ಕಾಂತಾಬಾಯಿ ಸಂತ ಅಹೀರ್‌ ಪ್ರಕರಣ ಸುಪ್ರೀಂ ಕೋರ್ಟ್‌ ನಲ್ಲಿ ಇತ್ತೀಚೆಗೆ ಬಂದು ಹೋಯಿತು. ಕಿಶನ್‌ ಕುಮಾರ್‌ ರಂತಹ ಭಾರಿ ದೊಡ್ಡ ವಕೀಲರಿಗೆ ಫೀಸ್‌ ಕೊಡುವಷ್ಟು ಶ್ರೀಮಂತಳೇ ಆಕೆ? ಇಲ್ಲ ಖಂಡಿತ ಇಲ್ಲ. ಆಕೆ ಪುಣೆಯ ಪಾಮಾಡಿ ಡಗಾಂವ್ ‌ಶೇರಿ ಸ್ಲಮ್ ನಲ್ಲಿ ವಾಸಿಸುತ್ತಿದ್ದಳು. ಆಕೆಯ ಮನೆಯನ್ನು ಮಹಾರಾಷ್ಟ್ರ ಸರ್ಕಾರ ಸ್ಲಮ್ ಎಂದು ಘೋಷಿಸಿ, ಮನೆ ಕಿತ್ತುಕೊಂಡು, ಶ್ರೀಮಂತರಿಗೆ ಅದನ್ನು ಹಂಚಿಕೆ ಮಾಡುವುದಾಗಿತ್ತು.

ಕಾಂತಾಬಾಯಿ 2006-2019ರತನಕ ನ್ಯಾಯಾಲಯಗಳಿಗೆ ಅಲೆದಾಡಿ ಕೊನೆಗೆ 2019ರಲ್ಲಿ ಸೋತುಬಿಟ್ಟಳು. ಆಕೆ ಬಡವಳು, ಹಿಂದುಳಿದಳು. ಅಲ್ಲಿ ಶ್ರೀಮಂತರಿಗೆ ಕಟ್ಟಡವನ್ನು ನಿರ್ಮಿಸಬೇಕಿತ್ತು.

ಬಡವರಿಗಾಗಿಯೇ ಸರ್ಕಾರಗಳು ರಚನೆಯಾಗಿವೆ ಎಂದು ಹೇಳಲಾಗುತ್ತದೆ. ಆದರೆ ಅವುಗಳ ಗಮನ ದಿನಕ್ಕೆ 500-600 ರೂ. ಗಳಿಸುವ ಕಡುಬಡವರೇ ವಾಸಿಸುವ ಸ್ಲಮ್ ಗಳ ಮೇಲೆ ಬಿದ್ದಿದೆ.

ಆ ಕಾನೂನಿನ ಪ್ರಕಾರ ಯಾವ ಪ್ರದೇಶ ಕೊಳಕಾಗಿದೆಯೋ, ಆರೋಗ್ಯಕ್ಕೆ ಹಾನಿಕಾರಕಾಗಿದೆಯೋ, ಅಲ್ಲಿ ವಾಸಿಸುವವರ ಮನೆಗಳ ಮೇಲೆ ನೋಟೀಸು ಅಂಟಿಸಿ, ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಬುಲ್ಡೋಜರ್‌, ಜೆಸಿಬಿಗಳಿಂದ ನೆಲಸಮಗೊಳಿಸಬಹುದು.

ಸುಪ್ರೀಂ ಕೋರ್ಟ್‌ ರಾಮ ಮಂದಿರ ಪ್ರಕರಣದಲ್ಲಿ ಮಸೀದಿ ಒಡೆದದ್ದಕ್ಕಾಗಿ, ಮಸೀದಿ ಒಡೆದವರಿಗಾಗಿಯೇ ಜಮೀನನ್ನು ಮಂದಿರಕ್ಕಾಗಿ ನೀಡಬಹುದು. ಆದರೆ ಹಿಂದುಳಿದ, ಬಡ, ದುರ್ಬಲ ವರ್ಗದವರು ಇಂತಹ ಸ್ಲಮ್ ಗಳಲ್ಲಿ ವಾಸಿಸುವುದು ಹಾನಿಕರ ಎನ್ನುವುದು ಬಹಳ ದೊಡ್ಡ ವಿಷಯವೇನಲ್ಲ ಎಂದು ಅದೇ ಕೋರ್ಟ್‌ ಹೇಳಬಹುದಾಗಿತ್ತು.

