ಪ್ರತಿ ಸಲ ವ್ಯಾಲೆಂಟೈನ್ ಡೇ ಬಂದಾಗಲೂ ಏನಾದರೊಂದು ಹೊಸತನ್ನು ಮಾಡಬೇಕೆಂಬ ಹಂಬಲ ಪ್ರೇಮಿಗಳಿಗೆ ಇದ್ದೇ ಇರುತ್ತದೆ. ಹೊಸ ವರ್ಷ ಇದೀಗ ತಾನೇ ಶುರು ಆಗಿರುವುದರಿಂದ ವಾರ್ಷಿಕ ಭವಿಷ್ಯ ನೋಡಿಯೇ ನೋಡುತ್ತಾರೆ. ಮತ್ತೆ ಈ 2024ರ ಹೊಸ ರ್ಷದಲ್ಲಿ ಫ್ಯಾಷನ್ ಟ್ರೆಂಡ್ ಪೇರ್ ಕಾಸ್ಟ್ ನ್ನು ಹೀಗೆ ಫಾಲೋ ಮಾಡಿ.
ನೀವು ರಾಶಿಫಲ ನಂಬುತ್ತೀರೋ ಇಲ್ಲವೋ, ಆದರೆ ಇಲ್ಲಿನ ಸಲಹೆಗಳ ಪ್ರಕಾರ ಬ್ಯೂಟಿ ಹಾರೋಸ್ಕೋಪ್ ಅಗತ್ಯ ಗಮನಿಸಿ, ಆಗ ನಿಮ್ಮ ರಾಶಿಗೆ ತಕ್ಕಂತೆ ಯಾವ ಹೊಸ ಟ್ರೆಂಡ್ ನಿಮಗೆ ಸೂಟ್ ಆಗುತ್ತದೋ ತಿಳಿಯುತ್ತದೆ. ಬನ್ನಿ, ನಿಮ್ಮ ರಾಶಿಫಲಕ್ಕೆ ತಕ್ಕಂತೆ ನಿಮ್ಮ ಪರ್ಸನಾಲಿಟಿಗೆ ಯಾವ ಲುಕ್ ಹೆಚ್ಚು ಹೊಂದುತ್ತದೋ ನೋಡೋಣ :
ಮೇಷ ರಾಶಿ ವೈಶಿಷ್ಟ್ಯ : ನೇತೃತ್ವದ ಸಹಜ ಗುಣದ ಜೊತೆ ಜೊತೆಗೆ ಹೆಚ್ಚು ಶಕ್ತಿ, ಸಾಹಸ ಪ್ರವೃತ್ತಿ, ಅಭಯ ಎಲ್ಲರೊಂದಿಗೆ ಬೆರೆತುಕೊಳ್ಳುವ ಗುಣಗಳಿರುತ್ತವೆ.
ಪ್ರೆಡಿಕ್ಷನ್ : ಈ ರಾಶಿಯ ಜನರಲ್ಲಿ ಲೀಡರ್ ಶಿಪ್ ಗುಣ ಪ್ರಧಾನ, ಇವರೆಂದೂ ಇಟ್ಟ ಹೆಜ್ಜೆ ಹಿಂದಿರುಗಿ ನೋಡುವುದಿಲ್ಲ. ಇವರ ಸ್ವತಂತ್ರ ಪ್ರವೃತ್ತಿ ಹಾಗೂ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಗುಣ, ಇವರ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಇಂಥ ವ್ಯಕ್ತಿತ್ವವುಳ್ಳ ಹೆಂಗಸರಿಗೆ ಬೋಲ್ಡ್ ಲಿಪ್ ಸ್ಟಿಕ್ ಹೆಚ್ಚು ಸೂಕ್ತ. ಇಂಥವರಿಗಾಗಿ ಡಿಸೈನರ್ ಹಿಲೆಸ್ಪಿಯಂಥ ಹೈಲೈಟೆಡ್ ಬೋಲ್ಡ್ ಲಿಪ್ಸ್ ಸೂಕ್ತ. ಬೋಲ್ಡ್ ಸ್ಟೇಟ್ ಮೆಂಟ್ ಲಿಪ್ಸ್ ಈ ತರಹದ ವ್ಯಕ್ತಿತ್ವವುಳ್ಳರಿಗೆ ಬೆಟರ್ ಲುಕ್ಸ್ ನೀಡುತ್ತದೆ. ಈ ಲಿಪ್ ಲುಕ್ಸ್ ಜೊತೆ ಮಸ್ಕರಾ, ಹೈಲೈಟರ್ ಬಳಸದಿರುವುದೇ ಲೇಸು. ಇದಕ್ಕಾಗಿ ಮ್ಯಾಟ್ ಟೂ ಲಾಸ್ಟ್ ಲಿಕ್ವಿಡ್ ಲಿಪ್ ಸ್ಟಿಕ್ ಮಿಸ್ಟಿ 10 ಬಳಸುವುದು ಲೇಸು.
