಮದುವೆ ಮಾಡುತ್ತಿದೆಯೋ, ಅಲ್ಲಿ ಕಾನೂನಿನ ಅಗತ್ಯವಾದರೂ ಏನಿದೆ? ನಗರದ ನಾಗರಿಕರು ಈ ವಾಸ್ತವ್ಯ ಸತ್ಯದಿಂದ ದೂರ ಉಳಿದು ಹಣದ ಬಲವಿದ್ದರೆ ಅದೆಲ್ಲ ಸರಿ ಎಂದು ಹೇಳುತ್ತಾರೆ. ಇದೇ ಮಾನಸಿಕತೆ ಯಾವುದೇ ಹುಡುಗಿಯನ್ನು ಛೇಡಿಸಲು, ಬಲಾತ್ಕಾರ ಮಾಡಲು ಪ್ರಚೋದಿಸುತ್ತದೆ.

ನಾಲ್ಕನೆಯದು, ಮಹಿಳೆಯರನ್ನು ತಮ್ಮ ಕೈಗೊಂಬೆ ಎಂದು ಏಕೆ ಭಾವಿಸುತ್ತಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನೃತ್ಯಗಾರ್ತಿ ಸ್ವಲ್ಪ ನಿಲ್ಲುತ್ತಿದ್ದಂತೆ ಮುಖ್ಯಸ್ಥ ಆಕೆಗೆ ನೃತ್ಯ ಮಾಡುವುದನ್ನು ನಿಲ್ಲಿಸಿದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ. ಆ ಬಳಿಕ ಯಾರದೊ ಪ್ರಚೋದನೆಯಿಂದ ಮುಖ್ಯಸ್ಥ ಆಕೆಯ ಮೇಲೆ ಗುಂಡು ಹಾರಿಸಿಯೇಬಿಟ್ಟ. ಅದು ಆಕೆಯ ದಡೆಗೆ ಹೋಗಿ ತಗುಲಿತು. ಈಗ ಆಕೆ ಜೀವನವಿಡೀ ಅಂಗವಿಕಲಳಾಗಿಯೇ ಜೀವನ ನಡೆಸುವ ಅನಿವಾರ್ಯತೆ.

ಹಳ್ಳಿಗಳಲ್ಲಿ ಈ ತೆರನಾದ ನೃತ್ಯ ಕಾರ್ಯಕ್ರಮಗಳು ನಡೆಯುತ್ತವೆ. ಮದುವೆ, ಮಗು ಹುಟ್ಟಿದಾಗ, ರಾಮಕಥಾ ನಡೆಯುವ ಸಂದರ್ಭದಲ್ಲಿ, ಯಾರಾದರೂ ತೀರಿಕೊಂಡಾಗ ನಡೆಯುತ್ತಿರುತ್ತವೆ. ಸಪ್ನಾ ಚೌಧರಿ ಇದೇ ತೆರನಾದ ನೃತ್ಯದಿಂದ ಖ್ಯಾತಿ ಪಡೆದು, ಬಿಜೆಪಿಯಲ್ಲೂ ಉನ್ನತ ಸ್ಥಾನದಲ್ಲಿದ್ದಾಳೆ.

ನರ್ತಿಸುವುದು, ಅಶ್ಲೀಲತೆಯಿಂದ ಕೂಡಿದ ನೃತ್ಯ ಮಾಡುವುದು, ಹಣ ಗಳಿಸುವುದು ಮಹಿಳೆಯರ ಹಕ್ಕು. ಆದರೆ ನೈತಿಕತೆಯ ಡಂಗುರನ್ನು ಬೇರೆಯವರು ಬಾರಿಸುವುದಲ್ಲ. ಎಲ್ಲಿಯವರೆಗೆ ಈ ತೆರನಾದ ಚಟುವಟಿಕೆ ಇರುತ್ತೋ, ಅಲ್ಲಿಯವರೆಗೆ ಮಹಿಳೆ ಒಂದು ವಸ್ತುವಿನ ಹಾಗೆಯೇ ಪರಿಗಣಿಸಲ್ಪಡುತ್ತಾಳೆ. ಭಾರತ ಅಥವಾ ಅಮೆರಿಕದಲ್ಲಿ ಆಗಿರಬಹುದು. ಈ ಕಾಮ ಲೋಲುಪ್ತ ಮಹಿಳೆಯರನ್ನು ಖರೀದಿಸುವ ಇಚ್ಛೆಯನ್ನು ಜಾಗೃತಗೊಳಿಸುತ್ತದೆ. ಪುರುಷರು ಗುಲಾಮರಂತೆ ಇರಲು ನಿರಾಕರಿಸುತ್ತಾರೆ. ಆದರೆ ಮಹಿಳೆಯರು ಈಗಲೂ ತಮ್ಮ ಕೌಶಲದ ಬಲದಿಂದಲ್ಲ, ದೇಹದ ಬಲದಿಂದ ಮಾಡುವ ಅನಿವಾರ್ಯ ಪರಿಸ್ಥಿತಿ ಇದೆ. ಅತ್ಯಾಚಾರ ಇದೇ ಸಮಾಜದ ಕೊಡುಗೆ.

