ಯಾವ ತಾಯಿತಂದೆಯರು ಸದಾ ತಮ್ಮ ಮಕ್ಕಳ ಕಡೆಯೇ ಗಮನ ಕೊಡುತ್ತಿರುತ್ತಾರೊ, ಅವರಿಗೆ ಯಾವುದೇ ಸ್ವನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡುವುದಿಲ್ಲವೋ, ಅಂತಹ ಪೋಷಕರನ್ನು ಮನೋತಜ್ಞರು `ಹೆಲಿಕಾಪ್ಟರ್‌ ಪೇರೆಂಟ್ಸ್' ಎಂದು ಕರೆಯುತ್ತಾರೆ. ಇದರ ಪರಿಣಾಮವೆಂಬಂತೆ ಮಕ್ಕಳಿಗೆ ಸರಿತಪ್ಪಿನ ಅರಿವಾಗುವುದಿಲ್ಲ, ಅವರು ಏಕಾಂಗಿಯಾಗಿ, ಬೇರೆಡೆ ಹೋಗಲು ಹೆದರುತ್ತಾರೆ.

`ಹೆಲಿಕಾಪ್ಟರ್‌ ಪೇರೆಂಟ್ಸ್' ಎಂದು ಕರೆಯಿಸಿಕೊಳ್ಳುವವರು ತಮ್ಮ ಮಕ್ಕಳ ನಿರ್ಧಾರವನ್ನು ತಾವೇ ಸ್ವತಃ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಅವರ ಬಟ್ಟೆಗಳ ಆಯ್ಕೆಯಾಗಿರಬಹುದು, ಆಹಾರದ ಆಯ್ಕೆಯಾಗಿರಬಹುದು. ತಾಯಿತಂದೆಯರ ಈ ವರ್ತನೆ ಮಕ್ಕಳ ಮಾನಸಿಕ ಸಾಮರ್ಥ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.

`ಹೋರಿಂಗ್‌' ಅಥವಾ `ಹೆಲಿಕಾಪ್ಟರ್‌ ಪೇರೆಂಟ್ಸ್' ಶಬ್ದವನ್ನು ಎಲ್ಲಕ್ಕೂ ಮೊದಲು 1969ರಲ್ಲಿ ಡಾ. ಹೆಮ್ ಗಿನಾಟ್ಸ್ ರ `ಬಿಟ್ವೀನ್ ಪೇರೆಂಟ್ಸ್ ಅಂಡ್‌ ಟೀನ್‌ ಏಜರ್ಸ್‌' ಪುಸ್ತಕದಲ್ಲಿ ಬಳಸಲಾಗಿತ್ತು. ಆ ಶಬ್ದ ಅದೆಷ್ಟು ಜನಪ್ರಿಯಗೊಂಡಿತೆಂದರೆ, 2011ರಲ್ಲಿ ಅದು ಶಬ್ದಕೋಶದಲ್ಲಿ ಸೇರ್ಪಡೆಗೊಂಡಿತು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳ ಸಂಪೂರ್ಣ ವಿಕಾಸ ಬಯಸುತ್ತಾರೆ. ತಮ್ಮ ಮಗು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಇರಬೇಕೆಂದು ಬಯಸಿ ಸದಾ ಮಗುವಿನ ಹಿಂದೆ ಹಿಂದೆಯೇ ಇರುತ್ತಾರೆ. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಮಗುವಿನ ಮೇಲೆ ನಿರೀಕ್ಷೆಯ ಭಾರವನ್ನು ಅತಿಯಾಗಿ ಹೊರಿಸುತ್ತಾರೆ. ಬೇರೆ ಮಕ್ಕಳಿಗಿಂತ ತಮ್ಮ ಮಗು ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದೆಂದು ಅದರ ಸುತ್ತಲೇ ಹೆಲಿಕಾಪ್ಟರ್‌ ರೀತಿಯಲ್ಲಿ ಗಿರಕಿ ಹೊಡೆಯುತ್ತಿರುತ್ತಾರೆ. ತಾವು ಹೆಚ್ಚು ಗಮನ ಕೊಡುವುದರಿಂದ ಮಗು ಯಶಸ್ಸಿನತ್ತ ಸಾಗುತ್ತದೆ ಎನ್ನುವುದು ಅವರ ವಿಚಾರವಾಗಿರುತ್ತದೆ.