ಸ್ಲಮ್ ಗಳಲ್ಲಿ ಯಾರೊಬ್ಬರೂ ಖುಷಿಯಿಂದ ಇರುವುದಿಲ್ಲ. ಅಂದಹಾಗೆ ಕೆಲಸ ಹುಡುಕಿಕೊಂಡು ನಗರಗಳಿಗ ಬರುವ ಜನರ ಕೈ ಖಾಲಿ ಇರುತ್ತದೆ. ಅವರು ಹಳ್ಳಿಗಳಲ್ಲಿ ಖಾಲಿ ಹೊಟ್ಟೆಯಿಂದ ನರಳುತ್ತಾರೆ. ಆದರೆ ಅಲ್ಲಿ ದೇವಸ್ಥಾನಗಳಲ್ಲಿ ಹಣದ ಸುರಿಮಳೆ ಆಗುತ್ತಿರುತ್ತದೆ. ಅವರು ನಗರದಲ್ಲಿ ಖಾಲಿ ನಿವೇಶನ ಹುಡುಕಿ ಅಲ್ಲಿಯೇ ಶೆಡ್‌ ಹಾಕಿಕೊಂಡು ವಾಸ ಮಾಡುತ್ತಾರೆ. ಅಲ್ಲಿ ಆಹಾರ ಸಿಗುತ್ತದೆ, ಮದುವೆ, ಮಕ್ಕಳೂ ಆಗುತ್ತವೆ. ಕೊಳಚೆ ವಾತಾವರಣ ಸರಿಯಾದ ವ್ಯವಸ್ಥೆ ಇಲ್ಲದೆ ನೂರಾರು ಜನರು ವಾಸ ಮಾಡಲು ಆರಂಭಿಸುತ್ತಾರೆ. ನಗರ ಬೆಳೆಯುತ್ತ ಹೋದಂತೆ ಅವರ ಮನೆಗಳ ಮೇಲೆ ಶ್ರೀಮಂತರ ಕಣ್ಣು ಬೀಳುತ್ತದೆ.

ಮಹಾರಾಷ್ಟ್ರ ಸರ್ಕಾರ ಸ್ಲಮ್ ರಿಹ್ಯಾಬಿಟೇಶನ್‌ ಆ್ಯಕ್ಟ್ ರೂಪಿಸಿದೆ. ಅದರಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ದೊರಕಬೇಕು. ಆದರೆ ಮನೆ ದೊರಕುವುದು ಶ್ರೀಮಂತರಿಗೆ. ಬಡವರಿಗೆ ಮಾತ್ರ ನೋಟೀಸ್‌ ಅಂಟಿಸಿರುವ ಮನೆಗಳು ಕಂಡುಬರುತ್ತವೆ. ಸುಪ್ರೀಂ ಕೋರ್ಟ್‌ ಕೂಡ ನೋಟೀಸ್‌ ಅಂಟಿಸಲಾಗಿದೆಯೆಂದರೆ ಅದು ನೋಟೀಸ್‌ ಅಂಟಿಸಲಾಗಿದೆಯೆಂದಷ್ಟೇ ಅರ್ಥ ಎಂದು ಹೇಳುತ್ತದೆ.