ಹಳ್ಳಿಗಾಡಿನಲ್ಲಿ ಕಾಮುಕತೆಯ ಅಬ್ಬರ ಈಗಲೂ ಜೋರಾಗಿದ್ದು, ಅದನ್ನು ನಗರದ ಜನತೆ ತಿಳಿಯಲು ಸಾಧ್ಯವಾಗುವುದಿಲ್ಲ. ಅಲ್ಲಿ ಯಾವುದೇ ಹುಡುಗಿ ಸುರಕ್ಷಿತಳಲ್ಲ. ಆ ಕಾರಣದಿಂದಲೇ ಬಾಲ್ಯ ವಿವಾಹಗಳು ನಡೆಯುತ್ತವೆ. ಮಹಿಳೆಯರು ಇರುವುದೇ ಆ ಉದ್ದೇಶಕ್ಕಾಗಿ ಎಂದರು ಭಾವಿಸುತ್ತಾರೆ. ಅವರು ನಗರಕ್ಕೆ ಅದೇ ಯೋಚನೆಯಿಂದಲೇ ಬರುತ್ತಾರೆ. ನಗರದ ಸಮಾಜ ಅವರಿಗೆ ಇದನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುವುದಿಲ್ಲ.

ಕಡಿಮೆ ಓದಿದವರು ಮಾತ್ರ ಅತ್ಯಾಚಾರ ಮಾಡುತ್ತಾರೆ ಎಂದೇನಿಲ್ಲ. ಆದರೆ ಓದುಬರಹ ಬಲ್ಲವರು ಒತ್ತಾಯ ಮಾಡುತ್ತಾರೆಂದರೆ, ಅವರಲ್ಲಿ ಹಾಗೂ ಪುಂಡ ಪೋಕರಿಗಳ ಅತ್ಯಾಚಾರದಲ್ಲಿ ಬಹಳಷ್ಟು ವ್ಯತ್ಯಾಸ ಇರುತ್ತದೆ. ಒಬ್ಬನಲ್ಲಿ ಲೈಂಗಿಕ ಸುಖದ ಬಯಕೆ ಇರುತ್ತದಾದರೆ, ಇನ್ನೊಬ್ಬನಲ್ಲಿ ಕೇವಲ ಬಲ ಪ್ರಯೋಗದ ಪಾಶವಿ ಲೈಂಗಿಕ ಸಂತೃಪ್ತಿಯಿರುತ್ತದೆ.

ಅತ್ಯಾಚಾರದ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಅತ್ಯಾಚಾರಗಳು ಕೂಡ ನಡೆಯುತ್ತಲೇ ಇರುತ್ತವೆ. ಪುರುಷ ಮಹಿಳೆ ಸಮಾನತೆಯ ದರ್ಜೆ ಪಡೆದಾಗ ಪರಿಸ್ಥಿತಿ ಬದಲಾಗಬಹುದು.