ವೃಷಭ ರಾಶಿ ವೈಶಿಷ್ಟ್ಯ : ಪ್ರಾಮಾಣಿಕತೆಯ ಪ್ರವೃತ್ತಿ ಇವರಲ್ಲಿ ಹೆಚ್ಚು. ಜೊತೆಗೆ ಕಾಮುಕತೆ, ಅಭಿಲಾಷೆ, ವಿನಮ್ರ ಸ್ವಭಾವ ಇರುತ್ತದೆ.
ಪ್ರೆಡಿಕ್ಷನ್ : ಕ್ಲಾಸಿಕ್ ಲುಕ್ಸ್ ಗಾಗಿ ನಿಮ್ಮ ಪ್ರೇಮವನ್ನು ಎಂದೂ ಕಡಿಮೆ ಮಾಡಬೇಡಿ. ಪ್ರಯೋಗ ನಡೆಸುವುದು ಸುಲಭವಲ್ಲ ಅಂತಲ್ಲ, ಬದಲಿಗೆ ಅದರಿಂದ ವಿಲಾಸತೆ ಎದ್ದು ಕಾಣುತ್ತದೆ. ನೀವು ಸಾಫ್ಟ್ ರೊಮ್ಯಾಂಟಿಕ್ ಟಚ್ ಬಯಸಿದರೆ, ಅದೂ ಬಿಲ್ ಕುಲ್ ನೋನಿ 2024 ಪಿನ್ ಪೋನಿ ಲುಕ್ ತರಹ ಎಂದರೆ, ಅದು ನಿಮಗೆ ಸರಳತೆಯಲ್ಲೂ ಬ್ಯೂಟಿಫುಲ್ ಎಂಬ ಅನುಭವ ನೀಡುತ್ತದೆ. ಇದಕ್ಕಾಗಿ ನೀವು ಇಲೈಟ್ ಮಾಡೆಲ್ಸ್ (ಫ್ರಾನ್ಸ್) ಫ್ಯಾಷನ್ ಹೇರ್ ಬೇಬಿ ಪಿನ್ಸ್ (4 ಪೀಸ್ ಸೆಟ್) ಮಲ್ಟಿಯನ್ನು ಬಳಸಬಹುದು.
ಮಿಥುನ ರಾಶಿ ವೈಶಿಷ್ಟ್ಯ: ಚಾತುರ್ಯ, ಕಲ್ಪನಾಶೀಲತೆ, ಪ್ರೇರಕ ಗುಣ, ಆಕರ್ಷಣೆಯ ಕೇಂದ್ರಬಿಂದು ಆಗುವ ಆಸೆ.
ಪ್ರೆಡಿಕ್ಷನ್ : ಈ ಜನ ಸಂಭಾಷಣೆಯಲ್ಲಿ ಬಲು ಚುರುಕು. ಇವರ ಮೇಕಪ್ ಸಹ ಇವರೇನು ಹೇಳಬಯಸುತ್ತಾರೋ ಅದನ್ನು ಸ್ಪಷ್ಟಪಡಿಸುತ್ತದೆ. ಈ ರಾಶಿಯ ಹೆಂಗಸರು ಸದಾ ಆಕರ್ಷಣೆಯ ಕೇಂದ್ರಬಿಂದು ಆಗಿರಲು ಬಯಸುತ್ತಾರೆ. ಹೀಗಾಗಿ ಇವರಿಗೆ ಲೈಟ್ ಬ್ರೈಟ್‌ನಿಯಾನ್ ಟ್ರೆಂಡ್ ಪರ್ಫೆಕ್ಟ್ ಫಿಟ್ ಆಗಿರುತ್ತದೆ. ಜೊತೆಗೆ ಇವರು ಎಲ್ಲಾ ಕೆಲಸವನ್ನೂ ನಿಮಿಷಗಳಲ್ಲೇ ಮುಗಿಸಿಬಿಡುತ್ತಾರೆ. ಹೀಗಾಗಿ ನಿಮಿಷಗಳಲ್ಲಿ ಸೆಲೆಬ್ರಿಟಿ ಲುಕ್ ಪಡೆಯಲು ನೀವು ಕೆಳಗಿನಂತೆ ಮೇಕಪ್ ಮಾಡಿ. ಇದಕ್ಕಾಗಿ ನೀವು ಮಿಸ್ ಕ್ಲಿಯರ್ ಮೇಕಪ್ ಪ್ಲೇಟ್ ಬಳಸಿಕೊಳ್ಳಿ.