ಈಗಿನ ಹೊಸ ಸರ್ಕಾರದ ಹೊಸ ಕಾನೂನು ನೀವು ಮುಸ್ಲಿಂ ಆಗಿದ್ದರೆ, ನಿಮ್ಮ ತಾತ ಮುತ್ತಾತಂದಿರ ಪುರಾವೆ ತಂದುಕೊಡು, ಹಾಗೆಯೇ ಹಿಂದುಳಿದವರು, ಸ್ಲಮ್ ಜಾಗದ ಮಾಲೀಕರಾಗಿದ್ದರೆ ಅದರ ಪುರಾವೆ ತಂದುಕೊಡು ಎಂದು ಕೇಳುತ್ತದೆ. ಬಡವನ ಬಳಿ ಅದರ ದಾಖಲೆ ಎಲ್ಲಿ ಸಿಗಬೇಕು? ಇದರ ಪರಿಣಾಮ ಮನೆ ಹೋಯಿತು ಎಂಬಂತೆ ಅವರ ದೇಶದ ಗಲ್ಲಿ ಗಲ್ಲಿಗಳಲ್ಲಿ ಮಂದಿರಗಳಾಗುತ್ತಿವೆ. ಆದರೆ ಅವುಗಳನ್ನು ಯಾರೂ ಮುಟ್ಟುತ್ತಿಲ್ಲ. ಬಡವರು, ಕೃಷಿಕರ ಜಮೀನಿನ ಮೇಲೆ ಸರ್ಕಾರ ನಗರ ನಿರ್ಮಿಸಬಹುದು. ಕಾಲೋನಿ, ಕಾರ್ಖಾನೆಗಳನ್ನು ನಿರ್ಮಿಸಬಹುದು. ಬಡವರಿಗೆ ಮಾತ್ರ ವಾಸಿಸಲು ಸೂರು ಕೂಡ ಸಿಗುದಿಲ್ಲವೆಂದರೆ ಇದೆಂಥ ಕಾನೂನು?

ಸರ್ಕಾರಿ ಹೊಡೆತದ ಮೊದಲ ಬಲಿ

ದೆಹಲಿಯ ಜಾಮಿಯಾ ನಗರದ ಶಾಹೀನ್‌ ಬಾಗ್‌ ನಲ್ಲಿ ಯುವತಿಯರಿಂದ ಹಿಡಿದು ವೃದ್ಧರತನಕ ರಸ್ತೆಯ ಮೇಲೆ ಧರಣಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾಗರಿಕತ್ವ ತಿದ್ದುಪಡಿ ಕಾನೂನಿಗೆ ವಿರುದ್ಧವಾಗಿ ಈ ಮಹಿಳೆಯರು ಧರಣಿ ಕೂತಿರುವುದು ಇಡೀ ಸಮುದಾಯಕ್ಕೆ ಒಂದು ಸಂದೇಶವಾಗಿದೆ. ಇಂದಿನ ಯುಗದಲ್ಲಿ ವಾಟ್‌ ಆ್ಯಪ್‌ ನಲ್ಲಿ ಬಂದ ಸಂದೇಶದಿಂದ ಅಥವಾ ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ವಿಚಲಿತರಾಗುವುದಿಲ್ಲ. ಅವರಿಗೆ ಬ್ಯಾಲೆಟ್‌ ಮಶೀನ್‌ ಬಗ್ಗೆಯಾಗಲಿ, ರಸ್ತೆಯ ಮೇಲಿನ ಜನ ಸಮೂಹದ ಬಗ್ಗೆ ಭಯಾಗುವುದಿಲ್ಲ.

ನಾಗರಿಕತ್ವ ತಿದ್ದುಪಡಿ ಕಾನೂನು ಕೂಡ ಮಹಿಳೆಯರಿಗೆ ನೋಟು ಅಮಾನೀಕರಣ, ಜಿಎಸ್‌ಟಿಯಂತೆಯೇ ಹಾನಿಯನ್ನುಂಟು ಮಾಡುತ್ತದೆ. ಮನೆಯಲ್ಲಿ ಸಂಗ್ರಹಿಸಲ್ಪಟ್ಟು ಅದೆಷ್ಟೋ ನೋಟುಗಳನ್ನು ಮಹಿಳೆಯರು ಬಹಿರಂಗಪಡಿಸಬೇಕಾಗಿ ಬಂದಿತ್ತು.