ಧಾರ್ಮಿಕ ಮೂರ್ಖತನಕ್ಕೆ ಎಲ್ಲಿದೆ ಜಾಗ?

shadi-aur-dancer-1

ಧರ್ಮದ ಆಧಾರದಲ್ಲಿ ನಡೆಯುವ ಪಶ್ಚಿಮ ಏಷ್ಯಾದ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಒಂದು ಹೊಸ ಅಧ್ಯಾಯ ಶುರುವಾಗಿದೆ. ಇರಾಕ್‌ ಹಾಗೂ ಲೆಬಾನಾನ್‌ ರಸ್ತೆಗಳಿಗೆ ಇಳಿದ ಯುವಜನತೆ `ಇಸ್ಲಾಂ ಇಲ್ಲ, ಕ್ರಿಶ್ಚಿಯಾನಿಟಿ ಇಲ್ಲ’ ಎಂದು ಘೋಷಣೆ ಕೂಗುತ್ತಿದ್ದಾರೆ. ಅರಬ್‌ ಒಕ್ಕೂಟದಲ್ಲಿ ಜನರು ಧಾರ್ಮಿಕ ರಾಜಕೀಯ ಪಕ್ಷಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಇದರಿಂದಾಗಿ ಆ ಧರ್ಮಗಳ ದಂಧೆಕಾರರಿಗೆ, ಮೌಲ್ವಿಗಳಿಗೆ ತಮ್ಮ ಕಾಲ ಕೆಳಗಿನ ನೆಲ ಕುಸಿಯುತ್ತಿರುವಂತೆ ಭಾಸವಾಗುತ್ತಿದೆ.

ಅಷ್ಟೇ ಅಲ್ಲ, ಈ ಮೂಲಭೂತವಾದಿ ದೇಶದಲ್ಲಿ ಧರ್ಮವನ್ನು ಒಪ್ಪದೇ ಇರುವವರ ಶೇಕಡವಾರು ಸಂಖ್ಯೆ 2013ರಲ್ಲಿ ಶೇ.8 ಇತ್ತು. ಅದೀಗ ಶೇ.13ಕ್ಕೆ ತಲುಪಿದೆ. ಟ್ಯೂನಿಶಿಯಾ ದೇಶದ ಅರ್ಧದಷ್ಟು ಯುವಜನತೆಗೆ ಧರ್ಮದ ಬಗ್ಗೆ ಭರವಸೆಯೇ ಇಲ್ಲ. ಈ ಎಲ್ಲ ದೇಶಗಳಲ್ಲಿ ಶುಕ್ರವಾರದ ನಮಾಜ್‌ ಗೆ ಬರುವವರ ಸಂಖ್ಯೆಯೂ ನಿರಂತರವಾಗಿ ಕಡಿಮೆಯಾಗುತ್ತ ಹೊರಟಿದೆ.

ಇದಕ್ಕೆ ಕಾರಣ ಕಂಡುಕೊಳ್ಳುವುದು ಕಷ್ಟವೇನಲ್ಲ. ಧರ್ಮ ಅನಾದಿ ಕಾಲದಿಂದ ವಿಭಜಿಸಲು ಹಾಗೂ ಹಿಂಸೆಗೆ ಪ್ರೇರೇಪಿಸುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎನ್ನುವುದು ಇವರಿಗೆ ಗೊತ್ತು. ಇಂದಿನ ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಅದೆಲ್ಲ ಅಪ್ರಸ್ತುತ ಎನ್ನುವುದು ಅವರ ಅಭಿಪ್ರಾಯ. ನಮ್ಮದು ಮೂಢನಂಬಿಕೆಯ ದೇಶವಲ್ಲ, ಒಳ್ಳೆಯದು ಕೆಟ್ಟದ್ದಕ್ಕೆ ದೇವರ ನಿರೀಕ್ಷೆ ಮಾಡುವುದು ತಪ್ಪು. ತೈಲದ ಭಾರಿ ಗಳಿಕೆಯ ಹೊರತಾಗಿಯೂ ಈ ದೇಶಗಳು ತಮ್ಮ ದುಸ್ಥಿತಿಯಿಂದ ಕಂಗಾಲಾಗಿವೆ.

