ಹೊಟ್ಟೆಯ ನೇರ ಸಂಬಂದ ಆರೋಗ್ಯದೊಂದಿಗಿದೆ. ಹೊಟ್ಟೆ ಫಿಟ್ ಆಗಿರದಿದ್ದರೆ ದೇಹ ಅನೇಕ ರೋಗಗಳ ತರವಾಗುತ್ತದೆ. ಇಂದಿನ ನಾಗಾಲೋಟದ ಓಡು ಯುಗದಲ್ಲಿ ಹೊರಗಿನ ಊಟ ತಿಂಡಿ, ಜಂಕ್ ಫುಡ್, ಇತ್ಯಾದಿ ನಮ್ಮ ಜೀವನದ ಒಂದು ಭಾಗವೇ ಆಗಿಹೋಗಿದೆ. ಈ ಕಾರಣ ನಮಗೆ ಮಲಬದ್ಧತೆ, ಅಜೀರ್ಣ, ಗ್ಯಾಸ್, ಅಸಿಡಿಟಿ, ಹೊಟ್ಟೆನೋವು, ಹೊಟ್ಟೆ ಉಬ್ಬರ, ಫುಡ್ ಪಾಯಿಸನಿಂಗ್ ಇತ್ಯಾದಿ ಸಮಸ್ಯೆಗಳು ಮೂಡುತ್ತವೆ. ಐವರಲ್ಲಿ ಮೂವರು ಇಂಥ ಸಮಸ್ಯೆಗಳಿಗೆ ತುತ್ತಾಗಿರುತ್ತಾರೆ.
ಹೀಗಾಗಿ ನಮ್ಮ ಆಹಾರ, ಜೀವನಶೈಲಿಯಲ್ಲಿ ಬದಲಾವಣೆಯ ಕಾರಣ, ಹೊಟ್ಟೆಯ ಹಲವಾರು ಸಮಸ್ಯೆಗಳಿಂದ ಪರಿಹಾರ ಸಿಗುವುದು ಮಾತ್ರವಲ್ಲದೆ, ಜೊತೆಗೆ ನಮ್ಮ ಪಚನಶಕ್ತಿಯನ್ನೂ ಚುರುಕಾಗಿಟ್ಟುಕೊಳ್ಳಬಹುದು. ಇದಕ್ಕಾಗಿ ತಜ್ಞರು ನೀಡುವ ಸಲಹೆಗಳನ್ನು ಅನುಸರಿಸಿ ಹೊಟ್ಟೆಯನ್ನು ಫಿಟ್ ಆಗಿರಿಸಲು ಹೀಗೆ ಮಾಡೋಣ :
ಸದಾ ಹೈಡ್ರೇಟೆಡ್ ಆಗಿರಿ : ನಿಯಮಿತವಾಗಿ ಪ್ರತಿದಿನ ಇಂತಿಷ್ಟು ಪ್ರಮಾಣದ ನೀರನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಎಷ್ಟೋ ಕಡಿಮೆ ಆಗುತ್ತವೆ. ಇದರಿಂದಾಗಿ ಮುಖದ ಕಾಂತಿ ಹೆಚ್ಚುತ್ತದೆ. ಅಗತ್ಯ ಪ್ರಮಾಣದ ನೀರಿನ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣದ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದು.
ಮೊಸರು : ಮೊಸರಿನ ಲಾಭಗಳು ಅನೇಕ. ಇದಕ್ಕೆ ಓಮ, ಇಂಗು ಬೆರೆಸಿ ಸೇವಿಸಿದರೆ ಮಲಬದ್ಧತೆ ದೂರವಾಗುತ್ತದೆ. ನಿಯಮಿತವಾಗಿ ಮೊಸರನ್ನು ಸೇವಿಸುವುದರಿಂದ ಹೊಟ್ಟೆಯ ಹಲವು ತೊಂದರೆಗಳನ್ನು ತಪ್ಪಿಸಬಹುದು. ಇದರಲ್ಲಿ ಉತ್ತಮ ಬ್ಯಾಕ್ಟೀರಿಯಾ ಅಡಗಿದ್ದು, ಅದು ಹೊಟ್ಟೆಯ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಇವನ್ನು ಸೇವಿಸಬೇಡಿ
ಬೆಳಗಿನ ಹೊತ್ತಿನಲ್ಲಿ ಖಾಲಿ ಹೊಟ್ಟೆಯಲ್ಲಿ ಈ ಕೆಳಗಿನ ಲಸ್ತುಗಳನ್ನು ಸೇವಿಸಿ ಹೊಟ್ಟೆ ಕೆಡುವಂತೆ ಮಾಡಿಕೊಳ್ಳಬೇಡಿ. ಅದರಲ್ಲೂ ಆ್ಯಸಿಡ್ ಉಂಟಾಗುವಂಥ ಕಿತ್ತಳೆ, ಮೂಸಂಬಿ, ನಿಂಬೆಹಣ್ಣು ಮೊದಲಾದ ಹುಳಿ ಹುಣ್ಣುಗಳು, ಟೊಮೇಟೊ, ಮಸಾಲೆಯುಕ್ತ ಆಹಾರ, ಎಣ್ಣೆ ಜಿಡ್ಡಿನ ಆಹಾರ, ಸೋಡ, ಹೆಂಡ, ಕಾಫಿ, ಟೀ, ಇತ್ಯಾದಿಗಳಿಂದ ದೂರವಿರಿ.