ಅದೇ ರೀತಿ ಜಿಎಸ್‌ಟಿ ಒಂದು ದೇಶ ಒಂದು ತೆರಿಗೆ ಹೆಸರಿನಲ್ಲಿ ಜನರ ಮೇಲೆ ಹೇರಲ್ಪಟ್ಟ ವಸ್ತುಗಳ ಬೆಲೆ ದುಬಾರಿಯಾದವು. ಪ್ರತಿಯೊಬ್ಬ ವ್ಯಾಪಾರಿಯೂ ಸೆಕ್ಕ ಇಡಬೇಕಾಗಿ ಬಂದಿದೆ. ಕಂಪ್ಯೂಟರ್‌ ಇಟ್ಟುಕೊಳ್ಳಬೇಕಾಗಿ ಬರುತ್ತಿದೆ. ಅದರ ಒಟ್ಟಾರೆ ಬೆಲೆಯನ್ನು ಮಹಿಳೆಯರೇ ತೆರಬೇಕಾಗಿ ಬರುತ್ತಿದೆ. ಜಿಎಸ್‌ಟಿಯಿಂದ ಅನೇಕ ಕಾರ್ಖಾನೆಗಳು ಮುಚ್ಚಿದವು. ಅವು ಕಡಿಮೆ ಗುಣಮಟ್ಟದ ವಸ್ತುಗಳನ್ನು ನಿರ್ಮಿಸುತ್ತಿದ್ದಿರಬಹುದು. ಆದರೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದವು. ಈಗ ಹಳ್ಳಿಹಳ್ಳಿಗಳಲ್ಲೂ ಬ್ರ್ಯಾಂಡೆಡ್‌ ಉತ್ಪನ್ನಗಳು ಸಿಗುತ್ತಿವೆ. ಅದರಿಂದ ದೊಡ್ಡ ಕಂಪನಿಗಳಿಗೆ ಭಾರಿ ಲಾಭ ಬರುತ್ತಿದೆ. ಷೇರು ಮಾರುಕಟ್ಟೆ ಆರ್ಥಿಕ ಹಿಂಜರಿಕೆಯಲ್ಲೂ ಭಾರಿ ಏರುಮುಖದಲ್ಲಿದೆ.

ನಾಗರಿಕತ್ವ ತಿದ್ದುಪಡಿ ಕಾನೂನಿನ ದಸ್ಯು ಪುತ್ರ ಹುಟ್ಟುವುದು ಖಚಿತ. ಅದೇ ಎನ್‌ಆರ್‌ಸಿ. ನ್ಯಾಶನಲ್ಸ್ ರಿಜಿಸ್ಟಾರ್‌ ಆಫ್‌ ಸಿಟಿಜನ್ಸ್ ಅಂದರೆ ರಾಷ್ಟ್ರೀಯ ಪೌರತ್ವ ನೋಂದಣಿ. ಇದರಲ್ಲಿ ನಿಮ್ಮ ಪೂರ್ವ ದಾಖಲೆ ಕೇಳಲಾಗುತ್ತದೆ. ಅದನ್ನು ಕೊಡದೇ ಇದ್ದರೆ ನಿಮಗೆ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಬ್ಯಾಂಕ್‌ ಅಕೌಂಟ್‌, ಡ್ರೈವಿಂಗ್‌ ಲೆಸೆನ್ಸ್, ರೇಶನ್‌ ಕಾರ್ಡ್‌ ದೊರಕುವುದಿಲ್ಲ. ಆ ಕಾರಣದಿಂದ ನೀವು ಆಸ್ತಿ ಖರೀದಿಸಲು ಆಗುವುದಿಲ್ಲ. ನಿಮ್ಮ ಮಕ್ಕಳನ್ನು ನಾಗರಿಕರೆಂದು ಪರಿಗಣಿಸಬಹುದು. ಆದರೆ ನಿಮ್ಮ ತಂದೆಯನ್ನು ವಿದೇಶಿಯರೆಂದು ಹೇಳಬಹುದು. ನಿಮ್ಮ ಆಯ್ಕೆ ಪ್ರಕಾರ, ನೀವು 12 ಸಲ ಆರತಿ ಬೆಳಗಬಹುದು, 6 ಸಲ ತಿಲಕ ಹಚ್ಚಿಕೊಳ್ಳಬಹುದು.