ಭಾರತ ಈಗ ತದ್ವಿರುದ್ಧ ದಿಸೆಯಲ್ಲಿದೆ. ಇಲ್ಲಿನ ಸರ್ಕಾರಕ್ಕೆ ದಟ್ಟ ಕತ್ತಲೆಯ ನಡುವೆಯೂ ಧರ್ಮವೇ ಹೊಳೆಯುತ್ತದೆ. ಇಲ್ಲಿ ಹೆಜ್ಜೆಹೆಜ್ಜೆಗೂ ದೇಗುಲಗಳು ನಿರ್ಮಾಣಗೊಳ್ಳುತ್ತಿವೆ. ಅವನ್ನು ಏರ್‌ ಕಂಡೀಶನ್ಡ್ ಆಗಿಸಲಾಗುತ್ತಿವೆ. ಪ್ರವಾಸದ್ಯೋಮಕ್ಕೆ `ಧಾರ್ಮಿಕ ಪ್ರವಾಸೋದ್ಯಮ’ ಎಂದು ನಾಮಕರಣ ಮಾಡಲಾಗುತ್ತಿದೆ. ಏಕೆಂದರೆ ಭಕ್ತರು ಅವಶ್ಯವಾಗಿ ನೈವೇದ್ಯ ಕೊಡಲಿ ಎಂದು. ಕಳೆದ ಕೆಲವು ದಶಕಗಳಲ್ಲಿ ದೇಶ ಅಷ್ಟಿಷ್ಟು ಪ್ರಗತಿ ಸಾಧಿಸಿತ್ತು. ಈಗ ಪುನಃ ಧರ್ಮದ ಗುಂಡಿಯಲ್ಲಿ ಬೀಳುತ್ತಿದೆ.

ಹಿಂದೂ ಧರ್ಮದ ದಂಧೆಗಾರಿಕೆಯ ಉತ್ಸಾಹಕ್ಕೆ ಮುಸ್ಲಿಂ ದೇಶಗಳು ಸಾಕಷ್ಟು ಕಾರಣ. ಧರ್ಮದ ಬಲದ ಮೇಲೆ ಗದ್ದುಗೆ ಪಡೆಯುವುದು ಬಹಳ ಸುಲಭ ಎಂದು ಅವರಿಗೆ ಅನಿಸಿತ್ತು. ಇರಾನ್‌, ಪಾಕಿಸ್ತಾನ, ತಾಲಿಬಾನ್‌ ಹಾಗೂ ಐಎಸ್‌ಐಗಳು ಹೇಗೆ ಅಧಿಕಾರ ಹಿಡಿದಿದ್ದವೋ ಹಾಗೆಯೇ ಹಿಂದೂ ಧರ್ಮದ ವಕಾಲತ್ತು ಮಾಡುವವರು ಧರ್ಮ, ಭಜನೆ, ಕೀರ್ತನೆ ಪೂಜೆ ಪಾಠಗಳ ಮೂಲಕ ರಾಜ್ಯಭಾರ ಮಾಡಬಹುದು ಅಂದುಕೊಂಡಿದ್ದರು.

ಮಧ್ಯಪ್ರಾಚ್ಯದಲ್ಲೇ ಆದ ಪರಿಸ್ಥಿತಿ ಭಾರತದಲ್ಲೂ ಆಗುತ್ತಿದೆ. ಇಲ್ಲಿ ಆಂತರಿಕ ವಿವಾದಗಳು ಹೆಚ್ಚಾಗುತ್ತಿವೆ. ಇನ್ನೂ ಲಾವಾ ಸಿಡಿದಿಲ್ಲ. ನಾವೀಗ ಅದರ ಮೇಲೆಯೇ ಕುಳಿತಿದ್ದೇವೆ. ನಮ್ಮ ಆರ್ಥಿಕ ಸ್ಥಿತಿ ಡೋಲಾಯಮಾನ ಸ್ಥಿತಿಯಲ್ಲಿದೆ. ನಮ್ಮ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಕೋಪದಲ್ಲಿದ್ದಾರೆ. ಆ ಕೋಪದಲ್ಲಿ ಮಾಬ್‌ ಲಿಚಿಂಗ್‌ ಹಾಗೂ ರೇಪ್‌ ನಂತಹ ಘಟನೆಗಳು ಸಾಮಾನ್ಯವಾಗುತ್ತಾ ಹೊರಟಿವೆ.

ಪಶ್ಚಿಮ ಏಷ್ಯಾದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಿಷ್ಟು ಅವ್ಯವಸ್ಥೆಯಾದರೂ ಅವರು ಸಂಭಾಳಿಸಿಕೊಳ್ಳುತ್ತಾರೆ. ಆದರೆ ನಾವಲ್ಲ, ನಮ್ಮಲ್ಲಿ ಬಡತನ ಎಷ್ಟಿದೆಯೆಂದರೆ, ಈರುಳ್ಳಿ ಬೆಲೆ ಜಾಸ್ತಿಯಾದರೂ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ. ಇಂತಹದರಲ್ಲಿ ಧಾರ್ಮಿಕ ಮೂರ್ಖರಿಗೆ ಎಲ್ಲಿದೆ ಜಾಗ?

