ಕಾಂತಾಬಾಯಿ ಸಂತ ಅಹೀರ್‌ ಪ್ರಕರಣ ಸುಪ್ರೀಂ ಕೋರ್ಟ್‌ ನಲ್ಲಿ ಇತ್ತೀಚೆಗೆ ಬಂದು ಹೋಯಿತು. ಕಿಶನ್‌ ಕುಮಾರ್‌ ರಂತಹ ಭಾರಿ ದೊಡ್ಡ ವಕೀಲರಿಗೆ ಫೀಸ್‌ ಕೊಡುವಷ್ಟು ಶ್ರೀಮಂತಳೇ ಆಕೆ? ಇಲ್ಲ ಖಂಡಿತ ಇಲ್ಲ. ಆಕೆ ಪುಣೆಯ ಪಾಮಾಡಿ ಡಗಾಂವ್ ‌ಶೇರಿ ಸ್ಲಮ್ ನಲ್ಲಿ ವಾಸಿಸುತ್ತಿದ್ದಳು. ಆಕೆಯ ಮನೆಯನ್ನು ಮಹಾರಾಷ್ಟ್ರ ಸರ್ಕಾರ ಸ್ಲಮ್ ಎಂದು ಘೋಷಿಸಿ, ಮನೆ ಕಿತ್ತುಕೊಂಡು, ಶ್ರೀಮಂತರಿಗೆ ಅದನ್ನು ಹಂಚಿಕೆ ಮಾಡುವುದಾಗಿತ್ತು.

ಕಾಂತಾಬಾಯಿ 2006-2019ರತನಕ ನ್ಯಾಯಾಲಯಗಳಿಗೆ ಅಲೆದಾಡಿ ಕೊನೆಗೆ 2019ರಲ್ಲಿ ಸೋತುಬಿಟ್ಟಳು. ಆಕೆ ಬಡವಳು, ಹಿಂದುಳಿದಳು. ಅಲ್ಲಿ ಶ್ರೀಮಂತರಿಗೆ ಕಟ್ಟಡವನ್ನು ನಿರ್ಮಿಸಬೇಕಿತ್ತು.

ಬಡವರಿಗಾಗಿಯೇ ಸರ್ಕಾರಗಳು ರಚನೆಯಾಗಿವೆ ಎಂದು ಹೇಳಲಾಗುತ್ತದೆ. ಆದರೆ ಅವುಗಳ ಗಮನ ದಿನಕ್ಕೆ 500-600 ರೂ. ಗಳಿಸುವ ಕಡುಬಡವರೇ ವಾಸಿಸುವ ಸ್ಲಮ್ ಗಳ ಮೇಲೆ ಬಿದ್ದಿದೆ.

ಆ ಕಾನೂನಿನ ಪ್ರಕಾರ ಯಾವ ಪ್ರದೇಶ ಕೊಳಕಾಗಿದೆಯೋ, ಆರೋಗ್ಯಕ್ಕೆ ಹಾನಿಕಾರಕಾಗಿದೆಯೋ, ಅಲ್ಲಿ ವಾಸಿಸುವವರ ಮನೆಗಳ ಮೇಲೆ ನೋಟೀಸು ಅಂಟಿಸಿ, ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಬುಲ್ಡೋಜರ್‌, ಜೆಸಿಬಿಗಳಿಂದ ನೆಲಸಮಗೊಳಿಸಬಹುದು.

ಸುಪ್ರೀಂ ಕೋರ್ಟ್‌ ರಾಮ ಮಂದಿರ ಪ್ರಕರಣದಲ್ಲಿ ಮಸೀದಿ ಒಡೆದದ್ದಕ್ಕಾಗಿ, ಮಸೀದಿ ಒಡೆದವರಿಗಾಗಿಯೇ ಜಮೀನನ್ನು ಮಂದಿರಕ್ಕಾಗಿ ನೀಡಬಹುದು. ಆದರೆ ಹಿಂದುಳಿದ, ಬಡ, ದುರ್ಬಲ ವರ್ಗದವರು ಇಂತಹ ಸ್ಲಮ್ ಗಳಲ್ಲಿ ವಾಸಿಸುವುದು ಹಾನಿಕರ ಎನ್ನುವುದು ಬಹಳ ದೊಡ್ಡ ವಿಷಯವೇನಲ್ಲ ಎಂದು ಅದೇ ಕೋರ್ಟ್‌ ಹೇಳಬಹುದಾಗಿತ್ತು.