ಅಸ್ಸಾಂನಲ್ಲಿ ಹೀಗಾಗಿದೆ. ಹಾಗಾಗಿ ಈ ಭಯವಿದೆ. ಈ ಸಂಕಟ ಯಾವಾಗ ಯಾರ ಮೇಲೆ ಹೇಗೆ ಬೀಳುತ್ತೊ ಹೇಳಲಿಕ್ಕಾಗದು. ಆಗ ನಿಮಗೆ ಯಾರೊಬ್ಬರೂ ಸಹಾಯಕ್ಕೆ ಬರುವುದಿಲ್ಲ. ನಿಮ್ಮ ಉಪಸ್ಥಿತಿ ಮಹತ್ವದ್ದಲ್ಲ. ನಿಮ್ಮ ಪೂರ್ವಿಕರ ದಾಖಲೆ ಮುಖ್ಯ. ಇದರಲ್ಲಿ ಹೆಚ್ಚು ತೊಂದರೆ ಪಡುವವರು ಮಹಿಳೆಯರೇ. ಅವರು ಮನೆಯೆಲ್ಲ ಹುಡುಕಬೇಕಾಗುತ್ತದೆ. ತಮ್ಮ ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣನ ಬಳಿ ಹೋಗಿ ಯಾರ ಬಳಿಯಾದರೂ ಹಳೆಯ ದಾಖಲೆಯೇನಾದರೂ ಇದೆಯೇ ಎಂದು ಅಂಗಲಾಚಬೇಕಾಗುತ್ತದೆ. ಈ ಕೆಲಸ ಮಹಿಳೆಯರ ಮೇಲೆಯೇ ಬೀಳುತ್ತದೆ.

ಸರ್ಕಾರಿ ಹೊಡೆತ ಮಹಿಳೆಯರ ಮೇಲೆಯೇ ಬೀಳುತ್ತದೆ. ಸಾಮಾನ್ಯವಾಗಿ ಅದನ್ನು ಬಚ್ಚಿಡಲಾಗುತ್ತದೆ. ಶಾಹೀನ್‌ ಭಾಗ್‌ ನಲ್ಲಿ 80-90 ವರ್ಷಗಳ ವೃದ್ಧರಿಂದ ಹಿಡಿದು 10-12 ವರ್ಷದ ಹುಡುಗಿಯರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಯುವ ದಾರಿ ಹೊಳೆದಿದೆ. ಅದನ್ನು ಪ್ರತಿಯೊಬ್ಬ ಮಹಿಳೆಯೂ ಅನುಸರಿಸಬೇಕು. ಅದು ಅತ್ಯಾಚಾರದ ಪ್ರಕರಣವೇ ಆಗಿರಬಹುದು, ನೋಟು ಅಮಾನ್ಯೀಕರಣದ್ದೇ ಇರಬಹುದು ಅಥವಾ ತೆರಿಗೆಯದ್ದು ಇಲ್ಲಿ ಚುಡಾಯಿಸುವ ಪ್ರಕರಣದ್ದಾಗಿರಬಹುದು.

