ರಕ್ಷಿತಾ ಕಳೆದ ಅನೇಕ ದಿನಗಳಿಂದ ಬಹಳ ದುಃಖಿತಳಾಗಿದ್ದಳು. ಆಫೀಸ್‌ ನ ಕೆಲಸವನ್ನು ಕೂಡ ಆಕೆ ಮನಸ್ಸು ಕೊಟ್ಟು ಮಾಡಲು ಆಗುತ್ತಿರಲಿಲ್ಲ. ಅವಳು ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದಳು. ಹೀಗಾಗಿ ಬಾಸ್‌ ಅವಳ ಬಗ್ಗೆ ಕೂಗಾಡುವುದು ಸಹಜವೇ.

ಅವಳ ಸಹೋದ್ಯೋಗಿ ಜ್ಯೋತಿಗೆ ಅವಳ ಸ್ಥಿತಿಯನ್ನು ನೋಡಲಾಗಲಿಲ್ಲ.

ಆ ದಿನ ಊಟದ ಸಮಯದಲ್ಲಿ ಅವಳು ಕೇಳಿಯೇ ಬಿಟ್ಟಳು. ``ಯಾಕೆ ಏನಾಯ್ತು? ಕಳೆದ ಕೆಲವು ದಿನಗಳಿಂದ ನಿನ್ನ ಮನಸ್ಥಿತಿಯೇ ಸರಿ ಇಲ್ವಲ್ಲ?'' ಗೆಳತಿಯ ಪ್ರಶ್ನೆಗೆ ರಕ್ಷಿತಾ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ನಂತರ ಅವಳು ಹೇಳತೊಡಗಿದಳು, ``ನಾನು ಮತ್ತು ಅಮಿತ್‌ ಕಳೆದ 1 ವರ್ಷದಿಂದ ಲಿವ್ ‌ಇನ್‌ ರಿಲೇಶನ್‌ ಶಿಪ್‌ ನಲ್ಲಿ ಇದ್ದೆ. ನಾನು ಅಪ್ಪ ಅಮ್ಮನನ್ನು ಮದುವೆಗೆ ಕೂಡ ಒಪ್ಪಿಸಿಬಿಟ್ಟಿದ್ದೆ. ಆದರೆ ಈಗ ಅಮಿತ್‌ ನಾನು ಈ ಸಂಬಂಧದಿಂದ ಬೇಸರಗೊಂಡಿದ್ದೇನೆ ಎಂದು ಹೇಳುತ್ತಿದ್ದಾನೆ. ನಾವಿಬ್ಬರೂ ಈಗ ಜೊತೆಗಿದ್ದೂ ಅಪರಿಚಿತರಂತೆ ದೂರ ದೂರ ಇರುತ್ತಿದ್ದೇವೆ. ಕಳೆದ 3 ದಿನಗಳಿಂದ ನನಗೆ ಅವನ ಭೇಟಿ ಆಗಿಲ್ಲ. ಕಾಲ್‌, ಮೆಸೇಜೂ ಇಲ್ಲ,'' ಎಂದು ಹೇಳುತ್ತ ಅವಳು ಮತ್ತೆ ಕಣ್ತುಂಬಿಕೊಂಡಳು.

ಜ್ಯೋತಿ ಅವಳಿಗೆ ಮನಸಾರೆ ಅಳಲು ಅವಕಾಶ ಕೊಟ್ಟಳು. ಸಂಜೆ ಅವಳನ್ನು ತನ್ನ ಮನೆಗೆ ಕರೆದುಕೊಂದು ಹೋದಳು. ಜ್ಯೋತಿ ತನ್ನ ಅಪ್ಪ ಅಮ್ಮ, ಅಣ್ಣ ಅತ್ತಿಗೆ ಜೊತೆ ವಾಸಿಸುತ್ತಿದ್ದಳು. ರಕ್ಷಿತಾಳಿಗೆ ಕೌಟುಂಬಿಕ ಆಶ್ರಯ ಹಾಗೂ ಗೆಳತಿಯ ಮಾನಸಿಕ ಬೆಂಬಲ ದೊರೆಯಿತು. ಇದರಿಂದ ಅವಳ ಮನೋಬಲ ಮತ್ತಷ್ಟು ಗಟ್ಟಿಯಾಯಿತು. ಆ ಬಳಿಕ ಅವಳು ತನ್ನುಳಿದ ಜೀವವನ್ನು ನಗುನಗುತ್ತ ಕಳೆಯಲು ಸಾಧ್ಯವಾಯಿತು.

ರಕ್ಷಿತಾಳಂತಹ ಅದೆಷ್ಟೋ ಹುಡುಗಿಯರು ಸಹಜೀವನ ಅಥವಾ ಲಿವ್ ‌ಇನ್‌ ರಿಲೇಶನ್‌ ಶಿಪ್‌ ಜಾಲಕ್ಕೆ ಸಿಕ್ಕಿ ನಲುಗಿಹೋಗಿದ್ದಾರೆ. ಅದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಮಾನಸಿಕ ಖಿನ್ನತೆಗೆ ತುತ್ತಾಗುತ್ತಾರೆ.