ಕರ್ಕಾಟಕ ರಾಶಿ ವೈಶಿಷ್ಟ್ಯ: ವಿಶ್ವಾಸಾರ್ಹ, ಪ್ರಾಮಾಣಿಕ, ಅಂತರ್ಜ್ಞಾನಿ, ಮೂಡಿ ವ್ಯಕ್ತಿ.
ಪ್ರೆಡಿಕ್ಷನ್ : ನಿಮ್ಮದು ಶಾಂತ ಕೇರಿಂಗ್ ನೇಚರ್. ಸ್ಕಿನ್ ನ್ಯಾಚುರಲಿ ಬಲು ಪಿಂಕಿ ಪಿಂಕಿ ಅಂದ್ರೆ ಬೇಬಿ ಸ್ಕಿನ್ ತರಹ ಅತಿ ಕೋಮಲ ಆಗಿರುತ್ತದೆ. ಹೀಗಾಗಿ ಇಂಥ ಯೆಲ್ಲೋ ಮೇಕಪ್ ಟ್ರೆಂಡ್ ಬೆಸ್ಟ್ ಆಗಿರುತ್ತದೆ. ಈ ಟ್ರೆಂಡ್ ಮಾರ್ಕ್ ಜೇಕೊಬ್ಸ್ ಹಾಗೂ ಅನ್ನಾಸೂಯಿಯಂಥ ಮಾಡೆಲ್ ಗಳಿಂದಾಗಿ ಬಲು ಜನಪ್ರಿಯ. ಇದಕ್ಕಾಗಿ ಗ್ಲಾಮ್ ಗರ್ಲ್ಸ್ ಮ್ಯಾಟ್ ಐ ಶ್ಯಾಡೋ ಯೆಲ್ಲೋ ಬಳಸುವುದು ಲೇಸು.
ಸಿಂಹ ರಾಶಿ ವೈಶಿಷ್ಟ್ಯ: ಮಹತ್ವಾಕಾಂಕ್ಷಿ, ಪ್ರಾಮಾಣಿಕ, ಫನ್ ಲವಿಂಗ್, ಕಾನ್ಛಿಡೆಂಟ್ ವ್ಯಕ್ತಿ.
ಪ್ರೆಡಿಕ್ಷನ್ : ನೀವು ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಎಲ್ಲಕ್ಕೂ ತಕ್ಷಣ ಉತ್ತರಿಸುವ ಸಾಮರ್ಥ್ಯ ಹೊಂದಿರುವುದರ ಜೊತೆ ಫುಲ್ ಜೋಶ್ ಆಗಿರುತ್ತೀರಿ. ಹೀಗಾಗಿ ಈ ಲುಕ್ಸ್ ಹೊಂದಲು ಅಗತ್ಯ ಟ್ರೈ ಮಾಡಿ. ಏಕೆಂದರೆ ಕ್ರಿಯೇಟಿವಿಟಿ ಇಲ್ಲದ ಜೀವನ ಬೋರಿಂಗ್. ನೀವು ಗ್ಲಿಟರ್ ನಿಂದ ನಿಮ್ಮ ಕಂಗಳು ಮತ್ತು ತುಟಿಗಳನ್ನು ಸ್ಟೈಲಿಶ್ ಮಾಡಿಕೊಳ್ಳಿ. ಇದರಿಂದ ಎರಡಕ್ಕೂ ನೀವು ಬಯಸಿದ ಲುಕ್ಸ್ ನೀಡಬಹುದು. ತಪರ್ಶಿ ಶೋಜಿ, ಜೆರೋಮಿ ಸ್ಕಾಟ್ ರಂಥ ಮಾಡೆಲ್ ಗಳಿಂದ ಇದು ಜನಪ್ರಿಯ.
ಕನ್ಯಾ ರಾಶಿ ವೈಶಿಷ್ಟ್ಯ: ಯಥಾರ್ಥ, ವಿಶ್ವಾಸನೀಯ, ಪ್ರಾಕ್ಟಿಕಲ್, ಸಶಕ್ತ, ಪರಿಶ್ರಮಿ ವ್ಯಕ್ತಿ.