ಮಹಿಳೆ ಅಲಂಕೃತ ಗೊಂಬೆಯಲ್ಲ

ಭಾರತೀಯ ಜನತಾ ಪಾರ್ಟಿಯಲ್ಲಿ ಈಗ ಮಹಿಳಾ ಮುಖಂಡರನ್ನು ಬದಿಗೆ ಸರಿಸಲಾಗಿದೆ. ಸುಷ್ಮಾ ಸ್ವರಾಜ್‌ ರಂತೂ ಈಗಿಲ್ಲ, ಉಮಾ ಭಾರತಿಯಂತೂ ಒಂದು ಬದಿಗೆ ಸರಿದಿದ್ದಾರೆ. ಭಾಜಪಾ ಈಗ ಇಬ್ಬರದ್ದೇ ಪಾರ್ಟಿಯಾಗಿ ಉಳಿದಿದೆ. ಒಬ್ಬರ ಪತ್ನಿ ಅದೆಷ್ಟೋ ವರ್ಷಗಳ ಹಿಂದೆ, ಮದುವೆಯ ಬಳಿಕ ತಕ್ಷಣವೇ ಪ್ರತ್ಯೇಕವಾಗಿದ್ದಾರೆ. ಇನ್ನೊಬ್ಬರ ಹೆಂಡತಿ ಕಣ್ಣಿಗೆ ಬೀಳುವುದೇ ಇಲ್ಲ. ಭಾಜಪಾದಲ್ಲಿ ಈಗ ಮಹಿಳಾ ಮುಖ್ಯಮಂತ್ರಿಗಳೂ ಇಲ್ಲ. ಒಬ್ಬಿಬ್ಬರೂ ಮಹಿಳಾ ರಾಜ್ಯಪಾಲರಿದ್ದಾರೆ. ಅವರ ಕಾರ್ಯ ಔಪಚಾರಿಕ ಅಷ್ಟೆ.

ಭಾಜಪಾದಲ್ಲಿ ಮೊದಲು ತೀಕ್ಷ್ಣವಾಗಿದ್ದ ಸ್ಮೃತಿ ಇರಾನಿ ಈಗ ಕ್ಯಾರೆಕ್ಟರ್‌ ರೋಲಿ‌ನಲ್ಲಿ ಉಳಿದುಬಿಟ್ಟಿದ್ದಾರೆ. ಯಾವಾಗಾದರೊಮ್ಮೆ ಅವರನ್ನು ಕೂಗಾಡಲು ಘಟವಾಣಿ ಅತ್ತೆ ಲಲಿತಾ ಪವಾರ್‌ ಪಾತ್ರ ನೀಡಲಾಗುತ್ತದೆ.

ನಿರ್ಮಲಾ ಸೀತಾರಾಮನ್‌ ರನ್ನು ಎಂತಹ ಒಂದು ಸಚಿವಾಯದಲ್ಲಿ ಇರಿಸಲಾಗಿದೆಯೆಂದರೆ, ತಪ್ಪೆಲ್ಲವನ್ನು ಅವರ ಮೇಲೆ ಹೊರಿಸಲಾಗುತ್ತದೆ. ಕುಸಿಯುತ್ತಿರುವ ದೇಶದ ಅರ್ಥ ವ್ಯವಸ್ಥೆಗೆ ಪ್ರಧಾನಿ ಹೊಣೆ. ಆದರೆ ಅದನ್ನು ನಿರ್ಮಲಾರ ಮೇಲೆ ಹೊರಿಸಲಾಗುತ್ತಿದೆ. ಏಕೆಂದರೆ ಅವರು ಸುಷ್ಮಾರ ಹಾಗೆ ಪ್ರಧಾನಿ ಹುದ್ದೆಯ ಕನಸು ಕಾಣದಿರಲಿ ಎಂದು. ಅಂದಹಾಗೆ ಅವರು ಆರ್‌ಎಸ್‌ಎಸ್‌ನ ಮೆಟೀರಿಯಲ್ ಕೂಡ ಅಲ್ಲ.