ಮಹಿಳೆ ಯಾರಿಗಿಂತಲೂ ಕಡಿಮೆಯಲ್ಲ

ವಾಕಿಂಗ್‌, ಸ್ಕೂಟರ್‌ ಅಥವಾ ಮೆಟ್ರೋದಲ್ಲಿ ಹೋಗುವ ಹುಡುಗಿಯರಿಗೆ ಚುಡಾಯಿಸುವಿಕೆ ಅಥವಾ ರೇಪ್‌ ನ ಭಯ ಹೆಚ್ಚಾಗುತ್ತಿರಬಹುದು ಅಥವಾ ಅವರು ಸಾಗುವ ದಾರಿಗೆ ಅಡ್ಡಗಾಲು ಹಾಕುತ್ತಿರಬಹುದು. ಇನ್ನೊಂದೆಡೆ ಶ್ರೀಮಂತ ಮನೆತನದ ಹುಡುಗಿಯರು ಹಾಗೂ ಮಹಿಳೆಯರಿಗೆ ಹೊಸ ಹೊಸ ಅವಕಾಶಗಳು ಲಭಿಸುತ್ತಿವೆ. ಆದರೀಗ ಚಿನ್ನ ವಜ್ರಗಳನ್ನು ತುಂಬಿಕೊಂಡು ಗೊಂಬೆಯ ಅವತಾರದಿಂದ ಹೊರಬಂದು ಕಂಪನಿಗಳ ಬೋರ್ಡ್‌ ರೂಮ್ ತಲುಪಿದ್ದಾರೆ. ಕೇವಲ ಗಂಡನ ಸಹಕಾರದ ಹೊರತಾಗಿ ತಮ್ಮ ವಿಶಾಲ ವ್ಯಾಪಾರ ವಹಿವಾಟನ್ನು ಸಂಭಾಳಿಸುತ್ತಿದ್ದಾರೆ.