ಪ್ರೆಡಿಕ್ಷನ್ : ಈ ರಾಶಿಯ ಹೆಂಗಸರು ಸದಾ ತಮ್ಮನ್ನು ತಾವು ಅಪ್ ಟು ಡೇಟ್ ಆಗಿರಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಹೀಗಾಗಿ ಅವರು ಲೇಟೆಸ್ಟ್ ಟ್ರೆಂಡ್ಸ್ ವಿಷಯವಿರಲಿ ಅಥವಾ ಔಟ್ ಫಿಟ್ಸ್ ದೇ ಇರಲಿ ಗಮನಿಸಬೇಕಾದ ಅಂಶವೆಂದರೆ ಕ್ಲಿಯರ್ ಹೆಲ್ದಿ ಸ್ಕಿನ್ ಮೇಲೆ ಔಟ್ ಲೈನ್ ಲಿಪ್ಸ್ ಸಾಕಷ್ಟು ಉತ್ತಮ ಎನಿಸುತ್ತದೆ. ಇದಕ್ಕಾಗಿ ನೀವು ಲಿಪ್ಸ್ ಡೋಂಟ್ ವೈ, ಲೈನ್ ಫಿಲ್ ಲಿಪ್ ಲೈನರ್ ರಾಕರ್ ಚಿಕ್ ಬಳಸುವುದು ಲೇಸು.
ತುಲಾ ರಾಶಿ ವೈಶಿಷ್ಟ್ಯ: ಆಕರ್ಷಕ, ವ್ಯವಹಾರ ಕುಶಲ, ಸೋಶಿಯಲ್, ಶಿಷ್ಟಾಚಾರವುಳ್ಳ ಬ್ಯಾಲೆನ್ಸ್ಡ್ ಪರ್ಸನಾಲಿಟಿ.
ಪ್ರೆಡಿಕ್ಷನ್ : ಈ ರಾಶಿಯ ಜನ ಬಹಳ ಔಟ್ ಗೋಯಿಂಗ್. ಹುಡುಗಿ ಮಹಾನಗರದವಳಾದರೆ ಅವಳು ನೈಟ್ ಶಿಫ್ಟ್ ಕೆಲಸಕ್ಕೆ ಅಥವಾ ನೈಟ್ ಕ್ಲಬ್ ಗೆ ಹೋಗುವವಳಾಗಿರಬಹುದು. ನಿಮಗೆ ಕೋಬಾಲ್ಟ್ ಬ್ಲೂ ಐ ಮೇಕಪ್ ಹೆಚ್ಚು ಸೂಟ್ ಆಗುತ್ತದೆ. ಇದನ್ನು ಅಗತ್ಯ ಟ್ರೈ ಮಾಡಿ ನೋಡಿ. ತಾಡಶೀ ಸೋಜಿ, ಮರ್ಕ್ಯೂಸ್ ಮಾಡೆಲ್ಸ್ ನಿಂದ ಇವು ಜನಪ್ರಿಯ. ಇಂಥ ಬ್ಲೂ ಐ ಮೇಕಪ್ ನಿಮಗೆ ಸರಳತೆಯಲ್ಲೂ ಹೆಚ್ಚಿನ ಸೌಂದರ್ಯ ತಂದುಕೊಡುತ್ತದೆ. ಇದಕ್ಕಾಗಿ ನೀವು ಲ್ಯಾಕ್ಮೆ ಕರೀನಾಳ ಆ್ಯಬ್ ಸಲ್ಯೂಟ್ ಐ ಡಿಫೈನರ್‌ಕೋಬಾಲ್ಟ್ ಬಳಸಿರಿ.
ವೃಶ್ಚಿಕ ರಾಶಿ ವೈಶಿಷ್ಟ್ಯ: ಡೈನಮಿಕ್, ಭಾವುಕ, ಫುಲ್ ಜೋಶ್, ಉತ್ತೇಜನ ವ್ಯಕ್ತಿ.