ಭಾಜಪಾದಲ್ಲಿ ಮೇಲಿನಿಂದ ಕೆಳಗಿನ ತನಕ ಮಹಿಳೆಯರಿಗೆ ಸೀತಾ, ದ್ರೌಪದಿ, ರಾಧೆಯ ಪಾತ್ರಗಳನ್ನೇ ನೀಡಲಾಗುತ್ತದೆ. ದುರ್ಗೆಯ ಪಾತ್ರವನ್ನಲ್ಲ. ತಮ್ಮ ಸಂಸ್ಕಾರವನ್ನು ಕಾಪಾಡಿಕೊಳ್ಳುವ ಮಹಿಳೆಯರ ಸ್ಥಾನ ಭಜನೆ, ಪೂಜೆಯಲ್ಲಿಯೇ ಇರಬೇಕೆಂದು ಅದು ನಂಬಿಕೆ ಇಡುತ್ತದೆ. ರಾಜಕೀಯದಲ್ಲಿ ಇಂತಹ ದುರ್ದೆಸೆ ಆಗಿರುವುದು ಬಹಳಷ್ಟು ಕಡಿಮೆ ಮಹಿಳೆಯರಿಗೆ ಈಗ ಮಮತಾ ಬ್ಯಾನರ್ಜಿ ಹೊರತಾಗಿ ಯಾರಾದರೂ ಮಹಿಳಾ ಮುಖಂಡರು ಕಂಡುಬರುತ್ತಾರೆಂದರೆ, ಅವರು ಪ್ರಿಯಾಂಕಾ ಗಾಂಧಿ. ಅವರು ರಾಜಕೀಯದ ತೀರದಲ್ಲಿ ನಿಂತಿದ್ದಾರೆ. ಅವರು ಅದರಲ್ಲಿ ಈಜುವ ಮನಸ್ಸು ಮಾತ್ರ ಮಾಡುತ್ತಿಲ್ಲ. ರಾಹುಲ್ ‌ಗಾಂಧಿಯವರ ವಿಫಲತೆಯ ಬಳಿಕ ಅವರಿಗೆ ಅದರ ಭಯ ಆಗುತ್ತದೆ. ಭಾಜಪಾದ ಉದಾಹರಣೆಯನ್ನು ಬೇರೆ ಪಾರ್ಟಿಗಳು ಅನುಸರಿಸುತ್ತಿವೆ.

ಭಾಜಪಾ ಕಾರ್ಯಕರ್ತರಲ್ಲಿ ಮಹಿಳೆಯರ ಅಭಾವ ಎದ್ದು ಕಾಣುತ್ತದೆ. ಧರ್ಮ ಪ್ರತಿಯೊಂದು ನಿಟ್ಟಿನಲ್ಲಿ ಮಹಿಳೆಯರನ್ನು ಬಳಕೆ ಮಾಡಿಕೊಳ್ಳುತ್ತದೆ. ಹಣ ವಸೂಲಿಗೆ ಕೂಡ. ಯಾವ ಮಹಿಳೆಯೂ ಪೋಪ್‌ ಆಗಲಿಲ್ಲ, ಯಾರೊಬ್ಬರೂ ಶಂಕರಾಚಾರ್ಯ ಆಗಲಿಲ್ಲ. ನಿಮ್ಮದೇ ಏರಿಯಾದಲ್ಲಿ ಯಾರಾದರೂ ಮಹಿಳೆ ಮಠಾಧೀಶರಾಗಿದ್ದಾರಾ ಎಂದು ನೋಡಿ. ಎಲ್ಲ ಸೂತ್ರ ಪುರುಷರ ಕೈಯಲ್ಲೇ ಇದೆ.

ಧನ ಧಾನ್ಯ ಮಹಿಳೆಯರಿಂದ ದೊರಕುತ್ತದೆ. ಓಟು ಕೂಡ ಅವರಿಂದಲೇ. ಮುಖಂಡ ಮಾತ್ರ ಪುರುಷ.

ಸರ್ಕಾರದಲ್ಲಿ ಮಹಿಳೆಯರ ನಿರ್ಲಕ್ಷ್ಯ ತಪ್ಪು ಸಂದೇಶ ನೀಡುತ್ತದೆ. ಮಹಿಳೆ ಮುಂದಿನ ವರ್ಷಗಳಲ್ಲಿ ನಿರರ್ಥಕ ಆಗಬಹುದು. ಅಲಂಕೃತ ಗೊಂಬೆಯಾಗಬಹುದು ಎನ್ನುವುದು ಮಾತ್ರ ನಿಶ್ಚಿತ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