ಆದರೆ ಪೋಷಕರು ಹೀಗೆ ಮಾಡಬಾರದು. ಮಗುವಿಗೆ ಅಷ್ಟಿಷ್ಟು ಬಂಧನಗಳಿಂದ ಮುಕ್ತಿ ಕೊಡಬೇಕು. ಎಷ್ಟೋ ಸಲ ಪೋಷಕರು ಮಕ್ಕಳಿಗೆ ಮೆಟ್ಟಿಲಾಗುವ ಬದಲು ಅವರ ಊರುಗೋಲಾಗಿ ಬಿಡುತ್ತಾರೆ. ಇದರಿಂದಾಗಿ ಮಕ್ಕಳಿಗೆ ತಾವು ಪೋಷಕರಿಲ್ಲದೆ ಏನನ್ನೂ ಮಾಡಲು ಆಗುವುದಿಲ್ಲ ಎಂಬ ಅನುಭವ ಮೂಡತೊಡಗುತ್ತದೆ. ಯಾವುದೇ ಒಂದು ಕೆಲಸ ಮಾಡಲು ಅವರಿಗೆ ಹೆದರಿಕೆ ಆಗುತ್ತದೆ. ಮಕ್ಕಳು ಪೋಷಕರ ಜವಾಬ್ದಾರಿ ಎನ್ನುವುದೇನೋ ನಿಜ. ಆದರೆ ನೀವು ನಿಮ್ಮ ಇಷ್ಟವನ್ನು ಅವರ ಮೇಲೆ ಹೇರುವ ಪ್ರಯತ್ನ ಮಾಡಬಾರದು. ಮಕ್ಕಳಿಗೆ ಮೆಟ್ಟಿಲಾಗಿ ಅವರಿಗೆ ನೆರವಾದರೆ ಅವರು ಸ್ವಾವಲಂಬಿಗಳಾಗುತ್ತಾರೆ. ಆದರೆ ಊರುಗೋಲಿನ ರೀತಿ ಅವರಿಗೆ ಆಧಾರ ಕೊಡಲು ಹೋದರೆ ಅವರು ತಮ್ಮನ್ನು ತಾವು ದುರ್ಬಲ ಎಂದು ಭಾವಿಸುತ್ತಾರೆ. ಅವರನ್ನು ನಿರಾಳವಾಗಿರಲು ಬಿಡಿ. ಅವರು ತಮಗೆ ತಾವೇ ಯಾವುದಾದರೂ ನಿರ್ಧಾರ ಕೈಗೊಳ್ಳಲು ಅವಕಾಶ ಕೊಡಿ. ಏಕೆಂದರೆ ಅವರಲ್ಲಿ ಆತ್ಮವಿಶ್ವಾಸ ಜಾಗೃತಗೊಳ್ಳಬೇಕು. ಇದನ್ನು ಹೇಳುವ ಉದ್ದೇಶ ಇಷ್ಟೆ. ನಿಮ್ಮ ಆಸಕ್ತಿ ಅನಾಸಕ್ತಿಗಳನ್ನು ಅವರ ಮೇಲೆ ಹೇರುವ ಪ್ರಯತ್ನ ಮಾಡಬೇಡಿ. ಸದಾ ಕಟ್ಟುನಿಟ್ಟಿನಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುವುದಿಲ್ಲ. ಅದೇ ರೀತಿ ಮಕ್ಕಳ ಮೇಲೆ ಅತಿಯಾಗಿ ಶಿಸ್ತಿನಿಂದ ಅವರಲ್ಲಿ ಹಠಮಾರಿತನ ಜಾಸ್ತಿಯಾಗಬಹುದು.

ಮಕ್ಕಳ ಮೇಲೆ ಕಠೋರ ಶಿಸ್ತು ಹೇರುವುದರಿಂದ ಅವರು ಕೋಪಿಷ್ಟರೂ, ಹಠಮಾರಿಗಳೂ ಆಗುತ್ತಾರೆ. ಅದರ ಪರಿಣಾಮವೆಂಬಂತೆ ಪೋಷಕರು ಮಕ್ಕಳಿಂದ ತದ್ವಿರುದ್ಧ ಉತ್ತರ ಕೇಳಿಸಿಕೊಳ್ಳಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