ಪ್ರೆಡಿಕ್ಷನ್ : ಈ ರಾಶಿಯ ಜನರ ಪ್ಯಾಶನ್ ಎಲ್ಲೆಲ್ಲೂ ಚರ್ಚಿತ. ಅವರ ಬಾಹ್ಯ ವ್ಯಕ್ತಿತ್ವ ಬಲು ಪ್ರಭಾವಶಾಲಿಯಾಗಿದ್ದು, ಅವರ ಪರ್ಸನಾಲಿಟಿ ಮೇಲೆ ಪರ್ಪಲ್ ಪೌಟ್ ಅನುಪಮ ಎನಿಸುತ್ತದೆ. ಕಳೆದ ವರ್ಷದ ರಾಂಪ್ ಶೋನಲ್ಲಿ ಮರಿಯಮ್ ನಾಸಿರ್ ಹಾಗೂ ರಿಚರ್ಡ್ ಕ್ವೀನ್ ಇಂಥ ಪರ್ಪಲ್ ಪೌಟ್ ನಿಂದ ಹಂಗಾಮಾ ಎಬ್ಬಿಸಿದ್ದರು. ಇದಕ್ಕಾಗಿ ಮ್ಯಾಟ್ ಇಲೀಶಿಯನ್ ಕ್ರೆಯಾನ್ ಲಿಪ್ ಸ್ಟಿಕ್ ಪರ್ಪಲ್ ಪಿಂಕ್ ಬಳಸಬೇಕು.
ಧನು ರಾಶಿ ವೈಶಿಷ್ಟ್ಯ: ಸ್ವಾವಲಂಬಿ, ಉತ್ಸಾಹಿ, ಚಿನಕುರಳಿ, ಸ್ಪಷ್ಟ, ಅಥ್ಲೆಟಿಕ್ಸ್ ವ್ಯಕ್ತಿತ್ವ.
ಪ್ರೆಡಿಕ್ಷನ್ : ನೀವು ಸದಾ ಯೂನಿಕ್ ಸ್ಟೈಲ್ ಕ್ಯಾರಿ ಮಾಡಲು ಇಷ್ಟಪಡುವಿರಿ. ಅದು ನಿಮಗೆ ಹೆಚ್ಚು ಒಪ್ಪುತ್ತದೆ. ಹೀಗಾಗಿ ನಿಮ್ಮ ಹೇರ್ ಸ್ಟೈಲ್ ನಲ್ಲೂ ಹೊಸ ಕ್ರಿಯೇಟಿವಿಟಿ ಇರಲಿ. ರೆನ್ಯೂ ತರಹ ಜಡೆ ಹೆಣೆದು ಅತ್ಯಾಕರ್ಷಕ ಲುಕ್ಸ್ ನೀಡಿ. ಅಲಾಯಿನ್ಸ್, ಒಲಿವಿಯಾರಂಥ ಮಾಡೆಲ್ ಗಳ ಹಾಗೆ ಮೆಸ್ಸಿ ನಾಟೆಡ್ ಪೋನಿ ಹಾಕಿಕೊಂಡು, ಸ್ಟೈಲಾಗಿ ಓಡಾಡಿ. ಈ ಲುಕ್ ನಿಮಗೆ ಫುಲ್ ಆಫ್ ಕಾನ್ಛಿಡೆನ್ಸ್ ನೀಡುತ್ತದೆ. ಜೊತೆಗೆ ಬ್ಲಾಂಡ್ ಹೇರ್ ಇದ್ದರೆ, ಜನರ ನಡುವೆ ಆಕರ್ಷಣೀಯ ಕೇಂದ್ರಬಿಂದುವಾಗುವಿರಿ. ಇದಕ್ಕಾಗಿ ನೀವು ಕ್ರೇಝಿ ಕಲರ್ ಸೆಮಿ ಪರ್ಮನೆಂಟ್ ಹೇರ್ ಕಲರ್ ಕ್ರೀಂ ಬಳಸಿಕೊಳ್ಳಿ.
ಮಕರ ರಾಶಿ ವೈಶಿಷ್ಟ್ಯ: ಅಭಿಲಾಷಿ, ಸಂಘಟಿತ, ಜವಾಬ್ದಾರಿಯುತ, ಸ್ಪತಿಸ್ಛರ್ಧಿ ಮನೋಭಾವ, ದೃಢ ಸಂಕಲ್ಪಿತ ವ್ಯಕ್ತಿ.