ಕೆಲವು ವರ್ಷಗಳ ಹಿಂದೆ ಲಿವ್ ಇನ್‌ ರಿಲೇಶನ್‌ ಶಿಪ್‌ ಗೆ ಸುಪ್ರೀಂ ಕೋರ್ಟ್‌ ಕಾನೂನಿನ ಮಾನ್ಯತೆ ಕೊಟ್ಟಿತ್ತು. ಆಗ ಯುವ ಜನಾಂಗದವರು ಭಾರಿ ಖುಷಿಪಟ್ಟಿದ್ದರು. ತಮಗೆ ಮುಕ್ತ ಆಕಾಶದ ಜೊತೆಗೆ ಬಂಗಾರದ ರೆಕ್ಕೆಗಳು ಬಂದವು ಎಂದವರು ಭಾವಿಸಿದ್ದರು. ಆದರೆ ಈಗ ಈ ಸಂಬಂಧದ ಸ್ವಚ್ಛಂದತೆ ಬಹಳಷ್ಟು ಜನರನ್ನು ಗಾಯಗೊಳಿಸುತ್ತಿದೆ. ಅದರಲ್ಲಿ ಮಹಿಳೆಯರು, ಹುಡುಗಿಯರೇ ಹೆಚ್ಚು.

ನ್ಯಾನ್ಸಿಯದು ಕರುಣಾಜನಕ ಕಥೆ. ಪ್ರಕಾಶ್‌ ಜೊತೆ 6 ತಿಂಗಳ ಕಾಲ ಲಿವ್ ‌ಇನ್‌ ರಿಲೇಶನ್‌ ಶಿಪ್‌ ನಲ್ಲಿದ್ದಳು. ಅದೊಂದು ದಿನ ದುರ್ಘಟನೊಂದರಲ್ಲಿ ಪ್ರಕಾಶ್‌ ಸತ್ತುಹೋಗುತ್ತಾನೆ. ನ್ಯಾನ್ಸಿ ಹೇಗೋ ಆ ದುಃಖದಿಂದ ಹೊರಬರಲು ಪ್ರಯತ್ನ ನಡೆಸಿ ತನ್ನಲ್ಲಿರುವ ಧೈರ್ಯ ಒಗ್ಗೂಡಿಸುತ್ತಾಳೆ. ಆದರೆ ಅದೊಂದು ದಿನ ತಾನು ಗರ್ಭಿಣಿ ಎನ್ನುವ ವಿಚಾರ ಅವಳಿಗೆ ಗೊತ್ತಾಗುತ್ತದೆ. ಗರ್ಭಪಾತ ಮಾಡಿಸಿಕೊಳ್ಳುವ ಸಮಯ ಕೂಡ ಮೀರಿ ಹೋಗಿರುತ್ತದೆ. ಹೀಗಾಗಿ ಅವಳು ಹತಾಶೆಯಿಂದ ತನ್ನ ಜೀವನಕ್ಕೇ ಕೊನೆ ಹಾಡುತ್ತಾಳೆ. ಮಗಳ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಪೋಷಕರ ಕನಸು ಈ ರೀತಿಯಲ್ಲಿ ನುಚ್ಚು ನೂರಾಗಿ ಹೋಯಿತು. ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಅದೆಷ್ಟೋ ಉದಾಹರಣೆಗಳು ನೋಡಲು ಸಿಗುತ್ತವೆ. ಇಲ್ಲಿ ಏಳುವ ಒಂದು ಪ್ರಶ್ನೆಯೆಂದರೆ, ಮದುವೆ ಒಂದು ಬಂಧನ ಹಾಗೂ ಲಿವ್ ‌ಇನ್‌ ಸ್ವಾತಂತ್ರ್ಯ ಎನ್ನುವುದಾದರೆ, ಹುಡುಗಿಯರಿಗೆ ಈ ಸ್ವಾತಂತ್ರ್ಯದಿಂದ ಇಷ್ಟೊಂದು ಕಷ್ಟ, ತೊಂದರೆ ಏಕೆ ಅನುಭವಿಸಬೇಕಾಗಿ ಬರುತ್ತದೆ? ಇದಕ್ಕೆ ಉತ್ತರವೆಂದರೆ, ಸಮಾಜದ ಇಬ್ಬಗೆಯ ಮಾನಸಿಕತೆ. ಭಾರತೀಯ ಮಹಿಳೆಯರಿಗೆ ಸಂಬಂಧವನ್ನು ಮುರಿದುಕೊಳ್ಳುವುದು ಅಷ್ಟು ಸುಲಭವಲ್ಲ. ಸಾಮಾಜಿಕವಾಗಿ ಅಷ್ಟೇ ಅಲ್ಲ, ಭಾವನಾತ್ಮಕವಾಗಿ ಕೂಡ ಪುರುಷರು ಇಂತಹ ಸಂಬಂಧಗಳಿಂದ ಹೊರಬಂದು ಮದುವೆ ಕೂಡ ಮಾಡಿಕೊಳ್ಳುತ್ತಾರೆ. ಅದನ್ನು ಸಮಾಜ ಸ್ವೀಕರಿಸುತ್ತದೆ ಕೂಡ. ಆದರೆ ಅದೇ ಸಮಾಜ ಮಹಿಳೆಯರ ಚಾರಿತ್ರ್ಯದ ಕಡೆ ಬೆರಳು ಮಾಡಿ ತೋರಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