ಕಳೆದ 5 ವರ್ಷಗಳಲ್ಲಿ 100 ದೊಡ್ಡ ಕಂಪನಿಗಳ ಬೋರ್ಡ್‌ ಗಳಲ್ಲಿ ಈಗ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ. ಪಾರ್ಕ್‌ ಹೋಟೆಲ್ ‌ನಂತಹ ಕಂಪನಿಯ ಪ್ರಿಯಾಪಾಲ್ ರಿಂದ ಹೋಟೆಲ್ ವ‌ಹಿವಾಟನ್ನು ಕೇವಲ ನಿರ್ವಹಣೆ ಮಾಡುತ್ತಿಲ್ಲ, ಅದನ್ನು ವಿಸ್ತರಣೆ ಮಾಡುತ್ತ ಹೊರಟಿದ್ದಾರೆ. ಅಪೋಲೊ ಹಾಸ್ಪಿಟಲ್ ನ ಕಂಪನಿಯ ಸೋದರಿಯರಲ್ಲಿ ವಿವಾದ ನಡೆಯುತ್ತಿರಬಹುದು. ಅದರ ಹೊರತಾಗಿಯೂ ಅದರ ಹೊಸ ಆಸ್ಪತ್ರೆಗಳು ತೆರೆಯುತ್ತಲೇ ಇವೆ. ಗೋದ್ರೆಜ್‌, ಸಿಯೆಲೋ, ಕೋಲ್ ಗಿಟ್‌, ಭಾರ್ತಿ ಏರ್ ಟೆಲ್, ಡಾಲರ್‌, ಯಸ್‌ ಬ್ಯಾಂಕ್‌ ನಂತಹ ಕಂಪನಿಗಳಲ್ಲಿ ಸಮಾನತೆಯ ಹಕ್ಕಿನಡಿ ಬೋರ್ಡ್‌ ರೂಮ್ ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಬಹು ದೊಡ್ಡ ಕೆಲಸ ಮಾಡುವುದರಿಂದ ತಡೆಹಿಡಿಯಲಾಗಿದ್ದರೆ, ಅದಕ್ಕೆ ನಮ್ಮ ಸಮಾಜ, ಸಂಸ್ಕೃತಿ ಹಾಗೂ ಧರ್ಮವೇ ಕಾರಣ ಹೊರತು ಅವರ ಸಾಮರ್ಥ್ಯವಲ್ಲ. ಅವರು ಪುರುಷನಿಗಿಂತ ಬಾಹುಬಲದಲ್ಲಷ್ಟೇ ಅಲ್ಲ, ಬುದ್ಧಿಯಲ್ಲೂ ಮಿಗಿಲಾಗಿದ್ದಾರೆ. ಅವರಿಗೆ ಕೈಕೋಳ ತೊಡಿಸಿ ನಾಯಿಗಳ ಹಾಗೆ ಜೀವನ ನಡೆಸುವಂತೆ ಮಾಡಿದ್ದರು. ಪುರುಷರ ನಡುವೆ ಸ್ವತಂತ್ರ ಜೀವನ ನಡೆಸಬಲ್ಲ ಮಹಿಳೆಯರನ್ನು ಪುರುಷರ ಗುಲಾಮಗಿರಿ ಮಾಡುವ ಅಭ್ಯಾಸ ಮಾಡಿಸಲಾಯಿತು. ಈಗ ಅದನ್ನು ಸ್ವಲ್ಪ ಸಡಿಲಗೊಳಿಸಲಾಗಿದೆ. ಆದರೆ ಅದನ್ನು ಪೂರ್ತಿ ಸಡಿಲ ಮಾಡಿಲ್ಲ. ಹಾಗೆಂದೇ ಪುರುಷರ ಬಳಿ ಅತ್ಯಾಚಾರದ ಹಕ್ಕು ಇನ್ನೂ ಹಾಗೆಯೇ ಇದೆ. ಮಹಿಳೆಯರು ಕಾರ್ಯಕೌಶಲ ಹಾಗೂ ದೂರದರ್ಶಿತ್ವದಲ್ಲೂ ಯಾರಿಗಿಂತಲೂ ಕಡಿಮೆ ಇಲ್ಲ. ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಇದನ್ನು ಸ್ಪಷ್ಟಪಡಿಸುತ್ತಿದ್ದಾರೆ. ಅದಕ್ಕೆ ತದ್ವಿರುದ್ಧ ಎಂಬಂತೆ ಈಗಲೂ ಕೆಲವು ಉದ್ಯಮಗಳು ಇದೇ ತೆರನಾದ ಮಹಿಳಾ ತಂತ್ರವನ್ನು ಉಪಯೋಗಿಸಿಕೊಳ್ಳದೆ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಿ, ಅವರನ್ನು ಧರ್ಮ ಕರ್ಮದಲ್ಲಿ ತೊಡಗಿಸುತ್ತಿವೆ.

ಇಂದಿನ ಓದು ಬರಹ ಬಲ್ಲ ಅಥವಾ ಸಾಧಾರಣ ಮಹಿಳೆಯರು ಕೂಡ ಧೈರ್ಯವಹಿಸಿ ಮನೆಯಿಂದ ಹೊರಬರಬೇಕು. 45 ವರ್ಷದ ಸಣ್ಣ ಮಕ್ಕಳೇ ಇರಲಿ, ಅವರನ್ನು ಈಗ ಕಾರ್ಯ ಸ್ಥಳಕ್ಕೂ ಕರೆದುಕೊಂಡು ಹೋಗಬಹುದು. ಮಹಿಳೆಯರಲ್ಲಿ ಧೈರ್ಯ ಹಾಗೂ ಹೊಸ ಯೋಚನಾ ಶಕ್ತಿ ಹೆಚ್ಚಿಗೆ ಇರುತ್ತದೆ. ಅವರು ಮಗುವಿನ ಮುಖ ನೋಡಿ ಅದರ ಸುಖದುಃಖದ ಸ್ಥಿತಿಗತಿ ಅರಿಯಬಲ್ಲರು. ಅವರು ವೇಗದ ವ್ಯಾಪಾರಿ ಎಂದು ಸಾಬೀತಾಗಬಹುದು. ಈ ಅವಕಾಶವನ್ನು ಅವರು ಬಿಟ್ಟು ಕೊಡಬಾರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