ಪ್ರೆಡಿಕ್ಷನ್ : ನಿಮಗೆ ವಿಶ್ವವನ್ನೇ ಗೆಲ್ಲಬಲ್ಲವನೆಂಬ ಆತ್ಮವಿಶ್ವಾಸ ಇರುತ್ತದೆ. ನಿಮ್ಮ ಈ ಪ್ರಯಾಸದ ಕಾರಣ ನಿಮಗಾಗಿ ನಿಮ್ಮ ಬಳಿ ಸಮಯ ಇರುವುದಿಲ್ಲ. ಆದರೆ ನೀವು ಪ್ರತಿಸ್ಪರ್ಧಿಯಾಗಿ ಪೈಪೋಟಿ ಗೆಲ್ಲಲು ನೀವು ಸಹ ಪೇಶೋ ಶಬಾನೆ, ಪ್ರಬ್ ಗುರಂಗ್, ಬೋರಾ ಅಕ್ಷುರರಂಥ ಮಾಡೆಲ್ ತರಹ ದಪ್ಪ ಜಡೆ ಬದಲಿಗೆ ತೆಳು ಜಡೆ ಬಳಸಿ ಗ್ಲಾಮರಸ್ ಆಗಿ ಮಿಂಚಿರಿ. ಜೊತೆಗೆ ಜ್ಯೂವೆಲರಿ ಇದ್ದರೆ ಇನ್ನೂ ಚಂದ! ಇದಕ್ಕಾಗಿ ನೀವು ಟಾನಿಕ್ ಸೆಟ್ ಆಫ್ ಮಲ್ಟಿ ಕಲರ್ ರಬ್ಬರ್ ಬ್ಯಾಂಡ್ ಬಳಸಿಕೊಳ್ಳಿ.
ಕುಂಭ ರಾಶಿ ವೈಶಿಷ್ಟ್ಯ : ಚತುರ, ತರ್ಕ ಸಂಗತ, ವಾಸ್ತವಿಕ, ಹಿತೈಷಿ, ವೈಜ್ಞಾನಿಕ ಗುಣಗಳ ವ್ಯಕ್ತಿ.
ಪ್ರೆಡಿಕ್ಷನ್ : ನೀವು ಸಹ ಮಾಡೆಲ್ ರಿಬೆಲ್ ತರಹ ನಿಮ್ಮ ಬ್ಯೂಟಿ ಲುಕ್ಸ್ ಗಾಗಿ ಹೊಸ ಹೊಸ ಪ್ರಯೋಗ ಮಾಡಿ. ಈ ಸೀಸನ್ ನಲ್ಲಿ ಗೋಲ್ಡನ್ ಐ ಲುಕ್ ಫೇಮಸ್. ಇದರಲ್ಲಿ ಕಣ್ಣೆವೆಗಳ ಮಧ್ಯೆ ಗ್ಲಿಟರ್ ಅಪ್ಲೈ ಮಾಡಿ ಪಾರ್ಟಿಯ ಕೇಂದ್ರಬಿಂದು ಎನಿಸಿರಿ. ಇದಕ್ಕಾಗಿ ವಲ್ವೆಟ್ ಡೈವ್ ಕಲರ್ ಐಕಾನ್ ಐಶ್ಯಾಡೋ ಗ್ಲಿಟರ್ ಸಿಂಗ್ ಟೋಸ್ಟಿ ಬಳಸಿಕೊಳ್ಳಿ.
ಮೀನ ರಾಶಿ ವೈಶಿಷ್ಟ್ಯ: ಭಾವುಕ, ದಯಾಳು, ಡೀ ಸಮರ್. ಕಲಾತ್ಮಕ, ಕಲ್ಪನಾಶೀಲ ವ್ಯಕ್ತಿ.
ಪ್ರೆಡಿಕ್ಷನ್ : ಈ ರಾಶಿಯ ಹೆಂಗಸರು ಬಲು ರೊಮ್ಯಾಂಟಿಕ್ ಇಂಟರೆಸ್ಟಿಂಗ್ ಎನಿಸುತ್ತಾರೆ. ನೀವು ಇನ್ನಷ್ಟು ಹೆಚ್ಚು ರೊಮ್ಯಾಂಟಿಕ್ ಆಗಲು ಹೈ ಬನ್ ಮಾಡಿಕೊಂಡು ಒನ್ ಸೈಡ್ ಫ್ಲವರ್ ಕ್ಯಾರಿ ಮಾಡಿ. ಇದು ನಿಮಗೆ ಬ್ಯೂಟಿಫುಲ್ ಲುಕ್ಸ್ ನೀಡುತ್ತದೆ. ಇದಕ್ಕಾಗಿ ನೀವು ವಿಶುಯೆಲ್ ಈರೋಸ್ ಮೆಜೆಂತಾ ಹೇರ್ ಬ್ಯಾಂಡ್ ವಿತ್ ಬೋ ಫ್ಲವರ್ ಬಳಸಬಹುದು.
– ಪ್ರತಿನಿಧಿ