ನೆಲ್ಲಿಕಾಯಿ : ಪ್ರತಿದಿನ 1 ಕಪ್ ಬಿಸಿ ನೀರಿಗೆ 2 ಚಮಚ ನೆಲ್ಲಿರಸ ಬೆರೆಸಿ ಕುಡಿಯಿರಿ. ಇದರಿಂದಾಗಿ ಹೊಟ್ಟೆಯ ವಿಷಯುಕ್ತ ಅಂಶಗಳು ಹೊರಹೋಗುತ್ತವೆ. ಹೀಗೆ ಮಾಡುವುದರಿಂದ ಹೊಟ್ಟೆ ಆರೋಗ್ಯವಾಗಿ ಇರುವುದರ ಜೊತೆ, ಕೂದಲು ಸಹ ದಟ್ಟ, ಕಪ್ಪಾಗಿರುತ್ತದೆ.
ಸ್ವಸ್ಥ ಆಹಾರದ ಸೇವನೆ : ಸ್ವಸ್ಥ ಆಹಾರದ ಸೇವನೆಯಿಂದ ನಮಗೆ ಶಕ್ತಿ, ಸಾಮರ್ಥ್ಯ ಹೆಚ್ಚುವುದಲ್ಲದೆ, ಹೊಟ್ಟೆಯೂ ಆರೋಗ್ಯಕರಾಗಿರುತ್ತದೆ. ಹೀಗಾಗಿ ನಮ್ಮ ಆಹಾರದಲ್ಲಿ ಸದಾ ತಾಜಾ ಹಸಿರು ತರಕಾರಿ, ಫ್ರೆಶ್ ಸೀಸನ್ ಫ್ರೂಟ್ಸ್, ಡ್ರೈ ಫ್ರೂಟ್ಸ್, ಮೊಳಕೆಕಾಳು ಇತ್ಯಾದಿ ಇರಬೇಕು.
ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಿರಿ : ಪ್ರತಿದಿನ ಬೆಳಗ್ಗೆ ಎದ್ದು ತುಸು ಬೆಚ್ಚಗಿನ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದ ಮೆಟಬಾಲಿಸಮ್ ರೇಟ್ ಹೆಚ್ಚುತ್ತದೆ, ಪಚನಕ್ರಿಯೆ ಸಲೀಸಾಗುತ್ತದೆ ಹಾಗೂ ದೇಹ ತೂಕ ತಗ್ಗಿಸಲಿಕ್ಕೂ ಸಹಾಯವಾಗುತ್ತದೆ. ಬಿಸಿ ನೀರು ದೇಹದಲ್ಲಿ ಹೊಸ ಶಕ್ತಿ ಸಂಚಯ ಮಾಡುತ್ತದೆ. ಇದರಿಂದ ದೇಹ, ಹೊಟ್ಟೆ ಎರಡೂ ಫಿಟ್ ಆಗಿರುತ್ತವೆ.
ಆಹಾರವನ್ನು ನಿಧಾನವಾಗಿ ಅಗಿದು ಸೇವಿಸಿ : ಇಂದಿನ ಓಡುಯುಗದ ಜೀವನದಲ್ಲಿ ಎಷ್ಟೋ ಜನ ಆತುರಾತುರದಲ್ಲಿ ಏನೋ ಒಂದಿಷ್ಟನ್ನು ಬಾಯಿಗೆ ತುರುಕಿಕೊಂಡು ಆಯಿತು ಅನಿಸುತ್ತಾರೆ. ಇದರಿಂದಾಗಿ ಆಹಾರವನ್ನು ಸರಿಯಾಗಿ ಅಗಿದು ತಿನ್ನುವುದೇ ಇಲ್ಲ. ಈ ತಪ್ಪಿನಿಂದಾಗಿ ಹೊಟ್ಟೆ ಹಿಂಸೆ ಪಡುತ್ತದೆ. ಇದರಿಂದ ಹೊಟ್ಟೆ ನೋವು, ಗ್ಯಾಸ್, ಅಜೀರ್ಣದ ಸಮಸ್ಯೆ ಹೆಚ್ಚುತ್ತದೆ. ನಿಧಾನವಾಗಿ ಅಗಿದು ತಿನ್ನುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಹೊಟ್ಟೆಯಲ್ಲಿ ಅಲ್ಲಲ್ಲೀ ಸಿಕ್ಕಿಕೊಳ್ಳುವ ಪ್ರಶ್ನೆ ಇಲ್ಲ. ಇಷ್ಟು ಮಾತ್ರವಲ್ಲ, ಹೀಗೆ ಮಾಡುವುದರಿಂದ ಗ್ಯಾಸ್ ಸಮಸ್ಯೆಯಿಂದಲೂ ಬಚಾವಾಗಬಹುದು.