ಸ್ಲಮ್ ಗಳಲ್ಲಿ ಯಾರೊಬ್ಬರೂ ಖುಷಿಯಿಂದ ಇರುವುದಿಲ್ಲ. ಅಂದಹಾಗೆ ಕೆಲಸ ಹುಡುಕಿಕೊಂಡು ನಗರಗಳಿಗ ಬರುವ ಜನರ ಕೈ ಖಾಲಿ ಇರುತ್ತದೆ. ಅವರು ಹಳ್ಳಿಗಳಲ್ಲಿ ಖಾಲಿ ಹೊಟ್ಟೆಯಿಂದ ನರಳುತ್ತಾರೆ. ಆದರೆ ಅಲ್ಲಿ ದೇವಸ್ಥಾನಗಳಲ್ಲಿ ಹಣದ ಸುರಿಮಳೆ ಆಗುತ್ತಿರುತ್ತದೆ. ಅವರು ನಗರದಲ್ಲಿ ಖಾಲಿ ನಿವೇಶನ ಹುಡುಕಿ ಅಲ್ಲಿಯೇ ಶೆಡ್‌ ಹಾಕಿಕೊಂಡು ವಾಸ ಮಾಡುತ್ತಾರೆ. ಅಲ್ಲಿ ಆಹಾರ ಸಿಗುತ್ತದೆ, ಮದುವೆ, ಮಕ್ಕಳೂ ಆಗುತ್ತವೆ. ಕೊಳಚೆ ವಾತಾವರಣ ಸರಿಯಾದ ವ್ಯವಸ್ಥೆ ಇಲ್ಲದೆ ನೂರಾರು ಜನರು ವಾಸ ಮಾಡಲು ಆರಂಭಿಸುತ್ತಾರೆ. ನಗರ ಬೆಳೆಯುತ್ತ ಹೋದಂತೆ ಅವರ ಮನೆಗಳ ಮೇಲೆ ಶ್ರೀಮಂತರ ಕಣ್ಣು ಬೀಳುತ್ತದೆ.

ಮಹಾರಾಷ್ಟ್ರ ಸರ್ಕಾರ ಸ್ಲಮ್ ರಿಹ್ಯಾಬಿಟೇಶನ್‌ ಆ್ಯಕ್ಟ್ ರೂಪಿಸಿದೆ. ಅದರಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ದೊರಕಬೇಕು. ಆದರೆ ಮನೆ ದೊರಕುವುದು ಶ್ರೀಮಂತರಿಗೆ. ಬಡವರಿಗೆ ಮಾತ್ರ ನೋಟೀಸ್‌ ಅಂಟಿಸಿರುವ ಮನೆಗಳು ಕಂಡುಬರುತ್ತವೆ. ಸುಪ್ರೀಂ ಕೋರ್ಟ್‌ ಕೂಡ ನೋಟೀಸ್‌ ಅಂಟಿಸಲಾಗಿದೆಯೆಂದರೆ ಅದು ನೋಟೀಸ್‌ ಅಂಟಿಸಲಾಗಿದೆಯೆಂದಷ್ಟೇ ಅರ್ಥ ಎಂದು ಹೇಳುತ್ತದೆ.

ಈಗಿನ ಹೊಸ ಸರ್ಕಾರದ ಹೊಸ ಕಾನೂನು ನೀವು ಮುಸ್ಲಿಂ ಆಗಿದ್ದರೆ, ನಿಮ್ಮ ತಾತ ಮುತ್ತಾತಂದಿರ ಪುರಾವೆ ತಂದುಕೊಡು, ಹಾಗೆಯೇ ಹಿಂದುಳಿದವರು, ಸ್ಲಮ್ ಜಾಗದ ಮಾಲೀಕರಾಗಿದ್ದರೆ ಅದರ ಪುರಾವೆ ತಂದುಕೊಡು ಎಂದು ಕೇಳುತ್ತದೆ. ಬಡವನ ಬಳಿ ಅದರ ದಾಖಲೆ ಎಲ್ಲಿ ಸಿಗಬೇಕು? ಇದರ ಪರಿಣಾಮ ಮನೆ ಹೋಯಿತು ಎಂಬಂತೆ ಅವರ ದೇಶದ ಗಲ್ಲಿ ಗಲ್ಲಿಗಳಲ್ಲಿ ಮಂದಿರಗಳಾಗುತ್ತಿವೆ. ಆದರೆ ಅವುಗಳನ್ನು ಯಾರೂ ಮುಟ್ಟುತ್ತಿಲ್ಲ. ಬಡವರು, ಕೃಷಿಕರ ಜಮೀನಿನ ಮೇಲೆ ಸರ್ಕಾರ ನಗರ ನಿರ್ಮಿಸಬಹುದು. ಕಾಲೋನಿ, ಕಾರ್ಖಾನೆಗಳನ್ನು ನಿರ್ಮಿಸಬಹುದು. ಬಡವರಿಗೆ ಮಾತ್ರ ವಾಸಿಸಲು ಸೂರು ಕೂಡ ಸಿಗುದಿಲ್ಲವೆಂದರೆ ಇದೆಂಥ ಕಾನೂನು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