ಕೋಲ್ಡ್ ಡ್ರಿಂಕ್ಸ್ ಜಂಕ್ ಫುಡ್ಸ್ ಬೇಡ : ಕೋಲ್ಡ್ ಡ್ರಿಂಕ್ಸ ಫಾಸ್ಟ್ ಫುಡ್ ಎರಡೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಇವುಗಳ ಸೇವನೆಯಿಂದ ಹೊಟ್ಟೆಯ ಹಲವು ಸಮಸ್ಯೆಗಳು ಏಳುತ್ತವೆ, ಅಜೀರ್ಣ ತಲೆದೋರುತ್ತದೆ. ಹೀಗಾಗಿ ಕೋಲ್ಡ್ ಡ್ರಿಂಕ್ಸ್ ಬದಲಾಗಿ ಫ್ರೂಟ್ ಜೂಸ್ ಕುಡಿಯಿರಿ. ಸಾಧ್ಯವಾದಷ್ಟೂ ಜಂಕ್ ಫುಡ್ಸ್ ಕಡಿಮೆ ಮಾಡಿ, ಇಡ್ಲಿಯಂಥ ಹಬೆಯಲ್ಲಿ ಬೆಂದ ಸ್ಟೀಮ್ಡ್ ಫುಡ್ ಸೇವಿಸಿ.
ಊಟ ತಿಂಡಿಯ ಸೂಕ್ತ ಸಮಯ : ನಿಮ್ಮ ಊಟ ತಿಂಡಿಗೆ ಒಂದು ನಿಗದಿತ ಸಮಯ ಇಲ್ಲದಿದ್ದರೆ, ಇಂದಿನಿಂದಲೇ ಇದಕ್ಕೊಂದು ಬೆಸ್ಟ್ ಟೈಂ ಫಿಕ್ಸ್ ಮಾಡಿ. ಊಟದ ಸಮಯ ಮತ್ತೆ ಮತ್ತೆ ಬದಲಾಯಿಸುವುದರಿಂದ ಹೊಟ್ಟೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತದೆ. ಹೀಗಾಗಿ ಸದಾ ಅನಾರೋಗ್ಯ ತಪ್ಪಿದ್ದಲ್ಲ. ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಮೂರಕ್ಕೂ ಒಂದು ನಿಶ್ಚಿತ ಸಮಯ ನಿಗದಿಪಡಿಸಿ. ಈ ರೀತಿಯಲ್ಲಿ ಅಜೀರ್ಣ, ಹೊಟ್ಟೆನೋವು, ಗ್ಯಾಸ್, ಹಸಿವಾಗದಿರುವಿಕೆ, ಅಸಿಡಿಟಿ, ಹೊಟ್ಟೆಯುಬ್ಬರ ಇತ್ಯಾದಿಗಳಿಂದ ಮುಕ್ತಿ ಪಡೆಯಬಹುದು.
ಇತರ ಉಪಾಯಗಳು
ಪುದೀನಾ ಹೊಟ್ಟೆಯನ್ನು ಸದಾ ತಂಪಾಗಿಡುತ್ತದೆ. ಇದನ್ನು ನೀರಿನಲ್ಲಿ ಕುದಿಸಿ ಅಥವಾ ಮಿಂಟ್ ಟೀ ರೂಪದಲ್ಲಿ ಸೇವಿಸಿ.
ಓಮ, ಇಂಗು ಹೊಟ್ಟೆ ಹಗುರವಾಗಿರುವಂತೆ ಮಾಡುತ್ತವೆ. ಜೊತೆಗೆ ನೋವಿನಿಂದಲೂ ಮುಕ್ತಿ ನೀಡುತ್ತವೆ.
ಬೆಲಾಡೋನಾ ಹೊಟ್ಟೆಯ ನುಲಿತ, ವಾಕರಿಕೆ, ಹೊಟ್ಟೆ ತೊಳೆಸುವಿಕೆಗಳನ್ನು ತಪ್ಪಿಸುತ್ತದೆ.
ಸ್ಟೊಮಾಫಿಟ್ ಲಿಕ್ವಿಡ್ ಮತ್ತು ಟ್ಯಾಬ್ಲೆಟ್ ಸೇವನೆ ಹೊಟ್ಟೆಯನ್ನು ಫಿಟ್ ಆಗಿರಿಸಲು ಲಾಭಕಾರಿ. ಇದರಲ್ಲಿನ ಬಿಸ್ಮಥ್ ಹೊಟ್ಟೆಯ ಸಮಸ್ಯೆಗಳನ್ನು ದೂರಗೊಳಿಸಿ, ಜೊತೆಗೆ ಪಚನ ಕ್ರಿಯೆಯನ್ನೂ ಸಲೀಸುಗೊಳಿಸುತ್ತದೆ. ವೈದ್ಯರ ಸಲಹೆಯ ಮೇರೆಗೆ ಇದನ್ನು ಸೇವಿಸುವುದು.